Filmy Style Robbery: ಮನೆಯಲ್ಲಿ ಮಹಿಳೆ ಒಂಟಿಯಾಗಿದ್ದಾಗ ಸಿನಿಮೀಯ ಶೈಲಿಯಲ್ಲಿ ದರೋಡೆ!

ಮನೆಯಿಂದ ಹೊರ ಹೋಗುವಾಗ ಮಹಿಳೆಯನ್ನು ಹೆದರಿಸಿದ್ದಾರೆ. ಕಳ್ಳತನದ ಬಗ್ಗೆ ಯಾರಿಗೂ ಹೇಳಬೇಡ. ಈಗಾಗಲೇ 8 ಕೊಲೆ ಮಾಡಿದ್ದೇವೆ. ಒಂದು ವೇಳೆ ಯಾರಿಗಾದರೂ ಹೇಳಿದರೆ ನೀನು 9ನೇ ಕೊಲೆಯಾಗುವೆ ಎಂದು ಚಾಕು ತೋರಿಸಿ ಬೆದರಿಸಿ ಕಾಲ್ಕಿತ್ತಿದ್ದಾರೆ.

ಚಿನ್ನಾಭರಣ, ಆರೋಪಿ

ಚಿನ್ನಾಭರಣ, ಆರೋಪಿ

  • Share this:
ಬೆಂಗಳೂರು : ಸಿನಿಮೀಯ ಶೈಲಿಯಲ್ಲಿ (Filmy Style Robbery) ಒಂಟಿ ಮಹಿಳೆ ಮನೆಗೆ ನುಗ್ಗಿ ಕಳ್ಳತನ ಮಾಡಿರೋ ಘಟನೆ ನಡೆದಿದೆ. ಇದೇ ತಿಂಗಳ 6 ನೇ ತಾರೀಖು ಸಂಜೆ ಏಳು ಗಂಟೆ ಸುಮಾರಿಗೆ ದಂಡುಪಾಳ್ಯದ ಗ್ಯಾಂಗ್ ನಂತೇ (Dandupalya Gang) ಮಹಿಳೆಯ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ರು. ಮನೆಯಲ್ಲಿ ಕಳ್ಳತನವಾಗಿರುವ (Robbery) ಬಗ್ಗೆ ಯಾರಿಗಾದರೂ ಹೇಳಿದರೆ ಜೀವಸಹಿತ ಬಿಡುವುದಿಲ್ಲ. ನಾವು ಈಗಾಗಲೇ ಎಂಟು ಕೊಲೆ ಮಾಡಿದ್ದೇನೆ. ಪೊಲೀಸರಿಗೆ ವಿಷಯ ತಿಳಿಸಿದರೆ 9ನೇ ಕೊಲೆ ನೀನೇ ಆಗುವೆ ಎಂದು ಕಳ್ಳತನ ಮಾಡಿದ ಮನೆಯ ಮಾಲಕಿಗೆ ಸಿನಿಮೀಯ ಶೈಲಿಯಲ್ಲಿ ಬೆದರಿಸಿ(Threat) ಖದೀಮನನ್ನು ಚಿಕ್ಕಜಾಲ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ದಂಡುಪಾಳ್ಯ ಗ್ಯಾಂಗ್ ರೀತಿಯಲ್ಲಿ ಅಟ್ಯಾಕ್

ದೊಡ್ಡಜಾಲ ನಿವಾಸಿ ಗೀತಾ ಎಂಬುವರು ನೀಡಿದ ದೂರಿನ ಮೇರೆಗೆ ಖತರ್ನಾಕ್​ ಖದೀಮ ರಾಕೇಶ್ ನನ್ನು‌ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಕೃತ್ಯದಲ್ಲಿ ಮತ್ತೋರ್ವ ಭಾಗಿಯಾಗಿದ್ದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ತಿಂಗಳು 6ರಂದು ರಾತ್ರಿ ದೊಡ್ಡಜಾಲದ ಐಷಾರಾಮಿ ಮನೆಗೆ ಒಡತಿ ಗೀತಾ ಎಂಬುವರ ಮನೆಗೆ ನುಗ್ಗಿದ್ದಾರೆ. ನುಗ್ಗುವ ಮುನ್ನ ಮನೆಯ ಕಾಲಿಂಗ್ ಬೆಲ್ ಒತ್ತಿದ್ದಾರೆ. ಬಾಗಿಲು ತೆರೆದಾಕ್ಷಣ ಮಹಿಳೆಗೆ ದಂಡುಪಾಳ್ಯ ಗ್ಯಾಂಗ್ ರೀತಿಯಲ್ಲಿ ಅಟ್ಯಾಕ್ ಮಾಡಿದ್ದಾರೆ. ಬಾಗಿಲು ತಳ್ಳಿ‌ ಮಹಿಳೆಯನ್ನು ಹಿಡಿದುಕೊಂಡು ಬಾಯಿಗೆ ಬಟ್ಟೆ ತುರುಕಿ ಕೈ-ಕಾಲುಗಳಿಗೆ ಬಟ್ಟೆಯಿಂದ ಕಟ್ಟಿದ್ದಾರೆ. ಬೆಡ್ ರೂಂಗೆ ನುಗ್ಗಿ ಕಬೋರ್ಡ್ ನಲ್ಲಿದ್ದ 6 ಲಕ್ಷ ಬೆಲೆಬಾಳುವ 161 ಗ್ರಾಂ ಚಿನ್ನಾಭರಣ ಹಾಗೂ 10 ಸಾವಿರ ನಗದು ದರೋಡೆ ಮಾಡಿದ್ದಾರೆ.

ಖಾಕಿ ಕೈಗೆ ಸಿಕ್ಕಿಬಿದ್ದ ಖದೀಮರು 

ಮನೆಯಿಂದ ಹೊರ ಹೋಗುವಾಗ ಮಹಿಳೆಯನ್ನು ಹೆದರಿಸಿದ್ದಾರೆ. ಕಳ್ಳತನದ ಬಗ್ಗೆ ಯಾರಿಗೂ ಹೇಳಬೇಡ. ಈಗಾಗಲೇ 8 ಕೊಲೆ ಮಾಡಿದ್ದೇವೆ. ಒಂದು ವೇಳೆ ಯಾರಿಗಾದರೂ ಹೇಳಿದರೆ ನೀನು 9ನೇ ಕೊಲೆಯಾಗುವೆ ಎಂದು ಚಾಕು ತೋರಿಸಿ ಬೆದರಿಸಿ ಕಾಲ್ಕಿತ್ತಿದ್ದಾರೆ. ಈ ಸಂಬಂಧ ಗೀತಾ ಎಂಬುವರು ದೂರು ನೀಡಿದ‌ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಇನ್ ಸ್ಪೆಕ್ಟರ್ ಎಂ.ಪ್ರವೀಣ್ ನೇತೃತ್ವದ ತಂಡ ಕಾರ್ಯಪ್ರವೃತ್ತರಾಗಿದೆ. ಆರೋಪಿ‌ ನೀಲಿ ಬಣ್ಣದ ಶರ್ಟ್ ಧರಿಸಿರಿರುವುದಾಗಿ ಮಹಿಳೆ ನೀಡಿದ ಸುಳಿವಿನ ಮೇರೆಗೆ ಅಂದು ರಾತ್ರಿ ಏರಿಯಾ ಹೊಯ್ಸಳ ಹಾಗೂ ಗಸ್ತು ಪೊಲೀಸರಿಗೆ ಇನ್ ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ..‌ಈ ವೇಳೆ ಅನುಮಾನಸ್ಪಾದವಾಗಿ ಓಡಾಡುತ್ತಿದ್ದ ಆರೋಪಿಯು ಪೊಲೀಸ್ ಜೀಪ್ ಕಂಡು ಕೂಡಲೇ ಓಡಿಹೋಗಲು ಮುಂದಾಗಿದ್ದಾನೆ.. ಆತನನ್ನು ಬೆನ್ನಟ್ಟಿ ಕೂಡಲೇ ಆತನನ್ನು ಬಂಧಿಸಿದ್ದಾರೆ.

ಹಣಕ್ಕಾಗಿ ಅಪರಾಧಕ್ಕಿಳಿದ ಬೇಕರಿ ಕೆಲಸಗಾರರು 

ಸದ್ಯದ ಮಾಹಿತಿ ಪ್ರಕಾರ ಈತನ ವಿರುದ್ಧ ಯಾವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಮನೆ ಮಾಲೀಕಿ ಗೀತಾಳನ್ನು ಎದುರಿಸಲು 8 ಕೊಲೆ ಮಾಡಿರುವೆ ಎಂದ ಸುಳ್ಳು ಹೇಳಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ....ಬೇಕರಿಯಲ್ಲಿ ಕೆಲಸ ಮಾಟ್ತಿದ್ದ ಇಬ್ಬರಿಗೂ ಹಣ ಸಾಕಾಗ್ತಿರಲಿಲ್ಲ. ಕಳ್ಳತನ ಮಾಡಿದ್ರೆ ಹೆಚ್ಚು ಹಣ ಸಿಗುತ್ತೆ ಎಂದು ಪ್ಲಾನ್ ಮಾಡಿ ದುಷ್ಕೃತ್ಯ ನಡೆಸಿದ್ದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Husband Suicide: ಊರಿಗೆ ಹೋಗುವ ವಿಚಾರವಾಗಿ ಹೆಂಡತಿ ಜೊತೆ ಜಗಳ; ಮನನೊಂದು ನೇಣಿಗೆ ಶರಣಾದ ಗಂಡ!

ಇನ್ನು ಇಂದು (ನ.13) ಬೆಂಗಳೂರಿನ ನಾಗವಾರ ರಿಂಗ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ಮುಕ್ತ ಎಂಬ ಸಂಘಟನೆಯ ಉಪಾಧ್ಯಕ್ಷ ಶ್ರೀಧರ್​​ ಎಂಬುವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ನಡುರಸ್ತೆಯಲ್ಲಿ ಭೀಕರವಾಗಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ. ಐದು ಜನರ ಗುಂಪಿನಿಂದ ಶ್ರೀಧರ್ ಕೊಲೆ ಆಗಿದೆ. ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿದ ಪರಿಣಾಮ ಸ್ಥಳದಲ್ಲೇ ಶ್ರೀಧರ್​ ಪ್ರಾಣ ಬಿಟ್ಟಿದ್ದಾರೆ. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಶ್ರೀಧರ್​ ಬಾಣಸವಾಡಿಯ ರಾಮಸ್ವಾಮಿಪಾಳ್ಯ ನಿವಾಸಿ. ಮಾನವ ಹಕ್ಕು ಮತ್ತು ಭ್ರಷ್ಟಾಚಾರ ಮುಕ್ತ ಎಂಬ ಸಂಘಟನೆಯ ಉಪಾಧ್ಯಕ್ಷರಾಗಿದ್ದರು. ಶ್ರೀಧರ್​ ನಾಗವಾರ ಬಳಿ ಬಂದಿದ್ದ ವೇಳೆ ಹಂತಕರ ಗ್ಯಾಂಗ್​ ಅಡ್ಯಾಕ್​​ ಮಾಡಿದೆ.
Published by:Kavya V
First published: