ಕೊರೋನಾ ಪಾಸಿಟಿವಿಟಿ ದರ ಶೇ.2 ದಾಟಿದರೆ ಬೆಂಗಳೂರಲ್ಲಿ ಕಠಿಣ ನಿಯಮ ಜಾರಿ!

ಸದ್ಯ ಬೆಂಗಳೂರಿನಲ್ಲಿ 0.56% ಪಾಸಿಟಿವಿಟಿ ರೇಟ್ ಇದೆ. 2% ರಷ್ಟು ಪಾಸಿಟಿವಿಟಿ ರೇಟ್ ಬಂದರೆ ಬೆಂಗಳೂರಲ್ಲಿ ಟಫ್‌ ರೂಲ್ಸ್ ಜಾರಿಗೆ ತರುವುದು ನಿಶ್ಚಿತ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಬೆಂಗಳೂರು: ಕೊರೋನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾಗಿದ್ದು, ಮೂರನೇ ಅಲೆಯ ಭೀತಿ ರಾಜ್ಯದ ಜನರಲ್ಲಿ ಮನೆ ಮಾಡಿದೆ. ಈಗಾಗಲೇ ಮೂರನೇ ಅಲೆಯ ಬಗ್ಗೆ ತಜ್ಞರು ವರದಿ ನೀಡಿದ್ದು, ಸರ್ಕಾರ ಕೂಡ ಸಾಕಷ್ಟು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕೋವಿಡ್ ನಿಯಂತ್ರಣ ಸಂಬಂಧ ಶನಿವಾರ ತಜ್ಞರೊಂದಿಗೆ ಸಭೆ ನಡೆಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ. 2ಕ್ಕಿಂತ ಕಡಿಮೆ ಇರುವ ಕಾರಣಕ್ಕೆ ಯಥಾಸ್ಥಿತಿ ಮುಂದುವರೆಸುವಂತೆ ಒಂದು ವೇಳೆ ಈ ದರ ಶೇ. 2ಕ್ಕಿಂತ ಹೆಚ್ಚಾದರೆ ಕಠಿಣ ಕ್ರಮ ಜಾರಿಗೆ ತರುವುದಾಗಿ ತೀರ್ಮಾನ ಪ್ರಕಟಿಸಿದ್ದಾರೆ.

    ಬೆಂಗಳೂರಿನಲ್ಲಿ ಕೊರೋನಾ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ಈಗಾಗಲೇ ನಗರದಲ್ಲಿ ಕಂಟೈನ್‌ಮೆಂಟ್ ಝೋನ್​ಗಳ ಸಂಖ್ಯೆ  172ಕ್ಕೆ ಏರಿಕೆ ಆಗಿದೆ. ಇದುವರೆಗೂ 80 ಅಪಾರ್ಟ್‌ಮೆಂಟ್‌ಗಳಲ್ಲಿ ಪಾಸಿಟಿವ್ ಕೇಸ್‌ ಪತ್ತೆಯಾಗಿದೆ. 81 ಪ್ರತ್ಯೇಕ ಮನೆಗಳಲ್ಲಿ ವೈರಸ್ ಹರಡಿದೆ. 9 ಹೋಟೆಲ್‌ ಹಾಗೂ ಕ್ವಾಟ್ರಸ್‌ಗಳಲ್ಲಿ ಪಾಸಿಟಿವ್ ಕಂಡು ಬಂದಿದೆ. ಮಹದೇವಪುರದಲ್ಲಿ ಅತಿ ಹೆಚ್ಚು 49 ಕಂಟೈನ್‌ಮೆಂಟ್ ಝೋನ್ ಗುರುತು ಮಾಡಲಾಗಿದೆ.

    ಯಾವ್ಯಾವ ಝೋನ್‌ಗಳಲ್ಲಿ ಎಷ್ಟೆಷ್ಟು ಪಾಸಿಟಿವ್ ಕೇಸ್‌?

    • ಬೊಮ್ಮನಹಳ್ಳಿ 24 ಕಂಟೈನ್‌ಮೆಂಟ್ ಝೋನ್,  24 ಅಪಾರ್ಟ್ಮೆಂಟ್‌ಗಳಲ್ಲಿ ಪಾಸಿಟಿವ್.

    • ಪಶ್ಚಿಮ ವಲಯದಲ್ಲಿ 36 ಕಂಟೈನ್‌ಮೆಂಟ್ ಝೋನ್ - 13 ಅಪಾರ್ಟ್‌ಮೆಂಟ್‌ಗಳಲ್ಲಿ ಪಾಸಿಟಿವ್

    • ಮಹದೇವಪುರದಲ್ಲಿ 49 ಕಂಟೈನ್‌ಮೆಂಟ್ ಝೋನ್ - 28 ಅಪಾರ್ಟ್‌ಮೆಂಟ್‌ಗಳಲ್ಲಿ ಪಾಸಿಟಿವ್

    • ದಕ್ಷಿಣದಲ್ಲಿ 21 ಕಂಟೈನ್‌ಮೆಂಟ್ ಝೋನ್ - 8 ಅಪಾರ್ಟ್‌ಮೆಂಟ್‌ಗಳಲ್ಲಿ ಪಾಸಿಟಿವ್

    • ಪಶ್ಚಿಮ ವಲಯದನಲ್ಲಿ 11 ಕಂಟೈನ್‌ಮೆಂಟ್ ಝೋನ್ - 2 ಅಪಾರ್ಟ್‌ಮೆಂಟ್‌ಗಳಲ್ಲಿ ಪಾಸಿಟಿವ್

    • ಯಲಹಂಕದಲ್ಲಿ 25 ಕಂಟೈನ್‌ಮೆಂಟ್ ಝೋನ್ - 11 ಅಪಾರ್ಟ್‌ಮೆಂಟ್‌ಗಳಲ್ಲಿ ಪಾಸಿಟಿವ್

    • ಆರ್ ಆರ್ ನಗರದಲ್ಲಿ 5 ಕಂಟೈನ್‌ಮೆಂಟ್ ಝೋನ್ - 2 ಅಪಾರ್ಟ್‌ಮೆಂಟ್‌ಗಳಲ್ಲಿ ಪಾಸಿಟಿವ್

    • ದಾಸರಹಳ್ಳಿಯಲ್ಲಿ 1 ಪ್ರತ್ಯೇಕ ಮನೆಯಲ್ಲಿ ಪಾಸಿಟಿವ್


    ಸದ್ಯ ಬೆಂಗಳೂರಿನಲ್ಲಿ 0.56% ಪಾಸಿಟಿವಿಟಿ ರೇಟ್ ಇದೆ. 2% ರಷ್ಟು ಪಾಸಿಟಿವಿಟಿ ರೇಟ್ ಬಂದರೆ ಬೆಂಗಳೂರಲ್ಲಿ ಟಫ್‌ ರೂಲ್ಸ್ ಜಾರಿಗೆ ತರುವುದು ನಿಶ್ಚಿತ.

    ಇನ್ನು ರಾಜ್ಯದಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆ ಆಗಸ್ಟ್​ 15ರ ಬಳಿಕ ಕಠಿಣ ನಿಲುವು ಕೈಗೊಳ್ಳಲಾಗುತ್ತದೆ ಎನ್ನಲಾಗಿತ್ತು. ಆದರೆ, ಸದ್ಯ ಸೋಂಕು ನಿಯಂತ್ರಣದಲ್ಲಿದ್ದು, ಪ್ರಸ್ತುತ ರಾಜ್ಯದಲ್ಲಿರುವ ಈಗಿರುವ ನಿಯಮಗಳನ್ನೇ ಮುಂದುವರೆಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಹೊಸದಾಗಿ ಯಾವುದೇ ನಿಯಮವಿಲ್ಲ. ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ನೈಟ್​ ಕರ್ಫ್ಯೂ ಹಾಗೂ ಎಂಟು ಗಡಿ ಜಿಲ್ಲೆಗಳಲ್ಲಿ ವೀಕೆಂಡ್​ ಕರ್ಫ್ಯೂ ಜಾರಿಯಲ್ಲಿದ್ದು, ಇದನ್ನೆ ಮುಂದುವರೆಸಬೇಕು. ಹೊಸದಾಗಿ ಯಾವುದೇ ನಿಯಮಗಳಿಲ್ಲ. ಈಗ ಜಾರಿಯಲ್ಲಿರುವ ನಿಯಮಗಳನ್ನೇ ಸರಿಯಾಗಿ ಪಾಲಿಸುವಂತೆ ಅವರು ಸೂಚನೆ ನೀಡಿರುವ ಅವರು ಅ. 30ರವರೆಗೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

    ಇದನ್ನು ಓದಿ: EXCLUSIVE |ನಾವು ಬದುಕುತ್ತೇವೊ ಇಲ್ಲವೋ ಗೊತ್ತಿಲ್ಲ; ಅಘ್ಘಾನ್ ಮಾಜಿ ಸಚಿವರ ಅಸಹಾಯಕ ಮಾತು!

    ಇದೇ ವೇಳೆ ಎರಡನೇ ಅಲೆಯಲ್ಲಿ ಆದ ಅನಾಹುತ ಮೂರನೇ ಅಲೆಯಲ್ಲಿ ಅಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಯಿತು. ಜೊತೆಗೆ ಆಕ್ಸಿಜನ್ , ಐಸಿಯು ಬೆಡ್, ಆ್ಯಂಬುಲೆನ್ಸ್ , ಕೊರತೆ ಆಗದಂತೆ ಕ್ರಮ ಕೈಗೊಂಡು ಮೂರನೇ ಅಲೆಯ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳುವಂತೆ ತಜ್ಞರ ಸಮಿತಿ ಎಚ್ಚರಿಕೆ ನೀಡಿದೆ. ಮಕ್ಕಳ ಅಸ್ಪತ್ರೆಗೆ ಹೆಚ್ಚಿನ ಆದ್ಯತೆ ನೀಡುವಂತೆ‌ ಸೂಚನೆ ನೀಡಲಾಗಿತ್ತು. ಅನ್ಯ ರಾಜ್ಯಗಳ ಓಡಾಟದ ಮೇಲೆ ಹೆಚ್ಚಿನ‌ ನಿಗಾ ಇಡುವಂತೆ ತಿಳಿಸಲಾಗಿದೆ. ಅನ್ಯ ರಾಜ್ಯಗಳಿಂದ ಬರುವವರಿಗೆ ಗಡಿ ಪ್ರವೇಶದ ವೇಳೆ ಕೋವಿಡ್​​ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು ಎಂದು ಸಿಎಂ ಸೂಚಿಸಿದರು. ಅಲ್ಲದೇ ಇದೇ ವೇಳೆ ಅವರು ಜಿಲ್ಲಾವಾರು ಕೋವಿಡ್ ನ ಅಂಕಿ ಅಂಶಗಳ ಮಾಹಿತಿಯನ್ನು ಪಡೆದರು.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಯಾರು ಅನಗತ್ಯವಾಗಿ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ.
    Published by:HR Ramesh
    First published: