• Home
 • »
 • News
 • »
 • state
 • »
 • ಕೈಗಾರಿಕಾ ಸಚಿವ ಮುರುಗೇಶ್​ ನಿರಾಣಿ ಟ್ವಿಟ್ಟರ್​ ಖಾತೆ ಹ್ಯಾಕ್​: ವಿದೇಶದಿಂದ ಹ್ಯಾಕ್​ ಮಾಡಲಾಯ್ತಾ?

ಕೈಗಾರಿಕಾ ಸಚಿವ ಮುರುಗೇಶ್​ ನಿರಾಣಿ ಟ್ವಿಟ್ಟರ್​ ಖಾತೆ ಹ್ಯಾಕ್​: ವಿದೇಶದಿಂದ ಹ್ಯಾಕ್​ ಮಾಡಲಾಯ್ತಾ?

ಮುರುಗೇಶ್ ನಿರಾಣಿ

ಮುರುಗೇಶ್ ನಿರಾಣಿ

Murugesh Nirani Twitter Account Hacked: ವಿದೇಶಿ ಸ್ಥಳದಿಂದ ತಮ್ಮ ಖಾತೆಯನ್ನು ಹ್ಯಾಕ್​ ಮಾಡಲಾಗಿದ್ದು, ಖಾತೆಯಿಂದ ಯಾವುದೇ ಮಾಹಿತಿ ಬಂದರೂ ಅದನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮ ಕಾರ್ಯದರ್ಶಿ ಮೂಲಕ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ

 • Share this:

  ಬೆಂಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ‌ಸಚಿವ ಶ್ರೀ ಮುರುಗೇಶ್ ಆರ್ ನಿರಾಣಿ ಅವರ ಟ್ವಿಟ್ಟರ್ ಖಾತೆ @NiraniMurugesh ಹ್ಯಾಕ್ ಮಾಡಲಾಗಿದೆ ಎಂದು ನಿರಾಣಿ ಅವರೇ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ವಿದೇಶಿ ಸ್ಥಳದಿಂದ ತಮ್ಮ ಖಾತೆಯನ್ನು ಹ್ಯಾಕ್​ ಮಾಡಲಾಗಿದ್ದು, ಖಾತೆಯಿಂದ ಯಾವುದೇ ಮಾಹಿತಿ ಬಂದರೂ ಅದನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮ ಕಾರ್ಯದರ್ಶಿ ಮೂಲಕ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. 


  "ನನ್ನ ಟ್ವಿಟರ್ ಖಾತೆ @NiraniMurugeshಯನ್ನು ಕೆಲವರು ‌ಇಂದು ಅಜ್ಞಾತ ವಿದೇಶಿ ಸ್ಥಳದಿಂದ ಹ್ಯಾಕ್ ಮಾಡಲಾಗಿದೆ. ಆರೋಪಿಗಳ ನಿಖರವಾದ ಮೂಲ ಮತ್ತು ಗುರುತು ನಮಗೆ ತಿಳಿದಿಲ್ಲ," ಎಂದು ನಿರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಂದುವರೆದ ಅವರು, ಹ್ಯಾಕರ್‌ಗಳು ಪೋಸ್ಟ್ ಮಾಡುವ ಯಾವುದೇ ಮೋಸದ ಸಂದೇಶಗಳಿಗೆ ಬಲಿಯಾಗಬೇಡಿ. ನನ್ನ ಖಾತೆಯಲ್ಲಿರುವ ಯಾವುದೇ ಅವಹೇಳನಕಾರಿ ಮತ್ತು ಅಸಂಸದೀಯ ಸಂದೇಶಗಳನ್ನು ನಿರ್ಲಕ್ಷಿಸಿ ಎಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಯಾರೊಬ್ಬರೂ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಬಾರದೆಂದು ಮನವಿ ಮಾಡಿದ್ದಾರೆ.


  ಈಗಾಗಲೇ ಖಾತೆ ಹ್ಯಾಕ್​ ಆಗಿರುವ ಸಂಬಂಧ ಟ್ವಿಟ್ಟರ್​ ಇಂಡಿಯಾಗೆ ಮುರುಗೇಶ್​ ನಿರಾಣಿ ದೂರು ನೀಡಿದ್ದು, ಖಾತೆಯನ್ನು ನಿಷ್ಕ್ರಿಯಗೊಳಿಸಲು ಮನವಿ ಮಾಡಿದ್ದಾರೆ. ಹ್ಯಾಕರ್​ಗಳ ತೆಕ್ಕೆಯಲ್ಲಿರುವ ಅಕೌಂಟನ್ನು ನಿಷ್ಕ್ರಿಯಗೊಳಿಸಿ, ಮತ್ತೆ ತಮಗೆ ಖಾತೆಯನ್ನು ನೀಡಬೇಕು ಎಂದು ಸಲ್ಲಿಸಿರುವ ದೂರಿನಲ್ಲಿ ಕೋರಿದ್ದಾರೆ ಎನ್ನಲಾಗಿದೆ. ಜೊತೆಗೆ ಶೀಘ್ರದಲ್ಲೇ ಬೆಂಗಳೂರಿನ ಸೈಬರ್ ಸೆಲ್ ಪೊಲೀಸರಿಗೆ ದೂರು ನೀಡುತ್ತೇವೆ ಎಂದೂ ಪ್ರಕಟಣೆಯಲ್ಲಿ ನಿರಾಣಿ ಹೇಳಿದ್ದಾರೆ.


  ಇದು ಮೊದಲೇನಲ್ಲ:


  ಮುರುಗೇಶ್​ ನಿರಾಣಿಯವರ ಟ್ವಿಟ್ಟರ್​ ಖಾತೆ ಇಂದು ಹ್ಯಾಕ್​ ಆಗಿದೆ, ಇದಕ್ಕೂ ಮುನ್ನ ಅವರ ಫೇಸ್​ಬುಕ್​ ಖಾತೆಯನ್ನು ಕೂಡ ಹ್ಯಾಕ್​ ಮಾಡಲಾಗಿತ್ತು. ಆಗಲೂ ನಿರಾಣಿ ಫೇಸ್​ಬುಕ್​ಗೆ ದೂರು ನೀಡಿದ್ದರು ಮತ್ತು ಸೈಬರ್​ ಕ್ರೈಂ ಠಾಣೆಗೂ ನೀಡಿದ್ದರು. ಈಗ ನಿರಾಣಿ ಅವರ ಖಾತೆಯನ್ನು ಹ್ಯಾಕ್​ ಮಾಡಿದ ನಂತರ, ಕತಾರ್​ನ ದೋಹಾದಿಂದ ಖಾತೆಯನ್ನು ನಿರ್ವಹಿಸುತ್ತಿರುವ ಸಾಧ್ಯತೆಯಿದೆ. ಯಾಕೆಂದರೆ ಖಾತೆಯ ಲೊಕೇಷನ್​ ದೋಹಾ ಎಂದು ತೋರಿಸುತ್ತಿದೆ. ಜತೆಗೆ ಟ್ವಿಟ್ಟರ್​ ಪ್ರೊಫೈಲ್​ ಫೋಟೊದಲ್ಲಿ ಬುರ್ಕಾ ಹಾಕಿಕೊಂಡಿರುವ ಮುಸಲ್ಮಾನ ಮಹಿಳೆಯೊಬ್ಬರ ಚಿತ್ರ ಮತ್ತು ಅರೇಬಿಕ್​ನಲ್ಲಿ ಹೆಸರು ನಮೂದಿಸಲಾಗಿದೆ. ಯಾವ ಕಾರಣದಿಂದ ಮರುಗೇಶ್​ ನಿರಾಣಿ ಅವರ ಖಾತೆಯನ್ನು ಹ್ಯಾಕ್​ ಮಾಡಲಾಗಿದೆ ಎಂಬ ವಿಚಾರ ಇನ್ನೂ ಬೆಳಕಿಗೆ ಬಂದಿಲ್ಲ. ಈ ಖಾತೆಯಿಂದ ಮಾಡುತ್ತಿರುವ ಪೋಸ್ಟ್​​ಗಳನ್ನು ಟ್ವಿಟ್ಟರ್​ ಪ್ರೊಟೆಕ್ಟೆಡ್​ ಟ್ವೀಟ್ಸ್​ ಎಂದು ಮಾರ್ಕ್​ ಮಾಡಿದೆ, ಈ ಹಿನ್ನೆಲೆ ಹೊಸ ಪೋಸ್ಟ್​ ಹಾಕಿದರೂ ಸಹ ಯಾರೂ ಅದನ್ನು ವೀಕ್ಷಿಸಲು ಸಾಧ್ಯವಿಲ್ಲ.


  Industrial Minister Murugesh Nirani twitter account hacked
  ಹ್ಯಾಕ್​ ಮಾಡಿದ ಬಳಿಕ ಮುರುಗೇಶ್​ ನಿರಾಣಿ ಟ್ವಿಟ್ಟರ್​ ಖಾತೆ


  ಮುರುಗೇಶ್​ ನಿರಾಣಿ ಅವರ ಖಾತೆ ಟ್ವಿಟ್ಟರ್​ ವೆರಿಫೈಡ್​ ಖಾತೆಯಾಗಿದ್ದು ಒಟ್ಟೂ 3494 ಫಾಲೋವರ್ಸ್​ಗಳನ್ನು ಹೊಂದಿದೆ. ನಿರಾಣಿ 139 ಜನರನ್ನು ಟ್ವಿಟ್ಟರ್​ನಲ್ಲಿ ಫಾಲೋ ಮಾಡುತ್ತಿದ್ದಾರೆ. ಜನವರಿ 2021ರಲ್ಲಿ ನಿರಾಣಿ ಟ್ವಿಟ್ಟರ್​ನಲ್ಲಿ ಖಾತೆ ಆರಂಭಿಸಿದ್ದರು. ಇದಾದ ಕೆಲವೇ ತಿಂಗಳುಗಳಲ್ಲಿ ಅವರ ಖಾತೆಯನ್ನು ಹ್ಯಾಕ್​ ಮಾಡಲಾಗಿದೆ.


  ಇದನ್ನೂ ಓದಿ: ಸಚಿವ ಡಾ.ಕೆ ಸುಧಾಕರ್ ಭೇಟಿ ಮಾಡಿದ ಕನ್ನಡ ಸಿನಿಮಾ ನಿರ್ಮಾಪಕರು


  ರಾಜಕಾರಣಿಗಳ, ಸರ್ಕಾರಿ ಅಧಿಕೃತ ಖಾತೆಗಳ ಮತ್ತು ಸೆಲೆಬ್ರಿಟಿಗಳ ಖಾತೆಗಳನ್ನು ಹ್ಯಾಕರ್​ಗಳು ಆಗಾಗ ಟಾರ್ಗೆಟ್​ ಮಾಡುತ್ತಲೇ ಇರುತ್ತಾರೆ. ಯಾವ ಕಾರಣಕ್ಕಾಗಿ ಹ್ಯಾಕ್​ ಮಾಡಲಾಗಿದೆ ಎಂಬುದು ಎಷ್ಟೋ ಪ್ರಕರಣಗಳಲ್ಲಿ ಪತ್ತೆಯಾಗುವುದೇ ಇಲ್ಲ. ಆದರೆ ಈ ಖಾತೆಗಳಿಂದ ಬಹಳಷ್ಟು ಗೌಪ್ಯ ಮಾಹಿತಿಗಳು ಲಭ್ಯವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹ್ಯಾಕ್​ ಮಾಡಲಾಗುತ್ತದೆ. ಡಾರ್ಕ್​ವೆಬ್​ ಮತ್ತು ಡೀಪ್​ವೆಬ್​ಗಳಲ್ಲಿ ಹ್ಯಾಕರ್ಸ್​ಗಳ ಗ್ರೂಪ್​ಗಳಿವೆ. ಅಲ್ಲಿ ಅವರು ಎಷ್ಟು ಅಕೌಂಟ್​ಗಳನ್ನು, ಬ್ಯಾಂಕ್​ಗಳನ್ನು, ಇ ವ್ಯಾಲೆಟ್​ಗಳನ್ನು, ಶಾಪಿಂಗ್​ ವೆಬ್​ಸೈಟ್​ಗಳನ್ನು ಹ್ಯಾಕ್​ ಮಾಡುತ್ತಾರೋ, ಅವರ ಡಿಮ್ಯಾಂಡ್​ ಹೆಚ್ಚಾಗುತ್ತದೆ. ಕೆಲವರು ಸುಮ್ಮನೆ ಚಟಕ್ಕಾಗಿ ಹ್ಯಾಕ್​ ಮಾಡಿದರೆ, ಕೆಲವರು ಕಲಿಯುವ ಪ್ರಕ್ರಿಯೆಯಾಗಿ ಹ್ಯಾಕ್​ ಮಾಡುತ್ತಾರೆ ಎನ್ನುತ್ತಾರೆ ಎತಿಕಲ್​ ಹ್ಯಾಕರ್​ ಒಬ್ಬರು.

  Published by:Sharath Sharma Kalagaru
  First published: