HOME » NEWS » State » BENGALURU URBAN HIGH COURT DIRECTS STATE GOVERNMENT TO REQUEST CENTRAL GOVERNAMENT OVER VACCINE SHORTAGE KVD

ರಾಜ್ಯದಲ್ಲಿ 65.83 ಲಕ್ಷ ಜನರಿಗೆ 2ನೇ ಡೋಸ್ ನೀಡಲು ಲಸಿಕೆ ಇಲ್ಲ; ಹೈ ಕೋರ್ಟ್ ಕಳವಳ!

ಮೊದಲ ಡೋಸ್​ ಪಡೆದಿರುವ 65.83 ಲಕ್ಷ ಜನರಿಗೆ 2 ನೇ ಡೋಸ್ ನೀಡಬೇಕಿದೆ. ಆದರೆ ರಾಜ್ಯ ಸರ್ಕಾರದ ಬಳಿ 7.76 ಲಕ್ಷ ಡೋಸ್ ಮಾತ್ರವಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್​ ಸೂಚಿಸಿದೆ.

Kavya V | news18-kannada
Updated:May 6, 2021, 4:37 PM IST
ರಾಜ್ಯದಲ್ಲಿ 65.83 ಲಕ್ಷ ಜನರಿಗೆ 2ನೇ ಡೋಸ್ ನೀಡಲು ಲಸಿಕೆ ಇಲ್ಲ; ಹೈ ಕೋರ್ಟ್ ಕಳವಳ!
ಬಿಎಸ್ ಯಡಿಯೂರಪ್ಪ
  • Share this:
ಬೆಂಗಳೂರು: ಮೇ 1ರಿಂದ ವಯಸ್ಕರೆಲ್ಲರೂ ಲಸಿಕೆ ಪಡೆಯಲು ಅರ್ಹರು ಎಂದು ಕೇಂದ್ರ ಸರ್ಕಾರ ಘೋಷಿಸಿದ್ದರೂ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಾರ್ಯಕ್ರಮ ಸಾಂಕೇತಿಕವಾಗಿಯಷ್ಟೇ ಜಾರಿಯಾಗಿದೆ. ರಾಜ್ಯದಲ್ಲಿ ವ್ಯಾಕ್ಸಿನ್​​ ಕೊರತೆಯಿಂದಾಗಿ ಲಸಿಕಾ ಅಭಿಯಾನದಲ್ಲಿ ಸರ್ಕಾರ ಹಿಂದೆ ಬಿದ್ದಿದೆ. ರಾಜ್ಯದಲ್ಲಿನ ವ್ಯಾಕ್ಸಿನ್​ ಕೊರತೆ ಬಗ್ಗೆ   ಹೈ ಕೋರ್ಟ್​ ಕಳವಳ ವ್ಯಕ್ತಪಡಿಸಿದೆ. ಹೀಗಾಗಲೇ ಮೊದಲ ಡೋಸ್​ ಪಡೆದಿರುವ 65.83 ಲಕ್ಷ ಜನರಿಗೆ 2 ನೇ ಡೋಸ್ ನೀಡಬೇಕಿದೆ. ಆದರೆ ರಾಜ್ಯ ಸರ್ಕಾರದ ಬಳಿ 7.76 ಲಕ್ಷ ಡೋಸ್  ಲಸಿಕೆ ಮಾತ್ರ ಇದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್​ ಸೂಚಿಸಿದೆ.

3 ದಿನಗಳೊಳಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮನವಿಯನ್ನು ಪರಿಗಣಿಸಬೇಕು. ಸಂದಿಗ್ಧ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು. ಲಸಿಕೆ‌ ಉತ್ಪಾದಕರೊಂದಿಗೆ ಕೇಂದ್ರ ಸರ್ಕಾರ ಸಮಾಲೋಚಿಸಿ ಶೀಘ್ರ ಲಸಿಕೆ ಪೂರೈಕೆಗೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್​ ಸೂಚಿಸಿದೆ. ಇನ್ನು ಲಸಿಕೆ ಪಡೆಯಲು ಕೋವಿನ್ ಆ್ಯಪ್ ನಲ್ಲಿ ನೋಂದಣಿ ಕಡ್ಡಾಯ ಹಿನ್ನೆಲೆ ಜನರ ನೋಂದಣಿಗೆ ನೆರವಾಗಲು ಸರ್ಕಾರಕ್ಕೆ ಹೈಕೋರ್ಟ್​​ ಸೂಚನೆ ನೀಡಿತು.

ಇನ್ನು ಕರ್ನಾಟಕದಲ್ಲಿ ಕೊರೋನಾ ಪರಿಸ್ಥಿತಿ ತೀವ್ರವಾಗಿ ಹದಗೆಡತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿಯನ್ನು ಅವಲೋಕಿಸಿದರು.  ರಾಜ್ಯ ಮತ್ತು ಜಿಲ್ಲಾ ಮಟ್ಟದ ಪರಿಸ್ಥಿತಿಯ ಅವಲೋಕಿಸಿ ಔಷಧಿ ಮತ್ತು ಲಸಿಕೆಗಳು ಕೊರತೆಯಾಗದಂತೆ ಸೂಚನೆ ನೀಡಿದರು. ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯ ಒಬ್ಬ ಎಳೆಸು, ಅಮಾವಾಸ್ಯೆ ಗಿರಾಕಿ ಕಣ್ರಿ; ಡಿಕೆ ಶಿವಕುಮಾರ್ ವ್ಯಂಗ್ಯ

ಇನ್ನು ರಾಜ್ಯದಲ್ಲಿ ಕೊರೋನಾ ವಿರಾಟ ರೂಪ ತಾಳಿದೆ. ತನ್ನದೇ ದಾಖಲೆಯನ್ನು ಮುರಿದು ಕೊರೋನಾ ಹೊಸ ದಾಖಲೆ ಸೃಷ್ಟಿಸಿದೆ. ಮೊದಲ ಬಾರಿಗೆ ರಾಜ್ಯದಲ್ಲಿ ಅರ್ಧ ಲಕ್ಷ ಮಂದಿ 24 ಗಂಟೆಗಳ ಅವಧಿಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ. ನಿನ್ನೆ ಒಂದೇ ದಿನ ರಾಜ್ಯಾದ್ಯಂತ 50,112 ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಕರ್ನಾಟಕದಲ್ಲಿ ಕೊರೋನಾ ಕೇಸ್​ಗಳ ಸಂಖ್ಯೆ 17,41,053ಕ್ಕೆ ಏರಿಕೆಯಾಗಿದೆ. ಇದರಲ್ಲಿ 4,87,288 ಸಕ್ರಿಯ ಪ್ರಕರಣಗಳಿವೆ. ಇನ್ನು ಸಾವಿನ ಸಂಖ್ಯೆಯೂ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ.24 ಗಂಟೆಗಳ ಅವಧಿಯಲ್ಲಿ ರಾಜ್ಯಾದ್ಯಂತ 346 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈವರೆಗೆ ಸೋಂಕಿನಿಂದ 16,884 ಮಂದಿ ಸಾವನ್ನಪ್ಪಿದ್ದಾರೆ.
Youtube Video

ರಾಜಧಾನಿ ಬೆಂಗಳೂರಿನಲ್ಲೂ ಕೊರೋನಾ ಆರ್ಭಟ ಕೊಂಚವೂ ತಗ್ಗಿಲ್ಲ. ಬುಧವಾರ 23,106 ಪಾಸಿಟಿವ್​ ಪ್ರಕರಣಗಳು 8,63,380ಕ್ಕೆ ಏರಿಕೆಯಾಗಿದೆ. ಇನ್ನು 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 161 ಮಂದಿ ಕೊರೋನಾದಿಂದ ಪ್ರಾಣ ಬಿಟ್ಟಿದ್ದಾರೆ.  11,343 ಗುಣಮುಖರಾಗಿದ್ದು, ಸದ್ಯ ರಾಜ್ಯಾದ್ಯಂತ 3,13,314 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ಮಾತ್ರವಲ್ಲದೇ ಜಿಲ್ಲೆಗಳಲ್ಲಿ ಕೊರೋನಾ ಮರಣ ಮೃದಂಗ ಹೆಚ್ಚಾಗಿದೆ. ಬಳ್ಳಾರಿ,  ಮಂಡ್ಯದಲ್ಲಿ ಒಂದೇ ದಿನ ತಲಾ 19 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಕಲಬುರಗಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 15 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.  ತುಮಕೂರಿನಲ್ಲಿ 12 ಮಂದಿ, ಹಾಸನದಲ್ಲಿ 11 ಮಂದಿ, ಮೈಸೂರಲ್ಲಿ 10 ಮಂದಿ ಮೃತಪಟ್ಟಿದ್ದಾರೆ.
Published by: Kavya V
First published: May 6, 2021, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories