HOME » NEWS » State » BENGALURU URBAN IPS OFFICER D ROOPA CRITICIZE ROHINI SINDHURI OVER SWIMMING POOL CASE KVD

Swimming Pool Case: ರೋಹಿಣಿ ಸಿಂಧೂರಿ ನೈತಿಕತೆ ಪ್ರಶ್ನಿಸಿದ IPS ಅಧಿಕಾರಿ ಡಿ.ರೂಪಾ..!

ಅಕ್ರಮವಾಗಿ ಈಜುಕೊಳ ನಿರ್ಮಾಣ ಪ್ರಕರಣ ರೋಹಿಣಿ ಸಿಂಧೂರಿ ಅವರ ನೈತಿಕ ಪತನವನ್ನು ತೋರುತ್ತದೆ ಎಂದು IPS ಅಧಿಕಾರಿ ಡಿ.ರೂಪಾ ಟೀಕಿಸಿದ್ದಾರೆ.

Kavya V | news18-kannada
Updated:June 23, 2021, 8:02 PM IST
Swimming Pool Case: ರೋಹಿಣಿ ಸಿಂಧೂರಿ ನೈತಿಕತೆ ಪ್ರಶ್ನಿಸಿದ IPS ಅಧಿಕಾರಿ ಡಿ.ರೂಪಾ..!
ರೋಹಿಣಿ ಸಿಂಧೂರಿ, ಡಿ ರೂಪಾ
  • Share this:
ಬೆಂಗಳೂರು: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಸರ್ಕಾರಿ ಮನೆಯಲ್ಲಿ ಕಟ್ಟಿಸಿಕೊಂಡಿದ್ದ ಈಜುಕೊಳ ಅಕ್ರಮ ಎಂಬ ತನಿಖಾ ವರದಿ ಬೆನ್ನಲ್ಲೇ ಐಪಿಎಸ್​​​​​​ ಅಧಿಕಾರಿ ಡಿ. ರೂಪಾ ಕಿಡಿಕಾರಿದ್ದಾರೆ. ಸಾರ್ವಜನಿಕರ ಹಣದಲ್ಲಿ ಸ್ವಿಮ್ಮಿಂಗ್​ಪೂಲ್​ ಕಟ್ಟಿಸಿಕೊಂಡಿದ್ದಕ್ಕೆ ರೋಹಿಣಿ ಸಿಂಧೂರಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಫೇಸ್​​ಬುಕ್​ನಲ್ಲಿ ಪೋಸ್ಟ್​​ ಹಾಕಿದ್ದಾರೆ. ಅಕ್ರಮವಾಗಿ ಈಜುಕೊಳ ನಿರ್ಮಾಣ ಪ್ರಕರಣ ರೋಹಿಣಿ ಸಿಂಧೂರಿ ಅವರ ನೈತಿಕ ಪತನವನ್ನು ತೋರುತ್ತದೆ ಎಂದು ಟೀಕಿಸಿದ್ದಾರೆ.

ಕೊರೊನಾ ಹಾಗೂ ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಹಣದಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಿರುವುದು ಮೊಟ್ಟ ಮೊದಲನೆಯದಾಗಿ ರೋಹಿಣಿ ಐಎಎಸ್ ಅವರ ನೈತಿಕ ಪತನ ಎದ್ದು ತೋರಿಸುತ್ತದೆ. ಈಜುಕೊಳ ಕಟ್ಟಲು ಪರವಾನಗಿ ತೆಗೆದು ಕೊಂಡಿಲ್ಲ ಎನ್ನುವುದು ನಂತರ ವಿಚಾರ. ಆದರೆ ಕಟ್ಟುವುದು ಮುಂದೂಡಲುಬಹುದಿತ್ತು ಎಂದು ಟಾಂಗ್ ಕೊಟ್ಟಿದ್ದಾರೆ.



ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಈಜುಕೊಳ ನಿರ್ಮಿಸಿಕೊಂಡಿದ್ದ ವಿಚಾರ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ ತಂದೊಡ್ಡಿದೆ. ಸ್ವಿಮ್ಮಿಂಗ್​ ಪೂಲ್​ ನಿರ್ಮಾಣ ಸಂಬಂಧ ಪ್ರಾದೇಶಿಕ ಆಯುಕ್ತರು ರಾಜ್ಯ ಸರ್ಕಾರಕ್ಕೆ ನಿನ್ನೆ ತನಿಖಾ ವರದಿ ಸಲ್ಲಿಸಿದ್ದಾರೆ. ಈಜುಕೊಳ ನಿರ್ಮಾಣಕ್ಕೆ 32 ಲಕ್ಷ ರೂಪಾಯಿ ವೆಚ್ಚವಾಗಿದೆ. ಇದಕ್ಕೆ ತಾಂತ್ರಿಕ ವರ್ಗದಿಂದ ,ಲೋಕೋಪಯೋಗಿ ಇಲಾಖೆಯಿಂದ ಅನುಮತಿಯನ್ನೇ ಪಡೆದಿಲ್ಲ. ಆಡಳಿತಾತ್ಮಕ ಮಂಜೂರಾತಿಯನ್ನು ಪಡೆದಿಲ್ಲ ಎಂದು ವರದಿ ನೀಡಿರುವುದು ರೋಹಿಣಿ ಸಿಂಧೂರಿಗೆ ತೀವ್ರ ಹಿನ್ನಡೆಯಾಗಿದೆ.

ಪ್ರಾದೇಶಿಕ ಆಯುಕ್ತರು ನೀಡಿರುವ ತನಿಖಾ ವರದಿ ಪ್ರಕಾರ ಕಾಮಗಾರಿ ನಿರ್ಮಾಣದವರೊಂದಿಗಿನ ಒಪ್ಪಂದ ಪತ್ರವೂ ಇಲ್ಲ. ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮೋದನೆ ಪಡೆದಿಲ್ಲ. ಮನೆಯಲ್ಲಿ ಈಜುಕೊಳ ನಿರ್ಮಿಸಿಕೊಂಡಿರುವುದರಿಂದ ಯಾವುದೇ ಸಾರ್ವಜನಿಕರಿಗೆ ಉಪಯೋಗಿಸಲು ಸಾಧ್ಯವಿರುವುದಿಲ್ಲ. ಈಜುಕೊಳ ನಿರ್ಮಾಣ ಸಾರ್ವಜನಿಕ ಹಿತಾಸಕ್ತಿ ಹೊಂದಿರುವುದಿಲ್ಲ. ಹೀಗಾಗಿ ಈಜುಕೊಳ ನಿರ್ಮಾಣವೇ ಅಕ್ರಮ, ಕಾನೂನಿಗೆ ವಿರುದ್ದವಾಗಿ ನಿರ್ಮಿಸಲಾಗಿದೆ. ರೋಹಿಣಿ ಸಿಂಧೂರಿ ಅಧಿಕಾರ ದುರ್ಬಳಕೆ ಮಾಡಿಕೊಂಡು ನಿರ್ಮಿಸಿರುವುದಾಗಿ ಪ್ರಾದೇಶಿಕ ಆಯುಕ್ತರು ವರದಿ ನೀಡಿದ್ದಾರೆ.

ಇದನ್ನೂ ಓದಿ: ಏಕಾಂತದಲ್ಲಿದ್ದ ಪ್ರೇಮಿಗಳು ಸಿಕ್ಕಿಬಿದ್ದಿದ್ದರು.. ಅಂತರ್ ಮತೀಯ ಪ್ರೇಮ ಮರ್ಯಾದಾ ಹತ್ಯೆಯಲ್ಲಿ ಅಂತ್ಯ!

ಈಜುಕೊಳ ಸಂಬಂಧ ಸಾರಾ ಮಹೇಶ್​ ಹಾಗೂ ರೋಹಿಣಿ ಸಿಂಧೂರಿ ಮಧ್ಯೆ ಜಟಾಪಟಿ, ವಾಕ್ಸಮರ ನಡೆದಿತ್ತು. ಈಗ ರೋಹಿಣಿ ಸಿಂಧೂರಿ ವಿರುದ್ಧ ತನಿಖಾ ವರದಿ ಬಂದಿದ್ದು, ಸಾರಾ ಮಹೇಶ್​ ಕೈ ಮೇಲಾಗಿದೆ. ಮೈಸೂರು ಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪಾ ನಾಗ್​ ಅವರು ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ಐಎಎಸ್​ ಅಧಿಕಾರಿಗಳನ್ನು ಮೈಸೂರಿನಿಂದ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಈಗ ಐಪಿಎಸ್​ ಅಧಿಕಾರಿ ರೂಪಾ ಅವರು ಕೂಡ ರೋಹಿಣಿ ವಿರುದ್ಧ ಕಿಡಿಕಾರಿದ್ದಾರೆ.
Published by: Kavya V
First published: June 23, 2021, 7:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories