IISc: ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮೇಲೆ Oxygen ಅಭಾವ ಇರೋಲ್ಲ, ಹೊಸಾ ತಂತ್ರಜ್ಞಾನ ಕಂಡುಹಿಡಿದಿದ್ದಾರೆ ಬೆಂಗಳೂರು ವಿಜ್ಞಾನಿಗಳು

IISC ಪ್ರೊಫೆಸರ್‌ಗಳು ಹಾಗೂ ತಂಡವು ಮೈಕ್ರೋ ಆಕ್ಸಿಜನ್ ಜನರೇಟರ್‌ಗಳನ್ನು ಸಣ್ಣ ಆಸ್ಪತ್ರೆಗಳಲ್ಲಿ ಹಾಗೂ ಸರಕಾರಿ ಆರೋಗ್ಯ ರಕ್ಷಣಾ ಸಂಸ್ಥೆಗಳಲ್ಲಿ ಅಳವಡಿಸುವ ಯೋಜನೆಗೆ ಸಹಕಾರ ನೀಡಿದೆ. ಪ್ರಸ್ತುತ ಈ ಆಕ್ಸಿಜನ್ ಜನರೇಟರ್‌ಗಳನ್ನು ಉತ್ಪಾದಿಸಲಾಗುತ್ತಿದ್ದು ನಗರಗಳಲ್ಲಿರುವ 80 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸುವ ಯೋಜನೆ ಹೊಂದಿವೆ.

ಬೆಂಗಳೂರು ಐಐಎಸ್ಸಿ

ಬೆಂಗಳೂರು ಐಐಎಸ್ಸಿ

  • Share this:

Covid 19 ಎರಡನೇ ಅಲೆಯ ಸಮಯದಲ್ಲಿ ದೇಶಾದ್ಯಂತ ಆಮ್ಲಜನ ಪೂರೈಕೆಯಲ್ಲಿ (Oxygen Shortage) ವ್ಯತ್ಯಯ ಉಂಟಾಗಿದ್ದು, ಆಮ್ಲಜನಕ ಪೂರೈಕೆ ದೊರೆಯದೇ ಇದ್ದುದರಿಂದ ಎಷ್ಟೋ ರೋಗಿಗಳು ಮರಣ ಹೊಂದಿದ ಘಟನೆಗಳು ಕಣ್ಣಿಗೆ ಕಟ್ಟಿದಂತಿದೆ. ಇಂತಹ ಸಮಸ್ಯೆಯನ್ನು ಇನ್ನು ಮುಂದೆ ದೇಶ ಅನುಭವಿಸಬಾರದು ಎನ್ನುವ ಕಾರಣಕ್ಕಾಗಿ ಭಾರತೀಯ ವಿಜ್ಞಾನ ಸಂಸ್ಥೆ IISC ನಿರ್ಧಾರವೊಂದನ್ನು ಕೈಗೊಂಡಿದ್ದು ಸಂಸ್ಥೆಯ ಪ್ರೊಫೆಸರ್‌ಗಳು ಹಾಗೂ ತಂಡವು ಮೈಕ್ರೋ ಆಕ್ಸಿಜನ್ ಜನರೇಟರ್‌ಗಳನ್ನು ಸಣ್ಣ ಆಸ್ಪತ್ರೆಗಳಲ್ಲಿ ಹಾಗೂ ಸರಕಾರಿ ಆರೋಗ್ಯ ರಕ್ಷಣಾ ಸಂಸ್ಥೆಗಳಲ್ಲಿ ಅಳವಡಿಸುವ ಯೋಜನೆಗೆ ಸಹಕಾರ ನೀಡಿದೆ. ಪ್ರಸ್ತುತ ಈ ಆಕ್ಸಿಜನ್ ಜನರೇಟರ್‌ಗಳನ್ನು ಉತ್ಪಾದಿಸಲಾಗುತ್ತಿದ್ದು ನಗರಗಳಲ್ಲಿರುವ 80 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸುವ ಯೋಜನೆ ಹೊಂದಿವೆ. ಸಂಸ್ಥೆಯ ಪ್ರೊಫೆಸರ್ ದಾಸಪ್ಪ ನೇತೃತ್ವದಲ್ಲಿ 4 ಜನರ ತಂಡ ಈ ಯಂತ್ರ ನಿರ್ಮಿಸುತ್ತಿದೆ. ಪಿಎಸ್‌ಎ ಅಂದರೆ ಒತ್ತಡ ತಡೆದುಕೊಳ್ಳುವ ತಂತ್ರಜ್ಞಾನ ಆಧಾರಿತವಾಗಿರುವ ಆಮ್ಲಜನಕ ಉತ್ಪಾದನಾ ಸ್ಥಾವರ ಇದಾಗಿದ್ದು, ಭಾರತದಲ್ಲಿಯೇ 30,000 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕ ಆಧಾರಿತ ಪರಿಕರ ಸ್ಥಾಪಿಸುವ ಯೋಜನೆಯನ್ನು ತಂಡ ಹೊಂದಿದೆ.


ತಂಡದ ಸದಸ್ಯರಲ್ಲೊಬ್ಬರಾದ ಸೋಹನ್ ಪೂಜಾರಿ ಹೇಳುವಂತೆ ತಂಡದ ಮೂವರು ಒಗ್ಗೂಡಿ ಈ ಆಮ್ಲಜನಕ ಪೂರೈಕೆ ಸ್ಥಾವರ ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಇದಕ್ಕೆ ಸಹಕಾರ ನೀಡಿದವರು ಮೆಡಿಕಲ್ ಆಕ್ಸಿಜನ್ ಜನರೇಟರ್ ಓಪನ್ ಸೋರ್ಸ್ ಡಾಕ್ಯುಮೆಂಟ್ ಬರೆದ ಪ್ರೊಫೆಸರ್ ದಾಸಪ್ಪ. ತಂಡವು ಅವರನ್ನು ಸಂಪರ್ಕಿಸಿ ಜನರೇಟರ್ ನಿರ್ಮಿಸುವ ಯೋನೆಯಲ್ಲಿ ಕಾರ್ಯನಿರ್ವಹಿಸುವ ಇರಾದೆಯನ್ನು ವ್ಯಕ್ತಪಡಿಸಿದರು ಹಾಗೂ ಈ ಯೋಜನೆಯನ್ನು ಸಣ್ಣ ಆಸ್ಪತ್ರೆಗಳಿಗೆ ತಲುಪಿಸುವುದು ತಂಡದ ಮುಖ್ಯ ಗುರಿಯಾಗಿದೆ.


ನಾವು ಆಮ್ಲಜನಕ ಜನರೇಟರ್‌ಗಳನ್ನು ಹೆಚ್ಚಿನ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ತಯಾರಿಸಿದ್ದೇವೆ. ಇನ್ನು ಸಾಫ್ಟ್‌ವೇರ್‌ ಅಪ್‌ಗ್ರೇಡ್ ಹಾಗೂ ನಿರ್ವಹಣೆಯ ಸೇವೆ ಒದಗಿಸಲಿದ್ದು ಜನರೇಟರ್‌ ದುರಸ್ಥಿಯನ್ನೂ ತಂಡವೇ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Explained: Hallmark ಇರುವ ಚಿನ್ನಾಭರಣಗಳಿಗೆ ಹೆಚ್ಚಿನ ಬೆಲೆ ಕೊಡಬೇಕಾ? ನಕಲಿ ಚಿನ್ನವನ್ನು ಗುರುತಿಸುವುದು ಹೇಗೆ?

ಒಮ್ಮೆ ಇದನ್ನು ಅಳವಡಿಸಿದ ನಂತರ ಇದನ್ನು ಮೇಲ್ವಿಚಾರಣೆ ಮಾಡಲು ಯಾರ ಅಗತ್ಯವೂ ಇರುವುದಿಲ್ಲ. ಇನ್ನು ಉಪಕರಣದಲ್ಲಿ ಏನಾದರೂ ದೋಷ ಕಂಡುಬಂದಲ್ಲಿ ಬಳಕೆದಾರರಿಗೆ ಸಂದೇಶ ರವಾನೆಯಾಗುತ್ತದೆ ಎಂಬುದಾಗಿ ಸೋಹನ್ ತಿಳಿಸಿದ್ದಾರೆ.


ಗ್ರಾಮೀಣ ಭಾಗದಲ್ಲಿರುವ ಆರೋಗ್ಯ ಕೇಂದ್ರಗಳಿಗೆ ನಾವು ಈ ಉಪಕರಣವನ್ನು ಹೆಚ್ಚು ಪ್ರಮಾಣದಲ್ಲಿ ಅಳವಡಿಸಲಿದ್ದು ಹೆಚ್ಚಿನ ಚಿಕಿತ್ಸೆಗೆ ಪಟ್ಟಣಗಳಿಗೆ ಪ್ರಯಾಣಿಸುವ ಬಡವರಿಗೆ ಹಾಗೂ ಹಳ್ಳಿಯವರಿಗೆ ಇದರಿಂದ ಹೆಚ್ಚಿನ ನೆರವು ದೊರೆಯಲಿದೆ ಎಂಬುದು ಸೋಹನ್ ಹಾಗೂ ತಂಡದ ಅಭಿಪ್ರಾಯವಾಗಿದೆ. ಹಳ್ಳಿಗಳಲ್ಲಿರುವ ವೈದ್ಯಕೀಯ ಸವಲತ್ತುಗಳನ್ನು ಸುಧಾರಿಸಿದಲ್ಲಿ ಅವರುಗಳು ಹೆಚ್ಚಿನ ಹಣ ತೆತ್ತು ಪಟ್ಟಣಗಳಲ್ಲಿರುವ ಆಸ್ಪತ್ರೆಗಳಿಗೆ ಹೋಗಬೇಕಾದ ಅಗತ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.


ಹಳ್ಳಿಗಳಲ್ಲಿ ದೊರೆಯುವ ವೈದ್ಯಕೀಯ ಸವತ್ತುಗಳು ಹಳ್ಳಿಯವರಿಗೆ ಹಾಗೂ ಬಡವರ ಸೇವೆಗೆ ಇದ್ದು ಹಳ್ಳಿಯಲ್ಲಿಯೇ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಜನರು ಪಡೆದುಕೊಳ್ಳಬಹುದಾಗಿದೆ. ಈ ಉಪಕರಣದ ಮೂಲಕ ಕರ್ನಾಟಕದ 80% ಜನಸಂಖ್ಯೆಯು ಸುರಕ್ಷಿತವಾಗಿ ಕೋವಿಡ್‌ನಿಂದ ಉಂಟಾಗುವ ಆಮ್ಲಜನಕ ಕೊರತೆಯನ್ನು ನೀಗಿಸಬಹುದಾಗಿದ್ದು ಉಳಿದ ಸವತ್ತುಗಳು ತೀವ್ರ ನಿಗಾ ಕಾಳಜಿಯನ್ನು ಮಾಡುವಷ್ಟು ಸಾಮರ್ಥ್ಯ ಹೊಂದಿವೆ ಎಂಬುದು ತಂಡದ ಅಭಿಪ್ರಾಯವಾಗಿದೆ.


ಇದನ್ನೂ ಓದಿ: Covid 19 ಗೆದ್ದು ಬಂದವರಲ್ಲಿ ವಿಪರೀತ Hair Fall, ಇದಕ್ಕೂ ಸೋಂಕಿಗೂ ಲಿಂಕ್ ಇದೆ ಅಂತಿದ್ದಾರೆ ಡಾಕ್ಟರ್ಸ್ ! ಪರಿಹಾರವೇನು?

ಆಕ್ಸಿಜನ್ ಕಾನ್ಸಂಟ್ರೇಟರ್ಸ್‌ಗಳಿಗಿಂತಲೂ ಆಕ್ಸಿಜನ್ ಜನರೇಟರ್‌ಗಳು ಜನರಿಗೆ ಅತಿಮುಖ್ಯವಾಗಿದ್ದು ಹೆಚ್ಚಿನ ಜೀವಗಳನ್ನು ಸಂರಕ್ಷಿಸಲಿದೆ. ಕಾನ್ಸಂಟ್ರೇಟರ್ಸ್‌ಗಳು 30 ಲೀಟರ್‌ಗಳೊಂದಿಗೆ ಒಬ್ಬ ರೋಗಿಗೆ 24-48 ಗಂಟೆಗಳವರೆಗೆ ಮಾತ್ರ ಜೀವದಾನ ಮಾಡಲು ಸಾಧ್ಯ. ಆದರೆ ಮೈಕ್ರೋ ಜನರೇಟರ್‌ಗಳು ಒಂದೇ ಸಮಯಕ್ಕೆ ಹಲವರಿಗೆ ಆಮ್ಲಜನಕ ಪೂರೈಕೆ ಮಾಡಬಹುದಾಗಿದ್ದು ವಿದ್ಯುತ್ ಅಭಾವವಿರುವಾಗಲೂ ಸಂಗ್ರಹಿಸಿದ ಆಮ್ಲಜನಕವನ್ನು ದಿನಕ್ಕೆ 1,000 ಲೀಟರ್‌ಗಳಂತೆ ಒದಗಿಸಲಿವೆ.


ಇತ್ತೀಚೆಗೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವೊಂದಕ್ಕೆ ಆಮ್ಲಜನಕ ಜನರೇಟರ್‌ ಅಳವಡಿಸಲಾಗಿದೆ. ಇನ್ನು ಸಣ್ಣ ಸಣ್ಣ ಆರೋಗ್ಯ ಕೇಂದ್ರಗಳಿಗೂ ಈ ಜನರೇಟರ್‌ಗಳನ್ನು ಪೂರೈಕೆ ಮಾಡುವ ಇರಾದೆಯನ್ನು ತಂಡ ಹೊಂದಿದೆ.
ಪ್ರತಿಯೊಂದು ಮೈಕ್ರೋ ಆಕ್ಸಿಜನ್ ಜನರೇಟರ್ರ್‌ ಅಳವಡಿಕೆಯ ಹಾಗೂ 1 ವರ್ಷ ಬೆಂಬಲದ ಖರ್ಚು 18.5 ಲಕ್ಷ ರೂ. ಆಗಿದೆ. ಗ್ರಾಮೀಣ ಭಾಗದ ಜಿಲ್ಲಾಧಿಕಾರಿಗಳನ್ನು ಈ ಸಲುವಾಗಿ ತಂಡವು ಸಂಪರ್ಕಿಸಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರೇಟರ್ ಅಳವಡಿಕೆಗೆ ಸಹಾಯ ಮತ್ತು ಬೆಂಬಲ ಕೋರಿದೆ.

Published by:Soumya KN
First published: