ಇನ್ಮುಂದೆ ಬೆಂಗಳೂರಿಂದ Hyderabad‌ಗೆ ರಸ್ತೆ ಮಾರ್ಗವಾಗಿ ಇನ್ನೂ ಬೇಗ ತಲುಪಬಹುದು.. ಹೇಗೆ ಅಂತ ಇಲ್ಲಿ ನೋಡಿ

Hyderabad to Bengaluru Road: ಹೈದರಾಬಾದ್ ನಗರದ ಹೊರವಲಯದಲ್ಲಿರುವ Shamshabad ಬಳಿ 6 ಪಥದ Elevator Corridor ಮತ್ತು ಅನೇಕ ವಾಹನ Underpass‌ಗಳ ನಿರ್ಮಾಣವಾಗಲಿದೆ.

ರಾಷ್ಟ್ರೀಯ ಹೆದ್ದಾರಿ

ರಾಷ್ಟ್ರೀಯ ಹೆದ್ದಾರಿ

 • Share this:
  ನೀವು ಸಾಮಾನ್ಯವಾಗಿ ಬೆಂಗಳೂರಿಂದ (Bengaluru) ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 44ರ (NH 44 Road) ಮೂಲಕ ಹೈದರಾಬಾದ್‌ಗೆ ಹೊರಟರೆ ನೀವು ಹೈದರಾಬಾದ್ (Hyderabad‌) ತಲುಪುವಷ್ಟರಲ್ಲಿ ಸಂಜೆ ಆಗಬಹುದು. ಆದರೆ ಈಗ ನಿರ್ಮಾಣ ಹಂತದಲ್ಲಿರುವ 6 ಪಥದ ರಸ್ತೆ ಮತ್ತು ಫ್ಲೈಓವರ್‌ಗಳ (New Flyover ) ಕೆಲಸಗಳು ಬೇಗನೆ ಮುಗಿದರೆ, ನೀವು ಈಗ ತೆಗೆದುಕೊಳ್ಳುತ್ತಿರುವ ಪ್ರಯಾಣದ ಅವಧಿಯಲ್ಲಿ ಇನ್ನಷ್ಟು ಕಡಿಮೆ ಆಗಲಿದ್ದು, ನೀವು ಸಂಜೆ ಆಗುವುದಕ್ಕಿಂತ ಮುಂಚೆಯೇ ಹೈದರಾಬಾದ್ ತಲುಪಬಹುದು. ಹೈದರಾಬಾದ್ ನಗರದ ಹೊರವಲಯದಲ್ಲಿರುವ ಶಂಶಾಬಾದ್ ಬಳಿ 6 ಪಥದ ಎಲಿವೇಟೆಡ್ ಕಾರಿಡಾರ್ ಮತ್ತು ಅನೇಕ ವಾಹನ ಅಂಡರ್ ಪಾಸ್‌ಗಳ ನಿರ್ಮಾಣವಾಗಲಿದೆ. ಸುದ್ದಿ ಮಾಧ್ಯಮದ ವರದಿಯ ಪ್ರಕಾರ 280 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೊಸ ರಸ್ತೆಯು ಪೂರ್ಣಗೊಳ್ಳುವ ಹಂತದಲ್ಲಿದೆ. ಕೇವಲ ಫ್ಲೈಓವರ್ ನಿರ್ಮಾಣದಲ್ಲಿ 150 ಮೀಟರ್ ಕೆಲಸ ಬಾಕಿ ಇದೆ ಎಂದು ಹೇಳಲಾಗುತ್ತಿದೆ.

  ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಪ್ರಯಾಣಿಸಬಹುದು

  ಸುಮಾರು 1.6 ಕಿಲೋ ಮೀಟರ್ ಉದ್ದದ ಶಂಶಾಬಾದ್ ಮಾರ್ಗದ ಹೊಸ ಎಲಿವೇಟೆಡ್ ಕಾರಿಡಾರ್ ನಗರದ ಅತಿ ಉದ್ದದ ಫ್ಲೈಓವರ್‌ಗಳಲ್ಲಿ ಒಂದಾಗಲಿದೆ ಎಂದು ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆ ಅಧಿಕಾರಿಗಳು ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಈ ದಾರಿಯಲ್ಲಿ ನಿರ್ಮಾಣವಾಗುತ್ತಿರುವ ಫ್ಲೈಓವರ್‌ನ ವಿನ್ಯಾಸವು ವಾಹನಗಳು ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗುತ್ತಿದೆ. ಅಪಘಾತಗಳನ್ನು ತಗ್ಗಿಸಲು ರಸ್ತೆಯ ಬದಿಗಳಲ್ಲಿ ತಡೆ ಗೋಡೆಗಳನ್ನು ನಿರ್ಮಿಸಿದೆ.

  ಸದ್ಯದಲ್ಲೇ ಕಾಮಗಾರಿ ಪೂರ್ಣ 

  ಈ ಫ್ಲೈಓವರ್‌ಗಳಿಗೆ ವಾಹನದ ಅಂಡರ್‌ಪಾಸ್‌ಗಳನ್ನು ರಾಜೇಂದ್ರ ನಗರದ ಪ್ರೊಫೆಸರ್ ಜಯಶಂಕರ್ ತೆಲಂಗಾಣ ರಾಜ್ಯ ಕೃಷಿ ವಿಶ್ವವಿದ್ಯಾಲಯ ಮತ್ತು ರಂಗಾ ರೆಡ್ಡಿ ಜಿಲ್ಲೆಯ ಶಂಶಾಬಾದ್ ಮಂಡಲದ ಸಾತಮ್ರಾಯ್ ಗ್ರಾಮದಲ್ಲಿ ನಿರ್ಮಿಸಲಾಗುತ್ತಿದೆ.ಇದರ ನಿರ್ಮಾಣವನ್ನು 2020ರಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದರೂ, ಭೂ ಸ್ವಾಧೀನ ಮತ್ತು ವಿದ್ಯುತ್ ಕಂಬಗಳ ತೆರವು, ಕೋವಿಡ್-19 ಸಾಂಕ್ರಾಮಿಕದೊಂದಿಗೆ ಸಂಬಂಧಿಸಿದ ಸಮಸ್ಯೆಗಳು ಯೋಜನೆಯನ್ನು ಒಂದು ವರ್ಷಕ್ಕಿಂತ ಹೆಚ್ಚು ವಿಳಂಬಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಹೈದರಾಬಾದ್- ನಾಗ್ಪುರ ರಸ್ತೆಯಲ್ಲೂ ಇದೇ ರೀತಿಯ ಕೆಲಸ

  ಹೈದರಾಬಾದ್ ಹಾಗು ನಾಗ್ಪುರ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ತೆಲಂಗಾಣ ಸರ್ಕಾರ ಎಲಿವೇಟೆಡ್ ಕಾರಿಡಾರ್‌ಗಳು, ಅಂಡರ್‌ಪಾಸ್ ಗಳು ಮತ್ತು ಸರ್ವೀಸ್ ರಸ್ತೆಗಳನ್ನು ಒಳಗೊಂಡ 2 ಬೃಹತ್ ಯೋಜನೆಗಳನ್ನು ಯೋಜಿಸುತ್ತಿದೆ ಎಂದು ಸುದ್ದಿ ಮಾಧ್ಯಮವೊಂದು ಜೂನ್ ತಿಂಗಳಲ್ಲಿ ವರದಿ ಮಾಡಿತ್ತು. 3 ಎಲಿವೇಟೆಡ್ ಕಾರಿಡಾರ್‌ಗಳು, 4 ಅಂಡರ್‌ಪಾಸ್‌ಗಳು, ಸರ್ವೀಸ್ ರಸ್ತೆಗಳು ಮತ್ತು ಸುಚಿತ್ರಾ-ಗುಂಡ್ಲಾಪೋಚಂಪಲ್ಲಿ ಮಾರ್ಗದಲ್ಲಿ ಜಂಕ್ಷನ್‌ಗಳ ಅಗಲೀಕರಣ ಸೇರಿದಂತೆ ಉದ್ದೇಶಿತ ಕಾಮಗಾರಿಗಳಿಗೆ ಸುಮಾರು 800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ವರದಿ ತಿಳಿಸಿದೆ.

  ಇದನ್ನೂ ಓದಿ: Bengaluru Resort: ರೆಸಾರ್ಟ್‌ನಲ್ಲಿ ತಿಂಗಳಾನುಗಟ್ಟಲೆ ತಂಗಿದ್ದ ವ್ಯಕ್ತಿ ₹3.2 ಲಕ್ಷ ಬಿಲ್ ಕೊಡದೇ ಪರಾರಿ..ಮುಂದೇನಾಯ್ತು?

  ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಆರ್ಥಿಕ ಅಭಿವೃದ್ಧಿ ಉತ್ತೇಜಿಸಲು 585 ಕಿಲೋ ಮೀಟರ್ ಉದ್ದದ ಹೈದರಾಬಾದ್ ಹಾಗು ನಾಗ್ಪುರ ಕೈಗಾರಿಕಾ ಕಾರಿಡಾರ್ ಯೋಜನೆಗೆ ಅನುಮತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿದ್ದರು. ಉದ್ದೇಶಿತ ಕಾರಿಡಾರ್ ಅನ್ನು ಹೈದರಾಬಾದ್ ಮತ್ತು ನಾಗ್ಪುರ ನಡುವಿನ ಹೈಸ್ಪೀಡ್ ಪ್ಯಾಸೆಂಜರ್ ಮತ್ತು ಸರಕು ರೈಲು ಸಂಪರ್ಕದ ಮೂಲಕ ಹಾಗೂ ಎರಡೂ ನಗರಗಳ ನಡುವೆ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಹೆದ್ದಾರಿಯನ್ನು 6 ಅಥವಾ 8 ಪಥದ ರಸ್ತೆಯನ್ನಾಗಿ ವಿನ್ಯಾಸಗೊಳಿಸಬಹುದು ಎಂದು ಕೆಸಿಆರ್ ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
  Published by:Kavya V
  First published: