Hijab Row: ಸಿಖ್ ವಿದ್ಯಾರ್ಥಿನಿಗೆ ಧರಿಸಿದ ಟರ್ಬನ್ ತೆಗೆಯುವಂತೆ ಹೇಳಿದ ಬೆಂಗಳೂರಿನ ಕಾಲೇಜು

ಬೆಂಗಳೂರಿನ ವಸಂತ ನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು, 17 ವರ್ಷದ ಸಿಖ್ ವಿದ್ಯಾರ್ಥಿನಿ(Sikh Student)ಗೆ ಧರಿಸಿರುವ ದಸ್ತಾರ್ (Dastar / Turban) ತೆಗೆಯುವಂತೆ ಸೂಚನೆ ನೀಡಿದ್ದಾರೆ. ಕಾಲೇಜು ಆಡಳಿತ ಮಂಡಳಿ  ವಿದ್ಯಾರ್ಥಿನಿಗೆ ಕರ್ನಾಟಕ ಹೈಕೋರ್ಟ್ ಆದೇಶದ ಬಗ್ಗೆ ತಿಳಿ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸದ್ಯ ರಾಜ್ಯದಲ್ಲಿ ಹಿಜಾಬ್ ಸಂಘರ್ಷದ (Hijab Controversy) ಪ್ರಕರಣ ಕರ್ನಾಟಕ ಹೈಕೋರ್ಟ್ (Karnataka High court) ನಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಫೆಬ್ರವರಿ 10 ರಂದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆದೇಶದ ಪ್ರಕಾರ, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಧಾರ್ಮಿಕ ಉಡುಪು (Religion Cloths) ಧರಿಸದಂತೆ ಆದೇಶ ನೀಡಿದೆ. ಈ ಹಿನ್ನೆಲೆ ಹಿಜಾಬ್ ಧರಿಸಿರುವ ವಿದ್ಯಾರ್ಥಿನಿ(Students)ಯರು ಕಾಲೇಜಿನಿಂದ ಹೊರಗುಳಿದಿದ್ದಾರೆ. ಇದೀಗ ಬೆಂಗಳೂರಿನ ವಸಂತ ನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು, 17 ವರ್ಷದ ಸಿಖ್ ವಿದ್ಯಾರ್ಥಿನಿ(Sikh Student)ಗೆ ಧರಿಸಿರುವ ದಸ್ತಾರ್ (Dastar / Turban) ತೆಗೆಯುವಂತೆ ಸೂಚನೆ ನೀಡಿದ್ದಾರೆ. ಕಾಲೇಜು ಆಡಳಿತ ಮಂಡಳಿ  ವಿದ್ಯಾರ್ಥಿನಿಗೆ ಕರ್ನಾಟಕ ಹೈಕೋರ್ಟ್ ಆದೇಶದ ಬಗ್ಗೆ ತಿಳಿ ಹೇಳಿದ್ದಾರೆ.

ಕಾಲೇಜಿನಲ್ಲಿ ನಡೆದಿದ್ದು ಏನು?

ಅಂದು ಕಾಲೇಜಿನಲ್ಲಿ ಏನು ನಡೆದಿದೆ ಎಂಬುದನ್ನು ವಿದ್ಯಾರ್ಥಿನಿ ತಂದೆ ಗುರು ಚರಣ್ ಸಿಂಗ್ ಟೈಮ್ಸ್ ಆಫ್ ಇಂಡಿಯಾಗೆ ಹೇಳಿದೆ. ನನ್ನ ಮಗಳು ದ್ವಿತೀಯ ಪಿಯು ವರ್ಗದಲ್ಲಿ ಓದುತ್ತಿದ್ದು, ಕಾಲೇಜಿನ ಯೂನಿಯನ್ ಅಧ್ಯಕ್ಷೆಯಾಗಿದ್ದಾಳೆ. ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿಯನ್ನು ಕರೆದು ಇನ್ಮುಂದೆ ಟರ್ಬೈನ್ ತೆಗೆದು ಬರುವಂತೆ ಹೇಳಿದ್ದಾರೆ. ಆದ್ರೆ ಮಗಳು ಅಮೃತಧಾರಿ ಸಿಖ್ ಆಗಿರೋದರಿಂದ ಆಕೆ ಒಪ್ಪಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕ ಸರ್ಕಾರ ಸಮವಸ್ತ್ರ ಸಂಹಿತೆ  ಕಡ್ಡಾಯ ನಿಯಮವನ್ನು ತಂದಿದೆ. ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳು ಪರಿಶೀಲಿಸಿ ಬರಮಾಡಿಕೊಳ್ಳುತ್ತಿರುವ ವಿಚಾರ ನಮ್ಮ ಗಮನಕ್ಕೂ ಬಂದಿದೆ. ನನ್ನ ಮಗಳಿಗೂ ದಸ್ತಾರ ತೆಗೆಯುವಂತೆ ಹೇಳಲಾಗಿದೆ. ಇದು ಸಿಖ್ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಗುರುಚರಣ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:  Hijab Hearing: ಆಧಾರ್ ಕಾರ್ಡ್​​​ನಲ್ಲಿ ಹಿಜಾಬ್ ಧರಿಸದ ಫೋಟೋ ಇದೆ: ಹೈಕೋರ್ಟ್​​ನಲ್ಲಿ ವಾದ-ಪ್ರತಿವಾದ

ತಮ್ಮ ನಂಬಿಕೆಯ ಭಾಗವಾಗಿ ಸ್ಕಾರ್ಫ್ / ದುಪಟ್ಟಾದಿಂದ ತಲೆಯನ್ನು ಮುಚ್ಚಲು ಬಯಸುವ ಮುಸ್ಲಿಂ ಹುಡುಗಿಯರು/ಮಹಿಳೆಯರ ಪರವಾಗಿ ನಾವು ಸಹ ನಿಲ್ಲುತ್ತೇಚೆ. ನಮ್ಮ ದೇಶದಲ್ಲಿ ಈಗಾಗಲೇ ಆಚರಣೆಯಲ್ಲಿರುವಂತೆ ಅವರಿಗೆ ಅವಕಾಶ ನೀಡುವಂತೆ ಅಧಿಕಾರಿಗಳನ್ನು ವಿನಂತಿಸುತ್ತೇವೆ ಎಂದು ಸಿಂಗ್ ಹೇಳಿದರು.

ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ

ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಲು ನಮ್ಮ ವಿರೋಧವಿಲ್ಲ. ಸದ್ಯ ನಾವು ಕರ್ನಾಟಕ ಹೈಕೋರ್ಟ್ ಆದೇಶ ಪಾಲನೆ ಮಾಡುತ್ತಿದ್ದೇವೆ. ಫೆಬ್ರವರಿ 16ರಂದು ಕಾಲೇಜು ಆರಂಭಗೊಂಡಾಗ ಎಲ್ಲ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಆದೇಶದ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ.



ಮಂಗಳವಾರ ಸ್ಕಾರ್ಫ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಕರೆಸಿ, ನ್ಯಾಯಾಲಯದ ಆದೇಶದ ಬಗ್ಗೆ ಹೇಳಲಾಗಿದೆ. ಈ ವೇಳೆ ವಿದ್ಯಾರ್ಥಿನಿಯರು ಸಿಖ್ ಧಾರ್ಮಿಕ ಉಡುಪಿಗೆ ಅನುಮತಿ ನೀಡಕೂಡದು ಎಂದು ಒತ್ತಾಯಿಸಿದರು. ಈ ಸಂಬಂಧ ಸಿಖ್ ವಿದ್ಯಾರ್ಥಿನಿಗೆ ವಿಷಯ ತಿಳಿಸಿ ಮೇಲ್ ಮಾಡಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.

ಮೇಲ್ ನಲ್ಲಿ ಕಾಲೇಜು ಹೇಳಿದ್ದೇನು?

ನಾವು ಅಂತರ್ಗತ ಸಮಾಜವನ್ನು ನಂಬುತ್ತೇವೆ ಮತ್ತು ಎಲ್ಲಾ ಧಾರ್ಮಿಕ ಆಚರಣೆಗಳನ್ನು ಗೌರವಿಸುತ್ತೇವೆ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದೇವೆ. ಕಾಲೇಜಿನ ದೃಷ್ಟಿಕೋನ ಮತ್ತು ಧ್ಯೇಯೋದ್ದೇಶಗಳ ಪ್ರಕಾರ, ನಾವು ಅಂತರ್-ಧರ್ಮೀಯ ಸಾಮರಸ್ಯವನ್ನು ಅನುಸರಿಸುತ್ತೇವೆ ಮತ್ತು ಸಕ್ರಿಯ ಅಂತರ್-ಧರ್ಮೀಯ ಸಂಘವನ್ನು ಹೊಂದಿದ್ದೇವೆ ಎಂದು ಕಾಲೇಜು ಹೇಳಿಕೊಂಡಿದೆ.

ಇದನ್ನೂ ಓದಿ:  ಹಿಜಾಬ್, ಕೇಸರಿ ಶಾಲು, ಶಿವಮೊಗ್ಗ ಕೊಲೆಯ ಟೂಲ್ ಕಿಟ್ ರೂವಾರಿಗಳು ಯಾರು? HD Kumaraswamy ಪ್ರಶ್ನೆ 

ಗುರುಚರಣ್ ಸಿಂಗ್ ಕಳೆದ 17 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಐಟಿ ವೃತ್ತಿಪರರಾಗಿ ಕೆಲಸ ಮಾಡಿಕೊಂಡಿದ್ದಾರೆ. ದಸ್ತಾರ್ (ಟರ್ಬನ್) ಸಿಖ್ (ಪುರುಷರು ಮತ್ತು ಮಹಿಳೆಯರು) ಧರಿಸುವಿಕೆ ನಮ್ಮ ಐದು ಕಕ್ಕರ್ ಗಳಲ್ಲಿ ಒಂದಾಗಿದೆ. ಈ ದೇಹವು ಹತ್ತನೇ ಗುರು ಗೋಬಿಂದ್ ಸಿಂಗ್ ಅವರು ನೀಡಿದ ಕಾಣಿಕೆ ಎಂದು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ.
Published by:Mahmadrafik K
First published: