Ayudha Pooja Special: ಮಲ್ಲಿಗೆ ₹1000, ಕನಕಾಂಬರ ₹1500.. ಆಯುಧ ಪೂಜೆಗೆ ಬೆಲೆಯೇರಿಕೆ ಬಿಸಿ

Fruits And Flower Price Hike: ಹೂವುಗಳ ಬೆಲೆ ಒಂದೆಡೆ ಏರಿಯಾಗಿದ್ದರೆ ಹಣ್ಣುಗಳ ಬೆಲೆ ಸಹ ಹೆಚ್ಚಳವಾಗಿದೆ. 80 ರೂ ಇದ್ದ ಸೇಬುಹಣ್ಣು 120ರೂಪಾಯಿ ಆಗಿದ್ದು, ಕಿತ್ತಳೆ 60 ರಿಂದ 80ರೂ ಆಗಿದೆ. ಹಾಗೆಯೇ ಮೊಸಂಬಿ 70 ರಿಂದ  100ರೂಗೆ ಮಾರಾಟ ಮಾಡಲಾಗುತ್ತಿದೆ.

ಕೆ.ಆರ್. ಮಾರುಕಟ್ಟೆಯಲ್ಲಿ ಹೂವಿನ ಖರೀದಿಯಲ್ಲಿ ನಿರತರಾಗಿರುವ ಜನ

ಕೆ.ಆರ್. ಮಾರುಕಟ್ಟೆಯಲ್ಲಿ ಹೂವಿನ ಖರೀದಿಯಲ್ಲಿ ನಿರತರಾಗಿರುವ ಜನ

  • Share this:
ಆಯುಧ ಪೂಜೆ (Ayudha Pooja)ಮತ್ತು ವಿಜಯ ದಶಮಿ(Vijaya Dashami) ಹಬ್ಬಕ್ಕಾಗಿ ನಗರದಲ್ಲಿ ತಯಾರಿ ಭರದಿಂದ ಸಾಗಿದ್ದು, ಜನರು ಸಂಭ್ರಮ ಸಡಗರದಿಂದ ಈಗಾಗಲೇ ಹಬ್ಬದ ಆಚರಣೆಯನ್ನು ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಸಹ ಜನರು ಹಬ್ಬದ ಹಿನ್ನಲೆ ಹೂವಿನ(Flowers) ಖರೀದಿ ಮಾಡುತ್ತಿದ್ದು, ನಗರದ  ಕೆ.ಆರ್ ಮಾರುಕಟ್ಟೆ(K.R.Market) ಸೇರಿದಂತೆ ಮಲ್ಲೇಶ್ವರಂನಲ್ಲಿ ಬೆಳ್ಳಂಬೆಳಿಗ್ಗೆ ವ್ಯಾಪಾರ ಜೋರಾಗಿದೆ. ಹೂವು ಖರೀದಿ ಮಾಡಲು ಜನ ಜಾತ್ರೆಯಂತೆ ಸೇರಿದ್ದು, ರಸ್ತೆಯ ಬದಿಯಲ್ಲಿಯೇ ಹಣ್ಣು, ಹೂವು ಮಾರಾಟ ಮಾಡಲಾಗುತ್ತಿದೆ.  ಇನ್ನು ಹಬ್ಬದ ಹಿನ್ನಲೆ ಹೂವಿನ ಬೆಲೆಗಳು ಗಗನಕ್ಕೇರಿದ್ದು ಕೆ. ಆರ್. ಮಾರುಕಟ್ಟೆಯಲ್ಲಿ ಭರ್ಜರಿ ಜನ ಸೇರಿದ್ದಾರೆ.

ಇನ್ನು ಕನಕಾಂಬರ ಹೂವಿನ ಬೆಲೆ  ಹಿಂದೆ 600 ರೂ ಇತ್ತು ಇಂದು 1500ರೂಗೆ ಏರಿಕಾಗಿದೆ. ಹಾಗೆಯೇ  ದುಂಡುಮಲ್ಲಿಗೆ 400 ಯಿಂದ 1000ರೂ ಹೆಚ್ಚಾಗಿದೆ. ಇನ್ನು  200 ರೂಗೆ ಮಾರಾಟ ಮಾಡಲಾಗುತ್ತಿದ್ದ ಕಾಕಡ ಬೆಲೆ ಈಗ 500 ರೂ ಆಗಿದೆ. ಜಾಜಿ ಮಲ್ಲಿಗೆ ಸಹ ಹೆಚ್ಚಳವಾಗಿದ್ದು, 150 ರೂ ನಿಂದ 200ರೂವರೆಗೆ ಮಾರಲಾಗುತ್ತಿದೆ. 60 ರೂ ಇದ್ದ ಸೇವಂತಿಗೆ 150 ರೂ ಆಗಿದ್ದು, ಸುಗಂಧರಾಜ 100 ರಿಂದ 300 ರೂಗೆ ಏರಿಕೆಯಾಗಿದೆ. 150 ರೂಗಳಿಗೆ ಮಾರಾಟವಾಗುತ್ತಿದ್ದ ಗುಲಾಭಿಯನ್ನು 200 ರೂ ಮಾರಾಟ ಮಾಡಲಾಗುತ್ತಿದೆ. ಇನ್ನು ತುಳಸಿ ಒಂದು ಮಾರಿಗೆ 50 ರೂ ಇದ್ದರೆ, ಒಂದು ಕಟ್ಟು ಮಾವಿನ ಎಲೆಗೆ 40 ರೂ ಇದೆ.ಹಬ್ಬದ ಕಾರಣ ಹೂವಿನ ಬೆಲೆಯಲ್ಲಿ ಇಷ್ಟೆಲ್ಲ ಏರಿಕೆಯಾಗಿದ್ದರೂ ಸಹ ಜನ ಖರೀದಿ ಮಾಡುವುದನ್ನ ಕಡಿಮೆ ಮಾಡಿಲ್ಲ.

ಇದನ್ನೂ ಓದಿ: ಆಯುಧ ಪೂಜೆಯ ಮಹತ್ವ ಹಾಗೂ ಪೂಜಾ ವಿಧಾನ ಇಲ್ಲಿದೆ..

ಹೂವುಗಳ ಬೆಲೆ ಒಂದೆಡೆ ಏರಿಯಾಗಿದ್ದರೆ ಹಣ್ಣುಗಳ ಬೆಲೆ ಸಹ ಹೆಚ್ಚಳವಾಗಿದೆ. 80 ರೂ ಇದ್ದ ಸೇಬುಹಣ್ಣು 120ರೂಪಾಯಿ ಆಗಿದ್ದು, ಕಿತ್ತಳೆ 60 ರಿಂದ 80ರೂ ಆಗಿದೆ. ಹಾಗೆಯೇ
ಮೊಸಂಬಿ 70 ರಿಂದ  100ರೂಗೆ ಮಾರಾಟ ಮಾಡಲಾಗುತ್ತಿದ್ದು, ಬಾಳೆಹಣ್ಣು50 ರಿಂದ 80ರೂಗೆ ಹೆಚ್ಚಾಗಿದೆ. ಈ ಬಾರಿ  ಅನಾನಸ್ ಹಣ್ಣು ಸಹ ಒಂದು ಹಣ್ನಿಗೆ 30 ರೂಪಾಯಿ ಇದ್ದದ್ದು 60 ರು ಆಗಿದ್ದು, ದ್ರಾಕ್ಷಿ ದಿಢೀರ್ ಎಂದು 90 ರಿಂದ 120ಕ್ಕೆ ಏರಿಕೆಯಾಗಿದೆ.

ಇದು ಕೆ.ಆರ್ ಮಾರುಕಟ್ಟೆಯ ಕತೆಯಾದರೇ, ಮಲ್ಲೇಶ್ವರಂನಲ್ಲಿ ಹೂವಿನ ಬೆಲೆಗಳು ಇನ್ನು ಹೆಚ್ಚಿವೆ. ಮಲ್ಲೇಶ್ವರಂನ ಹೂವಿನ ಮಾರುಕಟ್ಟೆಯಲ್ಲಿ  ಸಹ ಜನರು ಭರ್ಜರಿ ವ್ಯಾಪಾರ ಮಾಡುತ್ತಿದ್ದು, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಿನ್ನೆಯಿಂದ  ಗ್ರಾಹಕರು ಹೆಚ್ಚಾಗಿದ್ದಾರೆ.

ಇದೆಲ್ಲದರ ನಡುವೆ ವಾಹನಗಳ ದೃಷ್ಟಿ ತೆಗೆಯಲು ಬೇಕಾದ ಬೂದುಕುಂಬಳ ಕಾಯಿಗೆ ಈ ಬಾರಿ ಡಿಮ್ಯಾಂಡ್ ಕಮ್ಮಿಯಾಗಿದ್ದು, ಬೆಲೆಯೂ ಕಮ್ಮಿ ಆಗಿದೆ. ಒಂದು  ಕೆ.ಜಿ ಬೂದುಕುಂಬಳ 30 ರೂಪಾಯಿಗೆ ಮಾರಾಟ ಮಾಡಲಾಗುತ್ತಿದ್ದು, ಬಾಳೆಕಂಬ ಒಂದು ಜೊತೆಗೆ 50 ರಿಂದ 100 ರೂ ಹಾಗೂ ನಿಂಬೆ ಹಣ್ಣು ಒಂದಕ್ಕೆ 5 ರಿಂದ 10 ರೂಪಾಯಿಯಂತೆ ಮಾರಲಾಗುತ್ತಿದೆ.

ಇದನ್ನೂ ಓದಿ: ಮಹಾಗೌರಿ ಪೂಜೆಯಿಂದ ಬದುಕಿನ ಕಷ್ಟಗಳನ್ನು ನಿವಾರಿಸಿ- ದೇವಿಯ ಪೂಜಾ ವಿಧಿ-ವಿಧಾನ ಇಲ್ಲಿದೆ

ಇಂದು ಒಂಬತ್ತನೇಯ ದಿನ. ನವಮಿ ಅಥವಾ ಆಯುಧಪೂಜೆ  ಎಂದು ಇಂದು ಆಚರಣೆ ಮಾಡಲಾಗುತ್ತದೆ. ಈ ದಿನ ಹಿಂದೂಗಳಲ್ಲಿ ವಿಶೇಷವಾದ ಆಚರಣೆಗಳನ್ನು ಮಾಡಲಾಗುತ್ತದೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ನವಮಿಯ ದಿನ. ಇಂದು ಆಯುಧಗಳನ್ನು ಪೂಜೆ ಮಾಡುವ ದಿನ. ಅಲ್ಲದೇ ನಾಳೆ ನವರಾತ್ರಿಯ ಕೊನೆ ದಿನ ವಿಜಯ ದಶಮಿ. ಹಾಗಾಗಿ ಜನರು ಬೆಲೆ ಎರಿಕೆಯ ಬಿಸಿಯ ನಡುವೆಯೂ ಹೂವು-ಹಣ್ಣು ಖರೀದಿಗೆ ಮುಗಿಬಿದ್ದಿದ್ದಾರೆ.
Published by:Sandhya M
First published: