Heavy Rain: ಬೆಂಗಳೂರಲ್ಲಿ ಭಾರೀ ಮಳೆಯಿಂದ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು! ಇನ್ನೂ 3 ದಿನ ಇದೆ ವರುಣನ ಅಬ್ಬರ

ನಿನ್ನೆ ಸುರಿದ ಮಳೆಗೆ ಬೆಂಗಳೂರು ಸೇರಿದಂತೆ ಹಲವೆೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನೂ ಮೂರು ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಅಂತ ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.

ಬೆಂಗಳೂರಲ್ಲಿ ಮಳೆ ಅಬ್ಬರದ ಸಂಗ್ರಹ ಚಿತ್ರ (ಕೃಪೆ: Internet)

ಬೆಂಗಳೂರಲ್ಲಿ ಮಳೆ ಅಬ್ಬರದ ಸಂಗ್ರಹ ಚಿತ್ರ (ಕೃಪೆ: Internet)

  • Share this:
ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ಮಳೆ (Rain) ಅಬ್ಬರ ಮುಂದುವರೆದಿದೆ. ನಿನ್ನೆ ರಾತ್ರಿಯಿಡೀ ಸುರಿದ ಭಾರೀ ಮಳೆಗೆ (Heavy Rain) ಬೆಂಗಳೂರಿನ ಹಲವು ಭಾಗ ಅಕ್ಷರಶಃ ಮುಳುಗಿದೆ. ತಗ್ಗು ಪ್ರದೇಶಗಳಿಗೆ ನೀರು (Water) ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದಾಗಿ ವಿದ್ಯುತ್ (Power) ಪ್ರವಹಿಸಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ (Death). ಇನ್ನೂ ಮೂರು ದಿನಗಳ ಕಾಲ (3 Days) ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಅಂತ ರಾಜ್ಯ ಹವಾಮಾನ ಇಲಾಖೆ (State Meteorological Department) ತಿಳಿಸಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ (Alert) ಇರಬೇಕಾಗಿದೆ.

ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ವಿದ್ಯುತ್ ಪ್ರವಹಿಸಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ನಿನ್ನೆ ಭಾರೀ ಮಳೆ ಶುರುವಾದಾಗ ನಾಲ್ವರು ವ್ಯಕ್ತಿಗಳು ಬಸ್ ಶೆಲ್ಟರ್‌ನಲ್ಲಿ ಕುಳಿತಿದ್ದರು. ಈ ವೇಳೆ ಕರೆಂಟ್ ಶಾಕ್ ಹೊಡೆದ ಅನುಭವವಾಗಿದೆ. ಆಗ ಮೂವರು ಎದ್ದು, ಆ ಸ್ಥಳದಿಂದ ಹೊರಕ್ಕೆ ಓಡಿದ್ದಾರೆ. ಆದರೆ 35 ವರ್ಷದ ವ್ಯಕ್ತಿಯೊಬ್ಬ ಏಳುವಾಗ ಪಕ್ಕದ ಬೋರ್ಡ್ ಟಚ್ ಆಗಿದೆ. ಆಗ ವಿದ್ಯುತ್ ಶಾಕ್ ಹೊಡೆದು ಆತ ಮೃತಪಟ್ಟಿದ್ದಾನೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದನಾ ಅಪರಿಚಿತ?

ಮೃತ ವ್ಯಕ್ತಿ ಸುಮಾರು 35 ವರ್ಷದವನಾಗಿದ್ದು, ಆತನ ಗುರುತು ಪತ್ತೆಯಾಗಿಲ್ಲ. ವಿದ್ಯುತ್ ಸರಿ ಪಡಿಸದೇ ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಶಾಕ್ ಹೊಡೆಯುತ್ತಿದ್ದಂತೆ ಸ್ಥಳೀಯರು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದರೂ, ಮಾರ್ಗ ಮಧ್ಯೆ ಆತ ಮೃತಪಟ್ಟಿದ್ದಾನೆ.

ಇದನ್ನೂ ಓದಿ: Explained: ಪ್ರತಿ ಮಳೆಗಾಲದಲ್ಲೂ ಬೆಂಗಳೂರು ಮುಳುಗುವುದೇಕೆ? ಈ ಬಾರಿಯೂ ತಪ್ಪೋದಿಲ್ವ ಜನರಿಗೆ ಸಂಕಷ್ಟ?

ಬೆಂಗಳೂರಲ್ಲಿ ನಿನ್ನೆ ರಾತ್ರಿಯಿಡೀ ಮಳೆ

ರಾಜಧಾನಿ ಬೆಂಗಳೂರಲ್ಲಿ ನಿನ್ನೆ ಸಾಯಂಕಾಲವೇ ಶುರುವಾದ ಮಳೆ ಕೆಲವೆಡೆ ಇಂದು ಮುಂಜಾನೆವರೆಗೂ ನಿರತಂರವಾಗಿ ಸುರಿಯುತ್ತಿತ್ತು. ಇಂದು ಬೆಳಗಿನ ಜಾವ 5.30ರ ತನಕ ಒಂದೇ ಸಮನೆ ಗುಡುಗು, ಮಿಂಚು ಸಹಿತ ವರುಣನ ಅಬ್ಬರ ಜೋರಾಗಿತ್ತು. ಪರಿಣಾಮ ಮಳೆಯಿಂದಾಗಿ ರಾತ್ರಿ ವಾಹನ ಸವಾರರ ಪರದಾಡುವಂತಾಯ್ತು. ಹಲವೆಡೆ ತಗ್ಗು ರಸ್ತೆಗಳಲ್ಲಿ ನೀರು ಲಾಕ್ ಸಂಗ್ರಹಗೊಂಡು, ವಾಹನ ಸಂಚಾರಕ್ಕೆ ಅಡ್ಡಿಯಾಯ್ತು.

ಅಂಡರ್‌ಪಾಸ್‌ನಲ್ಲಿ ಸಿಲುಕಿದ ವಾಹನ

ಶೇಷಾದ್ರಿ ರಸ್ತೆಯ ಮಹಾರಾಣಿ ಕಾಲೇಜ್‌ ಬಳಿಯ ಅಂಡರ್‌ ಪಾಸ್‌ನಲ್ಲಿ ಕಂಟೇನರ್ ಒಂದು ಸಿಕ್ಕಿಬಿದ್ದು ಪರದಾಡುವಂತಾಯ್ತು. ಅಂಡರ್ ಪಾಸ್ ನಲ್ಲಿ ಕಂಟೇನರ್ ಹೋಗಬಹುದು ಎಂದು ಚಾಲಕ ಮುಂದೆ ಹೋಗಿದ್ದ, ಆದರೆ ಕಂಟೇನರ್ ಮುಂಭಾಗ ಅಂಡರ್ ಪಾಸ್‌ನ ಮೇಲ್ಛಾವಣಿಗೆ ಸಿಲುಕಿ ವಾಹನ ಅಲ್ಲೇ ನಿಂತು ಬಿಟ್ಟಿದೆ. ಹೀಗಾಗಿ ಹಿಂದಕ್ಕೂ ಬರಲಾರದೇ, ಮುಂದಕ್ಕೂ ಹೋಗಲಾಗದೇ ಸಿಕ್ಕಿಹಾಕಿಕೊಂಡು ಬಿಟ್ಟಿತ್ತು. ಪರಿಣಾಮ ಪ್ಯಾಲೇಸ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಇನ್ನೂ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆ

ಇನ್ನು ಇಂದಿನಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಅಬ್ಬರಿಸಲಿದೆ ಅಂತ ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇನ್ನೂ 3 ದಿನ ಗುಡುಗು ಸಹಿತ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮಳೆಯಾಗಲಿದೆ.

ಇದನ್ನೂ ಓದಿ: Monsoon: ಅನ್ನದಾತರಿಗೆ ಗುಡ್ ನ್ಯೂಸ್ ನೀಡಿದ ಹವಾಮಾನ ಇಲಾಖೆ

 ಎಲ್ಲೆಲ್ಲಿ ಭಾರೀ ಮಳೆಯಾಗಲಿದೆ?

ಇಂದು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಚದುರಿದ ಮಳೆಯಾಗುವ ನಿರೀಕ್ಷೆ ಇದೆ. ಕೆಲವು ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಮಲೆನಾಡು, ಉತ್ತರ ಒಳನಾಡಿನಲ್ಲಿ ಇಂದಿನಿಂದ 3 ದಿನ ಮಳೆ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ.
Published by:Annappa Achari
First published: