HD Deve Gowda: ನೈಸ್ ಕಂಪನಿ ಗೌರವಕ್ಕೆ ಧಕ್ಕೆ; ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರಿಗೆ 2 ಕೋಟಿ ರೂ. ದಂಡ!

HD Deve Gowda: ನೈಸ್ ಕಾರಿಡಾರ್ ಕಂಪನಿ ವಿರುದ್ಧ 10 ವರ್ಷದ ಹಿಂದೆ ಸಂದರ್ಶನ ನೀಡಿದ್ದ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ತಮ್ಮ ಆರೋಪವನ್ನು ಸಾಬೀತುಪಡಿಸಲು ವಿಫಲರಾಗಿರುವುದರಿಂದ 2 ಕೋಟಿ. ರೂ. ಪರಿಹಾರ ನೀಡಬೇಕೆಂದು ಕೋರ್ಟ್​ ಆದೇಶಿಸಿದೆ.

ಹೆಚ್.ಡಿ. ದೇವೇಗೌಡ

ಹೆಚ್.ಡಿ. ದೇವೇಗೌಡ

  • Share this:
    ಬೆಂಗಳೂರು (ಜೂನ್ 22): ನೈಸ್ ಕಂಪನಿ (NICE) ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಮಾಜಿ ಪ್ರಧಾನಮಂತ್ರಿ ಹೆಚ್​.ಡಿ. ದೇವೇಗೌಡರು (HD Deve Gowda) ತಮ್ಮ ಆರೋಪವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ. ಈ ಕಾರಣಕ್ಕೆ ನೈಸ್ ಕಂಪನಿಗೆ ದೇವೇಗೌಡರು 2 ಕೋಟಿ ರೂ. ಪರಿಹಾರ ನೀಡಬೇಕೆಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್​ ಆದೇಶ ನೀಡಿದೆ.

    10 ವರ್ಷಗಳ ಹಿಂದೆ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದ ದೇವೇಗೌಡರು ನಂದಿ ಇನ್​ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್) ಸಂಸ್ಥೆ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳೀಕೆ ನೀಡಿದ್ದರು. ಇದನ್ನು ವಿರೋಧಿಸಿ ದೇವೇಗೌಡರ ವಿರುದ್ಧ ನೈಸ್ ಕಂಪನಿ ಮಾನನಷ್ಟ ಮೊಕದ್ದಮೆ (Defamation Case) ದಾಖಲಿಸಿತ್ತು. ನೈಸ್ ಕಂಪನಿಯ ವಿರುದ್ಧ ತಾವು ಮಾಡಿದ್ದ ಆರೋಪವನ್ನು ಸಾಬೀತುಪಡಿಸಲು ದೇವೇಗೌಡರಿಗೆ ಸಾಧ್ಯವಾಗದ ಕಾರಣ, ನೈಸ್​ ಕಂಪನಿಯ ಹೆಸರಿಗೆ ಧಕ್ಕೆ ತಂದಿರುವುದಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.

    ಇದನ್ನೂ ಓದಿ: Yadagiri: ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದಿದ್ದಕ್ಕೆ ಅಧಿಕಾರಿಗಳಿಗೇ ಅವಾಜ್; ಊರನ್ನೇ ಖಾಲಿ ಮಾಡಿದ ಯಾದಗಿರಿಯ ಜನ!

    ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶ ಮಲ್ಲನಗೌಡ ಮಾಜಿ ಪ್ರಧಾನಿ ದೇವೇಗೌಡರಿಗೆ 2 ಕೋಟಿ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ.

    ಏನಿದು ಘಟನೆ?:
    2011ರ ಜೂನ್ 20ರಂದು ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ, ನೈಸ್ ಕಂಪನಿ ನಮ್ಮ ರಾಜ್ಯದ ಜನರ ಹಣವನ್ನು ಲೂಟಿ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ನೈಸ್ ಯೋಜನೆಯ ವಿರುದ್ಧ ಆಕ್ರೋಶ ಹೊರಹಾಕಿದ್ದರು.

    ಇದನ್ನೂ ಓದಿ: Karnataka Unlock 2.0: ಶಿವಮೊಗ್ಗ, ಉಡುಪಿ ಸೇರಿ 6 ಜಿಲ್ಲೆಗಳು ಇಂದಿನಿಂದ ಅನ್​ಲಾಕ್; ಬಾರ್, ಅಂಗಡಿ, ರೆಸ್ಟೋರೆಂಟ್​ಗಳು ಓಪನ್

    ಆ ಸಂದರ್ಶನ ಪ್ರಸಾರವಾಗುತ್ತಿದ್ದಂತೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ನೈಸ್ ಕಂಪನಿ, ದೇವೇಗೌಡರು ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಯಿಂದ ನೈಸ್ ಕಂಪನಿಯ ಗೌರವಕ್ಕೆ ಧಕ್ಕೆಯಾಗಿದೆ. ಈ ನಿಟ್ಟಿನಲ್ಲಿ ದೇವೇಗೌಡರು ನಮ್ಮ ಕಂಪನಿಗೆ 10 ಕೋಟಿ ರೂ. ಪರಿಹಾರ ನೀಡಬೇಕು ಎಂದು ನೈಸ್ ಕಂಪನಿ ಮಾನನಷ್ಟ ಮೊಕದ್ದಮೆ ಹೂಡಿತ್ತು.
    ಈ ಹಿನ್ನೆಲೆಯಲ್ಲಿ ನಿನ್ನೆ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್, ನೈಸ್ ಕಂಪನಿಯ ವಿರುದ್ಧ ದೇವೇಗೌಡರು ಮಾಡಿದ ಆರೋಪಗಳಿಗೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ, ತಮ್ಮ ದಾಖಲೆರಹಿತ ಆರೋಪದಿಂದ ನೈಸ್ ಕಂಪನಿಯ ಗೌರವಕ್ಕೆ ಧಕ್ಕೆ ತಂದಿರುವುದಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕೆಂದು ತೀರ್ಪು ನೀಡಿದೆ.

    ನೈಸ್ ಕಾರಿಡಾರ್ ಯೋಜನೆ ಆರಂಭವಾದಾಗಿನಿಂದ ದೇವೇಗೌಡರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ದೇವೇಗೌಡರ ಮಗ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಕೂಡ, ನೈಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅನೇಕ ರೈತರ ನೂರಾರು ಎಕರೆ ಜಮೀನನ್ನು ನೈಸ್ ಕಂಪನಿ ವಶಪಡಿಸಿಕೊಂಡಿದೆ ಎಂದು ಆರೋಪಿಸಿದ್ದರು. ಇದನ್ನು ವಿರೋಧಿಸಿ 2012ರಲ್ಲಿ ನೈಸ್ ಕಂಪನಿ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು.
    Published by:Sushma Chakre
    First published: