HOME » NEWS » State » BENGALURU URBAN IMA SCAM KARNATAKA HC ASKS GOVT TO FORECLOSURE ROSHAN BAIGS ASSETS KVD

IMA Case: ಆರೋಪಿ ರೋಷನ್ ಬೇಗ್ ಆಸ್ತಿ ಜಪ್ತಿಗೆ ಸರ್ಕಾರದ ಮೀನಾಮೇಷ: ಹೈಕೋರ್ಟ್​​​ ಗರಂ

ಆಸ್ತಿಗಳನ್ನು ಪರಭಾರೆ ಮಾಡಿದರೆ ಯಾರು ಹೊಣೆ? ರಾಜಕಾರಣಿ ಎಂಬ ಕಾರಣಕ್ಕೆ ಜಪ್ತಿ ವಿಳಂಬ ಆರೋಪವಿದೆ ಎಂದು ಸರ್ಕಾರಕ್ಕೆ ಹೈಕೋರ್ಟ್​​ ತರಾಟೆ ತೆಗೆದುಕೊಂಡಿದೆ.

Kavya V | news18-kannada
Updated:June 11, 2021, 4:15 PM IST
IMA Case: ಆರೋಪಿ ರೋಷನ್ ಬೇಗ್ ಆಸ್ತಿ ಜಪ್ತಿಗೆ ಸರ್ಕಾರದ ಮೀನಾಮೇಷ: ಹೈಕೋರ್ಟ್​​​ ಗರಂ
ರೋಷನ್​​ ಬೇಗ್​
  • Share this:
ಬೆಂಗಳೂರು: ಐಎಂಎ ಕಂಪನಿ ಗ್ರಾಹಕರಿಗೆ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಹೈಕೋರ್ಟ್​​ ಸರ್ಕಾರದ ವಿರುದ್ಧ ಚಾಟಿ ಬೀಸಿದೆ. ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ರೋಷನ್​ ಬೇಗ್​ ಆಸ್ತಿ ಜಪ್ತಿಗೆ ಸರ್ಕಾರ ಮೀನಾಮೇಷ ನೋಡುತ್ತಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಆಸ್ತಿ ಜಪ್ತಿ ಮಾಡಲು ವಿಳಂಬವಾಗಿದೆ ಎಂದು ಸರ್ಕಾರ ಕೋರ್ಟ್​ಗೆ ಸಬೂಬು ಹೇಳಿದೆ. ಇದಕ್ಕೆ ಗರಂ ಆದ ಹೈಕೋರ್ಟ್​ ಸರ್ಕಾರದ ವಿಳಂಬ ನೀತಿ ವಿರುದ್ಧ ಅಸಾಮಾಧಾನ ವ್ಯಕ್ತಪಡಿಸಿದೆ.

ಆರೋಪಿ ರೋಷನ್ ಬೇಗ್ ಆಸ್ತಿ ಜಪ್ತಿಗೂ ಲಾಲ್​​​​ಡೌನ್​​ಗೂ ಸಂಬಂಧವಿಲ್ಲ. ಆಸ್ತಿಗಳನ್ನು ಪರಭಾರೆ ಮಾಡಿದರೆ ಯಾರು ಹೊಣೆ? ರಾಜಕಾರಣಿ ಎಂಬ ಕಾರಣಕ್ಕೆ ಜಪ್ತಿ ವಿಳಂಬ ಆರೋಪವಿದೆ ಎಂದು ಸರ್ಕಾರಕ್ಕೆ ಹೈಕೋರ್ಟ್​​ ತರಾಟೆ ತೆಗೆದುಕೊಂಡಿದೆ. ಸರ್ಕಾರ ರೋಷನ್ ಬೇಗ್ ಆಸ್ತಿ ಜಪ್ತಿಗೆ ಹಿಂಜರಿಯುತ್ತಿದೆ. ಸರ್ಕಾರಕ್ಕೆ ಸೂಚಿಸಿದ್ದರೂ ಜಪ್ತಿಗೆ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನೀತಿಗೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.

1 ವಾರದಲ್ಲಿ ಜಪ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಆದೇಶ ನೀಡಿದೆ. ರೋಷನ್ ಬೇಗ್ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ. ಐಎಂಎ ಪ್ರಕರಣದಲ್ಲಿ ಸಿಬಿಐ ತನಿಖೆ ಮುಕ್ತಾಯವಾಗಿದೆ ಎಂದು ಹೈಕೋರ್ಟ್ ಗೆ ಸಿಬಿಐ ಎಸ್ ಪಿಪಿ ಪ್ರಸನ್ ಕುಮಾರ್ ತಿಳಿಸಿದ್ದಾರೆ. ಐಪಿಎಸ್ ಅಧಿಕಾರಿಗಳ ವಿರುದ್ಧ ಪೂರ್ವಾನುಮತಿ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ : ಅಕ್ರಮವಾಗಿ ದೇಶಕ್ಕೆ ನುಸುಳಿದ ಶ್ರೀಲಂಕಾದ ಪ್ರಜೆಗಳು: ಲಾಕ್​​ಡೌನ್​​ನಿಂದ ಮಂಗಳೂರಲ್ಲಿ ಸಿಲುಕಿದ್ದವರ ಸೆರೆ

ಇನ್ನು ದೇಶದಲ್ಲಿ ಕೊರೋನಾ 2ನೇ ಅಲೆ ತಗ್ಗುತ್ತಿದ್ದು, ಲಸಿಕೆ ಅಭಿಯಾನ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈವರೆಗೂ ಕೇಂದ್ರದಿಂದ ರಾಜ್ಯಗಳಿಗೆ 25.60 ಕೋಟಿ ಡೋಸ್ ಹಂಚಿಕೆಯಾಗಿದೆ. ಈವರೆಗೂ 24.44 ಕೋಟಿ ಡೋಸ್ ಬಳಕೆಯಾಗಿದೆ. ರಾಜ್ಯಗಳಲ್ಲಿ ಸದ್ಯ 1.17 ಕೋಟಿ ಡೋಸ್ ಬಳಕೆಗೆ ಲಭ್ಯವಿದೆ. ಇನ್ನು ಮೂರು ದಿನಗಳಲ್ಲಿ 38 ಲಕ್ಷ ಡೋಸ್ ಹಂಚಿಕೆಯಾಗಕಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 11, 2021, 4:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories