ಬೆಂಗಳೂರು (ಜೂ. 1): ಕೊರೋನಾ ಸೋಂಕಿನ ಮೊದಲನೇ ಅಲೆಗಿಂತ ಎರಡನೇ ಅಲೆ ಭಿನ್ನವಾಗಿತ್ತು. 2ನೇ ಅಲೆಗಿಂತ 3ನೇ ಅಲೆ ವಿಭಿನ್ನವಾಗಿರುತ್ತದೆ. ಈಗಾಗಲೇ ತಜ್ಞರು ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದು, ಈ ಹಿನ್ನಲೆಯಲ್ಲಿ ನಾವು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಮಸ್ಯೆ ಉದ್ಭವಿಸದಂತೆ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಪ್ರತಿ ಪ್ರಾಥಮಿಕ ಕೇಂದ್ರಗಳಲ್ಲಿ ಬೆಡ್ಗಳ ಹೆಚ್ಚಳ ಮಾಡಿದ್ದು, ಆಸ್ಪತ್ರೆಗಳಲ್ಲಿ 60 ರಿಂದ 80 ಬೆಡ್ಗೆ ಹೆಚ್ಚಳ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು. ಇನ್ನು ಮೂರನೇ ಅಲೆಯಲ್ಲಿ ಸೋಂಕು ಮಕ್ಕಳಿಗೆ ಹೆಚ್ಚು ಕಾಡಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಮಕ್ಕಳಿಗೆ ಚಿಕಿತ್ಸೆ ಕೊಡಲು ವೈದ್ಯರಿಗೆ ತರಬೇತಿ ನೀಡಿದ್ದೇವೆ ಎಂದರು.
ಮೂರನೇ ಅಲೆಯಲ್ಲಿ ಮಕ್ಕಳಲ್ಲಿ ಸೋಂಕು ಕಂಡು ಬರುವ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಮಕ್ಕಳಲ್ಲಿ ಕೋವಿಡ್ ಸೋಂಕಿನ ಲಕ್ಷಣ ಕಂಡು ಬಂದರೆ ಅವರನ್ನು ಚಿಕಿತ್ಸೆಗೆ ಬೇರೆ ವೈದ್ಯರ ಬದಲಿಗೆ ಮಕ್ಕಳ ತಜ್ಞರ ಬಳಿಗೆ ಕರೆದು ಕೊಂಡು ಹೋಗಬೇಕು. ಇದಕ್ಕೆ ಹೆಚ್ಚು ಪ್ರಚಾರ ಮಾಡಬೇಕು. ಈ ಕುರಿತು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದನ್ನ ಹೇಳಿದೆ. 19 ವರ್ಷ ಒಳಗಿನವರಿಗೆ ಯಾವುದಾದರೂ ತೊಂದರೆ ಆದರೆ ಮಕ್ಕಳ ವೈದ್ಯರನ್ನ ಸಂಪರ್ಕ ಮಾಡಬೇಕು ಎಂದರು
ಮಂಗಳೂರು, ವಿಜಯಪುರದಲ್ಲಿ ಜಿನೋವಿಕ್ ಲ್ಯಾಬ್ ತೆರೆಯಲು ನಿರ್ಧಾರಿಸಲಾಗಿದೆ. ಇದರಿಂದ ಕೊರೋನಾ ಟೆಸ್ಟ್ ಮಾಡಲು ಅನುಕೂಲ ಆಗಲಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಮಾಡಲು ಪರೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಔಷಧಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಿದ್ಧತೆ ನಡೆಸಲಾಗಿದೆ. ಮಾರುಕಟ್ಟೆಯಲ್ಲಿ ಎಲ್ಲವೂ ಲಭ್ಯ ಇವೆ. ಐದನೇ ತಾರೀಖು ಬಳಿಕ ಹೆಚ್ಚು ಔಷಧಿ ಸಿಗುತ್ತದೆ ಎಂದರು. ಇದೇ ವೇಳೆ ಬ್ಲ್ಯಾಕ್ ಫಂಗಸ್ಗೆ ಮೆಡಿಸಿನ್ ಕೊರತೆ ವಿಚಾರ ಕುರಿತು ಮಾತನಾಡಿದ ಅವರು, ಸರ್ಜರಿಗೂ ಮೆಡಿಸಿನ್ಗೂ ಸಂಬಂಧವಿಲ್ಲ. ಸೋಂಕಿನ ಬಳಿಕ ಕಪ್ಪು ಶಿಲೀಂಧ್ರ ಸಮಸ್ಯೆ ಕಾಡಿದಾಕ್ಷಣ ಪ್ರಾರಂಭದಲ್ಲೇ ಇಎನ್ಟಿ ತಜ್ಞರನ್ನ ಭೇಟಿ ಮಾಡಬೇಕು. ಇಎನ್ಟಿ ತಜ್ಞರು ಈ ಕುರಿತು ಮಾನಿಟಿರಿಂಗ್ ಮಾಡ್ತಾರೆ ಎಂದರು.
ಇದನ್ನು ಓದಿ: ಸಿಪಿ ಯೋಗೇಶ್ವರ್ದು ಐರನ್ ಲೆಗ್; ರೇಣುಕಾಚಾರ್ಯ ವಾಗ್ದಾಳಿ
ಕೋವಿಡ್ ನಿಂಡ ಡಿಸ್ಚಾರ್ಜ್ ಆಗುವ ಶುಗರ್ ಪೇಶೆಂಟ್ ಗಳಲ್ಲಿ ಲೈಫೋಸೋಮಲ್ ಆಂಫೋಟೆರಿಸಿನ್ ಬಿ ಕೊರೆತೆ ಇದೆ. ಈ ಕುರಿತು ಅವರು ಗಮನಹರಿಸಿ ಚಿಕಿತ್ಸೆ ಪಡೆಯಬೇಕು. ಇದಕ್ಕೆ ತಕ್ಷಣಕ್ಕೆ ಬೇಕಾಗುವಷ್ಟೇ ಮೆಡಿಸಿನ್ ಇದೆ. ಅಲ್ಲದೇ ಪರ್ಯಾಯ ಮೆಡಿಸಿನ್ ಕೂಡ ಲಭ್ಯವಿದ್ದು. ಇನ್ನು ಹೆಚ್ಚು ಮೆಡಿಸಿನ್ ಜೂನ್ 5ರ ಬಳಿಕ ಪೂರೈಕೆಯಾಗುತ್ತದೆ ಎಂದು ಭರವಸೆ ನೀಡಿದರು.
ಇದಕ್ಕೆ ಮುನ್ನ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಸ್ಥಿತಿಗತಿ, ನಿಯಂತ್ರಣಾ ಕ್ರಮಗಳ ಪರಿಣಾಮ ಕುರಿತಂತೆ ಪರಾಮರ್ಶಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ