Darshan vs Indrajit: ದರ್ಶನ್ ಬೆಂಬಲಿಗರು ಕಾಲ್ ಮಾಡಿ ಅಶ್ಲೀಲವಾಗಿ ನಿಂದಿಸುತ್ತಿದ್ದಾರೆ: ಇಂದ್ರಜಿತ್ ಆರೋಪ

ದರ್ಶನ್ ಪ್ರಚೋದನೆ‌ಯಿಂದ ಅವರ ಹಿಂಬಾಲಕರು ,ರೌಡಿಗಳು ಫೋನ್‌, ವಾಟ್ಸ್ ಆಪ್ ಕಾಲ್, ವೀಡಿಯೋ ಕಾಲ್ ಮೂಲಕ ಸಮಸ್ಯೆ ಮಾಡುತ್ತಿದ್ದಾರೆ ಎಂದು ಇಂದ್ರಜಿತ್​ ಆರೋಪಿಸಿದರು.

ಇಂದ್ರಜಿತ್​ ಲಂಕೇಶ್​

ಇಂದ್ರಜಿತ್​ ಲಂಕೇಶ್​

  • Share this:
ಬೆಂಗಳೂರು: ನಟ ದರ್ಶನ್​​​ ಹಾಗೂ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ನಡುವಿನ ವಿವಾದ ತಣ್ಣಗಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಮೈಸೂರಿನ ಸಂದೇಶ್​ ದಿ ಪ್ರಿನ್ಸ್​​ ಹೋಟೆಲ್​​ ವೇಟರ್​ ಮೇಲೆ ದರ್ಶನ್​ ಹಲ್ಲೆ ಮಾಡಿದ್ದಾರೆ ಎಂಬ ಆರೋಪದಿಂದ ಶುರುವಾದ ಜಟಾಪಟಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದರ್ಶನ್​ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಹಿನ್ನೆಲೆ ಅವರ ಹಿಂಬಾಲಕರು ಇಂದ್ರಜಿತ್​ ಅವರಿಗೆ ಕರೆ ಮಾಡಿ ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರಂತೆ. ಈ ಪ್ರಕರಣದ ಬಗ್ಗೆ ನಾನು ಏನೇ ಮಾತನಾಡೋದಿದ್ರು ಕಾನೂನಿನ ಚೌಕಟ್ಟಿನಲ್ಲಿ ಹ್ಯಾಂಡಲ್ ಮಾಡುತ್ತೇನೆ ಎಂದು ಇಂದ್ರಜಿತ್​ ತಿಳಿಸಿದರು.

ದರ್ಶನ್ ಪ್ರಚೋದನೆ‌ಯಿಂದ ಅವರ ಹಿಂಬಾಲಕರು ,ರೌಡಿಗಳು ಫೋನ್‌, ವಾಟ್ಸ್ ಆಪ್ ಕಾಲ್, ವೀಡಿಯೋ ಕಾಲ್ ಮೂಲಕ ಸಮಸ್ಯೆ ಮಾಡುತ್ತಿದ್ದಾರೆ. ನಾನು ಈಗ ಸೈಬರ್ ಕ್ರೈಮ್ ಠಾಣೆಗೆ ಕಂಪ್ಲೇಂಟ್ ಕೊಡಲಿದ್ದೇನೆ. ಕಳೆದ  24 ಗಂಟೆಯಿಂದ ಇಪ್ಪತ್ತರಿಂದ ಮೂವತ್ತು ಜನ ಕಾಲ್ ಮಾಡುತ್ತಲೇ ಇದ್ದಾರೆ. ಅಶ್ಲೀಲವಾದ ಭಾಷೆ, ಚಿತ್ರಗಳನ್ನ ಬಳಸಿಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಇದಕ್ಕೆಲ್ಲಾ ನಾನು ಹೆದರಿಕೊಳ್ಳೋಲ್ಲ ಎಂದರು.

ನಾನು 25 ವರ್ಷದಿಂದ ಪತ್ರಿಕೋದ್ಯಮದಲ್ಲಿದ್ದೇನೆ. ಅವರಿಗೆ ಪಾಠ ಕಲಿಸಬೇಕು, 30 ಸೆಕೆಂಡ್ ಗೆ ಒಂದು ಕಾಲ್ ಮಾಡುತ್ತಿದ್ದಾರೆ.  ದರ್ಶನ್ ಹಿಂಬಾಲಕರು ರೌಡಿಗಳು ಕಾಲ್ ಇದಾಗಿದೆ. ಮಾಧ್ಯಮದವರ ಬಗ್ಗೆ ದರ್ಶನ್ ಆಡಿರೋ ಮಾತಿನ ಆಡಿಯೋ ಕ್ಲಿಪ್ ನಾನು ಕೇಳಿದೆ. ದರ್ಶನ್ ಎಷ್ಟು ಅಶ್ಲೀಲವಾಗಿ ಪದಬಳಕೆ ಮಾಡಿದ್ದಾರೆ ಅಂತ ನೋಡಿ. ದರ್ಶನ್ ಪದ ಬಳಕೆಯನ್ನ ಯಾವ ಮಾಧ್ಯಮದಲ್ಲೂ ಹಾಕೋಕೆ ಆಗಲ್ಲ ಅಷ್ಟು ಕೆಟ್ಟ ಪದಗಳನ್ನ ಬಳಸಿದ್ದಾರೆ. ದರ್ಶನ್ ಅವರ ಹಿಂಬಾಲಕರು, ಅವರ ಕಡೆ ಇರೋ ರೌಡಿಗಳು ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಇಂದ್ರಜಿತ್​ ಆರೋಪಿಸಿದರು. ಈ ಬಗ್ಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಕಾಮಿಡಿಯನ್ ಕಟೀಲ್ ಈಗ ವಿಲನ್.. ಡಿಕೆಶಿನೇ ಮೀರ್ ಸಾದಿಕ್.. ಕಾಂಗ್ರೆಸ್-ಬಿಜೆಪಿ ಮಧ್ಯೆ ಟ್ವೀಟ್ ವಾರ್!

ನಾನು ಸತ್ಯ ಮಾತನಾಡುತ್ತಿರುವುದರಿಂದ ದರ್ಶನ್​​ ವಿಚಲಿತರಾಗಿದ್ದಾರೆ. ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಟ್ರೀಟ್​ಮೆಂಟ್​​ ತೆಗೆದುಕೊಳ್ಳಬೇಕು ಎಂದು ನಿನ್ನೆ ಇಂದ್ರಜಿತ್​ ಸಲಹೆ ನೀಡಿದ್ದರು. 2 ದಿನಗಳ ಹಿಂದೆ ನಾನು ಹಲ್ಲೆ ಮಾಡಿರುವ ವಿಡಿಯೋ ಬಿಡುಗಡೆ ಮಾಡುವಂತೆ ಇಂದ್ರಜಿತ್​ಗೆ ದರ್ಶನ್​ ಸವಾಲು ಹಾಕಿದ್ದರು. ನೀವು ಹಲ್ಲೆ ಮಾಡಿಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ ನೋಡೋಣ ಎಂದು ಇಂದ್ರಜಿತ್​ ಪ್ರತಿಸವಾಲು ಹಾಕಿದ್ದರು.

ಹೋಟೆಲ್​ನಲ್ಲಿ ವೇಟರ್​​ ಮೇಲೆ ಹಲ್ಲೆ ಪ್ರಕರಣ ಹಾಗೂ ಅರುಣಾಕುಮಾರಿ ಎಂಬುವರಿಂದ 25 ಕೋಟಿ ವಂಚನೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Published by:Kavya V
First published: