ಬೆಂಗಳೂರಲ್ಲಿ 800 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು IIScಗೆ 425 ಕೋಟಿ ದೇಣಿಗೆ

ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಸೈನ್ಸ್ ಬೆಂಗಳೂರಿನ ಕ್ಯಾಂಪಸ್‌ನಲ್ಲಿ 800 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಜೊತೆಗೆ ಸ್ನಾತಕೋತ್ತರ ವೈದ್ಯಕೀಯ ಕಾಲೇಜು ಸ್ಥಾಪಿಸಲು ಮುಂದಾಗಿದೆ.

IISc ಕ್ಯಾಂಪಸ್​

IISc ಕ್ಯಾಂಪಸ್​

  • Share this:
ಬೆಂಗಳೂರು (ಫೆ.14): ಸಿಲಿಕಾನ್​ ಸಿಟಿಯ ಪ್ರತಿಷ್ಠಿತ ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಸೈನ್ಸ್ (Indian Institute of Science) ವಿಶ್ವ ಮಟ್ಟದಲ್ಲಿ ಹೆಸರು ಮಾಡಿದೆ. ಇದೀಗ ತನ್ನ ಬೆಂಗಳೂರಿನ ಕ್ಯಾಂಪಸ್‌ನಲ್ಲಿ 800 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ (Hospital) ಜೊತೆಗೆ ಸ್ನಾತಕೋತ್ತರ ವೈದ್ಯಕೀಯ ಕಾಲೇಜು (Medical College) ಸ್ಥಾಪಿಸಲು ಮುಂದಾಗಿದೆ. ಪಾಲುದಾರಿಕೆ ಒಪ್ಪಂದ ಮೂಲಕ IISc ಹೊಸ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ತೆರೆಯಲು ಮುಂದಾಗಿದೆ. ಹೀಗಾಗಿ ಒಟ್ಟಾರೆ 425 ಕೋಟಿಯನ್ನು ದೇಣಿಗೆಯಾಗಿ ಪಡೆದಿದೆ. ಭಾರತೀಯ ವಿಜ್ಞಾನ ಸಂಸ್ಥೆಯು ಲೋಕೋಪಕಾರಿಗಳಾದ ಸುಸ್ಮಿತಾ, ಸುಬ್ರೋತೊ ಬಾಗ್ಚಿ , ರಾಧಾ ಹಾಗೂ ಎನ್‌ಎಸ್ ಪಾರ್ಥಸಾರಥಿ ಅವರೊಂದಿಗೆ ಪಾಲುದಾರಿಕೆಗೆ (Partnership) ಸಹಿ ಹಾಕಿದೆ. ಇದು ಭಾರತೀಯ ವಿಜ್ಞಾನ ಸಂಸ್ಥೆ (IISc) ಪಡೆದಿರೋ ಅತಿ ದೊಡ್ಡ ಖಾಸಗಿ ದೇಣಿಗೆಯಾಗಿದೆ. ಆಸ್ಪತ್ರೆಗೆ ಬಾಗ್ಚಿ-ಪಾರ್ಥಸಾರಥಿ ಎಂದು ಹೆಸರಿಡಲಾಗುತ್ತೆ ಎಂದು ಹೇಳಲಾಗ್ತಿದೆ.

ಹೊಸ ಪ್ರಯೋಗಗಳಿಗೆ ವೇದಿಕೆ

ಈ ವೈದ್ಯಕೀಯ ಕೇಂದ್ರವು ವೈದ್ಯ-ವಿಜ್ಞಾನದ ಹೊಸ ಪ್ರಯೋಗ ರಚಿಸುವ ಗುರಿಯನ್ನು ಹೊಂದಿದೆ. ಸಮಗ್ರ ಡ್ಯುಯಲ್-ಡಿಗ್ರಿ MD-PhD ಅಧ್ಯಯನ ಕೇಂದ್ರವಾಗಲಿದೆ. ಇಲ್ಲಿ ಹೊಸ ಚಿಕಿತ್ಸೆಗಳು ಮತ್ತು ಆರೋಗ್ಯ ಪರಿಹಾರಗಳನ್ನು ಅಭಿವೃದ್ಧಿಪಡಿಸೋ ಯೋಜನೆ ರೂಪಿಸಲಾಗಿದೆ. ವೈದ್ಯಕೀಯ ಸಂಶೋಧನೆ ಜೊತೆ ವೃತ್ತಿಜೀವನ ಮುಂದುವರಿಸಲು ಸಹಕಾರಿಯಾಗುತ್ತೆ. ಆಸ್ಪತ್ರೆ ಮತ್ತು IISc ಯಲ್ಲಿನ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪ್ರಯೋಗಾಲಯಗಳಲ್ಲಿ ಏಕಕಾಲದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: JOBS: ತಿಂಗಳಿಗೆ ₹ 40,000 ಸಂಬಳ, IISc Bangaloreನಲ್ಲಿ ನಾಳೆ ಸಂದರ್ಶನ, ಈ ಅಭ್ಯರ್ಥಿಗಳಿಗೆ ಅವಕಾಶ

‘ವೈದ್ಯಕೀಯ ಸಂಶೋದನೆಗೆ ಪ್ರಯೋಜನಕಾರಿ’

ಇನ್ನು ಈ ಕುರಿತು ಮಾತಾಡಿದ ಐಐಎಸ್‌ಸಿಯ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಹಲವರ ಉದಾರ ಕೊಡುಗೆಗಳು ಹೊಸ ಅನ್ವೇಷಣೆಗೆ ಸಹಕಾರಿಯಾಗಿದೆ ಎಂದ್ರು. ವಿಜ್ಞಾನ ಮತ್ತು ಎಂಜಿನಿಯರಿಂಗ್​ ತಂತ್ರಜ್ಞಾನಗಳ ಜೋಡನೆಯಾಗಲಿದೆ. ಇದು ನಮ್ಮ ಸಂಶೋದನೆಗೆ ಸಹಕಾರಿಯಾಗಲಿದೆ ಎಂದ್ರು. ವೈದ್ಯಕೀಯ ಸಂಶೋಧನೆಯಲ್ಲಿ ಹೊಸ ಮಾದರಿಯನ್ನು ರಚಿಸುತ್ತೆ ಎಂದು ಐಐಎಸ್‌ಸಿಯ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ತಿಳಿಸಿದ್ರು.

‘ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’

IISc ನೊಂದಿಗೆ ಪಾಲುದಾರರಾಗಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನಾವು ಕೃತಜ್ಞರಾಗಿರುತ್ತೇವೆ. ದೇಶದಲ್ಲಿ ವೈದ್ಯಕೀಯ ಸಂಶೋಧನೆ ಮತ್ತು ವಿತರಣೆಯನ್ನು ಕೇವಲ ಸರ್ಕಾರ ಅಥವಾ ಕಾರ್ಪೊರೇಟ್ ವಲಯಕ್ಕೆ ಮೀಸಲಾಗಿಲ್ಲ. ಇದೀಗ ನಮ್ಮಂತಹ ಹಲವು ಮಂದಿ ತಮ್ಮನ್ನು ತೊಡಗಿಸಿಕೊಳ್ಳುವ ಅವಕಾಶ ಸಿಕ್ಕಿದೆ. ನಮ್ಮ ದೇಣಿಗೆ ಹಲವು ಹೊಸ ಸಂಶೋಧನೆಗಳಿಗೆ ಸಹಕಾರಿಯಾಗಲಿದೆ. ಶಾಶ್ವತ, ಪ್ರಯೋಜನಕಾರಿ ಫಲಿತಾಂಶದ ಬಗ್ಗೆ ನಮಗೆ ಹೆಚ್ಚಿನ ವಿಶ್ವಾಸವಿದೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವದಲ್ಲೇ ಭಾರತದ ಬೆಸ್ಟ್​ ವಿವಿ ಸ್ಥಾನ ಪಡೆದ Bangalore IISc; ಪ್ರಧಾನಿ ಅಭಿನಂದನೆ

‘ವಿಜ್ಞಾನ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸಂಯೋಜನೆ’

ಒಂದೇ ಕ್ಯಾಂಪಸ್‌ನಲ್ಲಿ ವಿಜ್ಞಾನ, ಎಂಜಿನಿಯರಿಂಗ್ ಮತ್ತು ವೈದ್ಯಕೀಯವನ್ನು ಸಂಯೋಜಿಸುತ್ತಿರೋದು IISCನ ದೊಡ್ಡ ಸಾಧನೆ ಎಂದು ರಾಧಾ ಪಾರ್ಥಸಾರಥಿ ಹೇಳಿದ್ರು. ನಾವು ಸಹಭಾಗಿಯಾಗಲು ಇದೊಂದು ಕಾರಣವಾಗಿದೆ.  IISc ವಿಶ್ವಪ್ರಸಿದ್ಧವಾಗಿದ್ದು,  ನೆಟ್‌ವರ್ಕ್ ಸಂಶೋಧನೆ ಮತ್ತು ಔಷಧದ ವಿತರಣೆಯಲ್ಲಿ ಪ್ರಗತಿಯನ್ನು ಸೃಷ್ಟಿಸಲು ಅತ್ಯುತ್ತಮ ಪ್ರತಿಭೆಗಳನ್ನು ಆಕರ್ಷಿಸುತ್ತದೆ. ಸಾಂಕ್ರಾಮಿಕ ರೋಗವು ವೈದ್ಯಕೀಯದಲ್ಲಿ ಸಾರ್ವತ್ರಿಕ ಪ್ರವೇಶ ಮತ್ತು ಸಮಾನತೆಯನ್ನು ಸೃಷ್ಟಿಸುವ ತುರ್ತು ಅಗತ್ಯವನ್ನು ಸ್ಥಾಪಿಸಿದೆ. ಭಾರತದ ಅತ್ಯಂತ ಗೌರವಾನ್ವಿತ ಸಂಶೋಧನಾ ಸಂಸ್ಥೆಯ ಇತಿಹಾಸದಲ್ಲಿ ನಮ್ಮನ್ನು ಭಾಗವಾಗಿಯಾಗಿಸಿದ್ದಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದ್ರು.

‘2024ಕ್ಕೆ ನಿರ್ಮಾಣ ಪೂರ್ಣಗೊಳಲಿದೆ’

ಆಸ್ಪತ್ರೆಯ ಕಟ್ಟಡವನ್ನು ಅಹಮದಾಬಾದ್ ಮೂಲದ ಆರ್ಕಿ ಮೆಡೆಸ್  ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ವಿನ್ಯಾಸಗೊಳಿಸಿದ್ದಾರೆ. ಆಸ್ಪತ್ರೆಯು 2024ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲಿದೆ. ಇದು ರೋಗನಿರ್ಣಯ, ಚಿಕಿತ್ಸೆ ಮತ್ತು ಸಂಶೋಧನೆಗಾಗಿ ಸುಧಾರಿತ ಸೌಲಭ್ಯಗಳನ್ನು ಹೊಂದಿರುತ್ತದೆ.  ಆಸ್ಪತ್ರೆಯಲ್ಲಿನ ಕ್ಲಿನಿಕಲ್ ಮತ್ತು ಶಸ್ತ್ರಚಿಕಿತ್ಸಾ ವಿಭಾಗಗಳು ಆಂಕೊಲಾಜಿ, ಕಾರ್ಡಿಯಾಲಜಿ, ನ್ಯೂರಾಲಜಿ, ಎಂಡೋಕ್ರೈನಾಲಜಿ, ಗ್ಯಾಸ್ಟ್ರೋಎಂಟರಾಲಜಿ, ನೆಫ್ರಾಲಜಿ, ಮೂತ್ರಶಾಸ್ತ್ರ, ಚರ್ಮರೋಗ ಮತ್ತು ಪ್ಲಾಸ್ಟಿಕ್ ಸರ್ಜರಿ, ಅಂಗಾಂಗ ಕಸಿ, ರೋಬೋಟಿಕ್ ಸರ್ಜರಿ ಸೇರಿದಂತೆ ಹಲವು ಚಿಕಿತ್ಸೆ ನೀಡುವ ಯೋಜನೆ ರೂಪಿಸಲಾಗಿದೆ.
Published by:Pavana HS
First published: