Hijab Row: ಒಗ್ಗಟ್ಟಾಗಿ ಶಾಂತಿ ಮಂತ್ರ ಪಠಿಸಿದ ಸ್ವಾಮೀಜಿಗಳು, ಮೌಲ್ವಿಗಳು.. ಹಿಜಾಬ್ ಬಗ್ಗೆ ಹೇಳಿದ್ದಿಷ್ಟು..

ಬೆಂಗಳೂರು ಕರಗ ಹಿಂದೂ, ಮುಸ್ಲಿಮರ ಏಕತೆಯ ಹಬ್ಬ. ಒಂದೇ ಸತ್ಯವನ್ನೂ ನೂರಾರು ರೀತಿಯಲ್ಲಿ ವರ್ಣಿಸಲಾಗ್ತಿದೆ. ನಮ್ಮ ರಾಜ್ಯದಲ್ಲೂ ಸಾಮರಸ್ಯ, ಏಕತೆ, ವೈವಿಧ್ಯತೆಯನ್ನ ನಾವು ನೋಡ್ಕೊಂಡು ಬಂದಿದ್ದೇವೆ. ಕರಗ ಮೆರವಣಿಯಲ್ಲೂ ಬರುವ ವಿಜಯ ಕುಮಾರರಿಗೆ ಎಲ್ಲವೂ ಪಾನಕ ಹಂಚುತ್ತಾರೆ. ಎಲ್ಲಾ ಧರ್ಮದವರೂ ಪ್ರದಕ್ಷಿಣೆ ಕೂಡ ಹಾಕ್ತಾರೆ. ಎಲ್ಲರ ಜೊತೆ ಪ್ರೀತಿಯಿಂದ ಬಾಳಬೇಕು ಅನ್ನೋದೇ ನಮ್ಮ ಸಂದೇಶ.

ಧಾರ್ಮಿಕ ಮುಖಂಡರ ಸುದ್ದಿಗೋಷ್ಠಿ

ಧಾರ್ಮಿಕ ಮುಖಂಡರ ಸುದ್ದಿಗೋಷ್ಠಿ

  • Share this:
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್​ ಹಾಗೂ ಕೇಸರಿ ಶಾಲು ಸಂಘರ್ಷ (Hijab vs Saffron Shawl) ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಮುಖಂಡರು (Religious Leaders) ಒಟ್ಟಾಗಿ ಸುದ್ದಿಗೋಷ್ಠಿ (Press Meet) ನಡೆಸಿದರು. ಸ್ವಾಮೀಜಿಗಳು, ಮೌಲ್ವಿಗಳು ಒಂದೇ ವೇದಿಕೆಗೆ ಆಗಮಿಸಿ ಪ್ರಸಕ್ತ ಪರಿಸ್ಥಿತಿಯಲ್ಲಿ ಸೌಹಾರ್ದತೆ ಮೂಡಿಸುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮೊದಲಿಗೆ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಸರ್ವಧರ್ಮ ಧಾರ್ಮಿಕ ಮುಖಂಡರು ಈ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ. ಅನೇಕ ಸಂದರ್ಭದಲ್ಲಿ ಸಂಕಷ್ಟ ಎದುರಾಗುತ್ತದೆ. ಕೊರೊನಾ ಎಂಬ ಸಂಕಷ್ಟ ಬಂತು. ಆ ಸಮಯದಲ್ಲಿ ನಾವು ಜನಸಾಮಾನ್ಯರ ಬಳಿ ಹೋಗಿ ಕಿಟ್, ಔಷಧಿ ವಿತರಣೆ ಮಾಡಿದ್ವಿ. ಅನೇಕ ಮೌಲ್ವಿಗಳು ಇಲ್ಲಿ ಸೇರಿದ್ದಾರೆ. ತಿಳುವಳಿಕೆ ಉಳ್ಳವರಾಗಿ ಸೂತ್ರವನ್ನ ಕಂಡುಕೊಳ್ಳಬೇಕು. ಧಾರ್ಮಿಕ ಸಾಮರಸ್ಯವನ್ನ ಕಾಪಾಡಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: Hijab ಪರವಾಗಿ ಪ್ರತಿಭಟನೆ ನಡೆಸಿದ್ದ 58 ವಿದ್ಯಾರ್ಥಿನಿಯರು ಕಾಲೇಜಿನಿಂದ ಅಮಾನತು

ಸಂಘರ್ಷವನ್ನ ತಗ್ಗಿಸೋಕೆ ಪ್ರಯತ್ನ ಮಾಡ್ತೀವಿ

ಇವತ್ತು ಮಾನವ ನಿರ್ಮಿತವಾದ ಸಂಕೀರ್ಣತೆ ಎದುರಾಗಿದೆ. ನಾವೆಲ್ಲರೂ ಶಾಂತಿ, ಸಾಮರಸ್ಯದ ಪರವಾಗಿ ಇದ್ದೇವೆ. ಕೋರ್ಟ್ ನ ಎಲ್ಲಾ ಆದೇಶಗಳನ್ನ ನಾವು ಪಾಲಿಸುತ್ತೇವೆ. ಸದ್ಯ ಎದುರಾಗಿರುವ ಡ್ರೆಸ್ ಕೋಡ್ ಸಮಸ್ಯೆ, ಸಂಘರ್ಷವನ್ನ ತಗ್ಗಿಸೋಕೆ ಪ್ರಯತ್ನ ಮಾಡ್ತೀವಿ. ಎಲ್ಲಾ ಧರ್ಮದವರ ಅಭಿಪ್ರಾಯಗಳನ್ನ ಹಂಚಿಕೊಳ್ತೀವಿ. ನಮ್ಮ ಕಡೆಯಿಂದ ಶಾಂತಿ ತರೋಕೆ ಸಾಧ್ಯವೇ ಅನ್ನೋ ವಿಚಾರ ಚರ್ಚೆ ಮಾಡ್ತೀವಿ ಎಂದರು.

ಜಗದ್ಗುರು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ನ್ಯಾಯಾಲಯದ ತೀರ್ಪು ಬರುವವರೆಗೂ ಶಾಂತಿ ಕಾಪಾಡಬೇಕು. ಶಾಲೆಯ ಆವರಣದಲ್ಲಿ ಶಾಂತಿ ಕಾಪಾಡೋದು ಮುಖ್ಯ. ಶಾಲೆ ಅಂದ್ರೆ ಸ್ನೇಹ ಇರುತ್ತೆ, ಆದ್ರೆ ಈಗ ಮುಖ ನೋಡೋಕು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಕೋರ್ಟ್ ಆದೇಶ ಬರೋವರೆಗೂ ಶಾಂತಿಯಿಂದ ಇರಬೇಕು ಎಂದರು.

ಏನೇ ಆದರೂ ಶಿಕ್ಷಣಕ್ಕೆ ಧಕ್ಕೆಯಾಗಬಾರದು

ಅನೇಕ ಧರ್ಮಗಳಿಗೆ ಆಶ್ರಯ ನೀಡಿರೋ ನೆಲ ಇದು. ಏನೇ ಆದ್ರೂ ಇದು ನಮ್ಮ ಭಾರತ.. ನಮ್ಮ ಧರ್ಮವನ್ನ ಪಾಲಿಸಿ ಎಲ್ಲರ ಧರ್ಮದವರನ್ನ ಗೌರವಿಸೋದು ನಮ್ಮ ಆಚರಣೆ. ನಮಗೆ ಭರವಸೆ ಇದೆ.. ಎಲ್ಲಾ ಒಳ್ಳೆಯದಾಗುತ್ತದೆ. ನಾವೆಲ್ಲರೂ ಸಹೋದರರಾಗಿ ಬಾಳ್ತಾ ಇದ್ದೀವಿ. ನಾವು ಶಾಂತಿಯುವಾಗಿ ವರ್ತಿಸೋದು ಮುಖ್ಯ. ನ್ಯಾಯಾಲಯದ ಎಲ್ಲಾ ತೀರ್ಪುಗಳನ್ನ ನಾವು ಒಪ್ಪಬೇಕು. ಏನೇ ಆದರೂ ಶಿಕ್ಷಣಕ್ಕೆ ಧಕ್ಕೆಯಾಗಬಾರದು. ಗುರುಗಳ ಹೆಜ್ಜೆ ಕೂಡ ಪ್ರಮುಖವಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: Hijab High Court Hearing: ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ: ಹೈಕೋರ್ಟ್​ನಲ್ಲಿ ಎಜಿ ವಾದ

ಬೆಂಗಳೂರು ಕರಗ ಏಕತೆಯ ಹಬ್ಬ

ಮೌಲಾನ ಸುಲೇಮಾನ್ ಖಾನ್  ಮಾತನಾಡಿ, ಈ ಹಿಜಾಬ್ ಕೇಸ್ ರಾಜ್ಯದಲ್ಲಿ ವಾತಾವರಣವನ್ನು ಹಾಳು ಮಾಡಿದೆ. ಹಾಗಾಗಿ ನಾವು ಇದರ ಬಗ್ಗೆ ಗಮನ ಕೊಡಬೇಕು ಎಂದರು. ಬೆಂಗಳೂರು ಕರಗ ಹಿಂದೂ, ಮುಸ್ಲಿಮರ ಏಕತೆಯ ಹಬ್ಬ. ಒಂದೇ ಸತ್ಯವನ್ನೂ ನೂರಾರು ರೀತಿಯಲ್ಲಿ ವರ್ಣಿಸಲಾಗ್ತಿದೆ. ನಮ್ಮ ರಾಜ್ಯದಲ್ಲೂ ಸಾಮರಸ್ಯ, ಏಕತೆ, ವೈವಿಧ್ಯತೆಯನ್ನ ನಾವು ನೋಡ್ಕೊಂಡು ಬಂದಿದ್ದೇವೆ. ಕರಗ ಮೆರವಣಿಯಲ್ಲೂ ಬರುವ ವಿಜಯ ಕುಮಾರರಿಗೆ ಎಲ್ಲವೂ ಪಾನಕ ಹಂಚುತ್ತಾರೆ. ಎಲ್ಲಾ ಧರ್ಮದವರೂ ಪ್ರದಕ್ಷಿಣೆ ಕೂಡ ಹಾಕ್ತಾರೆ. ಎಲ್ಲರ ಜೊತೆ ಪ್ರೀತಿಯಿಂದ ಬಾಳಬೇಕು ಅನ್ನೋದೇ ನಮ್ಮ ಸಂದೇಶ. ನಮ್ಮ ದೇಶದಲ್ಲಿ ಭಾವೈಕ್ಯತೆ, ಸಾಮರಸ್ಯ, ಏಕತೆ ಎಲ್ಲವೂ ಇದೆ. ನಾವು ನಮ್ಮ ಜವಾಬ್ದಾರಿಯನ್ನ ಉಳಿಸಿಕೊಂಡಿದ್ದೇವೆ. ಫೈನಲ್ ಆರ್ಡರ್ ಕೋರ್ಟ್ ನಿಂದ ಇನ್ನೂ ಬಂದಿಲ್ಲ. ಸರ್ಕಾರ ಮತ್ತು ರಾಜಕೀಯ ವ್ಯಕ್ತಿಗಳು ಈ ವಿವಾದವನ್ನ ಬೆಳೆಯೋಕೆ ಬಿಡಬಾರದು. ಕ್ಲಾಸ್ ರೂಂಗೆ ಹಿಜಾಬ್ ಹಾಕಬಾರದು ಅಂಥ ಹೇಳಿದ್ದಾರೆ. ಅದನ್ನ ವಿದ್ಯಾರ್ಥಿನಿಯರು, ಪೋಷಕರು ಅರ್ಥ ಮಾಡಿಕೊಳ್ಳಬೇಕು. ಈಗಾಗಲೇ ನ್ಯಾಯಾಲಯ ಏನ್ ಹೇಳಿದೆ ಅದನ್ನ ಫಾಲೋ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸುನ್ನಿ ಜಮಾತ್ ಅಧ್ಯಕ್ಷರಾದ ಸೈಯದ್ ಮೊಹಮ್ಮದ್ ತನ್ವೀರ್ ಹಾಶ್ಮಿಪೀರ, ನಾಸೆ ಫೌಂಡೇಶನ್ ಅಧ್ಯಕ್ಷರಾದ ಮೌಲಾನ ಶಬ್ಬೀರ್ ನಖ್ವಿ, ಮೌಲಾನ ಮಕ್ಸೂದ್  ಇಮ್ರಾನ್ ಸಾಹೇಮ್‌ ಸೇರಿದಂತೆ 10ಕ್ಕೂ ಹೆಚ್ಚು ಧಾರ್ಮಿಕ ಮುಖಂಡರು ಭಾಗಿಯಾಗಿದ್ದರು.
Published by:Kavya V
First published: