• Home
  • »
  • News
  • »
  • state
  • »
  • HDK: ಮಂಡ್ಯದಿಂದಲೇ ರಾಜಕೀಯ ಆರಂಭಿಸುತ್ತೇನೆ, ಅಲ್ಲೇ ಸುಮಲತಾರನ್ನು ಸೋಲಿಸುತ್ತೇನೆ: ಎಚ್ಡಿಕೆ ಶಪಥ

HDK: ಮಂಡ್ಯದಿಂದಲೇ ರಾಜಕೀಯ ಆರಂಭಿಸುತ್ತೇನೆ, ಅಲ್ಲೇ ಸುಮಲತಾರನ್ನು ಸೋಲಿಸುತ್ತೇನೆ: ಎಚ್ಡಿಕೆ ಶಪಥ

ಈಗ ಪ್ರತಿದಿನ ಹೆಣ್ಣು ಮಕ್ಕಳು ಅಳುತ್ತಿದ್ದಾರೆ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಅಣ್ಣ ಶರಾಬು ನಿಲ್ಲಿಸಿ ಅಂತ ಕೇಳಿಕೊಂಡಿದ್ರು,. ಅಂತೆಯೇ ಕುಮಾರಸ್ವಾಮಿ ಎಣ್ಣೆ ಬಂದ್ ಮಾಡಿದ್ರು ಅಂತ ಹೇಳಿದರು.

ಈಗ ಪ್ರತಿದಿನ ಹೆಣ್ಣು ಮಕ್ಕಳು ಅಳುತ್ತಿದ್ದಾರೆ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಅಣ್ಣ ಶರಾಬು ನಿಲ್ಲಿಸಿ ಅಂತ ಕೇಳಿಕೊಂಡಿದ್ರು,. ಅಂತೆಯೇ ಕುಮಾರಸ್ವಾಮಿ ಎಣ್ಣೆ ಬಂದ್ ಮಾಡಿದ್ರು ಅಂತ ಹೇಳಿದರು.

HDK: ಮುಂದಿನ ರಾಜಕಾರಣವನ್ನು ಮಂಡ್ಯದಲ್ಲೇ ತೋರಿಸುತ್ತೇನೆ… ಮಂಡ್ಯದಲ್ಲಿ ನಮ್ಮನ್ನು ಸೋಲಿಸಿದ್ದೀರಾ ? ಅಲ್ಲಿಂದಲೇ ಪ್ರಾರಂಭ ಮಾಡುತ್ತೇನೆ… ಸಹೋದರ ಅಂಬರೀಶ್ ಮೃತಪಟ್ಟಾಗ ನಾನು ಯಾವ ರೀತಿ ಗೌರವ ಕೊಟ್ಟಿದ್ದೇನೆ ಅಂತ ಜನತೆಗೆ ಗೊತ್ತಿದೆ. ಇವತ್ತು ಮಂಡ್ಯ ಬಗ್ಗೆ ಮಾತನಾಡುತ್ತಾರೆ…

  • Share this:

H D Kumaraswamy: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಮ್ಮ ವಿರುದ್ಧ ಇರುವ ನಾನಾ ಆರೋಪದ ಹೇಳಿಕೆಗಳಿಗೆ ಇಂದು ಉತ್ತರಿಸಿದ್ದಾರೆ. ಮೊದಲು ಮಾಧ್ಯಮಗಳ ಮೇಲೆ ಹರಿಹಾಯ್ದೇ ಮಾತು ಆರಂಭಿಸಿದ ಎಚ್ಡಿಕೆ ಮಾಧ್ಯಮದವರು ನಾನು ಕೊಟ್ಟ ಹೇಳಿಕೆಯನ್ನು ತಿರುಚುವ ಕೆಲಸವನ್ನು ಮಾಡಿದ್ದಾರೆ, ಕಳೆದ 50 ವರ್ಷದಿಂದ ಮಾಧ್ಯಮದ ಎಷ್ಟರಮಟ್ಟಿಗೆ ಸಹಕಾರ ಕೊಟ್ಟಿದ್ದಾರೆ ಅನ್ನೋದು ಗೊತ್ತಿದೆ. ಮೈತ್ರಿ ಸರ್ಕಾರ ಇದ್ದಾಗ,ಮಂಡ್ಯ ಲೋಕಸಭಾ ಚುನಾವಣೆ ಇದ್ದಾಗ ಏನೇನು ಮಾಡಿದ್ದೀರಿ ಅಂತ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಡಿದ್ರು. ಇನ್ನು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪ್ರಜ್ವಲ್ ರೇವಣ್ಣ ನನ್ನು ಕುಮಾರಸ್ವಾಮಿ ನೋಡಿ ಕಲಿಯಬೇಕು ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು ಅವರ ಸಂಸ್ಕೃತಿ ಏನು ಅಂತ ನನಗೆ ಗೊತ್ತಿದೆ, ನಮ್ಮ ಕುಟುಂಬವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ದೇವೇಗೌಡರ ಕುಟುಂಬವನ್ನು ಒಡೆಯಲು ಬಂದವರು ಏನು ಆಗಿದ್ದಾರೆ ಅಂತ ಗೊತ್ತಿದೆ ಎಂದರು.


ನಾನು ಕೆಆರ್‌ಎಸ್ ನ ೨೦ ಕಿಮೀ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕೆಂದು ಆದೇಶ ಮಾಡಿದ್ದವನು. ಮಂಡ್ಯದಲ್ಲಿ ಇವರು ಏನು ಕೆಲಸ ಮಾಡಿದ್ದಾರೆ, ಇವರು ಜನ ಸತ್ತಾಗ ಹೋಗಲಿಲ್ಲ. ಈಗ ಕಲ್ಲು ಗಣಿಗಾರಿಕೆ ವೀಕ್ಷಿಸಲು ಹೋಗಿದ್ದಾರೆ. ನನಗೆ ಸಂಸ್ಕೃತಿ ಪಾಠ ಹೇಳಿ ಕೊಡುತ್ತಾರಾ, ಇವರಿಂದ ಪಾಠ ಕಲಿಯಬೇಕಾ ? ನನ್ನ ಸ್ನೇಹಿತ ಆಸ್ಪತ್ರೆಯಲ್ಲಿ ತೀರಿಕೊಂಡಾಗ ಮಂಡ್ಯಕ್ಕೆ ದೇಹವನ್ನ ತೆಗೆದುಕೊಂಡು ಹೋಗಬಾರದೆಂದು ಹೇಳಿದವರು ಈಗ ಮಂಡ್ಯ ಜಿಲ್ಲೆ, ಅಂಬರೀಶ್ ಬಗ್ಗೆ ಚರ್ಚೆ ಮಾಡುತ್ತೀರಾ… ನಿಮಗೆ ನಾಚಿಕೆಯಾಗಬೇಕು. ಅಂಬರೀಶ್ ರನ್ನ ಬದುಕಿದ್ದಾಗ ಯಾವ ರೀತಿ ನೋಡಿಕೊಂಡ್ರೋ ಗೊತ್ತಿಲ್ಲ, ಈಗ ಅಂಬರೀಶ್ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತಿದೆಯಾ ? ವಿಕ್ರಮ್ ಆಸ್ಪತ್ರೆಯಲ್ಲಿ ಹೇಗೆ ನಡೆದುಕೊಂಡರು ಅನ್ನೋದು ಗೊತ್ತಿದೆ. ಸಿನಿಮಾದಲ್ಲಿ ನಟಿಸಿದಂತೆ ಇಲ್ಲೂ ಮಾಡಬಹುದು ಅಂದುಕೊಂಡಿದ್ದಾರೆ ಎಂದು ಸುಮಲತಾ ಅಂಬರೀಶ್ ಬಗ್ಗೆ ಆಕ್ರೋಶ ಹೊರಹಾಕಿದರು.


ಇದನ್ನೂ ಓದಿ: Thaawarchand Gehlot: ಕರ್ನಾಟಕದ ನೂತನ ರಾಜ್ಯಪಾಲ ತಾವರ್​ಚಂದ್ ಗೆಹ್ಲೋತ್ ಯಾರು? ಮೊದಲು ಎಲ್ಲಿದ್ದರು? ರಾಜ್ಯದ ನಿರೀಕ್ಷೆಗಳೇನು?


ಇದೇ ಸಂದರ್ಭದಲ್ಲಿ ಎಚ್ಡಿಕೆ ಸುಮಲತಾರನ್ನ ಸೋಲಿಸುವ ಶಪಥ ಮಾಡಿದರು. ಮುಂದಿನ ರಾಜಕಾರಣವನ್ನು ಮಂಡ್ಯದಲ್ಲೇ ತೋರಿಸುತ್ತೇನೆ… ಮಂಡ್ಯದಲ್ಲಿ ನಮ್ಮನ್ನು ಸೋಲಿಸಿದ್ದೀರಾ ? ಅಲ್ಲಿಂದಲೇ ಪ್ರಾರಂಭ ಮಾಡುತ್ತೇನೆ… ಸಹೋದರ ಅಂಬರೀಶ್ ಮೃತಪಟ್ಟಾಗ ನಾನು ಯಾವ ರೀತಿ ಗೌರವ ಕೊಟ್ಟಿದ್ದೇನೆ ಅಂತ ಜನತೆಗೆ ಗೊತ್ತಿದೆ. ಇವತ್ತು ಮಂಡ್ಯ ಬಗ್ಗೆ ಮಾತನಾಡುತ್ತಾರೆ…ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ತನಿಖೆ ನಡೆಯಲಿ ಎಂದು ರಾಜ್ಯ ಸರ್ಕಾರಕ್ಕೆ ಎಚ್ಡಿಕೆ ಒತ್ತಾಯ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆ ಆಗುತ್ತಿದೆಯೋ ಸಕ್ರಮ ಗಣಿಗಾರಿಕೆ ಆಗುತ್ತಿದೆಯೋ ಅದರ ಬಗ್ಗೆ ತನಿಖೆ ಆಗಲಿ. ಸಿಬಿಐ ತನಿಕೆ ಮಾಡುತ್ತಿರೋ , ಸಿಐಡಿ ತನಿಕೆ ಮಾಡುತ್ತಿರೋ ಮಾಡಿಸಿ. ಬಿಡಿಎ ಕಾಂಪ್ಲೆಕ್ಸ್ ಗಳ ಬಗ್ಗೆ ಖಾಸಗಿಯವರಿಗೆ ಕೊಡುವ ಪ್ರಸ್ತಾಪ ಕೊಟ್ಟಿದ್ದರೆ ನಾನು ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತೇನೆ.  ನನ್ನ ತೆಜೋವದೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿಕೆ ಗಂಭೀರ ಆರೋಪ ಮಾಡಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Soumya KN
First published: