₹496.57 ಕೋಟಿ ವೆಚ್ಚದ Bengaluru Safe City project‌ ಮುನ್ನಡೆಸಲು ಹನಿವೆಲ್ ಆಟೋಮೇಷನ್ ಇಂಡಿಯಾ ಆಯ್ಕೆ

ಒಪ್ಪಂದದ ಪ್ರಕಾರ ಹನಿವೆಲ್ ಬೆಂಗಳೂರಿನಾದ್ಯಂತ 3,000ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ 7,000ಕ್ಕಿಂತಲೂ ಹೆಚ್ಚಿನ ಕ್ಯಾಮೆರಾಗಳನ್ನು ಹೊಂದಿರುವ ಅತ್ಯಾಧುನಿಕ ವಿಡಿಯೋ ವ್ಯವಸ್ಥೆ ನಿರ್ವಹಿಸಲು ಸಂಯೋಜಿತ ಕಮಾಂಡ್ ಹಾಗೂ ಕಂಟ್ರೋಲ್ ಸೆಂಟರ್ ನಿರ್ಮಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಿರ್ಭಯಾ ನಿಧಿಯಡಿಯಲ್ಲಿ ಸುಮಾರು ₹496.57 ಕೋಟಿ ವೆಚ್ಚದ ಬೆಂಗಳೂರು ಸೇಫ್ ಸಿಟಿ ಪ್ರಾಜೆಕ್ಟ್ (Bengaluru Safe City project) ಮುನ್ನಡೆಸಲು ಕೇಂದ್ರ ಸರಕಾರ (central govt) ಹನಿವೆಲ್ ಆಟೋಮೇಷನ್ ಇಂಡಿಯಾವನ್ನು (Honeywell Automation India) ಆಯ್ಕೆ ಮಾಡಿದೆ. ಲಿಂಗ ಆಧಾರಿತ ಹಿಂಸೆ ಅಥವಾ ಕಿರುಕುಳದ ಬೆದರಿಕೆಯಿಲ್ಲದೆ ಎಲ್ಲಾ ಅವಕಾಶಗಳನ್ನು ಕೈಗೆತ್ತಿಕೊಳ್ಳಲು ಶಕ್ತವಾಗುವಂತೆ ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತ ಮತ್ತು ಸಶಕ್ತಗೊಳಿಸುವ ವಾತಾವರಣ ಸೃಷ್ಟಿಸಲು ಗೃಹ ವ್ಯವಹಾರಗಳ ಸಚಿವಾಲಯವು ಈ ಯೋಜನೆ ಆರಂಭಿಸಿತು.

  ಮಹಾನಗರಗಳಲ್ಲಿ ಮಹಿಳೆಯರ ಸುರಕ್ಷತೆ 

  ಸರಕಾರದ ಸೇಫ್ ಸಿಟಿ ಪ್ರಾಜೆಕ್ಟ್‌ಗಾಗಿ ಆಯ್ಕೆಯಾದ 8 ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದ್ದು ಮಹಿಳೆಯರ ವಿರುದ್ಧ ನಡೆಯುವ ಅಪರಾಧ ಸ್ಥಳಗಳ ಪತ್ತೆ ಹಚ್ಚುವಿಕೆ, ಜಾಗೃತಿ ಕಾರ್ಯಕ್ರಮಗಳ ಮೂಲಕ ಸಮುದಾಯದಲ್ಲಿ ಮೂಲಸೌಕರ್ಯ, ತಂತ್ರಜ್ಞಾನ ಅಳವಡಿಕೆ ಮತ್ತು ಸಾಮರ್ಥ್ಯ ವೃದ್ಧಿ ಸೇರಿದಂತೆ ವಿವಿಧ ಘಟಕಗಳ ನಿಯೋಜನೆಯನ್ನು ಪ್ರಾಜೆಕ್ಟ್ ಒಳಗೊಂಡಿದೆ.

  7,000ಕ್ಕಿಂತಲೂ ಹೆಚ್ಚಿನ ಕ್ಯಾಮೆರಾ ಅಳವಡಿಕೆ 

  ಒಪ್ಪಂದದ ಪ್ರಕಾರ ಹನಿವೆಲ್ ಬೆಂಗಳೂರಿನಾದ್ಯಂತ 3,000ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ 7,000ಕ್ಕಿಂತಲೂ ಹೆಚ್ಚಿನ ಕ್ಯಾಮೆರಾಗಳನ್ನು ಹೊಂದಿರುವ ಅತ್ಯಾಧುನಿಕ ವಿಡಿಯೋ ವ್ಯವಸ್ಥೆ ನಿರ್ವಹಿಸಲು ಸಂಯೋಜಿತ ಕಮಾಂಡ್ ಹಾಗೂ ಕಂಟ್ರೋಲ್ ಸೆಂಟರ್ ನಿರ್ಮಿಸುತ್ತದೆ. ವಿಡಿಯೋ ವ್ಯವಸ್ಥೆಯು ಮುಖ ಗುರುತಿಸುವಿಕೆ, ‘100ಕ್ಕೆ ಡಯಲ್ ಮಾಡುವ’ ಅಪ್ಲಿಕೇಶನ್ ಹಾಗೂ ಡ್ರೋನ್‌ಗಳನ್ನೊಳಗೊಂಡಂತೆ ಸುಧಾರಿತ ವಿಡಿಯೋ ವಿಶ್ಲೇಷಣೆಗಳನ್ನು ಒದಗಿಸುತ್ತದೆ. ಘಟನೆಯ ಪ್ರತಿಕ್ರಿಯೆ ದರ ಹಾಗೂ ನಾಗರಿಕರ ಬದ್ಧತೆ ಸುಧಾರಿಸಲು ಸಹಾಯ ಮಾಡುವ ಅಸ್ತಿತ್ವದಲ್ಲಿರುವ ನಗರ ಪೊಲೀಸ್ ವಿಭಾಗದ ಸುರಕ್ಷಾಆ್ಯಪ್ ಅನ್ನೂ ಹನಿವೆಲ್ ಅಪ್‌ಗ್ರೇಡ್ ಮಾಡುತ್ತದೆ.

  5 ವರ್ಷಗಳ ಕಾಲ ಭದ್ರತಾ ಮೂಲಸೌಕರ್ಯ ನಿರ್ವಹಣೆ 

  ಹನಿವೆಲ್ ಇಂಡಿಯಾದ ಅಧ್ಯಕ್ಷ ಹಾಗೂ ಹನಿವೆಲ್ ಆಟೋಮೇಷನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಆಶಿಶ್ ಗಾಯಕ್‌ವಾಡ್ ಈ ಕುರಿತು ತಮ್ಮ ಪ್ರತಿಕ್ರಿಯೆ ತಿಳಿಸಿದ್ದು, ಎಲ್ಲಾ ನಾಗರಿಕರ ಅದರಲ್ಲೂ ವಿಶೇಷವಾಗಿ ಮಹಿಳೆಯರು ಹಾಗೂ ಹುಡುಗಿಯರ ಭದ್ರತೆ ಸುಧಾರಿಸಲು ಪ್ರಮುಖ ಅಂಶಗಳನ್ನು ನೇರವಾಗಿ ಪರಿಹರಿಸಲು ಕೆಲಸ ಮಾಡುವ ಬೆಂಗಳೂರು ಸೇಫ್ ಸಿಟಿ ಪ್ರಾಜೆಕ್ಟ್‌ಗಾಗಿ ನಮ್ಮ ಸಂಸ್ಥೆ ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯ ಹಾಗೂ ಗೌರವದ ವಿಷಯವಾಗಿದೆ ಎಂದು ತಿಳಿಸಿದ್ದಾರೆ. ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂಬುದಾಗಿ ಆಶಿಶ್ ತಿಳಿಸಿದ್ದು ಐದು ವರ್ಷಗಳ ಕಾಲ ಭದ್ರತಾ ಮೂಲಸೌಕರ್ಯವನ್ನು ಹನಿವೆಲ್ ಸಂಸ್ಥೆಯೇ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: Ration Card Application: ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್​​​ಗೆ ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ

  ಸುರಕ್ಷಿತ ನಗರವನ್ನಾಗಿಸೋದೇ ಗುರಿ

  ಜಾಗತಿಕವಾಗಿ ಹನಿವೆಲ್ ಮುಂದಿನ ಭವಿಷ್ಯಕ್ಕೆ ಸಿದ್ಧಗೊಂಡಿರುವ ನಗರಗಳನ್ನು ಸಂಪರ್ಕಿತ ಸುರಕ್ಷತೆ ಮತ್ತು ಭದ್ರತಾ ತಂತ್ರಜ್ಞಾನದ ಅಂಶಗಳೊಂದಿಗೆ ವಿಶಾಲವಾದ ಕೌಶಲ್ಯ ಹಾಗೂ ಸುರಕ್ಷಿತ ನಗರ ಕೊಡುಗೆಗಳೊಂದಿಗೆ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದೇ ಪ್ರಗತಿಯನ್ನು ನಾವು ಬೆಂಗಳೂರು ನಗರಕ್ಕೂ ವಿಸ್ತರಿಸಲು ಬಯಸಿದ್ದು, ನಗರವನ್ನು ಹೆಚ್ಚು ಸುರಕ್ಷಿತ ಹಾಗೂ ಹೆಚ್ಚು ಸದೃಢಗೊಳಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಹನಿವೆಲ್ ಬಿಲ್ಡಿಂಗ್ ಟೆಕ್ನಾಲಜೀಸ್, ಏಷ್ಯಾದ ಅಧ್ಯಕ್ಷ ಆಶಿಶ್ ಮೋದಿ ತಿಳಿಸಿದ್ದಾರೆ.

  ಸಂಸ್ಥೆಯ ಸ್ಮಾರ್ಟ್ ಸಿಟಿ ವ್ಯವಸ್ಥೆಗಳು ಒಡಿಶಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ, ಗುಜರಾತ್‌ನಲ್ಲಿ ಈಗಾಗಲೇ 100,000ಕ್ಕಿಂತಲೂ ಹೆಚ್ಚಿನ (Internet of things) ಇಂಟರ್ನೆಟ್ ವ್ಯವಸ್ಥೆಗಳ ಸೆನ್ಸಾರ್‌ಗಳನ್ನು ಸಂಪರ್ಕಿಸಿದ್ದು 100 ಮಿಲಿಯನ್‌ಗಿಂತಲೂ ಹೆಚ್ಚಿನ ಜನರ ಜೀವನ ಮಟ್ಟ ಸುಧಾರಿಸಿದೆ ಎಂದು ತಿಳಿಸಿದೆ.
  Published by:Kavya V
  First published: