ನಮ್ಮ ಶಾಸಕರ ಬ್ರೈನ್ ವಾಶ್ ಮಾಡ್ತಿದ್ದಾರೆ; GTD ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ HDK ಪರೋಕ್ಷ ಆರೋಪ

HD Kumaraswamy v/s Siddaramaiah : ಹೆಸರೇಳದೆಯೇ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಎಚ್​ಡಿಕೆ, ಜೆಡಿಎಸ್‌ಗೆ ಭವಿಷ್ಯ ಇಲ್ಲ ಎಂದು ಹೇಳುತ್ತಿದ್ದಾರೆ. ಸಿಎಂ ಆಗಿದ್ದವರು, ಸಿಎಂ ಆಗಬೇಕೆನ್ನುವವರು ಅವರು. ಜೆಡಿಎಸ್ ಶಾಸಕರಿಗೆ ಬ್ರೈನ್ ವಾಶ್ ಮಾಡುತ್ತಿದ್ದಾರೆ. ಅವರು ದಯನೇಸಿ ಪರಿಸ್ಥಿತಿ ತಲುಪಿದ್ದಾರೆ, ಜೆಡಿಎಸ್ ಮುಗಿಸಬೇಕೆನ್ನುವ ಹುನ್ನಾರ ಅವರದ್ದು ಎಂದರು.

ಸಿದ್ದರಾಮಯ್ಯ - ಎಚ್​ಡಿಕೆ

ಸಿದ್ದರಾಮಯ್ಯ - ಎಚ್​ಡಿಕೆ

  • Share this:
ಬೆಂಗಳೂರು: ಮೈಸೂರು ಭಾಗದ ನಮ್ಮ ಶಾಸಕರಿಗೆ (JDS MLAs) 12 ಬಾರಿ ಕರೆ ಮಾಡಿದ್ದಾರೆ. ನಮ್ಮ ಪಕ್ಷಕ್ಕೆ ಬನ್ನಿ, ಜೆಡಿಎಸ್​ಗೆ ಭವಿಷ್ಯವಿಲ್ಲ ಎನ್ನುತ್ತಿದ್ದಾರೆ. ಸಿಎಂ (CM) ಆಗಿ ಆಗಿದ್ದವರು, ಸಿಎಂ ಆಗಬೇಕು ಎನ್ನುವವರು ಅವರು ಎನ್ನುವ ಮೂಲಕ ಹೆಸರೇಳೆದೆಯೇ ವಿಪಕ್ಷ ನಾಯಕರ ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಆರೋಪಿಸಿದರು. ಜೆಡಿಎಸ್​ ಶಾಸಕ ಜಿ.ಟಿ.ದೇವೇಗೌಡರನ್ನು (GT Devegowda) ಕಾಂಗ್ರೆಸ್​​ಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ನಮ್ಮ ಪಕ್ಷದ ಶಾಸಕರಿಗೆ 12 ಬಾರಿ ಮಾತನಾಡಿದ್ದಾರೆ, ಏನು ತೀರ್ಮಾನ ಮಾಡಿದೆ ಎಂದು ಕೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಆರೋಪಿಸಿದರು. ಆದರೆ ನಮ್ಮ ಶಾಸಕ ಪಕ್ಷ ಬಿಟ್ಟು ಹೋಗಲ್ಲ, ಕುಮಾರಸ್ವಾಮಿ ಜೊತೆ ಇರುತ್ತೇನೆ ಎಂದು ಹೇಳಿದ್ದಾರೆ ಎನ್ನುವ ಮೂಲಕ ಜಿಟಿಡಿ ಜೆಡಿಎಸ್​ನಲ್ಲೇ ಉಳಿಯುತ್ತಾರೆ ಎಂಬ ಸುಳಿವನ್ನು ಕುಮಾರಸ್ವಾಮಿ ಬಿಟ್ಟುಕೊಟ್ಟರು.

ಜೆಡಿಎಸ್ ಶಾಸಕರಿಗೆ ಬ್ರೈನ್ ವಾಶ್ ಮಾಡುತ್ತಿದ್ದಾರೆ

ಹೆಸರೇಳದೆಯೇ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಎಚ್​ಡಿಕೆ, ಜೆಡಿಎಸ್‌ಗೆ ಭವಿಷ್ಯ ಇಲ್ಲ ಎಂದು ಹೇಳುತ್ತಿದ್ದಾರೆ. ಸಿಎಂ ಆಗಿದ್ದವರು, ಸಿಎಂ ಆಗಬೇಕೆನ್ನುವವರು ಅವರು. ಜೆಡಿಎಸ್ ಶಾಸಕರಿಗೆ ಬ್ರೈನ್ ವಾಶ್ ಮಾಡುತ್ತಿದ್ದಾರೆ. ಅವರು ದಯನೇಸಿ ಪರಿಸ್ಥಿತಿ ತಲುಪಿದ್ದಾರೆ, ಜೆಡಿಎಸ್ ಮುಗಿಸಬೇಕೆನ್ನುವ ಹುನ್ನಾರ ಅವರದ್ದು ಎಂದರು. ನಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುವುದು ಬೇಡ. ಇಲ್ಲಿಂದ ಎಲ್ಲ ಶಕ್ತಿ ಪಡೆದುಕೊಂಡು ನಮ್ಮ ಬಗ್ಗೆ ಮಾತನಾಡಬೇಡಿ. ಯಾರು ಪಕ್ಷ ಬಿಡಲು ಒಂದು ಹೆಜ್ಜೆ ಇಟ್ಟಿದ್ದಾರೆ. ಯಾರು ಎರಡೂ ಕಾಲು ಆಚೆ ಇಟ್ಟಿದ್ದಾರೆ ಗೊತ್ತಿದೆ. ನಿಮಗೆ ಎಲ್ಲಿ ಭವಿಷ್ಯ ಇದೆ ಎಂದು ಅನ್ನಿಸುವುದೋ ಅಲ್ಲಿಗೆ ಹೋಗಿ. ಪಕ್ಷ ಬಿಟ್ಟು ಹೋಗುತ್ತಾರೆ ಎಂದು ಅಳುತ್ತ ಕೂರಲು ಆಗಲ್ಲ. ಮನವೊಲಿಸಲು ಸಾಧ್ಯವಿದ್ದರೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದರು.

HDK ಕಾರ್ಯಕ್ರಮಕ್ಕೆ ಗೈರು, ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಹಾಜರು

ಕಳೆದ ಕೆಲ ದಿನಗಳಿಂದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್​ ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್​ ತೊರೆಯುತ್ತಾರೆ ಎಂಬ ಮಾತು ದಟ್ಟವಾಗಿ ಹೇಳಿ ಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಎದುರಾಳಿಯಾಗಿದ್ದ ಸಿದ್ದರಾಮಯ್ಯ ಜೊತೆ ಜಿಟಿಡಿ ವೇದಿಕೆ ಹಂಚಿಕೊಂಡಿದ್ದರು. ಪಕ್ಷಕ್ಕೆ ಬರುವುದಾದರೆ ಅವರ ನಿರ್ಧಾರ ಎಂದು ಸಿದ್ದರಾಮಯ್ಯ ಕೂಡ ಹೇಳಿದ್ದರು. ಇದಕ್ಕೂ 2 ದಿನಗಳ ಹಿಂದೆ ಎಚ್​.ಡಿ.ಕುಮಾರಸ್ವಾಮಿ ಅವರು ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ಜಿಟಿಡಿ ಗೈರಾಗಿದ್ದರು. ಈ ಎಲ್ಲಾ ಬೆಳವಳಿಗಳಿಂದ ಜಿಟಿಡಿ ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರುವುದು ಬಹುತೇಕ ಖಚಿತ ಎನ್ನಲಾಗುತ್ತಿತ್ತು.

ಪರಿಷತ್​​ ಟಿಕೆಟ್​ ಮೂಲಕ ಮನವೊಲಿಕೆ?  

ಆದರೆ ಜಿಟಿಡಿ ಅವರನ್ನು ಉಳಿಸಿಕೊಳ್ಳು ಜೆಡಿಎಸ್​ ನಾಯಕರು ಪ್ರಯತ್ನಿಸುತ್ತಿದ್ದಾರೆ. ಜೆಡಿಎಸ್​ ಶಾಸಕ ಸಾರಾ ಮಹೇಶ್​ 2-3 ದಿನಗಳ ಹಿಂದೆ ಮಾತನಾಡಿ, ಜಿಟಿಡಿ ಪಕ್ಷ ತೊರೆಯಲ್ಲ ಅವರ ಸಮ್ಮುಖದಲ್ಲಿ ಮೈಸೂರಲ್ಲಿ ಪರಿಷತ್​ ಚುನಾವಣೆ ಎದುರಿಸುತ್ತೇವೆ ಎಂದಿದ್ದರು. ಜಿಟಿಡಿ ಕುಟುಂಬಸ್ಥರೇ ಜೆಡಿಎಸ್​ನಿಂದ ಪರಿಷತ್​ ಚುನಾವಣೆಗೆ ಸ್ಪರ್ಧಿಸಬಹುದು ಎಂದಿದ್ದರು. ಜಿಟಿ ದೇವೇಗೌಡ ಕುಟುಂಬಸ್ಥರಿಗೆ ಪರಿಷತ್​ ಜೆಡಿಎಸ್​ ಟಿಕೆಟ್​ ನೀಡುವ ಮೂಲಕ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಯತ್ನಿಸಲಾಗುತ್ತಿದೆ ಎಂಬ ಮಾತು ಕೇಳಿ ಬಂದಿತ್ತು.

ಇದನ್ನೂ ಓದಿ: BSY ಜೊತೆ ಇದ್ದಿದ್ದಕ್ಕೆ ರೇಣುಕಾಚಾರ್ಯರನ್ನು ತುಳಿದಿದ್ದಾರೆ, ಆದರೆ ಸಿದ್ದರಾಮಯ್ಯ ನನ್ನ ತುಳಿದಿಲ್ಲ; Zameer ತಿರುಗೇಟು

ಇಂದಿನ ಸುದ್ದಿಗೋಷ್ಠಿಯಲ್ಲಿ ಪಕ್ಷದ ಬಗ್ಗೆ ಮಾತನಾಡಿದ ಎಚ್​ಡಿಕೆ, ಪಕ್ಷದ ಕಚೇರಿಯಲ್ಲಿ 9 ದಿನಗಳಿಂದ ಸಂಘಟನೆ ಕಾರ್ಯಕ್ರಮ ನಡೆದಿದೆ. 31 ಜಿಲ್ಲೆಗಳ ಮುಖಂಡರ ಜೊತೆ ಸಭೆ ನಡೆಸಿದ್ದೇವೆ. ಸಿಂದಗಿ ಕ್ಷೇತ್ರದಲ್ಲಿ ನಿರೀಕ್ಷೆ ವೈಫಲ್ಯ ಆಯ್ತು. ಕಾರ್ಯಕರ್ತರು ಹುಮ್ಮಸ್ಸಿನಿಂದ ಬಹಳ ಆಸಕ್ತಿ ಇತ್ತು. ಎಲ್ಲ ಜಿಲ್ಲೆಯಿಂದ ಬಂದವರು ಸಂಘಟನಾತ್ಮಕವಾಗಿ ಹೆಚ್ಚು ಆಸಕ್ತಿ ಇದೆ. ಜನರ ಸಮೀಪ ಹೋಗಲು ಕೆಲ ಯೋಜನೆಗಳ ಅನುಷ್ಟಾನವೂ ಆಗಿದೆ ಎಂದರು. 6-8 ಎಂಎಲ್‌ಸಿ ಸ್ಥಾನಗಳಲ್ಲಿ ನಾವು ಸ್ಪರ್ಧಿಸುತ್ತೇವೆ. ಕೆಲ ದಿನಗಳಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸುತ್ತೇವೆ. ಹಾಸನ ಅಭ್ಯರ್ಥಿ ಬಗ್ಗೆ ಅಲ್ಲಿನ ಶಾಸಕರು ತೀರ್ಮಾನಿಸುತ್ತಾರೆ, ಈಗಾಗಲೇ ಸಭೆ ನಡೆಸಲಾಗಿದೆ ಎಂದರು.
Published by:Kavya V
First published: