ಜನರ ನಡವಳಿಕೆ  ಬಗ್ಗೆ ಆತಂಕವಿದೆ, ಸದ್ಯಕ್ಕೆ ರಾಜ್ಯದಲ್ಲಿ ಮೂರನೇ ಅಲೆಯ ಭಯವಿಲ್ಲ; ಆರೋಗ್ಯ ಸಚಿವ ಸುಧಾಕರ್​

ಸೋಂಕಿನ ಮುನ್ನೆಚರಿಕೆಯನ್ನು  ಜನರು ಅರ್ಥ ಮಾಡಿಕೊಳ್ಳದೇ ಹೋದರೆ ಮುಂದೆ ಬಹಳ ಕಷ್ಟವಾಗಲಿದೆ

ಡಾ.ಕೆ. ಸುಧಾಕರ್.

ಡಾ.ಕೆ. ಸುಧಾಕರ್.

  • Share this:
ಬೆಂಗಳೂರು (ಜು. 13): ಕರ್ನಾಟಕ ರಾಜ್ಯದಲ್ಲಿ ಕಳೆದ ಎರಡು ವಾರದಿಂದ ಕೊರೊನಾ ಹೊಸ ಸೋಂಕಿತರ ಪ್ರಮಾಣವೂ 1.5% ನಷ್ಟು ಕೆಳಗೆ ಇದೆ. ಆದರೆ ರಾಜ್ಯದ ಕೆಲವು ಕಡೆ ಜನರು ದೇವಸ್ಥಾನ, ಮಾರುಕಟ್ಟೆಯಲ್ಲಿ ಜನರ ನಡವಳಿಕೆ ನೋಡಿದರೆ ಭಯವಾಗುತ್ತದೆ. ಹೀಗಾಗಿ, ಜನ ಸಾಮನ್ಯರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಆತಂಕ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಸುಧಾಕರ್‌  ರಾಜ್ಯದಲ್ಲಿ  ಎರಡನೇ ಅಲೆ ಮುಗಿಯುತ್ತಾ ಬಂದಿದ್ದು, ಮೂರನೇ ಅಲೆ ಬರೋದಿಲ್ಲ ಅನ್ನೋ ಖಾತ್ರಿಯಿಲ್ಲ. ರಾಜ್ಯದಲ್ಲಿ ಲಸಿಕೆ ಅನುಪಾತ ಶೇಕಡ 60-70% ರಷ್ಟು ಪೂರ್ಣವಾಗುವ ತನಕ ಬಹಳ ಎಚ್ಚರಿಕೆಯಲ್ಲಿ ಇರಬೇಕು. ಇದನ್ನ ಪದೇ ಪದೇ ಜನರಿಗೆ ಹೇಳ್ತಿದ್ದೇವೆ, ತಜ್ಞರು ಕೂಡ ಎಚ್ಚರಿಕೆಯನ್ನ ನೀಡುತ್ತಿದ್ದು, ರಾಜ್ಯದ ಜನರು ಮುನ್ನೆಚ್ಚರಿಕೆ ವಹಿಸಬೇಕು. ನಿಮ್ಮ ಆರೋಗ್ಯದ ಬಗ್ಗೆ ನೀವೇ ಜವಾಬ್ದಾರಿವಹಿಸಬೇಕು.  ಸೋಂಕಿನ ಮುನ್ನೆಚರಿಕೆಯನ್ನು  ಜನರು ಅರ್ಥ ಮಾಡಿಕೊಳ್ಳದೇ ಹೋದರೆ ಮುಂದೆ ಬಹಳ ಕಷ್ಟವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಈಗ ಕೊರೊನ ಸೋಂಕು ಕಡಿಮ ಆಗುತ್ತಿದೆ. ಈ ಹಿನ್ನಲೆ  ಸಾರ್ವಜನಿಕರು  ಮತ್ತೊಂದು ಅಲೆ ಎದುರಿಸುವ ಅವಕಾಶ ಕೊಡಬಾರದು. ಮೂರನೇ ಅಲೆ ತಡೆಯುವುದು ನಮ್ಮ ಕೈನಲ್ಲೇ ಇದ್ದು, ಮುಂದೆ ಬರಬಹುದಾದ ಯಾವುದೇ ಅಲೆ ತಡೆಯಲು ನಾವು ನಮ್ಮ ನಡವಳಿಕೆಯಲ್ಲಿ ಬದಲಾವಣೆ ತರಲೇಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳೋದು, ಅನಗತ್ಯ ಸಭೆಯಲ್ಲಿ ಭಾಗಿಯಾಗುವುದು ತಪ್ಪಿಸಬೇಕು.  ಜನರ ಮನವಿ ಮೇರೆಗೆ ಸರ್ಕಾರವೂ ಮದುವೆ ಸಮಾರಂಭಕ್ಕೆ 100 ಜನರಿಗೆ ಅವಕಾಶ ಕೊಟ್ಟರೆ 400-500 ಜನರು ಸೇರುತ್ತಿದ್ದಾರೆ. ಮಾರುಕಟ್ಟೆ ಯಲ್ಲಿ ಸಹ ಹೀಗೆ ಆಗುತ್ತಿದೆ.  ಯಾವುದೇ ನಿಯಂತ್ರಣವಿಲ್ಲದೇ ಜನರು ಸೇರುತ್ತಿರುವುದು ಆತಂಕ ಮೂಡಿಸುತ್ತಿದೆ.  ಜನರು ಈಗಲಾದರೂ ಗಂಭೀರವಾಗಿ ತೆಗೆದುಕೊಂಡು, ಅವಶ್ಯಕತೆ ಇದ್ದರಷ್ಟೇ ಮಾತ್ರ ಹೊರಗೆ ಹೋಗಿ ಬರಬೇಕು. ಮುಂದಿನ 3-4 ತಿಂಗಳು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.

ಇದರ ಜೊತೆಗೆ  ರಾಜ್ಯದಲ್ಲಿ  ಮತ್ತೊಂದು ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿರುವುದರ ಕುರಿತು ತಿಳಿಸಿದ ಅವರು, ಈ ಬಗ್ಗೆ ಇನ್ನು ನನಗೆ ನಿಖರ ವರದಿ ಬಂದಿಲ್ಲ. ಸಂಪೂರ್ಣವಾಗಿ ಮಾಹಿತಿ ತೆಗೆದುಕೊಂಡು  ಈ ಬಗ್ಗೆ ತಳಿಸುತ್ತೇನೆ.  ಹಲವು ರಾಜ್ಯದಲ್ಲಿ ಮೂರನೇ ಅಲೆ ಕಾಲಿಟ್ಟಿದೆ. ಎರಡನೇ ಅಲೆ ಕಡಿಮೆ ಆಗದೆ ಇರುವುದನ್ನು ನೋಡಿದರೆ, ಮೂರನೇ ಬಂದಿದೆ ಎನ್ನುವ ಅಭಿಪ್ರಾಯಕ್ಕೆ ಬರಬಹುದು.

ಇದನ್ನು ಓದಿ: ನೀವು ಆಹ್ವಾನ ಕೊಟ್ಟಾಗಲೇ ಮೂರನೇ ಅಲೆ ಸೋಂಕು ಆರಂಭ; ಮೋದಿ ಎಚ್ಚರಿಕೆ

ಕೇರಳ ಎರಡನೇ ಅಲೆಯಲ್ಲಿ ಸಂಖ್ಯೆ ಕಡಿಮೆಯೇ ಆಗಿಲ್ಲ. ಹೀಗಾಗಿ, ಅಲ್ಲಿ ಇನ್ನು ಎರಡನೇ ಅಲೆ ಮುಗಿದಿಲ್ಲ ಅನ್ನೋದು ನನ್ನ ಅಭಿಪ್ರಾಯ. ನೆರೆಯ ರಾಜ್ಯಗಳನ್ನು ನೋಡಿದರೆ  ಕರ್ನಾಟಕದ ಜನರು ಎಚ್ಚರಿಕೆಯ ಇರಬೇಕು. ಯಾವುದೇ ಕಾರಣಕ್ಕೂ ಎರಡನೇ ಅಲೆ ಯಲ್ಲಿ ಎದುರಿಸಿದಂತೆ ಸಮಸ್ಯೆ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಮೂರನೇ ಅಲೆ ಆರಂಭವಾಗಿದೆಯಾ ಎಂಬುದನ್ನ ತಿಳಿಯಲು ಇನ್ನು ಕೆಲವು ದಿನಗಳು ಕಾಯಬೇಕು. ಕರ್ನಾಟಕದಲ್ಲಿ ಇನ್ನು ಮೂರನೇ ಅಲೆ ಆರಂಭವಾಗಿಲ್ಲ. ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಾ ಬರ್ತಿದೆ, ಅದು ಶೇ.1 ಕ್ಕಿಂತ ಕಡಿಮೆ ಆಗಬೇಕು. ಆಗಷ್ಟೇ ಎರಡನೇ ಅಲೆ ಸಂಪೂರ್ಣ ಹೋಗಿದೆ ಅಂತ ಹೇಳಬಹುದು ಎಂದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: