HOME » NEWS » State » BENGALURU URBAN IN A FIRST 1000 TONNES OF FRESH FRUIT FROM ABROAD REACH BENGALURU ON REFRIGERATED TRAIN LG

Fresh Fruits: ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದ ಇಂಪೋರ್ಟೆಡ್ ಹಣ್ಣುಗಳು; ಬೆಲೆಯೂ ಕಡಿಮೆ, ತಾಜಾ ಕೂಡ..!

ಮುಂಬೈನ ಜವಾಹರ್​ಲಾಲ್​ ನೆಹರೂ ಪೋರ್ಟ್​​ ಟ್ರಸ್ಟ್​ನಿಂದ ಬೆಂಗಳೂರಿನ ವೈಟ್​​ಫೀಲ್ಡ್​​​​ನಲ್ಲಿರುವ ಕಂಟೇನರ್​​ ಕಾರ್ಪೋರೇಷನ್​​ ಆಫ್​ ಇಂಡಿಯಾಗೆ ಹಣ್ಣುಗಳನ್ನು ತರಿಸಿಕೊಳ್ಳಲಾಗಿದೆ. ಸುಮಾರು 44 ಕಂಟೇನರ್​​ಗಳಲ್ಲಿ ಸೇಬು, ಕಿವಿಹಣ್ಣು, ಏಪ್ರಿಕಾಟ್(ಜರದಾಳು), ಚೆರ್ರಿ ಹಣ್ಣುಗಳನ್ನು ತರಿಸಿಕೊಳ್ಳಲಾಗಿದೆ.

news18-kannada
Updated:June 11, 2021, 11:43 AM IST
Fresh Fruits: ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದ ಇಂಪೋರ್ಟೆಡ್ ಹಣ್ಣುಗಳು; ಬೆಲೆಯೂ ಕಡಿಮೆ, ತಾಜಾ ಕೂಡ..!
ತಾಜಾ ಸೇಬು ಹಣ್ಣುಗಳು
  • Share this:
ಬೆಂಗಳೂರು(ಜೂ.11): ಗುರುವಾರ ಬೆಳ್ಳಂ ಬೆಳಗ್ಗೆ ಸಿಲಿಕಾನ್​ ಸಿಟಿ ಬೆಂಗಳೂರಿಗೆ ವಿದೇಶಗಳಿಂದ ಟನ್​ಗಟ್ಟಲೇ ತಾಜಾ ಹಣ್ಣುಗಳು ಬಂದಿಳಿದಿವೆ. ಇದರಲ್ಲೇನು ವಿಶೇಷ ಅಂತೀರಾ? ವಿಶೇಷ ಇದೆ. ದೇಶದಲ್ಲೇ ಒಂದು ವಿನೂತನ ಪ್ರಯತ್ನಕ್ಕೆ ಮುನ್ನುಡಿ ಬರೆಯಲಾಗಿದ್ದು, ಮೊಟ್ಟ ಮೊದಲ ಬಾರಿಗೆ ಸರಕು ಸಾಗಣೆ ರೈಲಿನ ಮೂಲಕ ಮುಂಬೈನಿಂದ ರೆಫ್ರಿಜರೇಟೆಡ್ ಕಂಟೇನರ್ ನಲ್ಲಿ ವಿದೇಶಿ ಹಣ್ಣುಗಳನ್ನ ಆಮದು ಮಾಡಿಕೊಳ್ಳಲಾಗಿದೆ. ನಿನ್ನೆ ಬೆಳಗ್ಗೆ ವಿದೇಶಗಳಿಂದ 1012 ಟನ್​​ ತಾಜಾ ತಾಜಾ ಹಣ್ಣುಗಳು ಬೆಂಗಳೂರಿಗೆ ರೈಲಿನ ಮೂಲಕ ಬಂದಿಳಿದಿವೆ. ಬ್ರೆಜಿಲ್​​, ಇರಾನ್​ ಮತ್ತು ಯುರೋಪ್​ ದೇಶಗಳಿಂದ ತಾಜಾ ಸೇಬು, ಕಿವಿಹಣ್ಣು, ಚೆರ್ರಿ ಹಾಗೂ ಏಪ್ರಿಕಾಟ್ಸ್​ ಹಣ್ಣುಗಳನ್ನು ಮುಂಬೈ ಮೂಲಕ ರೈಲಿನಲ್ಲಿ ಬೆಂಗಳೂರಿನ ವೈಟ್​ಫೀಲ್ಡ್​​ಗೆ ತರಿಸಿಕೊಳ್ಳಲಾಗಿದೆ.

ರೈಲಿನ ಮೂಲಕ ಹೀಗೆ ಹಣ್ಣುಗಳನ್ನು ತರಿಸಿಕೊಂಡಿದ್ದು ಇದೇ ಮೊದಲ ಪ್ರಯತ್ನವಾಗಿದೆ. ಮುಂಬೈನ ಜವಾಹರ್​ಲಾಲ್​ ನೆಹರೂ ಪೋರ್ಟ್​​ ಟ್ರಸ್ಟ್​ನಿಂದ ಬೆಂಗಳೂರಿನ ವೈಟ್​​ಫೀಲ್ಡ್​​​​ನಲ್ಲಿರುವ ಕಂಟೇನರ್​​ ಕಾರ್ಪೋರೇಷನ್​​ ಆಫ್​ ಇಂಡಿಯಾಗೆ ಹಣ್ಣುಗಳನ್ನು ತರಿಸಿಕೊಳ್ಳಲಾಗಿದೆ. ಸುಮಾರು 44 ಕಂಟೇನರ್​​ಗಳಲ್ಲಿ ಸೇಬು, ಕಿವಿಹಣ್ಣು, ಏಪ್ರಿಕಾಟ್, ಚೆರ್ರಿ ಹಣ್ಣುಗಳನ್ನು ತರಿಸಿಕೊಳ್ಳಲಾಗಿದೆ.

44 ರೆಫ್ರಿಜರೇಟೆಡ್ ಕಂಟೇನರ್​​​ಗಳಲ್ಲಿ ಹಣ್ಣುಗಳನ್ನು ತರಿಸಿಕೊಳ್ಳಲಾಗಿದ್ದು, ಒಂದು ಕಂಟೇನರ್​ನಲ್ಲಿ​​ 23 ಟನ್​ ಹಣ್ಣುಗಳಿದ್ದವು. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮುಂಬೈ ಪೋರ್ಟ್​​ನಿಂದ ಹೊರಟ ಸ್ಪೆಷಲ್ ರೈಲು, ಗುರುವಾರ ಬೆಳಗ್ಗೆ 10.40ಕ್ಕೆ ಬೆಂಗಳೂರಿನ ವೈಟ್​​ಫೀಲ್ಡ್​​ಗೆ ಬಂದು ತಲುಪಿತ್ತು.

ಈ ಮೊದಲು ರಸ್ತೆ ಮೂಲಕವೇ ಆಹಾರ ಪದಾರ್ಥಗಳನ್ನು ಸಾಗಾಣಿಕೆ ಮಾಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ರೈಲಿನ ಮೂಲಕ ಹಣ್ಣುಗಳನ್ನು ತರಿಸಿಕೊಳ್ಳುವ ಪ್ರಯತ್ನ ಯಶಸ್ವಿಯಾಗಿದೆ. ಇನ್ಮುಂದೆ ತಾಜಾ ಹಣ್ಣುಗಳನ್ನು ಹೀಗೆ ಒಂದು ನಗರರಿಂದ ಇನ್ನೊಂದು ನಗರಕ್ಕೆ ಸಾಗಿಸಬಹುದಾಗಿದೆ.

ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

ಅತೀ ಕಡಿಮೆ ಬೆಲೆಗೆ ವಿದೇಶಿ ಹಣ್ಣುಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿಯೂ ಈ ಹೊಸ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ರಸ್ತೆ ಮಾರ್ಗದ ಮೂಲಕ ಹಣ್ಣುಗಳನ್ನು ತರಿಸಿಕೊಳ್ಳುವಾಗ ಹೆಚ್ಚಿನ ದರ ತಗುಲುತ್ತಿತ್ತು. ಹೀಗಾಗಿ ಹಣ್ಣುಗಳಿಗೂ ಹೆಚ್ಚಿನ ಬೆಲೆ ಇರುತ್ತಿತ್ತು. ಆದರೆ ರೈಲು ಮಾರ್ಗದಲ್ಲಿ ವೆಚ್ಚ ಕಡಿಮೆ ಬೀಳುತ್ತದೆ. ಹೀಗಾಗಿ ಹಣ್ಣುಗಳೂ ಸಹ ಕಡಿಮೆ ದರದಲ್ಲಿ ಸಿಗಲಿವೆ.

ಈ ಸಾಗಾಣಿಕೆಗಾಗಿ ಕಂಡುಕೊಂಡ ಹೊಸ ಮಾರ್ಗವನ್ನು ಕಾನ್ ಕರ್ ಎಂದೇ ಕರೆಯುವ ಕಂಟೇನರ್ ಕಾರ್ಪೋರೇಷನ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ. ಈ ಕುರಿತು ಮಾತನಾಡಿದ ಐಜಿ ಇಂಟರ್ ನ್ಯಾಷನಲ್ ಪ್ರೈ.ಲಿ. ಚೇರಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗ್ಯಾನ್ ಚಂದ್ ಅರೋರಾ,"ಆರೋಗ್ಯದ ಕಾಳಜಿ ಎಲ್ಲರಲ್ಲಿಯೂ ಅಧಿಕವಾಗಿರುವದರಿಂದ ಐಜಿ ಮತ್ತು ಕಾನ್ ಕರ್ ಸಹಭಾಗಿತ್ವದಲ್ಲಿ ತಾಜಾ ಹಣ್ಣುಗಳನ್ನ ವಿವಿಧ ನಗರಗಳಿಗೆ ಸಾಗಾಣಿಕೆ ಮಾಡಲು ನಿರ್ಧರಿಸಿವೆ. ಇದರ ಭಾಗವಾಗಿ ಐಜಿ ಇಂಟರ್ ನ್ಯಾಷನಲ್ ತ್ವರಿತವಾಗಿ ಹಾಗೂ ತಾಜಾ ಹಣ್ಣುಗಳನ್ನ ದೇಶದೆಲ್ಲೆಡೆ ವಿತರಿಸಲಿದೆ. ತೋಟದಿಂದ ತೆಗೆದ ತಾಜಾ ಹಣ್ಣುಗಳನ್ನ ತ್ವರಿತ ವೇಗದಲ್ಲಿ ರೈಲ್ವೆ ಮೂಲಕ ಸಾಗಾಣಿಕೆ ಮಾಡುವುದು ನಮ್ಮ ಉದ್ದೇವಾಗಿದೆ", ಎಂದರು.ಐಜಿ ಇಂಟರ್ ನ್ಯಾಷನಲ್ ಪರಿಸರ ಸ್ನೇಹಿಯಾಗಿಯೂ ಯೋಚಿಸಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟಲು ರಸ್ತೆ ಸಾಗಣೆಯನ್ನು ಬಿಟ್ಟು, ರೈಲು ಮುಖಾಂತರ ಸಾಗಣೆ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಹಣ್ಣುಗಳು ತಾಜಾ ಆಗಿಯೇ ಇಲ್ಲಿಗೆ ಬರುವಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಒಂದೇ ಒಂದು ಹಣ್ಣು ಕೂಡಾ ಕೆಡದಂತೆ ತರಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. "ಆರೋಗ್ಯದ ಕಡೆಗೆ ಕಾಳಜಿಯಿಲ್ಲದೆ ಇಂದಿನ ಮಕ್ಕಳು ಫಾಸ್ಟ್ ಫುಡ್ ಜೊತೆಗೆ ತಂಪು ಪಾನೀಯಗಳ ಮೊರೆ ಹೋಗಿರುವುದರಿಂದ ಆರೋಗ್ಯ ಕೂಡಾ ಹಾಳಾಗುತ್ತಿದೆ. ಹೀಗಾಗಿ ತಾಜಾ ಮತ್ತು ಅತ್ಯುತ್ತಮ ಗುಣಮಟ್ಟದ ಹಣ್ಣುಗಳನ್ನ ತರಿಸಿಕೊಳ್ಳುವ ಮೂಲಕ ಆರೋಗ್ಯಪೂರ್ಣ ಸಮಾಜ ಸೃಷ್ಟಿಸುವ ಬಯಕೆ ಹೊಂದಿದ್ದೇವೆ", ಎಂದು ಹೇಳುತ್ತಾರೆ ಐಜಿ ಇಂಟರ್ ನ್ಯಾಷನಲ್ ನ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ನಿರ್ದೇಶಕ ಸಂಜಯ್ ಅರೋರಾ.

ಇದನ್ನೂ ಓದಿ:Viral News: ಸೀರೆಯುಟ್ಟು ಮ್ಯಾನ್​ಹೋಲ್​ಗೆ ಇಳಿದ ಮುನ್ಸಿಪಲ್ ಆಫೀಸರ್; ವೈರಲ್​ ಆಯ್ತು ವಿಡಿಯೋ..!

ಕಾನ್ ಕರ್ ಇಂಟರ್ ನ್ಯಾಷನಲ್ ಗ್ರೂಪ್ ಜೆನರಲ್ ಮ್ಯಾನೇಜರ್ ಅನೂಪ್ ದಯಾನಂದ್, ಮಾತನಾಡಿ,"ಕೋವಿಡ್ ಹೆಚ್ಚುತ್ತಿರುವ ಈ ವೇಳೆ ಪೌಷ್ಠಿಕಾಂಶಯುಕ್ತ ಆಹಾರಗಳನ್ನ ತೆಗೆದುಕೊಳ್ಳುವುದು ತೀರಾ ಅಗತ್ಯ. ಆ ನಿಟ್ಟಿನಲ್ಲಿ ಗುಣಮಟ್ಟದ ಹಣ್ಣುಗಳನ್ನ ಸೇವಿಸುವ ದೃಷ್ಟಿಯಿಂದ ಜಗತ್ತಿನ ನಾನಾ ಭಾಗಗಳಿಂದ ಅತ್ಯುತ್ತಮ ಹಣ್ಣುಗಳನ್ನ ತರಿಸಲಾಗುತ್ತಿದೆ. ಐಜಿ ಇಂಟರ್ ನ್ಯಾಷನಲ್ ಕೈಗೊಂಡಿರುವ ಈ ವಿನೂತನ ಕಾರ್ಯದಲ್ಲಿ ಕಾನ್ ಕರ್ ಭಾಗಿಯಾಗಿರುವುದಕ್ಕೆ ನನಗೆ ತುಂಬಾ ಸಂತಸವಾಗಿದೆ. ಮುಂದಿನ ದಿನಗಳಲ್ಲಿ ತಾಜಾ ಹಣ್ಣುಗಳನ್ನ ತರಿಸಿಕೊಳ್ಳಲು ಕಾನ್ ಕರ್ ಎಲ್ಲ ರೀತಿಯಲ್ಲಿಯೂ ಸಹಕಾರ ನೀಡಲಿದೆ", ಎಂದು ತಿಳಿಸಿದರು.
Youtube Video

ಐಜಿ ಇಂಟರ್ ನ್ಯಾಷನಲ್ ಬೆಂಗಳೂರು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಕಮಲ್ ಅರೋರಾ ಮಾತನಾಡಿ,"ತಂತ್ರಜ್ಞಾನವನ್ನ ಬಳಸಿಕೊಂಡು ಒಂದು ವಿಭಿನ್ನ ಪ್ರಯತ್ನದ ಮೂಲಕ ಹೊಸ ಮಾರ್ಗವನ್ನ ಇವತ್ತು ಐಜಿ ಇಂಟರ್ ಕಂಡುಕೊಂಡಿದೆ. ರೈಲ್ವೆ ಮೂಲಕ ಹಣ್ಣುಗಳನ್ನ ತರಿಸಿಕೊಳ್ಳುವುದರಿಂದ ತುಂಬಾ ಕಡಿಮೆ ಬೆಲೆಗೆ ಹಣ್ಣುಗಳನ್ನ ಗ್ರಾಹಕರಿಗೆ ನೀಡಬಹುದಾಗಿದೆ. ಇದೊಂದು ಮಾರಾಟ ವಲಯದಲ್ಲಿ ಹೊಸ ಬೆಳವಣಿಗೆಗೆ ನಾಂದಿಯಾದರು ಅಚ್ಚರಿಯಿಲ್ಲ", ಎಂದರು.
Published by: Latha CG
First published: June 11, 2021, 11:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories