ಮಳೆಯಿಂದ ಜನ ಸಂಕಷ್ಟದಲ್ಲಿದ್ದರೆ, BJPಯವರಿಗೆ ಪರಿಷತ್ ಚುನಾವಣೆಯದ್ದೇ ಚಿಂತೆ; HDK ಟೀಕೆ

ರಾಜ್ಯದ ಎಲ್ಲಾ ಭಾಗದಲ್ಲಿಯೂ ಮಳೆಯಾಗುತ್ತಿದೆ. ಲಕ್ಷಾಂತರ ಎಕ್ಟೇರ್ ಭೂಮಿಯಲ್ಲಿ ಬೆಳೆ ನಾಶವಾಗಿದೆ. ರೈತನಿಗೆ ನಷ್ಟವಾದರೆ, ಗ್ರಾಹಕನಿಗೆ ದರ ಏರಿಕೆಯಾಗಲಿದೆ. ಸರ್ಕಾರ ರೈತನ ಪರವಾಗೂ ಇಲ್ಲ ಗ್ರಾಹಕರ ಪರವಾಗಿಯೂ ಇಲ್ಲ. ಬಿಜೆಪಿ ನಾಯಕರು ಶಂಖ ಊದಲು ಹೋಗಿದ್ದಾರೆ ಎಂದು ಕಿಡಿಕಾರಿದರು.

ಎಚ್​.ಡಿ ಕುಮಾರಸ್ವಾಮಿ.

ಎಚ್​.ಡಿ ಕುಮಾರಸ್ವಾಮಿ.

  • Share this:
ಬೆಂಗಳೂರು: ಮಳೆಯಿಂದ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದ, ಬಿಜೆಪಿಯವರು (BJP) ಜನಸ್ವರಾಜ್​ ಯಾತ್ರೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ(HD Kumaraswamy) ಸರ್ಕಾರ ಹಾಗೂ ಸಚಿವರನ್ನು ಟೀಕಿಸಿದರು(Criticises). ಇಂದು ಬೆಳಗ್ಗೆ ನಾನು ಟ್ವೀಟ್ ಮಾಡಿದ್ದೆ. ರಾಜ್ಯದಲ್ಲಿ ನಿರಂತರ ಮಳೆ (Rain) ಸುರಿಯುತ್ತಿದೆ, ರಾಜ್ಯದ ಎಲ್ಲಾ ಭಾಗದಲ್ಲಿಯೂ ಮಳೆಯಾಗುತ್ತಿದೆ. ಲಕ್ಷಾಂತರ ಎಕ್ಟೇರ್ ಭೂಮಿಯಲ್ಲಿ ಬೆಳೆ ನಾಶವಾಗಿದೆ. ರೈತನಿಗೆ ನಷ್ಟವಾದರೆ, ಗ್ರಾಹಕನಿಗೆ ದರ ಏರಿಕೆಯಾಗಲಿದೆ. ಸರ್ಕಾರ ರೈತನ ಪರವಾಗೂ ಇಲ್ಲ ಗ್ರಾಹಕರ ಪರವಾಗಿಯೂ ಇಲ್ಲ. ಬಿಜೆಪಿ ನಾಯಕರು ಶಂಖ ಊದಲು ಹೋಗಿದ್ದಾರೆ ಎಂದು ಕಿಡಿಕಾರಿದರು. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕೆರೆ ಕೋಡಿ ಬಿದ್ದಿವೆ. ನಿನ್ನೆ ಸರ್ಕಾರ ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಅಧಿಕಾರಿಗಳಿಗೆ ಸ್ಥಳ ಪರಿಶೀಲಿಸಿ ಎಂದು ಹೇಳಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಹೋಗ್ತಾರಾ ಎಂದು ಮಂತ್ರಿಗಳಿಗೆ ಹೇಳಿಲ್ಲ. ಅಧಿಕಾರಿಗಳಿಗೆ ಹೇಳಿದ್ದಾರೆ ಅವರು ಎಷ್ಟರ ಮಟ್ಟಿಗೆ ಇವರ ಮಾತು ಕೇಳ್ತಾರೆ ಎಂದು ಟೀಕಿಸಿದರು.

ಜನರ ಕೆಂಗಣ್ಣಿಗೆ ಗುರಿಯಾಗುವ ಮುಂಚೆ ಎಚ್ಚೆತ್ತುಕೊಳ್ಳಿ

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಸ್ವರಾಜ್ ಯಾತ್ರೆ ಮಾಡ್ತಾ ಇದ್ದಾರೆ. ಜನರಿಗಿಂತ ಜನ ಸ್ವರಾಜ್ ಯಾತ್ರೆ ಚುನಾವಣೆ ಮುಖ್ಯವಾಗಿದೆ. ಜನರ ಕೆಂಗಣ್ಣಿಗೆ ಗುರಿಯಾಗುವುದಕ್ಕೂ ಮುಂಚೆ ಎಚ್ಚೆತ್ತುಕೊಳ್ಳಿ. ನಾಳೆನೇ ಚುನಾವಣೆ ಇಲ್ಲ, ಜನರ ಪರಿಸ್ಥಿತಿ ನೋಡಿ. ಚುನಾವಣೆ ಪದ್ದತಿ ನಮಗಿಂತ ನಿಮಗೆ ಗೊತ್ತಿದೆ, ಎಲ್ಲೇ ಕೂತರೂ ಚುನಾವಣೆ ಗೆಲ್ತೀರಾ ಆ ಪದ್ದತಿ ಗೊತ್ತಿದೆ. ಪ್ರಚಾರಕ್ಕೆ ಸರ್ಕಾರ ದುಡ್ಡು ಚೆಲ್ಲುತ್ತಾ ಇದೆಯಲ್ಲ ಅಷ್ಟು ಪ್ರಚಾರ ನಾನು ಮಾಡ್ತಾ ಇಲ್ಲ ಎಂದು ಕುಹಕವಾಡಿದರು.

ನಿದ್ದೆ ಮಾಡೋಕು ಅವರಿಗೆ ಆಗ್ತಾ ಇಲ್ಲ

ಕುಮಾರಸ್ವಾಮಿ ಅವರದಂತೆ ದಿನಕ್ಕೆ ಎರಡು ಬಾರಿ ಕ್ಯಾಮರಾ ಮುಂದೆ ನಿಲ್ಲಕ್ಕೆ ಆಗುತ್ತಾ ಎಂಬ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆಗೆ ಎಚ್​ಡಿಕೆ ತಿರುಗೇಟು ನೀಡಿದರು. ನನಗೆ ಅಧಿಕಾರ ಇಲ್ಲ ಕೆಲಸ ಇಲ್ಲ. ನಾನು ಕ್ಯಾಮರಾ ಮುಂದೆ ಬರ್ತಾ ಇದ್ದೀನಿ. ಇಂತಹ ಗೃಹ ಸಚಿವರು ಇಲ್ಲಿಯವರೆಗೆ ಸಿಕ್ಕೇ ಇಲ್ಲ. ಅಷ್ಟು ಕೆಲಸ ಮಾಡ್ತಾ ಇದ್ದಾರೆ. ನಿದ್ದೆ ಮಾಡೋಕು ಅವರಿಗೆ ಆಗ್ತಾ ಇಲ್ಲ ಎಂದು ವ್ಯಂಗ್ಯವಾಡಿದರು. ರೈತರ ಕಷ್ಟ ಕೇಳಿ ಅಂದೆ ಅಷ್ಟೇ, ನಂತರನೂ ಯಾತ್ರೆಯನ್ನು ಮಾಡಬಹುದು ಅಂದಿದ್ದೇನೆ. ಗೃಹ ಸಚಿವರಿಗೆ ಹೇಳೋಕೆ ನಾನ್ಯಾರು. ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿ ಹೇಳಿಕೆ ನೀಡಿದ್ದೇನೆ ಎಂದರು.

ಸೋಮವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಪರಿಷತ್​ ಚುನಾವಣೆಗೆ ಜೆಡಿಎಸ್​ ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ಚರ್ಚೆ ಮಾಡಿದ್ದೇವೆ. ಅಂತಿಮವಾಗಿ ಪಟ್ಟಿಯನ್ನು ದೇವೇಗೌಡರಿಗೆ ಕಳಿಸುತ್ತೇವೆ. ನಮ್ಮ ನಿರ್ಧಾರ ಸೋಮವಾರ ಪ್ರಕಟವಾಗುತ್ತದೆ ಎಂದರು. ಸಂದೇಶ್ ನಾಗರಾಜ್ ವಿಚಾರವಾಗಿ ಅವರು ಘೋಷಣೆ ಮಾಡಿದ್ದಾರೆ. ಆ ಬಗ್ಗೆ ನಮ್ಮ ಮುಂದೆ ಪ್ರಸ್ತಾವನೆ ಇಲ್ಲ. ಪ್ರಸ್ತಾವನೆ ಬರದೇ ಲಘುವಾಗಿ ಮಾತನಾಡೋದು ಸರಿಯಲ್ಲ. ಅವರು ಪಕ್ಷ ಬಿಟ್ಟು ಮೂರು ವರ್ಷ ಆಗಿದೆ ಎಂದು ಹೇಳಿದ್ದಾರೆ. ಅವರಿಗೆ ಅನುಕೂಲ ಆಗೋ ಪಕ್ಷಕ್ಕೆ ಹೋಗಿದ್ದಾರೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯನವರೇ ನಿಮ್ಮನ್ನು ಸೋಲಿಸಲು ಕಾಂಗ್ರೆಸ್​​ನವರೇ ಕಾಯುತ್ತಿದ್ದಾರೆ: KS Eshwarappa ಒಳಗುದ್ದು

ಇಂದು ಬೆಳಗ್ಗೆ ಮಾತನಾಡಿದ್ದ ಗೃಹ ಸಚಿವರು, ಕುಮಾರಸ್ವಾಮಿ ಹಾಗೇನೆ ದಿನಕ್ಕೆ ಎರಡು ಬಾರಿ ಕ್ಯಾಮರಾ ಮುಂದೆ ನಿಲ್ಲಕ್ಕೆ ಆಗುತ್ತಾ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ. ನಾವು ನಾಲ್ಕು ಜನರ ತಂಡ ಮಾಡಿಕೊಂಡು ಜನರ ಸಂಕಷ್ಟ ಆಲಿಸಲು ತೆರಳುತ್ತಿದ್ದೇವೆ. ಬೆಂಗಳೂರಲ್ಲಿ ಇದ್ರೆ ಬೆಂಗಳೂರಲ್ಲಿ ಇದ್ದೀರಿ ಅಂತ ಹೇಳ್ತಾರೆ. ಹಳ್ಳಿ ಕಡೆ ಬಂದ್ರೆ ಶಂಖ ಊದುತ್ತೀರಿ ಅಂತಾರೆ. ಜನರ ಕಷ್ಟ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬಾರದಾ ಎಂದು ಅರಗ ಜ್ಞಾನೇಂದ್ರ ಪ್ರಶ್ನೆ ಮಾಡಿದರು. ಬೆಂಗಳೂರಿನಲ್ಲಿದ್ದು ಮೀಟಿಂಗ್ ಮಾಡಿದ್ರೆ ಹಳ್ಳಿ ಕಡೆ ಹೋಗುತ್ತಿಲ್ಲ ಎಂದು ಇವರೇ ಹೇಳುತ್ತಾರೆ. ಹಳ್ಳಿ ಕಡೆ ಹೋಗುತ್ತಿದ್ದರೆ  ಶಂಖ ಊದಿಕೊಂಡು ಒಡಾಡುತ್ತಿದ್ದಾರೆ ಎಂದು  ಟೀಕೆ ಮಾಡುತ್ತಾರೆ. ನಾವೇನು ಕುಮಾರಸ್ವಾಮಿ ಅವರ ಹತ್ರ ಕೇಳಿ ಕೆಲಸ ಮಾಡಬೇಕಾ ? ಜನರ ಕಷ್ಟ ಅರ್ಥ ಮಾಡಿಕೊಳ್ಳುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.
Published by:Kavya V
First published: