ಸಿಎಂ ಕುರ್ಚಿಗೆ ಟವಲ್ ಹಾಕಿಕೊಂಡವರು ಯಡಿಯೂರಪ್ಪನ ಟೀಕಿಸ್ತಿದ್ದಾರೆ: ಸಿದ್ದರಾಮಯ್ಯಗೆ HDK ಗುದ್ದು!

ಕಾಂಗ್ರೆಸ್​​​​ನ ಮಾಜಿ ಮುಖ್ಯಮಂತ್ರಿಗಳು ಮುಂದೆ ಮುಖ್ಯಮಂತ್ರಿಯಾಗಲು ಟವಲ್  ಹಾಕಿಕೊಂಡವರು ಯಡಿಯೂರಪ್ಪ ವಿರುದ್ಧ ಮತನಾಡುತ್ತಾರೆ. ಭ್ರಷ್ಟ ಸರ್ಕಾರ ,ಇಂಥ ಭ್ರಷ್ಟ ಮುಖ್ಯಮಂತ್ರಿ ಇರಬಾರದು ಎಂದು ಹೇಳುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ - ಎಚ್​ಡಿಕೆ

ಸಿದ್ದರಾಮಯ್ಯ - ಎಚ್​ಡಿಕೆ

  • Share this:
ಬೆಂಗಳೂರು: ಸಿಎಂ ಬಿ.ಎಸ್​.ಯಡಿಯೂರಪ್ಪ ಬದಲಾವಣೆ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್​ ನಾಯಕರ ದ್ವಂದ್ವ ನಿಲುವನ್ನು ಟೀಕಿಸಿದರು. ರಾಜ್ಯಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ಮಾರಕ. ಬಿಜೆಪಿಯ ಬೆಳವಣಿಗೆ ಬಗ್ಗೆ ನಾನು ಈಗಾಗಲೇ ಹೇಳಿದ್ದೇನೆ. ಬಿಜೆಪಿಯ ರಾಷ್ಟ್ರ ಮತ್ತು ರಾಜ್ಯ ನಾಯಕರಿಗೆ ಹೇಳುತ್ತೇನೆ ನಿಮ್ಮ ತೀರ್ಮಾನಗಳನ್ನು ನಾಲ್ಕು ಗೋಡೆಯ ಮದ್ಯೆ ಬಗೆಹರಿಸಿಕೊಳ್ಳಿ ಎಂದು. ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದ್ದೇನೆ. ಒಂದು ಗುಂಪು ಮುಖ್ಯಮಂತ್ರಿಗಳ ಬಗ್ಗೆ ಅನುಕಂಪದಲ್ಲಿ ಮಾತನಾಡುತ್ತದೆ, ಇನ್ನೊಂದು ಗುಂಪು ಸಿಎಂ ಭ್ರಷ್ಟ ಎನ್ನುತ್ತೆ ಎಂದು ಎಚ್​ಡಿಕೆ ಕಿಡಿಕಾರಿದರು.

ಕಾಂಗ್ರೆಸ್​​​​ನ ಮಾಜಿ ಮುಖ್ಯಮಂತ್ರಿಗಳು ಮುಂದೆ ಮುಖ್ಯಮಂತ್ರಿಯಾಗಲು ಟವಲ್  ಹಾಕಿಕೊಂಡವರು ಯಡಿಯೂರಪ್ಪ ವಿರುದ್ಧ ಮತನಾಡುತ್ತಾರೆ. ಭ್ರಷ್ಟ ಸರ್ಕಾರ ,ಇಂಥ ಭ್ರಷ್ಟ ಮುಖ್ಯಮಂತ್ರಿ ಇರಬಾರದು ಎಂದು ಹೇಳುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು. ಹೊಸದಾಗಿ ಅದರಲ್ಲೂ ಎಂ.ಬಿ ಪಾಟೀಲರು ಅವರು ಯಡಿಯೂರಪ್ಪ ಮಾತನಾಡುತ್ತಿದ್ದಾರೆ. ವೀರಶೈವ ಸಮುದಾಯಕ್ಕೆ ಅಗೌರವ ತರಬಾರದು ಯಡಿಯೂರಪ್ಪರವರನ್ನು ಗೌರವ ದಿಂದ ನಡೆದುಕೊಳ್ಳಬೇಕು ಎಂದು ಅವರು ಇನ್ನೊಂದು ಕಡೆ ಹೇಳುತ್ತಾರೆ. ಕಾಂಗ್ರೆಸ್ ನಾಯಕರ ದ್ವಂದ್ವ ನೀತಿ ಏನು ಅನ್ನೋದು ಗೊತ್ತಾಗುತ್ತದೆ.

ಪ್ರತಿದಿನ ಕೆಲ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳನ್ನು ಭ್ರಷ್ಟ ಭ್ರಷ್ಟ ಎಂದು ಹೇಳುತ್ತಾರೆ. ಇನ್ನೊಂದು ಕಡೆ ವೀರಶೈವ ಸಮುದಾಯಕ್ಕೆ ಗೌರವ ಅಂತ ಹೇಳುತ್ತಾರೆ. ಕಾಂಗ್ರೆಸ್ ನಾಯಕರು ಹೇಳಿಕೆ ನೋಡಿದರೆ,  ಇವರು ಕಾಂಗ್ರೆಸ್ ನಾಯಕರು ಅಥವಾ ಬಿಜೆಪಿ ನಾಯಕರು ಅನ್ನೋ ಅನುಮಾನ ಕಾಡುತ್ತೆ ಎಂದು ವ್ಯಂಗ್ಯವಾಡಿದರು.  ಮೈತ್ರಿ ಸರ್ಕಾರ ತೆಗೆದಾಗ ಯಡಿಯೂರಪ್ಪರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಏನೋ ಶ್ರಮಪಟ್ಟು ಬಂದಿದ್ದೀರಿ ಗೌರವಯುತವಾಗಿ ಸರ್ಕಾರ ಉಳಿಸಿಕೊಂಡು ಹೋಗಿ ಎಂದು ಹೇಳಿದ್ದೇನೆ.

ಇದನ್ನೂ ಓದಿ: ಬಿಎಸ್​ವೈ ಇದ್ದರೆ ಬಿಜೆಪಿ, ಇಲ್ಲ ಎಲ್ಲವೂ ಸರ್ವನಾಶ : ಯಡಿಯೂರಪ್ಪ ಬೆಂಬಲಕ್ಕೆ ನಿಂತ ಸ್ವಾಮೀಜಿಗಳಿಂದ ಎಚ್ಚರಿಕೆ

ಕಾಂಗ್ರೆಸ್ ನಾಯಕರ ಈಗಿನ ನೋವು ನೋಡಿದರೆ ಇಂತಹ ಪರಿಸ್ಥಿತಿ ಕಾಂಗ್ರೆಸ್ ನಾಯಕರಿಗೆ ಬರಬಾರದಿತ್ತು.   ಕಾಂಗ್ರೆಸ್ ನಾಯಕರ ಅಧಿಕಾರಕ್ಕಾಗಿ ಒಂದು ಸಮುದಾಯವನ್ನು ಓಲೈಸಲು ಯಡಿಯೂರಪ್ಪರ ಪರವಾಗಿ ಮಾತನಾಡುವುದು. ಇನ್ನೊಂದೆಡೆ ಯಡಿಯೂರಪ್ಪ ಭ್ರಷ್ಟ ಮುಖ್ಯಮಂತ್ರಿ,ಈ ಹಿಂದೆ ಕ್ಯಾಶ್ ತೆಗೆದುಕೊಳ್ಳುತ್ತಿದ್ರು. ಈಗ ಆರ್ ಟಿ ಜಿಎಸ್ ನಲ್ಲಿ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದಾರೆ.

ಕೆಲ ಶಾಸಕರು ಬಿಜೆಪಿಗೆ ಹೋಗಿ ಎರಡು ವರ್ಷ ಆಗಿದ್ದು, ಅವರು ಬಿಜೆಪಿಯ ಭಾಗವಾಗಿದ್ದಾರೆ. ನಮ್ಮ ಪಕ್ಷದ ಬಿಟ್ಟು ಹೋದವರನ್ನು ಪತ್ತೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆಯಾಗಿಲ್ಲ ಆ ಪ್ರಶ್ನೆ ಉದ್ಭವಿಸಲು ಎಂದು ಸ್ಪಷ್ಟಪಡಿಸಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: