• Home
 • »
 • News
 • »
 • state
 • »
 • HS Doreswamy: ಕೊರೋನಾ ಹಿನ್ನಲೆ ಚಾಮರಾಜಪೇಟೆ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಎಚ್​ಎಸ್​​ ದೊರೆಸ್ವಾಮಿ ಅಂತ್ಯಕ್ರಿಯೆ

HS Doreswamy: ಕೊರೋನಾ ಹಿನ್ನಲೆ ಚಾಮರಾಜಪೇಟೆ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಎಚ್​ಎಸ್​​ ದೊರೆಸ್ವಾಮಿ ಅಂತ್ಯಕ್ರಿಯೆ

ಹೆಚ್​.ಎಸ್. ದೊರೆಸ್ವಾಮಿ.

ಹೆಚ್​.ಎಸ್. ದೊರೆಸ್ವಾಮಿ.

 ಸಕಲ ಸರ್ಕಾರಿ ಗೌರವಗಳೊಂದಿಗೆ ಅಗಲಿದ ಹಿರಿಯ ಚೇತನ ಎಚ್ ಎಸ್ ದೊರೆಸ್ವಾಮಿ ಅವರ ಅಂತ್ಯಕ್ರಿಯೆ ನಡೆಸುವಂತೆ ಸರ್ಕಾರ ಆದೇಶ ಮಾಡಿದೆ

 • Share this:

  ಬೆಂಗಳೂರು (ಮೇ. 26): ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್​ಎಸ್ ದೊರೆಸ್ವಾಮಿ ಇಂದು ಕೊನೆಯುಸಿರೆಳೆದಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅವರಿಗೆ ಕೊರೋನಾ ಸೋಂಕು ಕೂಡ ಕಾಣಿಸಿಕೊಂಡಿದ್ದು, ಇತ್ತೀಚೆಗಷ್ಟೇ ಅವರು ಸೋಂಕಿನಿಂದ ಗುಣಮುಖರಾಗಿದ್ದು, ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೋವಿಡ್​ ಮಾರ್ಗಸೂಚಿಯಂತೆ ದೊರೆಸ್ವಾಮಿ ಅವರ ಮೃತ ಪಟ್ಟ ಬಳಿಕ ನಡೆಸಿದ ವೈದ್ಯಕೀಯ ಪರೀಕ್ಷೆ ವೇಳೆ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನಲೆ ಅವರ ಅಂತ್ಯ ಸಂಸ್ಕಾರ ಕೋವಿಡ್​ ನಿಯಮಾವಳಿಯಂತೆ ನಡೆಸುವಂತೆ ಸೂಚನೆ ನೀಡಲಾಗಿದೆ. ಮೃತರ ಪಾರ್ಥೀವ ಶರೀರವನ್ನು ನಿವಾಸಕ್ಕೆ ರಾವನೆ ಮಾಡುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ನೇರವಾಗಿ ಚಾಮರಾಜಪೇಟೆ ಚಿತಾಗಾರಕ್ಕೆ ಕೊಂಡೊಯ್ಯಲಾಗುವುದು. ಅಲ್ಲಿಯೇ ಸಕಲ ಸರ್ಕಾರಿ ಗೌರವಗಳಿಂದ ಅವರ ಅಂತ್ಯಕ್ರಿಯೆ ನಡೆಸಲು ಸರ್ಕಾರ ಸೂಚಿಸಿದೆ. 


  ಈಗಾಗಲೇ ಬಿಬಿಎಂಪಿ ಕಡೆಯಿಂದ ಜಯದೇವ ಆಸ್ಪತ್ರೆಗೆ ಆಂಬುಲೆನ್ಸ್ ಆಗಮನವಾಗಿದ್ದು, ಇನ್ನ ಒಂದು ಗಂಟೆಯೊಳಗೆ ಕುಟುಂಬಸ್ಥರು ಪಾರ್ಥಿವ ಶರೀರವನ್ನು ಕುಟುಂಬಸ್ಥರು ಪಡೆದು ಚಾಮರಾಜಪೇಟೆಯ ರುದ್ರಭೂಮಿ ಗೆ ಕೊಂಡೊಯ್ಯಲಿದ್ದಾರೆ.
  ಕೋವಿಡ್​ ನಿಯಮಾವಳಿಯಂತೆ 20ಕ್ಕೂ ಅಧಿಕ ಮಂದಿ ಹೆಚ್ಚಿಲ್ಲದಂತೆ ದೊರೆ ಸ್ವಾಮಿ ಅವರ ಅಂತ್ಯ ಸಂಸ್ಕಾರ ನಡೆಸಲು ಏರ್ಪಾಡು ಮಾಡಲಾಗಿದೆ.


  ಸಕಲ ಸರ್ಕಾರಿ ಗೌರವಗಳೊಂದಿಗೆ ಅಗಲಿದ ಹಿರಿಯ ಚೇತನ ಎಚ್ ಎಸ್ ದೊರೆಸ್ವಾಮಿ ಅವರ ಅಂತ್ಯಕ್ರಿಯೆ ನಡೆಸುವಂತೆ ಸರ್ಕಾರ ಆದೇಶ ಮಾಡಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ಕನಿಷ್ಠ ಪೊಲೀಸ್​ ಸಿಬ್ಬಂದಿಗಳನ್ನು ನಿಯೋಜಿಸಿ, ಕೋವಿಡ್​ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವ ಮೂಲಕ ಅಂತ್ಯಕ್ರಿಯೆ ನೆರೆವೇರಿಸುವಂತೆ  ಆದೇಶ ಮಾಡಲಾಗಿದೆ.


  ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ  ಪತ್ನಿ ಲಲಿತಮ್ಮ ನಿಧನರಾದ ಅರ್ಧ ಗಂಟೆಗೆ ಮೃತದೇಹವನ್ನು ಕಿಮ್ಸ್ ಆಸ್ಪತ್ರೆ ನೀಡಿದ್ದರು. ಇವರ ದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಕೊರೋನಾ‌ ಕಾರಣ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ ಎಂದು ಅವರ ಶಿಷ್ಯರು ಆಗಿರುವ ಪತ್ರಕರ್ತ ನಾಗಾರಾಜ್​ ತಿಳಿಸಿದ್ದಾರೆ.


  ಇದನ್ನು ಓದಿ: ಹಿರಿಯ ಚೇತನ ಎಚ್​ಎಸ್​​ ದೊರೆಸ್ವಾಮಿ ಇನ್ನು ನೆನಪು ಮಾತ್ರ...


  ಸ್ವಾತಂತ್ರ್ಯ ಹೋರಾಟದಿಂದ ಇತ್ತೀಚಿನ ಜನಪರ ಹೋರಾಟಗಳವರೆಗೂ ಅವರದ್ದು ಹೋರಾಟಗಳ ಬಹುಮುಖಿ ವ್ಯಕ್ತಿತ್ವ. ಗಾಂಧೀವಾದಿಗಳಾಗಿ ನಮ್ಮ ನಡುವೆ ಮಹಾತ್ಮ ಗಾಂಧಿಯವರ ಕೊನೆಯ ಕೊಂಡಿಯಂತಿದ್ದರು ಅವರ ಅಗಲಿಕೆ ನೋವು ತಂದಿದೆ ಎಂದು ಮುಖ್ಯಮಂತ್ರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.


  ಇದನ್ನು ಓದಿ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಇನ್ನಿಲ್ಲ


  ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯೋತ್ತರ ನಂತರ ಸೆರೆವಾಸ ಅನುಭವಿಸಿದ್ದ ದೊರೆಸ್ವಾಮಿಯವರ ಬದುಕಿನ ಆದರ್ಶ, ಮೌಲ್ಯಗಳು ಎಲ್ಲರಿಗೂ ಸ್ಪೂರ್ತಿ.ಇಂತಹ ಮಹಾನ್ ಚೇತನ ಎರಡು ಶತಮಾನಗಳ ಕಾಲ ಘಟ್ಟದಲ್ಲಿ ನಮ್ಮೆಲ್ಲರಿಗೂ ಹೋರಾಟದ ಸ್ಪೂರ್ತಿಯ ಸೆಲೆಯಾಗಿ ಮುಂಚೂಣಿಯ ಮಾರ್ಗದರ್ಶಕರಾಗಿದ್ದರು ಎಂಬುದನ್ನು ಅತ್ಯಂತ ವಿನೀತ ಭಾವದಿಂದ ಸ್ಮರಿಸಿಕೊಳ್ಳುತ್ತೇನೆ. ಮೃತರ ಕುಟುಂಬದ ಸದಸ್ಯರು, ಅವರ ಅಸಂಖ್ಯಾ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.


  ನಮ್ಮನ್ನು ಅಗಲಿ ಹೋದ ಎಚ್ಎ ಸ್ದೊ ರೆಸ್ವಾಮಿ ಅವರು ನಮ್ಮೆಲ್ಲರ ಆತ್ಮ ಸಾಕ್ಷಿಯಾಗಿದ್ದರು. ತಪ್ಪು ಕಂಡಾಗ ಎಚ್ಚರಿಸಿ, ಸರಿ ಕಂಡಾಗ ಬೆಂಬಲಿಸುತ್ತಿದ್ದ ಮಾರ್ಗದರ್ಶಕರಾಗಿದ್ದರು. ಇಳಿ ವಯಸ್ಸಿನಲ್ಲಿಯೂ ಜಗ್ಗದೆ, ಕುಗ್ಗದೆ ಅನ್ಯಾಯ ಅಕ್ರಮ‌ ಕಂಡಾಗ ಬೀದಿಗಿಳಿಯುತ್ತಿದ್ದ ಅವರು ಎಲ್ಲರ ಪಾಲಿನ ಸ್ಪೂರ್ತಿಯಾಗಿದ್ದರು ಎಂದು ಅಗಲಿದ ಮಹಾನ್​ ಚೇತನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

  Published by:Seema R
  First published: