Weekend Curfew: ಸರ್ಕಾರದ ನಿರ್ಧಾರದ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ
ಐದು ದಿನಗಳು ಜನಗಳ ಓಡಾಟಕ್ಕೆ ಬಿಟ್ಟು , ಕರ್ಫ್ಯೂ ವಿಧಿಸೋದರಿಂದ ಏನು ಪ್ರಯೋಜನ ಆಗಲ್ಲ. ಕೋವಿಡ್ ಜತೆ ಬದುಕು ಸಾಗಿಸುವ ಅನಿವಾರ್ಯತೆ ನಮ್ಮದಾಗಿದೆ. ಈಗಾಗಲೇ ಕೋವಿಡ್ ಹೊಡೆತಕ್ಕೆ ರಾಜ್ಯದಲ್ಲಿ 10 ಸಾವಿರ ಹೋಟೆಲ್ ಗಳು ಕ್ಲೋಸ್ ಆಗಿವೆ.
ರಾಜ್ಯ ಸರ್ಕಾರ ಕೊರೊನಾ ಮತ್ತು ಓಮೈಕ್ರಾನ್ (Corona Virus And Omicron) ನಿಯಂತ್ರಣಕ್ಕಾಗಿ ವೀಕೆಂಡ್ ಕರ್ಫ್ಯೂ (Weekend Curfew) ಮತ್ತು ನೈಟ್ ಕರ್ಫ್ಯೂ (Night Curfew) ನಿಯಮಗಳನ್ನು ತಂದಿದೆ. ಸದ್ಯದವರೆಗೂ ಜನರ ಹಿತದೃಷ್ಟಿ ಹಿನ್ನೆಲೆ ಲಾಕ್ ಡೌನ್ (Lockdown) ಮಾಡದಿರಲು ಸರ್ಕಾರ ನಿರ್ಧರಿಸಿದೆ. ನಿನ್ನೆ ಸಭೆ ನಡೆಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಶುಕ್ರವಾರದ ಸಭೆ ಬಳಿಕ ಲಾಕ್ ಡೌನ್ ಕುರಿತು ಸ್ಪಷ್ಟವಾದ ನಿರ್ಧಾರಗಳು ಪ್ರಕಟವಾಗುವ ಸಾಧ್ಯತೆಗಳಿವೆ. ಇತ್ತ ಸರ್ಕಾರದ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂಗೆ ಹೋಟೆಲ್, ರೆಸ್ಟೋರೆಂಟ್, ಕ್ಯಾಟ್ರಿಂಗ್ ಹಾಗೂ ಮದುವೆ ಮಂಟಪದ ಮಾಲೀಕರಿಂದ ವಿರೋಧ ವ್ಯಕ್ತವಾಗಿದೆ.
ನೈಟ್ ಕರ್ಫ್ಯೂ ನಲ್ಲಿ ಹಾಗೂ ವಾರಾಂತ್ಯದಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಸಂಘಗಳು ಮನವಿ ಮಾಡಿಕೊಂಡಿದ್ದವು, ಇದೀಗ ಮತ್ತೆ ಜನವರಿ 31ರ ವರೆಗೆ ನಿರ್ಬಂಧಗಳು ವಿಸ್ತರಣೆ ಆಗಿರುವ ಹಿನ್ನೆಲೆ ಸರ್ಕಾರದ ನಿಯಮಗಳಿಗೆ ವಿರೋಧ ವ್ಯಕ್ತವಾಗಿದೆ.
ಯಾವುದೇ ಕಾರಣಕ್ಕೂ ಕರ್ಫ್ಯೂ ಬೇಡ ಎಂದು ರಾಜ್ಯ ಹೋಟೆಲ್ ಗಳ ಸಂಘದಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ವೀಕೆಂಡ್ ಕರ್ಫ್ಯೂ ಜಾರಿ ಮಾಡದಿರಲು ಮನವಿ ಮಾಡಿಕೊಳ್ಳಲಾಗಿದೆ. ಕರ್ಫ್ಯೂ ಅಂದರೆ ಜನ ಭಯ ಬೀಳುತ್ತಾರೆ. ವೀಕೆಂಡ್ ಸಮಯದಲ್ಲಿಯೇ ಜನರು ಹೋಟೆಲ್ ಗಳತ್ತ ಬರುತ್ತಾರೆ. ವೀಕೆಂಡ್ ಲಾಕ್ ಮಾಡಿದ್ರೆ ಜನರು ಹೋಟೆಲ್ ಗಳಿಗೆ ಬರಲ್ಲ. ಕರ್ಫ್ಯೂ ಜಾರಿ ಮಾಡಿದ್ರೆ ಹೋಟೆಲ್ ಉದ್ಯಮ ಮುಳುಗಿ ಹೋಗುತ್ತೆ ಎಂದು ರಾಜ್ಯ ಹೋಟೆಲ್ ಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಹೇಳಿದ್ದಾರೆ.
ಕೋವಿಡ್ ಹೊಡೆತಕ್ಕೆ 10 ಸಾವಿರ ಹೋಟೆಲ್ ಕ್ಲೋಸ್!
ಐದು ದಿನಗಳು ಜನಗಳ ಓಡಾಟಕ್ಕೆ ಬಿಟ್ಟು , ಕರ್ಫ್ಯೂ ವಿಧಿಸೋದರಿಂದ ಏನು ಪ್ರಯೋಜನ ಆಗಲ್ಲ. ಕೋವಿಡ್ ಜತೆ ಬದುಕು ಸಾಗಿಸುವ ಅನಿವಾರ್ಯತೆ ನಮ್ಮದಾಗಿದೆ. ಈಗಾಗಲೇ ಕೋವಿಡ್ ಹೊಡೆತಕ್ಕೆ ರಾಜ್ಯದಲ್ಲಿ 10 ಸಾವಿರ ಹೋಟೆಲ್ ಗಳು ಕ್ಲೋಸ್ ಆಗಿವೆ. ಹೀಗಿದ್ರೂ ಕರ್ಫ್ಯೂ ವಿಧಿಸಿದ್ರೆ ಯಾವ ನ್ಯಾಯ? ಬಸ್, ಟ್ರೈನ್ ಓಡಾಟಕ್ಕೆ ಅವಕಾಶ ಕೊಡುವ ಸರ್ಕಾರ ನಮಗೆ ಯಾಕೆ ಅನ್ಯಾಯ ಮಾಡ್ತಿದೆ ಎಂದು ಚಂದ್ರಶೇಖರ್ ಹೆಬ್ಬಾರ್ ಆಕ್ರೋಶ ಹೊರ ಹಾಕಿದರು.
ಸಚಿವ ಸುಧಾಕರ್ ಹೇಳಿಕೆ
ಕೆಲವು ಜಿಲ್ಲೆಗಳಲ್ಲಿ ಮಂದಗತಿಯಲ್ಲಿ ಲಸಿಕೀಕರಣವಾಗುತ್ತಿದೆ ಹಾಗಾಗಿ ಇಂದು ಜಿಲ್ಲೆಗಳ ಸಭೆ ಕರೆಯಲಾಗಿದೆ. ಲಸಿಕೆ ಕಾರ್ಯಕ್ರಮ ವೇಗ ಹೆಚ್ಚಿಸಲು 7-8 ಜಿಲ್ಲೆಗಳನ್ನು ಸಭೆ ಕರೆದಿದ್ದಾರೆ. ಯಾವ ಸೋಂಕಿಗೆ ಹೋಲಿಸಿದ್ರು ಇದು ಅತ್ಯಂತ ಕನಿಷ್ಠವಾಗಿದೆ.ಬಲವಂತವಾಗಿ ಲಸಿಕೆ ಪಡೆಯಲು ಅದೇಶ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಕಚೇರಿಗಳಿಗೆ ಹೋಗುವವರಿಂದ ಬೇರೆಯವರಿಗೆ ಕೊವಿಡ್ ಬರಬಾರದು ಹಾಗಾಗಿ ಲಸಿಕೆ ಪಡೆಯಬೇಕು. ಸ್ವಯಂ ಪೇರಿತವಾಗಿ ಲಸಿಕೆಯನ್ನು ಎಲ್ಲರೂ ಪಡೆಯಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಮನವಿ ಮಾಡಿಕೊಂಡರು.
ಶುಕ್ರವಾರ ಮೊತ್ತೊಂದು ಸುತ್ತಿನ ಸಭೆ ಸಿಎಂ ಕರೆದಿದ್ದಾರೆ.. ಟಫ್ ರೂಲ್ಸ್ ಬೇಡ ಎಂಬ ಬಿಜೆಪಿ ನಾಯಕರ ವಾದ ವಿಚಾರಕ್ಕೆ ಪ್ರತಿಕ್ರಿಯಿಸಿ. ಅವರ ಅಭಿಪ್ರಾಯ ಸ್ವೀಕರಿಸುತ್ತೇವೆ. ಶುಕ್ರವಾರ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ರಾಜ್ಯದಲ್ಲಿ 0.04% ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇದೆ. ಆದರೂ ಸರ್ಕಾರ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳುತ್ತೆ. ಪ್ರತಿ ಜೀವ ಮುಖ್ಯ ಹೀಗಾಗಿ ಚಿಕಿತ್ಸೆ ಮತ್ತು ಸಾವಿನ ಬಗ್ಗೆ ಡೆತ್ ಆಡಿಟ್ ಮಾಡ್ತೀವಿ. ರಾಜ್ಯದಲ್ಲಿ ಡೆತ್ ಆಡಿಟ್ ಮಾಡ್ತೀವಿ ಎಂದರು.