Bangalore Crime: ಹೆಂಡತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಕೊಲೆಯಾದನಾ ಗಂಡ?

ಕೊಲೆಯಾದ ಸಾದಿಲ್ ಪಾಷನ ಹೆಂಡತಿ ಹಾಗೂ ಪ್ರಮುಖ ಆರೋಪಿ ಅರ್ಬಾಜ್ ಮಧ್ಯೆ ಅಕ್ರಮ ಸಂಬಂಧ ಇದೆ ಎಂಬ ಮಾತುಗಳು ಕೇಳಿ ಬಂದಿದ್ವಿ. ಈ ವಿಷಯ ಸಾದಿಲ್ ಕಿವಿಗೆ ಬಿದ್ದಿತ್ತು, ಇದ್ರಿಂದ ಕುಪಿತಗೊಂಡು ಅರ್ಬಾಜ್ ಗೆ ವಾರ್ನ್ ಮಾಡಿ ಗಲಾಟೆ ಸಹ ಮಾಡಿಬಂದಿದ್ದ ಸಾದಿಲ್​.

ಕೊಲೆಯಾದ ಸಾದಿಲ್

ಕೊಲೆಯಾದ ಸಾದಿಲ್

  • Share this:
ಬೆಂಗಳೂರು: ರಾಜ್ಯ ರಾಜಧಾನಿಗಳು ಕೌಟುಂಬಿಕ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ.  ಹೆಣ್ಣಿನ ವಿಚಾರಕ್ಕೆ ಕೊಲೆಗಳು ಇತ್ತೀಚೆಗೆ ಕಾಮನ್ ಆಗಿಬಿಟ್ಟಿದೆ. ಕಟ್ಟಿಕೊಂಡಾಕೆಯೇ ಗಂಡನ ಕೊಲೆಗೆ ಸುಫಾರಿ ನೀಡಿ ಕೊಲೆ  ಮಾಡಿಸಿರುವ ಅನುಮಾನ ದಟ್ಟವಾಗಿದೆ. ವಿಜಯನಗರದ ರೈಲ್ವೆ ಪ್ಯಾರ್ಲರ್ ರಸ್ತೆಯಲ್ಲಿ ಆಗಸ್ಟ್​​​​ 17 ರಂದು ಸಾದಿಪ್ ಪಾಷ ಎಂಬಾತನ ಮೇಲೆ ಇಬ್ಬರು ದುಷ್ಕರ್ಮಿಗಳು ಅಟ್ಯಾಕ್ ಮಾಡಿ  ಸಿಕ್ಕ ಸಿಕ್ಕ ಕಡೆ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದರು. ಇತ್ತ ತೀವ್ರ ಗಾಯಗೊಂಡಿದ್ದ ಪಾದರಾಯನಪುರ ನಿವಾಸಿಯಾಗಿರೋ ಸಾದಿಲ್ ಇಂದು ಸಾವನ್ನಪ್ಪಿದ್ದಾನೆ.

ಕೊಲೆಯಾದ ಸಾದಿಲ್ ವಿಜಯನಗರದ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಗ್ಯಾರೇಜ್  ಇಟ್ಟುಕೊಂಡು ಜೀವನ ಮಾಡ್ತಾ ಇದ್ದರು. ಗ್ಯಾರೇಜ್ ನಲ್ಲಿ ಕೆಲಸ ಮಾಡ್ತಾ ಇರುವಾಗ ಬಂದ ‌ಇಬ್ಬರು ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ ಅಂತಾರೆ ಪೊಲೀಸರು. ಅಟ್ಯಾಕ್ ಆದ ಬಳಿಕ ಸಾದಿಲ್‌ ಪಾಷ  ರಕ್ತದ ಮಡುವಿನಲ್ಲಿ 15 ನಿಮಿಷಗಳ ಕಾಲ ಬಿದ್ದು ಓದ್ದಾಡಿದ್ರೂ ಯಾರೂ ಆತನ ಸಹಾಯಕ್ಕೆ ಬರಲಿಲ್ಲ.‌ ಕೊನೆಗೆ ವಿಜಯನಗರ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ.

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಸಾದಿಲ್ ಪಾಷ ಕೊಲೆಯಾಯ್ತಾ..?

ಇತ್ತ ಕೊಲೆಯಾದ ಸಾದಿಲ್ ಪಾಷ ಹೆಂಡತಿ ಹಾಗೂ ಕೊಲೆಯ ಪ್ರಮುಖ ಆರೋಪಿ ಅರ್ಬಾಜ್ ಗೆ ಅಕ್ರಮ ಸಂಬಂಧ ಇದೆ ಎಂಬ ಮಾತುಗಳು ಕೇಳಿ ಬಂದಿದ್ವಿ. ಕಳೆದ ಆರು ತಿಂಗಳಿನಿಂದಲೂ ಇಬ್ಬರ ನಡುವಿನ‌ ಸಂಬಂಧದ ಬಗ್ಗೆ ಕೆಲವರು ಮಾತನಾಡುತ್ತಿದ್ರು. ಅದ್ಯಾಗೋ ಈ ವಿಷಯ ಸಾದಿಲ್ ಕಿವಿಗೆ ಬಿದ್ದಿದ್ದು, ಇದ್ರಿಂದ ಕುಪಿತನಾಗಿದ್ದ ಸಾದಿಲ್ ಅರ್ಬಾಜ್ ಗೆ ವಾರ್ನ್ ಮಾಡಿ ಗಲಾಟೆ ಸಹ ಮಾಡಿಬಂದಿದ್ದ. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಅರ್ಬಾಜ್ ಗಲಾಟೆಯಾದ ಒಂದೇ ವಾರಕ್ಕೆ ತನ್ನ ಅಪ್ರಾಪ್ತ ಸಹೋದರನನ್ನ ಜೊತೆಗೂಡಿಸಿಕೊಂಡು ಗ್ಯಾರೇಜ್ ಬಳಿ ಅಟ್ಯಾಕ್ ಮಾಡಿ ಸಾದಿಲ್‌ನ ಮುಗಿಸಿದ್ದಾನೆ.‌ ಸದ್ಯ ಇಬ್ಬರು ಆರೋಪಿಗಳು ಅರೆಸ್ಟ್ ಮಾಡಿದ್ದು, ಕೊಲೆಯಾದ ಸಾದಿಲ್ ಹೆಂಡತಿಯ ಪಾತ್ರ ಅಪರಾಧದ ಹಿಂದಿರುವ ಅನುಮಾನ ಕಾಡುತ್ತಿದೆ.

ಇದನ್ನೂ ಓದಿ: ಲೇಡಿ ಪೊಲೀಸ್​ನಿಂದ ರೇಪ್ ಬೆದರಿಕೆ; ಜನತಾ ದರ್ಶನ ವೇಳೆ ಸಿಎಂ ಮುಂದೆ ಮಹಿಳೆ ಅಳಲು

ಅರ್ಬಾಜ್ ಹಾಗೂ ಆತನ ಅಪ್ರಾಪ್ತ ಸಹೋದರನನ್ನು ವಿಜಯನಗರ ಪೊಲೀಸರು ಅರೆಸ್ಟ್ ಮಾಡಿದ್ದು ವಿಚಾರಣೆ ಮಾಡ್ತಾ ಇದ್ದಾರೆ.‌ ಮೇಲ್ನೋಟಕ್ಕೆ ಕೊಲೆ ಮಾಡಿದ್ದು ನಾವೇ ಅಂತ ಒಪ್ಪಿಕೊಂಡಿದ್ದಾರೆ. ಆದ್ರೆ ಆರೋಪಿಗಳನ್ನು ವಿಚಾರಣ  ಮಾಡುವಾಗ ಸಾದಿಲ್ ಹೆಂಡತಿ ಕೈವಾಡದ ಶಂಕೆಯೂ ವ್ಯಕ್ತವಾಗಿದ್ದು, ಆಕೆಯನ್ನು ವಿಚಾರಣೆ ಮಾಡಲು ವಿಜಯನಗರ ಪೊಲೀಸರು ರೆಡಿಯಾಗಿದ್ದಾರೆ. ಇವತ್ತಲ್ಲ ನಾಳೆ ಆಕೆಯನ್ನ  ನೋಟಿಸ್​​  ಕೊಟ್ಟು ವಿಚಾರಣೆ ಮಾಡಲಿದ್ದು ಒಂದು ವೇಳೆ ತನ್ನ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿ ಅಂತ ಏನಾದ್ರೂ ಸುಫಾರಿ ಕೊಟ್ಟು ಗಂಡನನ್ನು ಮುಗಿಸಿದ್ರೆ ಇಬ್ಬರು ಆರೋಪಿಗಳ ಜೊತೆಗೆ ಆಕೆಯೂ ಜೈಲು ಸೇರಲಿದ್ದಾಳೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: