Indian Institute of Science: ಬೆಂಗಳೂರಿನ IIScಯಲ್ಲಿ ಮುಂದಿನ ವರ್ಷದಿಂದ ಮೆಡಿಕಲ್​ ಕೋರ್ಸ್‌ಗಳ ಆರಂಭ

ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ IISc ನಡೆಸಿದ ಸಂಶೋಧನೆ ಹಾಗೂ ತಂತ್ರಜ್ಞಾನ ಕೆಲಸವನ್ನು ಗುರುತಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಶಾಲೆ ಮತ್ತು ಕೋರ್ಸ್‌ಗಳನ್ನು ಪ್ರಾರಂಭಿಸಲು ಕೇಂದ್ರವು ಸಂಸ್ಥೆಗೆ ಅನುಮತಿ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science- IISc) ಮುಂದಿನ ವರ್ಷದಿಂದ ವೈದ್ಯಕೀಯ ಕೋರ್ಸ್(Medical Course)‌ಗಳನ್ನು ಆರಂಭಿಸುವ ಸಿದ್ಧತೆ ಮಾಡಿಕೊಂಡಿದೆ. ಬುಧವಾರ ನಡೆದ ಘಟಿಕೋತ್ಸವ(Convocation) ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಗೋವಿಂದನ್ ರಂಗರಾಜನ್ ಈ ಕುರಿತು ಘೋಷಣೆ ಮಾಡಿದ್ದು, ವಿಜ್ಞಾನ(Science) ಹಾಗೂ ಎಂಜಿನಿಯರಿಂಗ್(Engineering)‌ನಲ್ಲಿ 100 ವರ್ಷಗಳ ಶ್ರೇಷ್ಠತೆ ಪಡೆದುಕೊಂಡ ನಂತರ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳನ್ನು(Medical post graduate course) ಆರಂಭಿಸಲು ಯೋಜಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದೇ ಸಮಯದಲ್ಲಿ ದೇಶದಲ್ಲಿರುವ ಪ್ರಧಾನ ವಿಜ್ಞಾನ ಸಂಸ್ಥೆಗಳು ಒದಗಿಸುತ್ತಿರುವ ಇತರ ಕೋರ್ಸ್‌ಗಳ ಅಂತರಶಿಕ್ಷಣ ಅಂಶಗಳ ಉದಾಹರಣೆ ನೀಡಿದರು.

ರಂಗರಾಜನ್ ತಿಳಿಸಿರುವಂತೆ IIScಯು ವಿಜ್ಞಾನ ಹಾಗೂ ಎಂಜಿನಿಯರಿಂಗ್ ಎರಡನ್ನೂ ಸಮನಾಗಿ ಪ್ರತಿನಿಧಿಸುತ್ತದೆ. 1909ರಲ್ಲಿ IISc ಆರಂಭಗೊಂಡಾಗ ಸಾಮಾನ್ಯ ರಸಾಯನ ಶಾಸ್ತ್ರದಲ್ಲಿ ( ಜನರಲ್ ಕೆಮಿಸ್ಟ್ರಿ) ಕೋರ್ಸ್‌ಗಳನ್ನು ನೀಡಿತು. ಇದರೊಂದಿಗೆ ಎಲೆಕ್ಟ್ರಿಕಲ್ ಟೆಕ್ನಾಲಜಿ ಮತ್ತು ಸಾವಯವ ರಸಾಯನಶಾಸ್ತ್ರ (ಆರ್ಗ್ಯಾನಿಕ್ ಕೆಮಿಸ್ಟ್ರಿ) ವಿಭಾಗಗಳು ತ್ವರಿತ ಯಶಸ್ಸನ್ನು ಕಂಡವು. ವೈದ್ಯಕೀಯ ವಿಜ್ಞಾನದಲ್ಲಿ ಕೋರ್ಸ್‌ಗಳನ್ನು ಆರಂಭಿಸುವ ಯೋಜನೆಯು ಈ ವರ್ಷದ ಆರಂಭದಲ್ಲಿ ಹೊಳೆದ ಆಲೋಚನೆಯಾಗಿತ್ತು.

ಅದೂ ಅಲ್ಲದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP –2020) ಯ ಅನುಷ್ಠಾನದ ಭಾಗವಾಗಿ ಹೊಸ ಅನುಷ್ಠಾನದ ಸ್ವರೂಪವನ್ನು ದೃಢೀಕರಿಸಿತು. ಈ ಸಮಯದಲ್ಲಿ ಆಗಿನ ಕೇಂದ್ರ ಶಿಕ್ಷಣ ಸಚಿವರಾದ ರಮೇಶ್ ಪೋಖ್ರಿಯಾಲ್ IISc, IITs, IIITs, IISERs, ಹಾಗೂ NITs, ನಿರ್ದೇಶಕರೊಂದಿಗೆ ಸಭೆ ನಡೆಸಿ ಖಾರಗ್‌ಪುರ IISc ಹಾಗೂ IIT ವೈದ್ಯಕೀಯ ವಿಜ್ಞಾನ ಕೋರ್ಸ್‌ಗಳನ್ನು ಶೀಘ್ರದಲ್ಲೇ ಆರಂಭಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಂಡರು.

ಇದೇ ಸಮಯದಲ್ಲಿ ವಿವಿಧ ವಿಷಯ-ತಜ್ಞ ಪ್ಯಾನೆಲ್‌ಗಳ ಮೂಲಕ ಶೈಕ್ಷಣಿಕ ಶ್ರೇಷ್ಠತೆ ಆಧರಿಸಿ ವಿದ್ಯಾರ್ಥಿಗಳಿಗೆ 110 ಪದಕಗಳನ್ನು ನೀಡಲಾಯಿತು. ಬೇರೆ ಬೇರೆ ವಿಭಾಗಗಳಿಂದ ಸಂಸ್ಥೆ ಪದಕ ಜಯಗಳಿಸಿರುವ ಆಯ್ಕೆಮಾಡಿದ 18 ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಮುಂದಕ್ಕೆ 1832 ಪಿಎಚ್‌ಡಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ 204 ಪದವಿಪೂರ್ವ ವಿದ್ಯಾರ್ಥಿಗಳು ಘಟಿಕೋತ್ಸವ ಸಮಾರಂಭದಲ್ಲಿ ತಮ್ಮ ಪದವಿಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ:IISc Bangalore Recruitment: ಮಾಸಿಕ ವೇತನ 1,66,541 ರೂ; ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ

IISc ಆರಂಭವಾದಾಗಿನಿಂದ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಯಿಂದ ಪದವಿ ಪಡೆದಿದ್ದಾರೆ. IIScಯು ಪಿಎಚ್‌ಡಿ ಹಾಗೂ ಒಟ್ಟುಗೂಡುವಿಕೆ ಪಿಎಚ್‌ಡಿ ಕಾರ್ಯಕ್ರಮಗಳು, ಹಲವಾರು ಸ್ನಾತಕೋತ್ತರ ಕಾರ್ಯಕ್ರಮಗಳು (MTech, MTech (Res), MDes, MMgmt) ಮತ್ತು 4 ವರ್ಷದ ಬ್ಯಾಚುಲರ್ ಆಫ್ ಸೈನ್ಸ್ (ಸಂಶೋಧನೆ) (ಬ್ಯಾಚುಲರ್ ಆಫ್ ಸೈನ್ಸ್) ರಿಸರ್ಚ್ ಕಾರ್ಯಕ್ರಮ ಒದಗಿಸುತ್ತದೆ.

ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ IISc ನಡೆಸಿದ ಸಂಶೋಧನೆ ಹಾಗೂ ತಂತ್ರಜ್ಞಾನ ಕೆಲಸವನ್ನು ಗುರುತಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಶಾಲೆ ಮತ್ತು ಕೋರ್ಸ್‌ಗಳನ್ನು ಪ್ರಾರಂಭಿಸಲು ಕೇಂದ್ರವು ಸಂಸ್ಥೆಗೆ ಅನುಮತಿ ನೀಡಿದೆ.

ಸಂಸ್ಥೆಯ ನಿರ್ದೇಶಕರು IISc ಕ್ಯಾಂಪಸ್‌ನಲ್ಲಿರುವ ಹೊಸ ಕಟ್ಟಡದಲ್ಲಿ Kotak-IISc AI-ML (ಕೋಟಕ್- IISc AI-ML) ಆರಂಭಿಸಲಿದ್ದೇವೆ ಎಂದು ತಿಳಿಸಿದ್ದಾರೆ. AI, ML ಹಾಗೂ ನವೀನ ಸಂಶೋಧನೆಯ ಮೂಲಕ ಆರ್ಥಿಕ ತಂತ್ರಜ್ಞಾನ ಪರಿಹಾರಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ತಿಳಿಸಿದ್ದಾರೆ.
Published by:Latha CG
First published: