• Home
  • »
  • News
  • »
  • state
  • »
  • Heavy Rain: ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ತತ್ತರಿಸಿದ ಬೆಂಗಳೂರು! ಜನಜೀವನ ಸಂಪೂರ್ಣ ಅಸ್ತವ್ಯಸ್ತ

Heavy Rain: ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ತತ್ತರಿಸಿದ ಬೆಂಗಳೂರು! ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಶುರುವಾದ ಮಳೆ ಬಿಟ್ಟೂ ಬಿಡದಂತೆ ಸುರಿದಿದೆ. ನಿನ್ನೆ ರಾತ್ರಿ 9:45 ರ ವೇಳೆಗೆ ಒಟ್ಡಾರೆ ಬೆಂಗಳೂರಲ್ಲಿ 95 mm ಮಳೆ ಸುರಿದಿದೆ. ನಗರದ ಹಲವು ಏರಿಯಾದಲ್ಲಿ 100 mm ಗಿಂತ ಹೆಚ್ಚು ಮಳೆಯಾಗಿದೆ. ಕೇವಲ ಒಂದು ಗಂಟೆಯಲ್ಲಿ 100 mm ಹೆಚ್ಚು ಮಳೆ ಸುರಿದು ದಾಖಲೆ ನಿರ್ಮಿಸಿದೆ. ಗುಡುಗು ಸಹಿತ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿದೆ.

ಮುಂದೆ ಓದಿ ...
  • Share this:

ಬೆಂಗಳೂರು: ನಿನ್ನೆ ಮಧ್ಯಾಹ್ನದಿಂದ ಬಿಟ್ಟೂ ಬಿಡದಂತೆ ಸುರಿಯುತ್ತಿರುವ ಮಳೆಗೆ (Rain) ರಾಜಧಾನಿ ಬೆಂಗಳೂರು (Bengaluru) ಅಕ್ಷರಶಃ ತತ್ತರಿಸಿದೆ. ಬೆಂಗಳೂರಿನ ‌ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ರಾಜಧಾನಿಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ಭಾಗ ಸೇರಿದಂತೆ ಎಲ್ಲಾ ಕಡೆ ವರುಣ ಅಬ್ಬರಿಸಿದ್ದಾನೆ. ರಾತ್ರಿ (Night) ಇಡೀ ಸುರಿದ ಮಳೆಗೆ ಹಲವು ತಗ್ಗು ಪ್ರದೇಶಗಳಲ್ಲಿ ನೀರು ಹರಿದಿದೆ. ಪರಿಣಾಮ ಮನೆ (Home) ಒಳಕ್ಕೆ ಮಳೆ ನೀರು (Water) ನುಗ್ಗಿ ಸ್ಥಳೀಯ ನಿವಾಸಿಗಳು ಪರದಾಡುವಂತಾಯ್ತು. ಇನ್ನು ಬಿಬಿಎಂಪಿ ಸಹಾಯವಾಣಿಗೆ (BBMP Helpline) ಅಸಂಖ್ಯಾತ ಕರೆಗಳು ಬಂದಿದ್ದು, ಪಾಲಿಕೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ರು. ಮಳೆ ಅಬ್ಬರ ಜೋರಾಗುತ್ತಿದ್ದಂತೆ ಸಿಟಿ ರೌಂಡ್ಸ್ (City Rounds) ಹೊಡೆದ ಬಿಬಿಎಂಪಿ ಆಯುಕ್ತರು (BBMP Commissioner) ಜನರ ಸಮಸ್ಯೆ ಆಲಿಸಿದ್ರು.


ಬೆಂಗಳೂರಲ್ಲಿ ಭಾರೀ ಮಳೆ


ರಾಜಧಾನಿ ಬೆಂಗಳೂರಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಶುರುವಾದ ಮಳೆ ಬಿಟ್ಟೂ ಬಿಡದಂತೆ ಸುರಿದಿದೆ. ನಿನ್ನೆ ರಾತ್ರಿ 9:45 ರ ವೇಳೆಗೆ ಒಟ್ಡಾರೆ ಬೆಂಗಳೂರಲ್ಲಿ 95 mm ಮಳೆ ಸುರಿದಿದೆ. ನಗರದ ಹಲವು ಏರಿಯಾದಲ್ಲಿ 100 mm ಗಿಂತ ಹೆಚ್ಚು ಮಳೆಯಾಗಿದೆ. ಕೇವಲ ಒಂದು ಗಂಟೆಯಲ್ಲಿ 100 mm ಹೆಚ್ಚು ಮಳೆ ಸುರಿದು ದಾಖಲೆ ನಿರ್ಮಿಸಿದೆ. ಗುಡುಗು ಸಹಿತ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿದೆ.


ಎಲ್ಲೆಲ್ಲಿ ಎಷ್ಟೆಷ್ಟು ಮಳೆ?


ವಿದ್ಯಾಪೀಠ 113 mm ಮಳೆ, ಸಂಪಂಗಿರಾಮನಗರ 100.3 mm ಮಳೆ, ನಾಗಪುರ 100 mm ಮಳೆ, ಅಗ್ರಹಾರ ದಾಸರಹಳ್ಳಿ 97.5 mm ಮಳೆ, ಹಂಪಿ ನಗರ 93.5 mm ಮಳೆ, ರಾಜಮಹಲ್ ಗುಟ್ಟಹಳ್ಳಿ 95 mm ಮಳೆ, ದಯಾನಂದ ನಗರ 82 mm ಮಳೆ, ಹೊರಮಾವು 12.5 ಸೆ.ಮೀ ಮಳೆ,ಸಂಪಂಗಿರಾಮನಗರ 11.85 ಸೆ.ಮೀ ಮಳೆ,ಕೆ.ನಾರಾಯಣಪುರ 11.75 ಸೆ.ಮೀ, ವಿದ್ಯಾಪೀಠ 11.05 ಸೆ.ಮೀ ಮಳೆ, ಅಗ್ರಹಾರ ದಾಸರಹಳ್ಳಿ 10.2 ಸೆ.ಮೀ ಮಳೆಯಾಗಿರೋ ಬಗ್ಗೆ ವರದಿಯಾಗಿದೆ.


ಇದನ್ನೂ ಓದಿ: Explained: ಪ್ರತಿ ಮಳೆಗಾಲದಲ್ಲೂ ಬೆಂಗಳೂರು ಮುಳುಗುವುದೇಕೆ? ಈ ಬಾರಿಯೂ ತಪ್ಪೋದಿಲ್ವ ಜನರಿಗೆ ಸಂಕಷ್ಟ?


ಮನೆಗಳಿಗೆ ನುಗ್ಗಿದ ಮಳೆ ನೀರು


ಮಳೆ ಆರ್ಭಟಕ್ಕೆ ಸಾಕಷ್ಟು ಕಡೆ ಅವಾಂತರ ಸೃಷ್ಟಿಯಾಗಿದೆ. ಆರ್ ಆರ್ ನಗರದ ಕೆಂಚೇನಹಳ್ಳಿ ಐಡಿಯಲ್ ಹೋಮ್ಸ್ ಲೇಔಟ್ ಕೆರೆಯಂತಾಗಿತ್ತು. ಎರಡು ಅಪಾರ್ಟ್ ಮೆಂಟ್ ಸೇರಿದಂತೆ ಹತ್ತುಕ್ಕೂ ಹೆಚ್ಚು ಮನೆ ಜಲಾವೃತವಾಗಿದ್ದವು. ಅಪಾರ್ಟ್ ಮೆಂಟ್‌ ಐಲ್ಯಾಂಡ್ ಥರ ಮುಳಗಡೆ ಆಗಿದ್ದು, ಪ್ರತಿ ಬಾರಿ ಮಳೆ ಬಂದಾಗ ಇದೇ ಸಮಸ್ಯೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ರು.


ಕೆರೆಯಂತಾದ ರಸ್ತೆ, ಮುಳುಗಿದ ಬೈಕ್‌ಗಳು


ಇನ್ನು ಭಾರಿ ಮಳೆಯಿಂದ ರಸ್ತೆ ಪೂರ್ತಿ ಮುಳುಗಡೆಯಾಗಿದ್ದು, ಮನೆಯಿಂದ ಹೊರಬರಲಾಗದೆ ಜನರು ಪರದಾಡಿದ್ರು. ಕಾರು ಮತ್ತು ಬೈಕ್ ಗಳು ಜಲಾವೃತವಾಗಿದ್ದವು. ಡಾಲರ್ಸ್ ಕಾಲೋನಿಯಲ್ಲಿ ರಾಜಕಾಲುವೆ ನೀರು ಓವರ್ ಪ್ಲೋ ಆಗಿ ಮನೆಗಳಿಗೆ ನೀರು ನುಗ್ಗಿತ್ತು. ಡ್ರೈನೇಜ್ ನೀರು ಮನೆಗೆ ನುಗ್ಗಿ ನಾಲ್ಕೈದು ಅಡಿ ನೀರು ನಿಂತು ಸಮಸ್ಯೆಯಾಯಿತು.


ಮಳೆ ನೀರಿಂದ ಕುಸಿದ ಕಾಂಪೌಡ್  


ಶಿವಾಜಿನಗರದಲ್ಲಿ ಮಳೆ‌ನೀರು ನಿಂತ ಪರಿಣಾಮ ಕಾಂಪೌಂಡ್ ಕುಸಿದಿದೆ. ಇಪ್ಪತ್ತು ಅಡಿಯ ಗೋಡೆ ಕುಸಿದು ಬಿದ್ದಿದ್ದು, ಈ ವೇಳೆ ಆ ರಸ್ತೆಯಲ್ಲಿ ಸಂಚಾರ ಕಡಿಮೆಯಾಗಿದ್ದ ಹಿನ್ನಲೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ.


ತಗ್ಗು ಪ್ರದೇಶಗಳು ಜಲಾವೃತ


ಇನ್ನು ರುಕ್ಮಿಣಿ ನಗರ, ಗುಂಡಪ್ಪ ಲೇಔಟ್, ಬೈರವೇಶ್ವರ ನಗರ, ಆರ್‌ಬಿ‌ಎಸ್ ಲೇಔಟ್ ಸೇರಿದಂತೆ ಹಲವೆಡೆ ದಾರಾಕಾರ ಮಳೆ ಶಾಂತಿನಗರ ಬಸ್ ನಿಲ್ದಾಣ, ಚಿಕ್ಕಬಾಣಾವರ , ರುಕ್ಮಿಣಿ ನಗರ , ಚೊಕ್ಕಸಂದ್ರ, ಬಸವೇಶ್ವರ ನಗರದ ಕಲ್ಯಾಣ ಮಂಟಪದ ರಸ್ತೆಯಲ್ಲಿ ನೀರು ತುಂಬಿದ್ದವು. ಸುಲ್ತಾನ್‌ಪೇಟೆ, ಹಳೆ ತರಗುಪೇಟೆ, ಚಿಕ್ಕಪೇಟೆ ಮೆಟ್ರೋ ನಿಲ್ದಾಣ ಸೇರಿದಂತೆ ಹಲವೆಡೆ ನೀರು ತುಂಬಿದ್ದವು.
ನಗರದ 13 ಕಡೆ ಅತಿ ಹೆಚ್ಚಿನ ಅವಾಂತರ


ರಾಜಧಾನಿಯಲ್ಲಿ ಮುಖ್ಯವಾಗಿ 13 ಕಡೆಗಳಲ್ಲಿ ಅತಿ ಗಂಭೀರವಾಗಿ ಮಳೆಯಿಂದಾದ ಅನಾಹುತವಾಗಿದೆ. ಬೊಮ್ಮನಹಳ್ಳಿ, ಮಹಾದೇವಪುರ, ಪೂರ್ವ ವಲಯ, ದಕ್ಷಿಣ ವಲಯದಲ್ಲಿ ಮಳೆಯಿಂದಾಗಿ ಹೆಚ್ಚು ಅವಾಂತರವಾಗಿದೆ. ಹಾಗೆಯೇ ಕೆಂಪೇಗೌಡರ ನಗರ, ಟಿ ದಾಸರಹಳ್ಳಿ, ಹೊಸಕೆರೆಹಳ್ಳಿ 3rd ಕ್ರಾಸ್, ಕೋರಮಂಗಲ ನಾಲ್ಕನೇ ಕ್ರಾಸ್, ಮಾರೇನಹಳ್ಳಿ 12th ಮೈನ್ ರಸ್ತೆ, ದತ್ತಾತ್ರೇಯ ದೇವಸ್ಥಾನ ಮಲ್ಲೇಶ್ವರ, ವಿದ್ಯಾ ಜ್ಯೊತಿ ಶಾಲೆ ಹಿಂಭಾಗ ಹೊಂಗಸಂಧ್ರ ಸೇರಿದಂತೆ ಹಲವೆಡೆ ಗಂಭೀರ ಅವಾಂತರವಾಗಿದೆ.


ಇದನ್ನೂ ಓದಿ: Rain Alert: ನಿಂತಿಲ್ಲ ಮಳೆ, ಕೊಡೆ ಹಿಡಿದು ನಡೆ! ಕರಾವಳಿ ಸೇರಿ ಹಲವೆಡೆ ಎಚ್ಚರ, ಕಟ್ಟೆಚ್ಚರ


ರಾತ್ರೋರಾತ್ರಿ ಕಮಿಷನರ್ ಸಿಟಿ ರೌಂಡ್ಸ್


ಬಿಬಿಎಂಪಿ ಕಮಿಷನರ್ ತುಷಾರ್ ರಂಗನಾಥ್ ರಾತ್ರೋ ರಾತ್ರಿ ಸಿಟಿ ರೌಂಡ್ಸ್ ಹೊಡೆದರು. ಮಳೆಯಿಂದ ಸಮಸ್ಯೆ ಉಂಟಾಗಿರುವ ಸ್ಥಳಗಳಿಗೆ ತೆರಳಿ ಇಂಜಿನಿಯರ್ಸ್ ಗೆ ಕೂಡಲೇ ಕ್ರಮಕ್ಕೆ ಸೂಚನೆ ನೀಡಿದ್ರು. ಈ ವೇಳೆ ನ್ಯೂಸ್ 18 ಕನ್ನಡದ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ ಅವರು, ಪದೇ ಪದೇ ರಿಪೀಟ್ ಆಗಲು ಕಾರಣ ಡ್ರೈನೇಜ್ ಕಾಲುವೆ ನೀರಿನ‌ ಸಮಸ್ಯೆ ಆಗಿದೆ..ಇಂಜಿನಿಯರ್ ಗಳಿಗೆ ಸೂಚನೆ ಕೊಟ್ಟಿದ್ದೀನಿ ಎಂದ್ರು.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು