ನಿಜಕ್ಕೂ Hijabಗಾಗಿ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರ ಸಂಖ್ಯೆ ಇಷ್ಟೇನಾ? ಶಿಕ್ಷಣ ಇಲಾಖೆಯಿಂದ ಅಂಕಿಅಂಶ

ರಾಜ್ಯದಲ್ಲಿ ಹಿಜಾಬ್ ಸಂಘರ್ಷ ಮಾಡುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಎಷ್ಟು? ಯಾವ ಯಾವ ಕಾಲೇಜಿನಲ್ಲಿ ಯಾವ ಸ್ವರೂಪದಲ್ಲಿ ಗಲಾಟೆ ಆಗಿದೆ. ಎಷ್ಟು ವಿದ್ಯಾರ್ಥಿನಿಯರು ಹಠ ಮಾಡುತ್ತಿದ್ದಾರೆ ಎನ್ನುವ ಸಮಗ್ರ ಮಾಹಿತಿ ಕಲೆ ಹಾಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ಶುರುವಾಗಿರುವ ಹಿಜಾಬ್ (Hijab) ಟೆನ್ಷನ್ ಹೊಸ ಹೊಸ ರೂಪ ಪಡೆದು ಅನೇಕ ಘಟನೆಗಳಿಗೆ ಕಾರಣವಾಗುತ್ತಿದೆ. ಸದ್ಯ ಶಿಕ್ಷಣ ಇಲಾಖೆಯ (Karnataka Education Department) ನಿದ್ದೆಗೆಡಸಿರುವ ಹಿಜಾಬ್‌ಗೆ ಬ್ರೇಕ್ ಹಾಕಲು ಸರ್ಕಸ್ ಶುರು ಮಾಡಿರುವ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಹಿಜಾಬ್ ಸಂಘರ್ಷ ಮಾಡುತ್ತಿರುವ ವಿದ್ಯಾರ್ಥಿನಿಯರ (Students) ಸಂಖ್ಯೆ ಎಷ್ಟು ಅಂತಾ ಮಾಹಿತಿ ಕಲೆ ಹಾಕಿದೆ.  ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹಿಜಾಬ್ ಸಂಘರ್ಷ ತಾರಕಕ್ಕೇರುತ್ತಿದ್ದು, ಜಿಲ್ಲೆಯಿಂದ ಜಿಲ್ಲೆಗೆ ಕೋಮು ಜ್ವಾಲೆ ಹಬ್ಬುತ್ತಿದೆ. ಆರಂಭದಲ್ಲಿ ಒಂದೆರಡು ಜಿಲ್ಲೆಗಳಿಗಿದ್ದ ಹಿಜಾಬ್ ಸಂಘರ್ಷದ ಈಗ ಜಿಲ್ಲೆ ಜಿಲ್ಲೆಗೂ ಹಬ್ಬಿದ್ದು ಸರ್ಕಾರಕ್ಕೆ ಟೆನ್ಷನ್ ಹೆಚ್ಚಿಸಿದೆ. ಶೈಕ್ಷಣಿಕ ವರ್ಷದ ಕೊನೆಯಲ್ಲಿ ಎದ್ದಿರುವ ಈ ಹಿಜಾಬ್ ವಿವಾದಕ್ಕೆ ಬ್ರೇಕ್ ಹೇಗೆ ಅನ್ನೋ ಗೊಂದಲಕ್ಕೆ ಸಿಲುಕಿದ್ದು, ಅಂತಿಮವಾಗಿ ರಾಜ್ಯದಲ್ಲಿ ಹಿಜಾಬ್ ಸಂಘರ್ಷ ಮಾಡುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಎಷ್ಟು.? ಯಾವ ಯಾವ ಕಾಲೇಜಿನಲ್ಲಿ ಯಾವ ಸ್ವರೂಪದಲ್ಲಿ ಗಲಾಟೆ ಆಗಿದೆ. ಎಷ್ಟು ವಿದ್ಯಾರ್ಥಿನಿಯರು ಹಠ ಮಾಡುತ್ತಿದ್ದಾರೆ ಎನ್ನುವ ಸಮಗ್ರ ಮಾಹಿತಿ ಕಲೆ ಹಾಕಿದೆ.

ಇದನ್ನೂ ಓದಿ: Hijab ವಿವಾದ ಬಗೆಹರಿಯುವ ಮುನ್ನವೇ ಖಾಸಗಿ ಶಾಲೆಗಳಿಂದ ಪೋಷಕರಿಗೆ ಡ್ರೆಸ್ ಕೋಡ್

ಶೇ.1ಕ್ಕಿಂತ ಕಡಿಮೆ ವಿದ್ಯಾರ್ಥಿನಿಯರಿಂದ ಹಿಜಾಬ್‌ಗಾಗಿ ಪಟ್ಟು 

ಹಿಜಾಬ್ ವಿಚಾರದಲ್ಲಿ ಈಗಾಗಲೇ  ಕೋರ್ಟ್ ಮದ್ಯಂತರ ಆದೇಶ ಮಾಡಿದ್ದು, ಸಮವಸ್ತ್ರಕ್ಕೆ ಮಾತ್ರ ಅವಕಾಶ ನೀಡುವಂತೆ ಸೂಚನೆ ನೀಡಿದೆ. ಆದರೆ ಈ ಆದೇಶಕ್ಕೂ ಕೆಲವು ವಿದ್ಯಾರ್ಥಿನಿಯರು ಡೋಂಟ್ ಕೇರ್ ಅಂತಿದ್ದು , ಇನ್ನೊಂದಡೆ ರಾಜ್ಯದಲ್ಲಿ ಪಿಯುಸಿ ದ್ವಿತೀಯ ವರ್ಷದ ಪ್ರಾಯೋಗಿಕ ಪರೀಕ್ಷೆಗೂ ಕೆಲವು ಕಡೆ ಗೈರಾಗಿ ಹಿಜಾಬ್ ಫೈಟ್ ಮಾಡುತ್ತಿದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಅಸಲಿಗೆ ಹಿಜಾಬ್ ಗಲಾಟೆ ಮಾಡುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಎಷ್ಟು ಎಲ್ಲೆಲ್ಲಿ ಹೆಚ್ಚಾಗಿದೆ ಎನ್ನುವ ಮಾಹಿತಿ ಕಲೆ ಹಾಕಿದೆ.

600-700 ವಿದ್ಯಾರ್ಥಿನಿಗಳು ಹಿಜಾಬ್​ ಪರ..! 

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 82 ಸಾವಿರ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. 82 ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ 600 ರಿಂದ 700 ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಗಾಗಿ ಫೈಟ್ ಮಾಡುತ್ತಿದ್ದಾರೆ. 1ಕ್ಕಿಂತ ಕಡಿಮೆ ಪ್ರತಿಶತ ವಿದ್ಯಾರ್ಥಿನಿಯರಿಂದ ಹಿಜಾಬ್ ಜಟಾಪಟಿಯಾಗುತ್ತಿದೆ. ಉಳಿದಂತೆ 82 ಸಾವಿರಕ್ಕೂ ವಿದ್ಯಾರ್ಥಿನಿಯರು ಉಳಿದಿದ್ದಾರೆ. ಹೌದು 82 ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 81, 500 ವಿದ್ಯಾರ್ಥಿಗಳಿಂದ ಹಿಜಾಬ್ ಕಿರಿಕ್ ಇಲ್ಲ. ಸರ್ಕಾರದ ಆದೇಶದಂತೆ ಕೋರ್ಟ್ ಸೂಚನೆಯಂತೆ ಸಮವಸ್ತ್ರ ಪಾಲನೆ ಮಾಡುತ್ತಿದ್ದಾರೆ. ಆದರೆ ಕೇವಲ 600-700 ವಿದ್ಯಾರ್ಥಿನಿಯರಿಂದ ಹಿಜಾಬ್ ಹಠ ಅಂತಿದ್ದಾರೆ ಶಿಕ್ಷಣ ಸಚಿವ ಬಿಸಿ ನಾಗೇಶ್.

ಇದನ್ನೂ ಓದಿ: Mandya: ‘ಅಂದು ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್ ಬದಲು, ಭಾರತ್ ಮಾತಾ ಕೀ ಜೈ ಎಂದು ಕೂಗಲಿಲ್ಲ ಏಕೆ?’

ದಿನದಿಂದ ದಿನಕ್ಕೆ ಹಿಜಾಬ್ ಸಂಘರ್ಷ ರಾಜ್ಯದಲ್ಲಿ ಹೊಸಹೊಸ ರೂಪ ಪಡೆಯುತಿದ್ದು ಸಂಘರ್ಷ ತಾರಕಕ್ಕೇರುತ್ತಿದೆ. ತೀರ್ಪಿನವರೆಗೂ ಈ ಬೆಳವಣಿಗೆಗೆ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ಮುಂದಾಗಿದ್ದು ಸಂಘರ್ಷದಲ್ಲಿರುವ ವಿದ್ಯಾರ್ಥಿನಿಯರ ಮಾಹಿತಿ ಕಲೆ ಹಾಕಿ ಮನವೋಲಿಸುವ ಸಾಹಸಕ್ಕೂ ಕೈ ಹಾಕ್ತಿದೆ. ಇನ್ನೊಂದಡೆ 82 ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ 81 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಹಿಜಾಬ್ ಸಮಸ್ಯೆಯೇ ಇಲ್ಲ ಅನ್ನೋವಾದ ಜನರ ಮುಂದೆ ಇಡಲು ಮುಂದಾಗಿದೆ.

ಇಂದು ಹೈಕೋರ್ಟ್​​ನಲ್ಲಿ ಏನಾಯ್ತು..? 

ಹಿಜಾಬ್​ ಪ್ರಕರಣ ಸಂಬಂಧ 10ನೇ ದಿನವೂ ಹೈಕೋರ್ಟ್​​ನಲ್ಲಿ  ವಾದ-ಪ್ರತಿವಾದ ಮುಂದುವರೆಯಿತು. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ  ನೇತೃತ್ವದ ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠ ಗುರುವಾರ ಹಿಜಾಬ್ ವಿವಾದಕ್ಕೆ  ಸಂಬಂಧಿಸಿದ ವಾದಗಳನ್ನು ಶುಕ್ರವಾರ ಮುಕ್ತಾಯಗೊಳಿಸಲು ಬಯಸುತ್ತದೆ ಎಂದು ಸೂಚಿಸಿದೆ. ಅಲ್ಲದೆ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ಇಂದು ಪೂರ್ಣ ಪೀಠ ವಿಚಾರಣೆ ಆರಂಭಿಸಿದ ಬಳಿಕ, ಕೆಲವು ಸಂಘಟನೆಗಳ ಸದಸ್ಯರಿಂದ ಬೆದರಿಕೆ ಇದೆ ಎಂದು ಆರೋಪಿಸಿ ಉಡುಪಿ ಕಾಲೇಜಿನ ಶಿಕ್ಷಕರು ನೀಡಿದ ದೂರಿಗೆ ಸಂಬಂಧಿಸಿದಂತೆ ಒಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ ಹೇಳಿದ್ದಾರೆ. ವಿವರಗಳನ್ನು ಮುಚ್ಚಿದ ಕವರ್‌ನಲ್ಲಿ ಇರಿಸಲಾಗುವುದು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಎಫ್​​ಐಆರ್​ ಬಗ್ಗೆ ನಿನ್ನೆ ಸರ್ಕಾರಿ ಕಾಲೇಜುಗಳ ಪರವಾಗಿ ವಕೀಲ ನಾಗಾನಂದ್ ಉಲ್ಲೇಖಿಸಿದ್ದರು. ಆ ಬಗ್ಗೆ ಇಂದು ಸರ್ಕಾರ ಹೈಕೋರ್ಟ್​​ಗೆ ಮಾಹಿತಿ ನೀಡಿತು.
Published by:Kavya V
First published: