ತಾಕತ್ತಿದ್ದರೆ ನಮ್ಮ ಮೇಲೆ ಕೇಸ್ ಹಾಕಲಿ.. ಡಿಕೆಶಿ ಸವಾಲಿಗೆ ಗೃಹ ಸಚಿವ Araga Jnanendra ತಿರುಗೇಟು

ಕಾಂಗ್ರೆಸ್ ಕೂಡ ಯೋಚನೆ ಮಾಡಬೇಕು. ಇದರಿಂದ ಕಾಂಗ್ರೆಸ್  ಗಳಿಕೆಗಿಂತ ಕಳೆದುಕೊಳ್ಳೋದು ಜಾಸ್ತಿ. ಪಾದಯಾತ್ರೆಯೇ ಕಾಂಗ್ರೆಸ್​​ಗೆ ಮಾರಕವಾಗಲಿದೆ.

ಸಚಿವ ಅರಗ ಜ್ಞಾನೇಂದ್ರ

ಸಚಿವ ಅರಗ ಜ್ಞಾನೇಂದ್ರ

  • Share this:
ಬೆಂಗಳೂರು: ಮೇಕೆದಾಟು ಪಾದಯಾತ್ರೆ (Mekedatu Padayatra) ಸಂಬಂಧ ತಾಕತ್ತಿದ್ದರೆ ಇದ್ದರೆ ನಮ್ಮ ಮೇಲೆ ಕ್ರಮ ಕೈಗೊಳ್ಳಲಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ (KPCC President DK Shivakumar) ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿರುಗೇಟು ನೀಡಿದರು. ನನಗೆ ಧೈರ್ಯ ಇದೆ, ಕಾನೂನು ಎಲ್ಲರಿಗೂ ಒಂದೇ ಎಂದರು. ಪಾದಯಾತ್ರೆ ವೇಳೆ ಡಿಕೆ ಶಿವಕುಮಾರ್ ಬಾಡಿ ಲಾಂಗ್ವೆಜ್​​ ಬಗ್ಗೆ ನಾನು ಏನೂ ಹೇಳಲ್ಲ. ಅವರ ಬಾಡಿ ಲಾಂಗ್ವೆಜ್ ಬಗ್ಗೆ ಜನರಿಗೇ ಗೊತ್ತಿದೆ. ಬೆಂಗಳೂರು ಜನರ ರಕ್ಷಣೆ ಮಾಡುವ ದೃಷ್ಟಿಯಿಂದ ಸಮಾಲೋಚನೆ ಆಗ್ತಿದೆ. ಜನರಿಗೆ ಸುಳ್ಳು ಹೇಳ್ತಿದ್ದಾರೆ, ಬೆಂಗಳೂರು ಜನರ ರಕ್ಷಣೆ ದೃಷ್ಟಿಯಿಂದ ಒಂದಷ್ಟು ಚರ್ಚೆ ಆಗ್ತಿದೆ ಎಂದರು.

ಪಾದಯಾತ್ರೆಯೇ ಕಾಂಗ್ರೆಸ್​​ಗೆ ಮಾರಕ

ಕಾಂಗ್ರೆಸ್ ಕೂಡ ಯೋಚನೆ ಮಾಡಬೇಕು. ಇದರಿಂದ ಕಾಂಗ್ರೆಸ್  ಗಳಿಕೆಗಿಂತ ಕಳೆದುಕೊಳ್ಳೋದು ಜಾಸ್ತಿ. ಪಾದಯಾತ್ರೆಯೇ ಕಾಂಗ್ರೆಸ್​​ಗೆ ಮಾರಕವಾಗಲಿದೆ. ಫೀಸಿಬಿಲಿಟಿ ರಿಪೋರ್ಟ್ ತೆಗೆದುಕೊಳ್ಳೋದಕ್ಕೇ ಕಾಂಗ್ರೆಸ್ ಐದು ವರ್ಷ ಮಾಡಿದರು. ಐದು ವರ್ಷ ಸಿಂಹಾಸನದ ಮೇಲೆ ಕುಳಿತಾಗ ನಮ್ಮ ನೀರು ನಮ್ಮ ಹಕ್ಕು ಅನ್ನೋದು ಕಾಂಗ್ರೆಸ್ ಗೆ ನೆನಪೇ ಆಗಲಿಲ್ಲ. ಕಾಂಗ್ರೆಸ್ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಡಿಕೆಶಿ ಅಣ್ಣ, ಇದು ಹೊನ್ನಾಳ್ಳಿ ಕೋಟೆ, ಭೇದಿಸೋಕೆ ಸಾಧ್ಯವೇ ಇಲ್ಲ: MP Renukacharya

ರೇಣುಕಾಚಾರ್ಯ ಮೇಲೂ ಕೇಸ್​ ಹಾಕಿದ್ದೇವೆ..

ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಭೆ ಗಮನಿಸಿದ್ದೇನೆ. ರೇಣುಕಾಚಾರ್ಯ ಸಭೆ ವಿರುದ್ಧ ಎಫ್ಐಆರ್ ಆಗಿದೆ, ವಿಚಾರಣೆ ನಡೆಯುತ್ತಿದೆ. ಕಾನೂನು ಎಲ್ಲರಿಗೂ ಕೂಡ ಒಂದೇ. ರೇಣುಕಾಚಾರ್ಯ ವಿರುದ್ದವೂ ಕೂಡ ಎಫ್ಐಆರ್ ಮಾಡ್ತಾರೆ. ಪೊಲೀಸ್ ಅಧಿಕಾರಿಗಳಿಂದ ನಾನು ವಿವರಣೆ ಕೇಳ್ತೇನೆ. ಬೆಳಗ್ಗೆ ರೇಣುಕಾಚಾರ್ಯ ಬಂದಿದ್ರು, ಯಾಕೆ ಹೋಗಿದ್ದು ಅಂತ ನಾನೂ ರೇಣುಕಾಚಾರ್ಯಗೆ ಪ್ರಶ್ನೆ ಮಾಡಿದ್ದೇನೆ. ಜಿಲ್ಲಾಡಳಿತಗಳಿಗೆ ನಾವು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇವೆ.

ಸ್ಮಶಾನದಲ್ಲಿ ಕ್ಯೂ ನಿಲ್ಲಬೇಕಾಯ್ತು.. ನೆನೆಪಿರಲಿ

ಇಡೀ ರಾಜ್ಯದಲ್ಲಿ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಕಟ್ಟುನಿಟ್ಟಿನ ನಿಯಮ ಜಾರಿ ಮಾಡುವಂತೆ ಸೂಚಿಸಿದ್ದೇವೆ. ತಜ್ಞರ ವರದಿ ನೋಡಿಕೊಂಡು ಟಫ್ ರೂಲ್ಸ್ ಬಗ್ಗೆ ನಿರ್ಧಾರ ಮಾಡ್ತೇವೆ. ಸಿಎಂ, ಎಚ್ ಎಂ ರೇವಣ್ಣ, ಸಿಎಸ್ ಎಲ್ಲ ಅಧಿಕಾರಿಗಳಿಗೂ ಪಾಸಿಟಿವ್ ಬಂದು ಮಲಗ್ತಿದ್ದಾರೆ, ಅಂಥ ಪರಿಸ್ಥಿತಿ ಇದೆ. ನಾನೂ ಕೂಡ ಟೆಸ್ಟ್ ಮಾಡಿಸಿದೆ, ನೆಗೆಟಿವ್ ಬಂದಿದೆ. ಸಿಎಂ ಸಭೆ ಬಳಿಕ ಮತ್ತಷ್ಟು ಕಠಿಣ ರೂಲ್ಸ್ ಬರಬಹುದು. 2ನೇ ಅಲೆ ಕೂಡ ಮೊದಲು ಹೀಗೆ ಇತ್ತು. ಆದರೆ ಆಮೇಲೆ ಸ್ಮಶಾನದಲ್ಲಿ ಕ್ಯೂ ನಿಲ್ಲಬೇಕಾಯ್ತು ಎಂದು ಎಚ್ಚರಿಸಿದರು.

ಲಾಕ್​​​ಡೌನ್ ಮಾಡುವ ಯೋಚನೆ ಇಲ್ಲ

ಇನ್ನು ಸರ್ಕಾರಕ್ಕೆ ಲಾಕ್​​​ಡೌನ್ ಮಾಡುವ ಇರಾದೆ ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಕಂಟ್ರೋಲ್ ತಪ್ಪುವ ಸ್ಥಿತಿ ಬಂದಾಗ ಲಾಕ್​​ಡೌನ್ ಮಾಡೋದು ಒಂದು ವಿಧಾನ. ಲಾಕ್​ಡೌನ್​ ಮಾಡಿದ್ರೆ, ಹೊಟೇಲ್-ಬಾರ್ ಎಲ್ಲ ಉದ್ಯಮಕ್ಕೆ ಹೊಡೆತ ಬೀಳತ್ತೆ. ಲಾಕ್​​ಡೌನ್ ಒಂದೇ ಪರಿಹಾರ ಅಲ್ಲ, ಅದನ್ನು ಮಾಡೋದು ಇಲ್ಲ. ಆದಷ್ಟು ನೋಡಿಕೊಂಡು ನಿರ್ಣಯ ತೆಗೆದುಕೊಳ್ಳುತ್ತೇವೆ. ಕೇಂದ್ರದಿಂದಲೂ ಏನು ಸಲಹೆ ಸೂಚನೆ ಬರುತ್ತದೆ ನೋಡೋಣ. ಸಿಎಂ ಕೂಡ ಲಾಕ್ ಡೌನ್ ಬೇಡ ಅಂತಲೇ ಹೇಳಿದ್ದಾರೆ ಎಂದರು.

ಇದನ್ನೂ ಓದಿ: ಪಾದಯಾತ್ರೆ ವೇಳೆ ಡಿಕೆಶಿ ಅಷ್ಟೊಂದು ತೂರಾಡಿದ್ದು ಯಾಕೆ ಅಂತ ಯಾರದ್ರೂ ಹೇಳ್ರಪ್ಪ : Yatnal ವ್ಯಂಗ್ಯ

ಕೊರೊನಾ ಕರ್ಫ್ಯೂವನ್ನೂ ಲೆಕ್ಕಿದಸೇ ಕಾಂಗ್ರೆಸ್​​ ನಾಯಕರು ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದಾರೆ. ಇನ್ನು ಡಿಕೆಶಿ ಅವರನ್ನು ಭೇಟಿ ಮಾಡಿದ್ದ ಅಧಿಕಾರಿಗೆ ಕೊರೊನಾ ಪಾಸಿಟಿವ್​ ಎಂದು ನಿನ್ನೆ ಸುದ್ದಿಯಾಗಿತ್ತು. ಕೋವಿಡ್​ ಟೆಸ್ಟ್​​ಗೆ ಡಿಕೆಶಿ ನಿರಾಕರಿಸಿದ್ದಾರೆ.
Published by:Kavya V
First published: