Bengaluru Power Cut: ಇಂದು ಬೆಂಗಳೂರಿನ ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ - ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ..

Bengaluru Power Cut: ಇದಿಷ್ಟೇ ಅಲ್ಲದೇ ಬೇರೆ ಕೆಲ ನಗರಗಳಲ್ಲಿ ಸಹ ವಿದ್ಯುತ್ ಸಮಸ್ಯೆ ತಲೆದೋರಬಹುದು ಎಂದು ಹೇಳಲಾಗುತ್ತಿದೆ. ಬೆಸ್ಕಾಂ ಮುಂಚಿತವಾಗಿ ಮಾಹಿತಿಯನ್ನೇನೋ ನೀಡಿದೆ, ಆದರೆ ಇದು ಜನರಿಗೆ ಬಹಳಷ್ಟು ಸಮಸ್ಯೆಯನ್ನು ತಂದೊಡ್ಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಿಲಿಕಾನ್ ಸಿಟಿ ಬೆಂಗಳೂರಿನ(Bengaluru) ಹಲವೆಡೆ ಇಂದು ವಿದ್ಯುತ್ವ್ಯತ್ಯಯವಾಗಲಿದ್ದು(Power Cut), ಸಾರ್ವಜನಿಕರು ಸಹಕರಿಸಬೇಕೆಂದು ಎಂದು ಬೆಸ್ಕಾಂ(BESCOM) ಮನವಿ ಮಾಡಿದೆ. ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಇಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ವಿವಿಧ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲಿದೆ ಎಂಬ ಪಟ್ಟಿ ಇಲ್ಲಿದೆ.

ಗಂಗಾ ನಗರ, ಆರ್‌ಟಿ ನಗರ, ರಾಮಗೊಂಡನಹಳ್ಳಿ, ವೈಟ್ ಫೀಲ್ಡ್, ಬಳಗೆರೆ, ವರ್ತೂರು , ಎಚ್ ಎಸ್ ಆರ್ ಲೇಔಟ್ 7 ನೇ ಸೆಕ್ಟರ್, ಮಂಗಮ್ಮನಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಬಿ ನಾರಾಯಣಪುರ, ಮುನಿರೆಡ್ಡಿ ಲೇಔಟ್, ಮಹಾದೇವಪುರ, ಪಿ & ಟಿ ಲೇಔಟ್, ಹೊರಮಾವು, ಬಾಬುಸಾಪಾಳ್ಯ ಮತ್ತು  ಅಲ್ಲಿನ ಕೆಲ ಪ್ರದೇಶಗಳಲ್ಲಿ ಸಹ ಪವರ್ ಕಟ್ ಸಮಸ್ಯೆಯಾಗಲಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: ಮೆಟ್ರೋ ಕಾಮಗಾರಿ ವೇಳೆ 30 ಅಡಿ ಮಣ್ಣು ಕುಸಿತ, ಸರಿಯಾಗಿ ಬಾವಿ ಮುಚ್ಚದಿದ್ದಕ್ಕೆ ಅವಘಡ..!

ಜವರಾಯನ ದೊಡ್ಡಿ, ಭೂಮಿಕಾ ಬಡಾವಣೆ, ಪಟ್ಟಣಗೆರೆ, ಬಿಎಚ್ಇಎಲ್ ಬಡಾವಣೆ, ತಿಪ್ಪನಹಳ್ಳಿ, ಮಾಳಗಾಳ, ಮಾಗಡಿ ಮುಖ್ಯರಸ್ತೆ, ರಾಜೀವ್ ಗಾಂಧಿ ನಗರ, ಭೈರವೇಶ್ವರನಗರ, ಕೆಬ್ಬೆಹಳ್ಳ, ಹನುಮಂತರಾಯನಪಾಳ್ಯ ತೊಂದರೆ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.

ಚಿಕ್ಕ ಬಸವನಪುರ, ಟಿಸಿ ಪಾಳ್ಯ ಮೇನ್ ರೋಡ್, ಅಜಿತ್ ಲೇಔಟ್,.ವಿಲ್ಸನ್ ಗಾರ್ಡನ್ ,ಲಾಲ್ಜಿ ನಗರ ,ಲಕ್ಕಸಂದ್ರ, ವೈಟ್ ಹೌಸ್, ದಿನ್ನೂರು ರಸ್ತೆಯ ಭಾಗಗಳು, ಗಂಗಾ ನಗರ , ಕಿರ್ಲೋಸ್ಕರ್ ಲೇಔಟ್, ನಾವಿ ಲೇಔಟ್, ಚಿಕ್ಕಸಂದ್ರ, ಅಂದಾನಪ್ಪ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್  ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ.

ಇದಿಷ್ಟೇ ಅಲ್ಲದೇ ಬೇರೆ ಕೆಲ ನಗರಗಳಲ್ಲಿ ಸಹ ವಿದ್ಯುತ್ ಸಮಸ್ಯೆ ತಲೆದೋರಬಹುದು ಎಂದು ಹೇಳಲಾಗುತ್ತಿದೆ. ಬೆಸ್ಕಾಂ ಮುಂಚಿತವಾಗಿ ಮಾಹಿತಿಯನ್ನೇನೋ ನೀಡಿದೆ, ಆದರೆ ಇದು ಜನರಿಗೆ ಬಹಳಷ್ಟು ಸಮಸ್ಯೆಯನ್ನು ತಂದೊಡ್ಡುತ್ತದೆ.

ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ.  ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ.  ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.

ಇದನ್ನೂ ಓದಿ: ಮತ್ತೆ "ಮಂತ್ರಿಮಾಲ್" ಕಿರಿಕ್! ತೆರಿಗೆ ಕಟ್ಟದೆ ಸತಾಯಿಸಿದ್ದಕ್ಕೆ "ಬೃಹತ್" ಬೀಗ!

ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಲ್ಲಿ ವೈಫೈ ಸಿಗುವುದಿಲ್ಲ ಅಲ್ಲದೇ ಲ್ಯಾಪ್​ಟಾಪ್ ಸೇರಿದಂತೆ ಇತರ ವಸ್ತುಗಳನ್ನು .  ಹೆಚ್ಚಿನ ಸಮಯ ಬಳಸುವುದು ಕಷ್ಟಕರವಾಗುತ್ತದೆ. ಹಾಗೆಯೇ ಇಲ್ಲರ ಮನೆಯಲ್ಲಿ ಯುಪಿಎಸ್​ ಸೌಲಭ್ಯ ಕೂಡ ಇರುವುದಿಲ್ಲ. ಹಾಗಾಗಿ ಬೆಸ್ಕಾಂ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಸ್ಕಾಂ ಯಾವ ಕಾರಣ ವಿದ್ಯುತ್ ಸಮಸ್ಯೆ ತಲೆದೋರಿದೆ ಎಂಬುದನ್ನ ಸಹ ತಿಳಿಸದಿರುವುದು ಜನರ ಕೋಪಕ್ಕೆ ಮುಖ್ಯ ಕಾರಣವಾಗಿದೆ.
Published by:Sandhya M
First published: