ಅನೈತಿಕ ಸಂಬಂಧಗಳು ಪತ್ತೆಯಾಗೋದು ಬೆಂಗಳೂರಲ್ಲೇ ಜಾಸ್ತಿಯಂತೆ. ಗಂಡ ಮನೆಯಲ್ಲಿ ಇಲ್ಲದಿದ್ದಾಗ ಹಳೆ ಪ್ರೇಮಿಗಳ ಮೇಲೆ ಮರಳಿ ಮನಸ್ಸಾಗುತ್ತದೆಯಂತೆ. ಗಂಡ ಮನೆ ಕೆಲಸ ಮಾಡಲ್ಲ, ಒಳ್ಳೆ 'ಪರ್ಫಾರ್ಮರ್' ಅಲ್ಲ, ಮನೆಯಲ್ಲಿ ಬೋರೋ ಬೋರು ಎಂಬಂತ ಅನೇಕ ಕಾರಣಗಳಿಗೆ ಮಹಿಳೆಯರ ಮನಸ್ಸು ಮತ್ತೊಬ್ಬರನ್ನು ಹುಡುಕುತ್ತಂತೆ!
ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗುತ್ತೆ (Marriage is made in heaven) ಅಂತಾರೆ, ಗಂಡ (Husband) ಹೆಂಡತಿ (Wife) ಸಂಬಂಧ (Relationship) ಏಳೇಳು ಜನ್ಮದ ಅನುಬಂಧ ಅಂತಾರೆ ಹಿರಿಯರು. ಆದರೆ ಈ ಆಧುನಿಕ ಯುದದಲ್ಲಿ ಗಂಡ, ಹೆಂಡತಿ ಒಂದು ಜನ್ಮದಲ್ಲಿ ಸಹಿಸಿಕೊಂಡು, ಒಟ್ಟಿಗೆ ಬಾಳಿದರೆ ಸಾಕಾಗಿದೆ. ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಅನ್ನೋದು ಹಳೆ ಮಾತಾಯ್ತು. ಈಗೇನಿದ್ರೂ ಗಂಡ, ಹೆಂಡತಿ ಮಧ್ಯೆ ಅವನು (He) ಬರ್ತಾನೆ, ಅವಳೂ (She) ಬರ್ತಾಳೆ. ಇಂಥ ಕೇಸ್ಗಳಲ್ಲಿ (Case) ರಾಜ್ಯ ರಾಜಧಾನಿ ಬೆಂಗಳೂರೇ (Bengaluru) ಅಗ್ರಸ್ಥಾನದಲ್ಲಿ ಇದ್ಯಂತೆ. ಇಂಥದ್ದೊಂದು ಶಾಕಿಂಗ್ ರಿಪೋರ್ಟ್ (Report) ಇದೀಗ ಬಹಿರಂಗವಾಗಿದೆ.
ಶಾಕಿಂಗ್ ಸರ್ವೆ ರಿಪೋರ್ಟ್ ಬಹಿರಂಗ
ಭಾರತದಲ್ಲಿ 10ರಲ್ಲಿ 7 ಮಹಿಳೆಯರು ತನ್ನ ಗಂಡನಿಗೆ ಮೋಸ ಮಾಡುವುದರಲ್ಲಿ ಎತ್ತಿದ ಕೈ ಎನ್ನುವುದು ಇದೀಗ ಬಟಾಬಯಲಾಗಿದೆ. ಈ ಪೈಕಿ ಬೆಂಗಳೂರಿನಲ್ಲೇ ಇಂತಹ ಕೇಸ್ಗಳು ಹೆಚ್ಚು ಹೆಚ್ಚು ನಡೆಯುತ್ತಂತೆ ಎನ್ನುತ್ತದೆ ಈ ಶಾಕಿಂಗ್ ಸರ್ವೆ ರಿಪೋರ್ಟ್. ಸರ್ವೆಯ ಫಲಿತಾಂಶದ ಪ್ರಕಾರ, ಬೆಂಗಳೂರು, ಮುಂಬೈ ಹಾಗೂ ಕೋಲ್ಕತಾದಲ್ಲಿ ಮಹಿಳೆಯರು ತಮ್ಮ ಪತಿಗೆ ಅತಿಹೆಚ್ಚು ವಂಚನೆ ಮಾಡುತ್ತಾರೆ.
ಫ್ರೆಂಚ್ ಮೂಲದ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗ
ಗ್ಲೀಡೆನ್ ಎಂಬ ಫ್ರೆಂಚ್ ಮೂಲದ ವಿವಾಹೇತರ ಸಂಬಂಧದ ಡೇಟಿಂಗ್ ಅಪ್ಲಿಕೇಷನ್ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದೆ. ಭಾರತೀಯ ಮಹಿಳೆಯರು ಏಕೆ ಗಂಡನಿಗೆ ವಂಚಿಸಲು ಬಯಸುತ್ತಾರೆ ಎನ್ನುವುದನ್ನು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಡೇಟಿಂಗ್ ಅಪ್ಲಿಕೇಷನ್ ಭಾರತದಲ್ಲೇ 5 ಲಕ್ಷಕ್ಕೂ ಹೆಚ್ಚು ಸಬ್ ಸ್ಕೈಬರ್ಸ್ ಅನ್ನು ಹೊಂದಿದೆ.
ಇನ್ನೊಂದು ವಿಶೇಷ ಅಂಶವೆಂದರೆ ಇದೇ ಅಪ್ಲಿಕೇಷನ್ ಅನ್ನು ಬಳಸುತ್ತಿರುವ ಶೇ.20ರಷ್ಟು ಭಾರತೀಯ ಪುರುಷರು ಹಾಗೂ ಶೇ.13ರಷ್ಟು ಮಹಿಳೆಯರು ತಮ್ಮ ಸಂಗಾತಿಗೆ ವಂಚಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರಂತೆ.
10ರಲ್ಲಿ 7 ಮಹಿಳೆಯರಿಂದ ಅಸಮಾಧಾನ
ಭಾರತದಲ್ಲಿ 10ರಲ್ಲಿ 7 ಮಹಿಳೆಯರು ತಮ್ಮ ಪತಿ ತಮಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡುವುದಿಲ್ಲ ಎಂಬ ಕಾರಣಕ್ಕೆ ವಂಚನೆ ಮಾಡುತ್ತಾರಂತೆ. ಅಷ್ಟೇ ಸಂಖ್ಯೆಯ ಮಹಿಳೆಯರು ತಮ್ಮ ಏಕಾಂತದ ಸಮಯವನ್ನು ಕಳೆಯುವ ಸಲುವಾಗಿ ಪತಿಗೆ ವಂಚನೆ ಮಾಡುತ್ತಾರೆ ಎನ್ನಲಾಗಿದೆ.
ಏಕಾಂತದಿಂದ ಬೋರೋ ಬೋರಂತೆ!
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.77ರಷ್ಟು ಮಹಿಳೆಯರು ಏಕಾಂತದ ಸಮಯದಿಂದ ರೋಸಿಹೋಗಿರುತ್ತಾರೆ. ಇಲ್ಲವೇ ವಿವಾಹೇತರ ಸಂಬಂಧದಿಂದ ಬದುಕಿನ ಎಕ್ಸೈಟ್ ಮೆಂಟ್ ಹೆಚ್ಚಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಫ್ಲರ್ಟ್ ಮಾಡುವುದಕ್ಕಾಗಿ ಬಾಹ್ಯ ಸಂಬಂಧವನ್ನು ಹೊಂದಿರುವುದಾಗಿ 10ರಲ್ಲಿ 4 ಮಹಿಳೆಯರು ಹೇಳಿದ್ದಾರೆ.
ಸಂಗಾತಿ ಊರಲ್ಲಿ ಇಲ್ಲದಿದ್ದಾಗ ಪ್ಲಾನ್!
ಶೇ.57ರಷ್ಟು ಪುರುಷರು, ಶೇ.52ರಷ್ಟು ಮಹಿಳೆಯರು ತಮ್ಮ ಸಂಗಾತಿ ವ್ಯಾಪಾರಕ್ಕಾಗಿ ಊರು ಬಿಟ್ಟು ಹೋದಾಗ ಮೋಸ ಮಾಡುವುದಾಗಿ ಹೇಳಿದ್ದಾರೆ. ಪತಿಗೆ ವಂಚಿಸುವ ಶೇ.31ರಷ್ಟು ಮಹಿಳೆಯರು ತಾವು ಅಕ್ಕಪಕ್ಕದ ಮನೆಯವರೊಡನೆ ಸಂಬಂಧ ಹೊಂದಿರುವುದಾಗಿ ಹೇಳಿದ್ದಾರೆ.
ಭಾರತದಲ್ಲಿ 10ರಲ್ಲಿ 7 ಮಹಿಳೆಯರು ತಮ್ಮ ಗಂಡನ ಹೊರತಾಗಿ ಮತ್ತೊಮ್ಮೆ ಪ್ರಿಯತಮನಿಗೆ ಅಂಟಿಕೊಂಡಿರುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗುತ್ತಿದೆ. ಅದಕ್ಕಾಗಿ ಗಂಡನಿಗೆ ಸುಳ್ಳು, ವಂಚನೆ, ಮೋಸದ ಮಾತುಗಳನ್ನು ಆಡುತ್ತಾರೆ. ಅದರಲ್ಲಿ ಬಹುತೇಕ ಮಹಿಳೆಯರು ತಮ್ಮ ಹಳೆಯ ಗೆಳೆಯನ ಕಡೆ ವಾಲುತ್ತಾರೆ ಅಂತ ಸರ್ವೆ ಹೇಳಿದೆ.