Dengue Case: ಬೆಂಗಳೂರಲ್ಲಿ ಡೆಂಘೀ ಕೇಸ್ ಹೆಚ್ಚಳ; ಮುಂದಿನ ದಿನಗಳಲ್ಲಿ ಪ್ರಕರಣ ಹೆಚ್ಚುವ ಎಚ್ಚರಿಕೆ

ತಿಂಗಳಿನಿಂದ ಅಕಾಲಿಕ ಮಳೆಯಾಗುತ್ತಿದೆ. ಇದರ ಪರಿಣಾಮವೇ ಎರಡು ತಿಂಗಳಿನಿಂದ ನಗರದ ಎಲ್ಲ ವಲಯ ಮಟ್ಟದಲ್ಲೂ  ಡೆಂಗ್ಯು ಕೇಸ್ ಗಳ ಸಂಖ್ಯೆ ಏರಿಕೆಯಾಗಿದೆ. ನಗರದಾದ್ಯಂತ ಒಟ್ಟು  2 ಸಾವಿರ ಕೇಸ್ ಗಳು ದಾಖಲಾಗಿವೆ.‌

BBMP ಕಚೇರಿ

BBMP ಕಚೇರಿ

  • Share this:
ಬೆಂಗಳೂರು (ಮೇ 17):  ರಾಜ್ಯ ರಾಜಧಾನಿ ಬೆಂಗಳೂರಲ್ಲಿ (Bengaluru) ಒಂದು ವಾರದಿಂದ ನಿರಂತರವಾಗಿ ಮಳೆರಾಯ (Rain) ಅಬ್ಬರಿಸುತ್ತಿದ್ದಾನೆ.‌ ಹೀಗಾಗಿ ನಗರದ ಹಲವೆಡೆ ನೀರು ನಿಂತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಹೀಗಾಗಿ ನಗರದಲ್ಲಿ ಡೆಂಗ್ಯೂ ಕೇಸ್ ಗಳ‌ (Dengue Case) ಅರ್ಭಟ ಹೆಚ್ಚಾಗಿದೆ. ಕೊರೊನಾ (Corona) ಮಾಹಾಮಾರಿಯಿಂದಾಗಿ ಜನರು ಮೊದಲೇ ರೋಸಿ ಹೋಗಿದ್ದಾರೆ. ಈ‌ ಮಧ್ಯೆ  ಸದ್ದಿಲ್ಲದೇ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಹೋಗಿದೆ.

ಬೆಂಗಳೂರಲ್ಲಿ ಡೆಂಘೀ ಕೇಸ್ ಹೆಚ್ಚಳ 

ಹೌದು,  ನಗರದಲ್ಲಿ ಒಂದು ತಿಂಗಳಿನಿಂದ ಅಕಾಲಿಕ ಮಳೆಯಾಗುತ್ತಿದೆ. ಇದರ ಪರಿಣಾಮವೇ ಎರಡು ತಿಂಗಳಿನಿಂದ ನಗರದ ಎಲ್ಲ ವಲಯ ಮಟ್ಟದಲ್ಲೂ  ಡೆಂಗ್ಯು ಕೇಸ್ ಗಳ ಸಂಖ್ಯೆ ಏರಿಕೆಯಾಗಿದೆ. ನಗರದಾದ್ಯಂತ ಒಟ್ಟು  2 ಸಾವಿರ ಕೇಸ್ ಗಳು ದಾಖಾಲಾಗಿವೆ.‌ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷವೇ ಕೇಸ್ ಗಳ ಪ್ರಮಾಣ ಏರಿಕೆಯಾಗಿರುವುದು ಹೆಚ್ಚು ಅಂತಂಕ ಮೂಡಿಸುತ್ತಿದೆ.‌ ಯಾಕಂದ್ರೆ ಕಳೆದ ವರ್ಷ 1800 ರಷ್ಟು ಕೇಸ್ ಗಳು ಮಾತ್ರ ದಾಖಾಲಾಗಿದ್ವು.

ಇದನ್ನೂ ಓದಿ: Vegetable Price: ಮತ್ತೆ ಸೆಂಚೂರಿ ಬಾರಿಸಲಿದೆ ಟೊಮೆಟೊ ರೇಟ್; ತರಕಾರಿ ಈಗ ಫುಲ್ ದುಬಾರಿ

ಡೆಂಘೀ ಕೇಸ್​ ಮತ್ತಷ್ಟು ಹೆಚ್ಚಳ ಸಾಧ್ಯತೆ

ಈ ವರ್ಷ 2 ಸಾವಿರದಷ್ಟು ಕೇಸ್ ಗಳ ಸಂಖ್ಯೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಡೆಂಗ್ಯು‌ ಪ್ರಕರಣಗಳ  ಸಂಖ್ಯೆ ಮತ್ತಷ್ಟು  ಹೆಚ್ಚಾಗುವ  ಸಾಧ್ಯತೆಗಳಿವೆ. ಹೀಗಾಗಿ ನಗರದ 8 ವಲಯದಲ್ಲೂ ಡೆಂಗ್ಯು ಹರಡುವುದನ್ನ ನಿಲ್ಲಿಸಲು ಬಿಬಿಎಂಪಿ ಹಲವು ಸಿದ್ದತೆಯನ್ನ‌ ಮಾಡಿಕೊಳ್ಳುತ್ತಿದೆ.ನಗರದ 8 ವಲಯಗಳ‌ ಪೈಕಿ ಈಸ್ಟ್ ಜೋನ್ ನಲ್ಲಿ ಹೆಚ್ಚು ಕೇಸ್ ಗಳು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಈ  ಕೇಸ್ ಗಳು ಡಬಲ್ ಆಗಲಿದ್ಯಂತೆ.

ವಲಯ ಮಟ್ಟದಲ್ಲಿರುವ ಡೆಂಘೀ ಕೇಸ್​

ಹಾಗಿದ್ರೆ ನಗರದ ವಲಯ ಮಟ್ಟದಲ್ಲಿರುವ ಸದ್ಯಕ್ಕೆ ಇರುವ ಡೆಂಗ್ಯು ಕೇಸ್ ಗಳ ಸಂಖ್ಯೆ ಎಷ್ಟು ಎಂದು ನೋಡೊದಾದ್ರೆ- ಬೊಮ್ಮನಹಳ್ಳಿ ಝೋನ್ - 104 ಪ್ರಕರಣ- ದಾಸರಹಳ್ಳಿ ಝೋನ್ - 38 ಪ್ರಕರಣ- ಈಸ್ಟ್ ಝೋನ್ - 653 ಪ್ರಕರಣ- ಮಹದೇವಪುರ ಝೋನ್ - 342 ಪ್ರಕರಣ- ಆರ್.ಆರ್.ನಗರ ಝೋನ್ - 122 ಪ್ರಕರಣ- ಸೌತ್ ಝೋನ್  - 170 ಪ್ರಕರಣ- ವೆಸ್ಟ್ ಝೋನ್  - 162 ಪ್ರಕರಣ- ಯಲಹಂಕ ಝೋನ್  - 202 ಪ್ರಕರಣಬೆಂಗಳೂರಿನ ಬಹುತೇಕ ವಲಯ ಮಟ್ಟದಲ್ಲಿ ದಾಖಲೆಯ‌ ಮಟ್ಟದಲ್ಲಿ ಕೇಸ್ ಗಳು ಹೆಚ್ಚಾಗುತ್ತಿವೆ.  ಹೀಗಾಗಿ ಈ ಡೆಂಗ್ಯು ಕೇಸ್ ಗಳನ್ನ  ತಡೆಗಟ್ಟುವ ಸಲುವಾಗಿ ಬಿಬಿಎಂಪಿ ಸಿದ್ದತೆ ಮಾಡಿಕೊಳ್ಳುತ್ತಿದ್ದು, 8 ವಲಯದ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ಬಿಬಿಎಂಪಿ ಸೂಚನೆ ನೀಡಿದೆ.

ಶಾಲಾ ಕಾಲೇಜುಗಳ‌ ಬಳಿ ನಿಗಾ

ಅದ್ರಲ್ಲಿ ಆಯಾ ಝೋನ್ ಗಳ ಅಧಿಕಾರಿಗಳು ಶಾಲಾ ಕಾಲೇಜುಗಳ‌ ಬಳಿ ನಿಗಾ ಇಡಬೇಕು. ಶಾಲಾ- ಕಾಲೇಜಿಗಳ ಬಳಿ ನೀರು ನಿಂತುಕೊಳ್ಳದಂತೆ ನೋಡಿಕೊಳ್ಳಬೇಕು. ಆರೋಗ್ಯ ಸಿಬ್ಬಂದಿಗಳು ಅಗಾಗೇ  ಶಾಲೆಗಳ‌ ಬಳಿ ಪರಿಶೀಲನೆ ಮಾಡಿ ಶಾಲೆಗಳ ಸುತ್ತಾ- ಮುತ್ತಾ ಲಾರ್ವಿಸೈಡ್ ಹಾಗೂ ಫಾಗ್ ಸಿಂಪಡಣೆ ಮಾಡಬೇಕು.  ವಲಯ ಮಟ್ಟದಲ್ಲಿ ಡೋರ್ ಟು ಡೋರ್  ಸರ್ವೆ ಮಾಡಿ ಸೊಳ್ಳೆ ಕಡಿತದಿಂದ ಅನಾರೋಗ್ಯದ ಸಮಸ್ಯೆ ಉಂಟಾದ್ರೆ ವೈದ್ಯರ ಬಳಿ ತೋರಿಸಿಕೊಳ್ಳಬೇಕು.

ಇದನ್ನೂ ಓದಿ: Explained: ಬಜ್ಜಿ, ಬೋಂಡಾ ಇನ್ನು ನೆನಪು ಮಾತ್ರ! ಏ.28ರಿಂದಲೇ ಮತ್ತಷ್ಟು 'ಬಿಸಿ'ಯಾಗಲಿದೆ ಅಡುಗೆ ಎಣ್ಣೆ! ಇದಕ್ಕೆ ಕಾರಣವೇನು?

ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಘೀ ಟೆಸ್ಟಿಂಗ್​ ಹೆಚ್ಚಳ

ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯು ಟೆಸ್ಟಿಂಗ್ ಗಳನ್ನ ಹೆಚ್ಚಳ‌‌ ಮಾಡ್ಬೇಕು ಅಂತ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಕೊರೋನಾ ಕಡಿಮೆಯಾಯ್ತು ಎಂದು ನಿಟ್ಟುಸಿರುವ ಬಿಡುವ ಹೊತ್ತಿಗೆ, ಡೆಂಘೀ ಕೇಸ್ ಗಳು ಏರಿಕೆಯಾಗಿರುವುದು ಹೆಚ್ಚು ಆತಂಕ ಮೂಡಿಸುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕಾಗಿದೆ. ಕೊಳಚೆ ನೀರು ನಿಲ್ಲದಂತೆ ನಿಗಾವಹಿಸಬೇಕಾಗಿದೆ.
Published by:Pavana HS
First published: