Siddaramaiah Speech in Assembly: ಮೈಸೂರು ರೇಪ್​​ ಕೇಸ್​​ ಸಂಬಂಧ ಗೃಹ ಸಚಿವರಿಗೆ ಸಿದ್ದರಾಮಯ್ಯ ತರಾಟೆ

siddaramaiah targets araga jnanendra : ಪಾಪ ಅರಗ ಜ್ಞಾನೇಂದ್ರ ಬಹಳ ಖುಷಿಯಾಗಿದ್ರು ದೊಡ್ಡ ಖಾತೆ ಸಿಕ್ಕಿದೆ ಅಂತ ಸಂತೋಷವಾಗಿದ್ರು. ಆದ್ರೆ ಯಾಕಪ್ಪ ಈ ಇಲಾಖೆ ಸಿಕ್ಕಿದೆ ಅಂತ ಹೇಳಿದ್ರು. ಶಿವಮೊಗ್ಗದಲ್ಲಿ ಅರಗ ಜ್ಞಾನೇಂದ್ರ ಅವರೇ ಗೃಹ ಖಾತೆ ಬಗ್ಗೆ ಮಾತನಾಡಿದ್ದಾರೆ. ಪಾಪ ಈಗ ಗೊತ್ತಾಗಿರಬೇಕು ಅರಗ ಜ್ಞಾನೇಂದ್ರರಿಗೆ.

ಸಿದ್ದರಾಮಯ್ಯ (ಫೈಲ್​ ಫೋಟೋ)

ಸಿದ್ದರಾಮಯ್ಯ (ಫೈಲ್​ ಫೋಟೋ)

  • Share this:
ವಿಧಾನಸಭೆ: ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ(mysore gang rape case) ಸಂಬಂಧ ಸದನದಲ್ಲಿ ವಿಪಕ್ಷಗಳು ಸರ್ಕಾರವನ್ನು, ಗೃಹ ಸಚಿವರನ್ನು ತರಾಟೆಗೆ ತೆಗೆದುಕೊಂಡವು. ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಗೃಹ ಸಚಿವ ಅರಗ ಜ್ಞಾನೇಂದ್ರ(home minister araga jnanendra) ಅವರಿಗೆ ಗೃಹ ಖಾತೆ ಹೇಗೆ ನಿರ್ವಹಿಸಬೇಕು ಎಂದು ಪಾಠ ಮಾಡಿದರು. ಅತ್ಯಾಚಾರಗಳು ಈಗಲೇ ಆಗ್ತಿಲ್ಲ, ಮೊದಲಿನಿಂದಲೂ ನಡೆಯುತ್ತಿವೆ. ಈಗ ಆಗಿರೋದಕ್ಕೆ ನೀವು ಜವಾಬ್ದಾರರಲ್ವೇ ಎಂದು ಗೃಹ ಸಚಿವರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.

ಅರಗ ಜ್ಞಾನೇಂದ್ರಗೆ ಗೃಹ ಖಾತೆ ಬಿಸಿ ತುಪ್ಪವಾಗಿದೆ

ಪಾಪ ಅರಗ ಜ್ಞಾನೇಂದ್ರ ಬಹಳ ಖುಷಿಯಾಗಿದ್ರು ದೊಡ್ಡ ಖಾತೆ ಸಿಕ್ಕಿದೆ ಅಂತ ಸಂತೋಷವಾಗಿದ್ರು. ಆದ್ರೆ ಯಾಕಪ್ಪ ಈ ಇಲಾಖೆ ಸಿಕ್ಕಿದೆ ಅಂತ ಹೇಳಿದ್ರು. ಶಿವಮೊಗ್ಗದಲ್ಲಿ ಅರಗ ಜ್ಞಾನೇಂದ್ರ ಅವರೇ ಗೃಹ ಖಾತೆ ಬಗ್ಗೆ ಮಾತನಾಡಿದ್ದಾರೆ. ಪಾಪ ಈಗ ಗೊತ್ತಾಗಿರಬೇಕು ಅರಗ ಜ್ಞಾನೇಂದ್ರರಿಗೆ. ಹೌದಲ್ವೇನಪ್ಪಾ ಅರಗ ಜ್ಙಾನೇಂದ್ರ ಎಂದ ಸಿದ್ದರಾಮಯ್ಯ ಪ್ರಶ್ನಿಸಿದರು. ಸಿದ್ದರಾಮಯ್ಯ ಮಾತಿಗೆ ಗೃಹ ಸಚಿವರು ತಲೆಯಾಡಿಸಿದರು. ಪಾಪ ಸತ್ಯವನ್ನೇ ಹೇಳ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ನಾವು ರಾಜೀನಾಮೆ ಕೇಳಿದ್ರೆ ತಪ್ಪಾ?

ನಿಮ್ಮ ಕ್ಷೇತ್ರದಲ್ಲೇ ನಂದಿತಾ ಪ್ರಕರಣ ಆಗಿತ್ತಲ್ವೇ, ಆಗ ಕಿಮ್ಮನೆಗೆ ನೀವು ಹೇಗೆ ಬೈಯ್ದಿದ್ರಿ ಅಂತ ಗೊತ್ತಿತ್ತು. ಇದಕ್ಕೆ ಆ ಕೇಸ್ ಬಿ ರಿಪೋರ್ಟ್ ಆಕ್ಕಿಬಿಟ್ರಲ್ಲಾ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಉತ್ತರಿಸಿದರು. ತಿರುಗೇಟು ನೀಡಿದ ಸಿದ್ದರಾಮಯ್ಯ ಹಾಗಂತ ನೀವು ಬಿ ರಿಪೋರ್ಟ್ ಹಾಕಿಸ್ತೀರಾ ಎಂದು ಮರು ಪ್ರಶ್ನೆ ಹಾಕಿದರು. ಅವಾಗ ನಾನು ನನ್ನ ಹಾಗೂ ಕಿಮ್ಮನೆ ರಾಜೀನಾಮೆ ಕೇಳಿದ್ರಿ. ಇವಾಗ ನಾವು ನಿಮ್ಮನ್ನು ರಾಜೀನಾಮೆ ಕೇಳೋದು ತಪ್ಪಾ..? ಈ ವೇಳೆ ಮತ್ರೆ ಮಧ್ಯ ಪ್ರವೇಶ ಮಾಡಿದ ಗೃಹ ಸಚಿವರು ನಾನು ನಿಮ್ಮ ರಾಜೀನಾಮೆ ಕೇಳಿಲ್ಲ ಎಂದರು.  ಆಯ್ತು ಬಿಡಿ, ಇಲ್ಲ ಅಂದರೆ ಇಲ್ಲ, ಆದರೆ ಗಲಾಟೆ ಮಾಡಿರಲಿಲ್ವೇ..? ಅಶಾಂತಿಯುಂಟು ಮಾಡಿರಲಿಲ್ಲವೇ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನಾವ್​ ರಾಜೀನಾಮೆ ಕೇಳಲ್ಲ

ನಿಜಲಿಂಗಪ್ಪ ಅವರು ಸಿಎಂ ಆಗಿದ್ದಾಗ ಗೃಹ ಸಚಿವರಾಗಿದ್ದವರು ರಾಮರಾಯರು. ಆಗ ಒಂದು ರೇಪ್ ಪ್ರಕರಣ ಆಗಿತ್ತು. ನಿಮ್ಮ ಮನೆ ಮಕ್ಕಳಿಗೆ ಹೀಗೆ ಆಗಿದ್ರೆ ಏನ್ ಮಾಡ್ತಿದ್ರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ರು. ನೀವು ರಾಜೀನಾಮೆ ನೀಡಿ ಎಂದು ಹೇಳಲ್ಲ, ಆ ಸೂಕ್ಷ್ಮತೆ ಈಗ ಉಳಿದಿಲ್ಲ ಬಿಡಿ ಎಂದ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಗೃಹ ಸಚಿವರಿಗೆ ಸಿದ್ದರಾಮಯ್ಯ ಪಾಠ

ಮೊದಲ ಬಾರೀ ಸಚಿವರಾಗಿದ್ದೀರ, ಯಾವುದೇ ಕೆಲಸವನ್ನ ಹಗುರವಾಗಿ ತೆಗರದುಕೊಳ್ಳಬೇಡಿ. ಜನ ಸ್ನೇಹಿಯಾಗಿ ಕೆಲಸ ಮಾಡಿ ಇಷ್ಟು ನಾನು ನಿಮಗೆ ಹೇಳುವೆ. ಕೇಂದ್ರದಲ್ಲಿ ಗೃಹ ಖಾತೆ ಅನ್ನೋದು ದೊಡ್ಡ ಖಾತೆ. ಗೃಹ ಖಾತೆ ವಹಿಸಿಕೊಂಡವ್ರು ಮುಂದೆ ಪ್ರಧಾನಿ ಆಗ್ತಾರೆ. ಹಾಗೇ ನಿಮಗೆ ಆ ರೀತಿಯ ಅವಕಾಶ ಸಿಕ್ಕಿದೆ. ಗೃಹ ಖಾತೆಯಲ್ಲಿ ಚೆನ್ನಾಗಿ ಕೆಲಸ ಮಾಡಿ ಎಂದು ಪಾಠ ಮಾಡಿದರು.

ಇದನ್ನು ಓದಿ: Assembly Session- ಸಿದ್ದರಾಮಯ್ಯ ಪಂಚೆ ಕಳಚಿಕೊಂಡಿದ್ದು, ಸುಧಾಕರ್, ಅರಗ ಜ್ಞಾನೇಂದ್ರ ಪೇಚಿಗೀಡಾಗಿದ್ದು…

ಅಪರಾಧ ಪ್ರಕರಣಗಳಿಗೆ ಬ್ರೇಕ್​​ ಏಕೆ ಹಾಕುತ್ತಿಲ್ಲ?

ಮೈಸೂರು ಘಟನೆ ಬಳಿಕ ರಾಜ್ಯದ ಇತರೆ ಕಡೆ ನಡೆದ ಅಪರಾಧ ಪ್ರಕರಣಗಳ ಬಗ್ಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ನಾಯ್ಡು ನಗರದಲ್ಲಿ ಹಾಸ್ಟೆಲ್ ಗೆ ನುಗ್ಗುತ್ತಾರೆ, ವಿದ್ಯಾರ್ಥಿನಿ‌ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ನಡೆಸ್ತಾರೆ. ಆಗಸ್ಟ್ ೨೪ ರಂದೇ ತುಮಕೂರಿನಲ್ಲಿ ರೇಪ್ ಆಗುತ್ತೆ. ದನ ಕಾಯುವ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ. ಯಾದಗಿರಿಯಲ್ಲಿ ಬೆತ್ತಲೆ ಮಾಡಿ ಸಿಗರೇಟ್ ನಲ್ಲಿ ಸುಡ್ತಾರೆ, ಹೆಣ್ಣುಮಗಳ ಮೈ ಸುಡ್ತಾರೆ. ಇದು ಎಂಥಹ ಅಮಾನವೀಯ ಕೃತ್ಯ. ಸುದ್ದಿ ಪತ್ರಿಕೆಗಳಲ್ಲಿ ಬಂದ ಮೇಲೆ ಎಫ್ ಐಆರ್ ಹಾಕ್ತಾರೆ. ಯಾದಗಿರಿಯಲ್ಲಿ ಫೈನಾನ್ಸರ್ ಕೂಡಿ ಇಟ್ಕೊಳ್ತಾರೆ. ಇಂತಹ ಕೆಟ್ಟ ಘಟನೆಗಳು ಯಾಕೆ ನಡೆಯುತ್ವೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಪೊಲೀಸರ ಬೇಜವಾಬ್ದಾರಿತನ ಅಲ್ಲವೇ?

ಪೊಲೀಸರು ಸ್ಥಳೀಯ ಜನರ ಜತೆ ಸ್ನೇಹ ಇಲ್ಲವೇ ಇಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರೇ ಅಪರಾಧಿಗಳ ಜತೆ ಶಾಮೀಲಾಗುತ್ತಿದ್ದಾರೆ. ಪೊಲೀಸರಿಗೆ ಗೊತ್ತಿಲ್ಲದೇ ಯಾರು ಅಪರಾಧ ಮಾಡಲು ಸಾಧ್ಯವಿಲ್ಲ. ಕಳ್ಳತನ,ರೌಡಿಸಂ ಮಾಡೋರ ಬಗ್ಗೆ ಇವರಿಗೆ ಮಾಹಿತಿ ಇರುತ್ತೆ. ಇವರ ಸಪೋರ್ಟ್ ಇಲ್ಲದೇ ಯಾರು ಆ ಕೆಲಸ ಮಾಡಲ್ಲ. 60 ಜನ ಪೊಲೀಸರು ಇದ್ರು ಆ ಠಾಣಾ ವ್ಯಾಪ್ತಿಯಲ್ಲಿ ಈ ಕೆಲಸ ಆಗಿದೆ. ಇದು ಇವರ ಬೇಜವಾಬ್ದಾರಿ ತೋರಿಸುತ್ತೆ. ಒಂದು ಹಳ್ಳಿಯ ನೆಮ್ಮದಿ ಕೆಡಸಕ್ಕೆ ಒಂದು ಪೊಲೀಸ್ ಠಾಣೆ ಇದ್ರೆ ಸಾಕು ಎಂದು ಹಳ್ಳಿಯ ಜನ ಹೇಳ್ತಾರೆ ಎನ್ನುವ ಮೂಲಕ ಪೊಲೀಸರ ಕರ್ತವ್ಯದ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದರು.
Published by:Kavya V
First published: