ವ್ಯಾಯಾಮದಿಂದ ಹೃದಯಾಘಾತ ಆಗಲ್ಲ; ಆದರೆ ಇಂಥ ಯುವಕರು Heart Checkup ಮಾಡಿಸಬೇಕು: ಸಚಿವ Sudhakar

ಯುವಕರಲ್ಲಿ ಇತ್ತೀಚಿಗೆ ಹೃದಯಾಘಾತ ಹೆಚ್ಚುತ್ತಿದೆ. ದೇಶದಲ್ಲಿ ಶೇಕಡಾ 24% ಸಾವಿಗೆ ಹೃದಯ ಸಮಸ್ಯೆ ಕಾರಣವಾಗಿದೆ.ಹಿಂದೆಲ್ಲಾ ಮಕ್ಕಳು ಪೋಷಕರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು, ಆದರೆ ಈಗ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದಾರೆ.

ಡಾ.ಕೆ. ಸುಧಾಕರ್.

ಡಾ.ಕೆ. ಸುಧಾಕರ್.

  • Share this:
ಬೆಂಗಳೂರು: ಜಯದೇವ ಆಸ್ಪತ್ರೆಯ (Jayadeva Hospital) ಆವರಣದಲ್ಲಿ 103 ಕೋಟಿ ವೆಚ್ಚದಲ್ಲಿ ಇನ್ಫೋಸಿಸ್‌ ಫೌಂಡೇಷನ್‌ನಿಂದ (Infosys Foundation) ನಿರ್ಮಾಣ ಆಗಿರುವ 350 ಹಾಸಿಗೆಗಳ ಸಾಮರ್ಥ್ಯದ ನೂತನ ಹೃದ್ರೋಗ ಆಸ್ಪತ್ರೆಯನ್ನು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಆರೋಗ್ಯ ಸಚಿವ ಕೆ.ಸುಧಾಕರ್​​ (Health Minister K Sudhakar) ‌ ಮೊನ್ನೆ ಖ್ಯಾತ ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಜಿಮ್ (Gym) ಮಾಡುವ ವೇಳೆ ಆದಂತಹ ಸಮಸ್ಯೆ ನೋಡಿ ಎಲ್ಲರು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಿಸುತ್ತಿದ್ದಾರೆ. ಜನರು ಯಾವುದೇ ಚಟುವಟಿಕೆಯನ್ನಾದರೂ ಮಿತವಾಗಿ ಮಾಡುವಂತೆ ಸಲಹೆ ನೀಡಿದರು. ಜಿಮ್ ಮಾಡುವುದರಿಂದ ಹೃದಯದ ಅಪಾಯ ಇಲ್ಲ. ಆದರೆ ಅತಿಯಾದ ವ್ಯಾಯಾಮ ಒಳ್ಳೆಯದಲ್ಲ. ಯಾವುದೇ ಚಟುವಟಿಕೆ ಆದರೂ ಅತಿಯಾಗಿ ಮಾಡಬಾರದು, ಮಿತವಾಗಿ ಅಷ್ಟೇ ಮಾಡಬೇಕು. ದೇಶದಲ್ಲಿ ಯುವಕರಲ್ಲಿ ಹೆಚ್ಚು ಹೃದಯ ಸಂಬಂಧಿ ಖಾಯಿಲೆ ಕಂಡು ಬರ್ತಿದೆ. ಹೀಗಾಗಿ ಯುವಕರು ವ್ಯಾಯಾಮವನ್ನು ಮಾಡಬೇಕು‌. ವಾಕಿಂಗ್, ಯೋಗ ಮಿತಿಯಲ್ಲಿ ಮಾಡಬೇಕು. ಪೋಷಕರಿಗೆ ಹೃದಯ ಸಮಸ್ಯೆ ಇದ್ದರೆ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶೇ.24ರಷ್ಟು ಸಾವಿಗೆ ಹೃದಯ ಸಮಸ್ಯೆಯೇ ಕಾರಣ

ರಾಜ್ಯದಲ್ಲಿ ಹೃದಯ ರೋಗದ ಸಮಸ್ಯೆ ದಿನೇ ದಿನೇ ಹೆಚ್ಚಳವಾಗ್ತಿದೆ. ದೇಶದಲ್ಲಿ ಶೇಕಡಾ 24% ಸಾವಿಗೆ ಹೃದಯ ಸಮಸ್ಯೆ ಕಾರಣವಾಗಿದೆ. 35 ವರ್ಷ ಮೇಲ್ಪಟ್ಟ 50 ವರ್ಷದೊಳಗಿನ ಯುವ ಸಮೂಹದಲ್ಲಿ ಹೃದಯಘಾತ ಆಗುತ್ತಿದೆ. ಪುರುಷರಿಗೆ ಅತಿ ಹೆಚ್ಚು ಹಾರ್ಟ್ ಅಟ್ಯಾಕ್ ಆಗುತ್ತಿದೆ. ಒಳ್ಳೆ ಆರೋಗ್ಯಕ್ಕೆ ವ್ಯಾಯಾಮ, ಆಹಾರ ಪದ್ಧತಿ ಮುಖ್ಯ. ಗ್ರಾಮೀಣ ಪ್ರದೇಶಗಳಲ್ಲಿ ಧೂಮಪಾನ, ಮದ್ಯಪಾನದಿಂದ ಅಸುನೀಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದ ಹಲವೆಡೆ ಸುಸಜ್ಜಿತ ಹೃದ್ರೋಗ ಆಸ್ಪತ್ರೆಗಳು

ಕಲಬುರಗಿ, ಮೈಸೂರು, ಶಿವಮೊಗ್ಗದಲ್ಲಿ ಜಯದೇವ ಆಸ್ಪತ್ರೆ ನಿರ್ಮಾಣಗೊಂಡಿದೆ. ಹುಬ್ಬಳ್ಳಿ ಸೇರಿ ವಿಭಾಗೀಯ ಮಟ್ಟದಲ್ಲಿ ಜಯದೇವ ಆಸ್ಪತ್ರೆ ತೆರೆಯುವ ಆಲೋಚನೆ ಸರ್ಕಾರಕ್ಕಿದೆ. 100 ಹಾಸಿಗೆಯ ಸಾಮರ್ಥ್ಯದ ಆಸ್ಪತ್ರೆಯನ್ನು ಕೋವಿಡ್ ಟೈಮ್ ನಲ್ಲಿ ಇನ್ಫೋಸಿಸ್ ಕಟ್ಟಿಕೊಟ್ಟಿದೆ. ಬೊಮ್ಮಾಯಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಸೂಚಿಸಿದ್ದಾರೆ. 250 ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಯೋಚನೆ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Health: ಹೃದ್ರೋಗದಿಂದ ಅಪಾಯದಲ್ಲಿರುವ 44% ಭಾರತೀಯರು: ತಜ್ಞರು ಹೇಳುವುದೇನು..?

ತಜ್ಞ ವೈದ್ಯರ ಆತಂಕ

ಕಾರ್ಯಕ್ರಮದಲ್ಲಿ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಯುವಕರಲ್ಲಿ ಇತ್ತೀಚಿಗೆ ಹೃದಯಾಘಾತ ಹೆಚ್ಚುತ್ತಿದೆ. ಈ ವರ್ಷ 3,850 ಯುವಕರಿಗೆ ಹೃದಯ ಚಿಕಿತ್ಸೆ ಮಾಡಲಾಗಿದೆ. ಹಿಂದೆಲ್ಲಾ ಮಕ್ಕಳು ಪೋಷಕರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು, ಆದರೆ ಈಗ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದಾರೆ ಎಂದರು.

ಸುಧಾಮೂರ್ತಿ ನನ್ನ ಅಕ್ಕ ಎಂದ ಸಿಎಂ

ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ಸುಧಾಮೂರ್ತಿ ನನ್ನ ಹಿರಿಯ ಅಕ್ಕ. ನನ್ನ ಆದರ್ಶ ಪ್ರಿಯರು ಅಂದರೆ ನಾರಯಣಮೂರ್ತಿ, ಅವರ ಬದುಕು ನನ್ನ ಜೀವನಕ್ಕೆ ಪ್ರೇರಣೆ. ಸುಧಾಕ್ಕ ನಾನು ಒಂದೇ ಕಾಲೇಜಿನಲ್ಲಿ ಓದಿದವರು. ಟೆಲ್ಕೊ ಕಂಪನಿಯಲ್ಲೂ ಕೂಡ ನಾವು ಕೆಲಸ ಮಾಡಿದ್ದೇವೆ. knowledge is power ಎಂದು ತೋರಿಸಿದವರು ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿವಯವರು. ಇಬ್ಬರು ಬಡವರಿಗಾಗಿ ದೊಡ್ಡ ಕೊಡುಗೆ ನೀಡಿದ್ದಾರೆ. ಅವ್ರಿಗೆ ನಾನು ದೊಡ್ಡ ನಮನವನ್ನು ಸಲ್ಲಿಸುತ್ತೇನೆ ಎಂದರು.

ಆರೋಗ್ಯ ಸಚಿವರಿಗೆ ಸಿಎಂ ಫುಲ್​ ಮಾರ್ಕ್ಸ್​​

ಆರೋಗ್ಯ ಸಚಿವ ಕೆ ಸುಧಾಕರ್ ಗೆ ಸಿಎಂ ಬಹುಪಾರಕ್ ಹೇಳಿದರು. ಯಂಗ್ ಡೈನಾಮಿಕ್ ಹೆಲ್ತ್ ಮಿನಿಸ್ಟರ್ ನಮಗೆ ಒಬ್ರು ಸಿಕ್ಕಿದ್ದಾರೆ. ಸುಧಾಕರ್​​ ಕೊವೀಡ್​ನ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Published by:Kavya V
First published: