Darshan Indrajit: ಹಲ್ಲೆ ಮಾಡಿಲ್ಲ ಅಂತ ಧರ್ಮಸ್ಥಳದಲ್ಲಿ ಆಣೆ ಮಾಡಿ ನೋಡೋಣ: ದರ್ಶನ್​ಗೆ ಇಂದ್ರಜಿತ್ ಪ್ರತಿಸವಾಲು

ಅಂದು ಹೋಟೆಲ್​ನಲ್ಲಿ ಹಲ್ಲೆ ಮಾಡದಿದ್ದರೆ. ಅರುಣಾಕುಮಾರಿಯನ್ನು ನಿಮ್ಮ ತೋಟಕ್ಕೆ ಕರೆಸಿಕೊಳ್ಳದಿದ್ದರೆ. ನೀವು ಸರಿ ಇದ್ದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ ಎಂದು ದರ್ಶನ್​​ಗೆ ಇಂದ್ರಜಿತ್​ ಆಹ್ವಾನ ನೀಡಿದರು.

ದರ್ಶನ್​​, ಇಂದ್ರಜಿತ್​ ಲಂಕೇಶ್​​

ದರ್ಶನ್​​, ಇಂದ್ರಜಿತ್​ ಲಂಕೇಶ್​​

  • Share this:
ಬೆಂಗಳೂರು: ಮೈಸೂರಿನ ಸಂದೇಶ್​ ದಿ ಪ್ರಿನ್ಸ್​​ ಹೋಟೆಲ್​ ವೇಟರ್​ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಸಂಬಂಧ ನಟ ದರ್ಶನ್​ ಹಾಗೂ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ನಡುವೆ ವಾಕ್ಸಮರ ತಾರಕಕ್ಕೇರಿದೆ. ಮೈಸೂರಲ್ಲಿ ಸುದ್ದಿಗೋಷ್ಠಿ ನಡೆಸಿ ಅಬ್ಬರಿಸಿದ್ದ ದರ್ಶನ್​​, ಗಂಡಸ್ತನ ಇದ್ದರೆ ನಾನು ಹಲ್ಲೆ ಮಾಡಿರುವ ವಿಡಿಯೋವನ್ನು ಇಂದ್ರಜಿತ್​ ರಿಲೀಸ್​ ಮಾಡಲಿ ಎಂದು ಸವಾಲಾಕಿದರು. ಇದರ ಬೆನ್ನಲ್ಲೇ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ್​, ಗಂಡಸ್ತನ ಪ್ರೂವ್​ ಮಾಡಿಕೊಳ್ಳುವ ಅಗತ್ಯ ನನಗಿಲ್ಲ. ನಾನು ಗೂಂಡಾಗಿರಿ ಎಂದಿದ್ದನ್ನು ದರ್ಶನ್​ ಬೇರೆ ರೀತಿ ಅರ್ಥ ಮಾಡಿಕೊಂಡಿದ್ದಾರೆ. ನಾನು ಹೇಳಿದನ್ನು ಸರಿಯಾಗಿ ಓದಿಕೊಂಡಿಲ್ಲ ಎಂದು ತಿರುಗೇಟು ನೀಡಿದರು.

ಅಂದು ಹೋಟೆಲ್​ನಲ್ಲಿ ಹಲ್ಲೆ ಮಾಡದಿದ್ದರೆ. ಅರುಣಾಕುಮಾರಿಯನ್ನು ನಿಮ್ಮ ತೋಟಕ್ಕೆ ಕರೆಸಿಕೊಳ್ಳದಿದ್ದರೆ. ನೀವು ಸರಿ ಇದ್ದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ ಎಂದು ದರ್ಶನ್​​ಗೆ ಇಂದ್ರಜಿತ್​ ಆಹ್ವಾನ ನೀಡಿದರು. ದರ್ಶನ್ ವಿಚಲಿತರಾಗಿದ್ದಾರೆ ಹಾಗಾಗಿ ಈ ರೀತಿ ಮಾತನಾಡುತ್ತಿದ್ದಾರೆ. ದರ್ಶನ್​​ ಅನ್ ಎಜುಕೇಟೆಡ್ ಅಂತ ನಾನು ಹೇಳಿಲ್ಲ.  ಡಾ. ರಾಜ್ ಕುಮಾರ್ ಸಹ ನಾಲ್ಕನೇ ತರಗತಿ ಓದಿರೋದು. ಅವರ ಜ್ಞಾನ, ಸಿನಿಮಾ, ಸಂಸ್ಕಾರ ವಿಶ್ವ ಮಟ್ಟದಲ್ಲಿದೆ. ಅದು ಎಲ್ಲಾ ನಟರಿಗೂ ಆದರ್ಶವಾಗಬೇಕು ಎಂದು ಹೇಳಿದ್ದೇನೆ.

ನೀವು ಸಫ್ಲೈಯರ್ ಗೆ ಹೊಡೆದ್ರೋ ಇಲ್ಲವೋ? ಬಡ ಹುಡುಗನಿಗೆ ಹೊಡೆದಿದ್ದು ಎಷ್ಟು ಸರಿ. ಅದಕ್ಕೆ ಕ್ಷಮೆ ಕೇಳೋಕೆ ಹೇಳಿದ್ದೆ.  ಅರುಣಾ ದೇವಿಯನ್ನ ನಿಮ್ಮ ತೋಟಕ್ಕೆ ಕರೆಸಿಕೊಂಡಿದ್ರೋ ಇಲ್ಲವೋ. ಇಲ್ಲ ಅನ್ನುವುದಾದರೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿ ನೋಡೋಣ ಎಂದು ಪ್ರತಿಸವಾಲಾಕಿದರು. ಇಡೀ ಕರ್ನಾಟಕಕ್ಕೆ ಗೊತ್ತು ನಿಮ್ಮ ಧರ್ಮಪತ್ನಿ ವಿಚಾರದಲ್ಲಿ ಲಾಯರ್ ಯಾಕೆ ಕರೆಸಿಕೊಂಡ್ರಿ ಅಂತ. ಇದು ರೀಲ್ ಸ್ಟೋರಿ ಅಲ್ಲ, ರಿಯಲ್ ಸ್ಟೋರಿ ಎಂದರು.

ಇದನ್ನೂ ಓದಿ: Darshan Indrajit: ಗಂಡಸ್ತನ ಇದ್ದರೆ ಇಂದ್ರಜಿತ್ ಹಲ್ಲೆ ವಿಡಿಯೋ ರಿಲೀಸ್ ಮಾಡಲಿ: ಸವಾಲಾಕಿದ ದರ್ಶನ್

ಹಿರಿಯ ವಕೀಲರನ್ನ ಕರೆಯಿಸಿ ನಾನು ಸಾಕ್ಷಿಗಳನ್ನ ಯಾರಿಗೆ ಕೊಡಬೇಕು ಅನ್ನೋ ಬಗ್ಗೆ ಚರ್ಚೆ ಮಾಡಿದ್ದೇನೆ. ಪೊಲೀಸರ ತನಿಖೆಗೆ ಸಹಕಾರ ನೀಡುತ್ತೇನೆ, ಇದು ಗಂಭೀರ ವಿಚಾರ. ತಲೆ ಕೊಚ್ತಿನಿ, ಸೀಳ್ತಿನಿ ಅಂತ ಸೆಲೆಬ್ರಿಟಿಗಳು ಹೇಳಬಾರದು ಎಂದಿದ್ದೆ. ನೀವು ಇವತ್ತು ಬಳಸಿರೋ ಪದ ನಿಮ್ಮ ಸಂಸ್ಕಾರ, ಅಚಾರ ವಿಚಾರ ತೋರಿಸುತ್ತೆ. ಯಾವ ನಟನನ್ನು ಕೇವಲ ಅಂದ ನೋಡಿ ಜನ ಮೆಚ್ಚಲ್ಲ. ವ್ಯಕ್ತಿತ್ವ ನೋಡಿ ಮೆಚ್ಚುತ್ತಾರೆ. ಅದನ್ನು ದರ್ಶನ್​​ ಮೊದಲು ಅರಿಯಬೇಕು.

ನಾನು ಡ್ರಗ್ಸ್​ ಪ್ರಕರಣ ಹೊರಗೆಳೆದು ಸಾಕಷ್ಟು ಒಳ್ಳೆಯದಾಗಿದೆ. ಅದಕ್ಕೆ ದರ್ಶನ್​ ಏಕೆ ಸಿಟ್ಟಾಗಬೇಕು ಎಂದು ಪ್ರಶ್ನಿಸಿದರು. ಇವತ್ತು ದೊಡ್ಮನೆ ವಿಚಾರ, ಆಸ್ತಿ ವಿಚಾರ ಹೊರ ಬರ್ತಿದೆ. ಮುಂದೆ ಇನ್ನು ಏನ್​ ಏನೋ ಹೊರ ಬರಬಹುದು ಎಂಬ ಭಯದಲ್ಲಿ ದರ್ಶನ್​ ಮಾತಾಡ್ತಿದ್ದಾರೆ ಎಂದು ಇಂದ್ರಜಿತ್​ ವಾಗ್ದಾಳಿ ನಡೆಸಿದರು.
Published by:Kavya V
First published: