ಮತ್ತೆ ಖಾಕಿಗಳ ಕಣ್ಣಿಗೆ ಮಣ್ಣೆರೆಚಿದ ಹ್ಯಾಕರ್ ಶ್ರೀಕಿ.. ಬೆಂಗಳೂರು ಪೊಲೀಸರಿಗೆ ಶುರುವಾಯ್ತು ಪೀಕಲಾಟ!

ಜಾಮೀನಿನ ಷರತ್ತುಗಳ ಪ್ರಕಾರ, ಶ್ರೀಕಿ ಪ್ರತಿ ಶನಿವಾರ ತನಿಖಾಧಿಕಾರಿ (IO) ಮುಂದೆ ಹಾಜರಾಗಿ ರಿಜಿಸ್ಟರ್‌ನಲ್ಲಿ ಸಹಿ ಮಾಡಬೇಕಿತ್ತು. ಆದರೆ ಮೂರು ವಾರಗಳ ಹಿಂದೆ ಜೈಲಿನಿಂದ ಬಿಡುಗಡೆಯಾದಾಗಿನಿಂದ ಶ್ರೀಕಿ, ಪೊಲೀಸರ ಮುಂದೆ ಬಂದಿಲ್ಲ. ವಿಚಾರಣೆಯಲ್ಲೂ ಸಹಾಯ ಮಾಡುತ್ತಿಲ್ಲ.

ಹ್ಯಾಕರ್​ ಶ್ರೀಕಿ

ಹ್ಯಾಕರ್​ ಶ್ರೀಕಿ

  • Share this:
ಬಿಟ್​​ ಕಾಯಿನ್​​ (Bitcoin) ಮಾಸ್ಟರ್​ ಮೈಂಡ್​, ಇಂಟರ್​ ನ್ಯಾಷನಲ್​ ಹ್ಯಾಕರ್​ ಶ್ರೀಕಿ (Hacker Sriki) ಇತ್ತೀಚೆಗೆ ಬೆಂಗಳೂರಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ (Bail) ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದ. ನಂತರ ಜಾಮೀನಿನ ನಿಯಮಗಳನ್ನು ಮೀರಿ ಶ್ರೀಕಿ ನಾಪತ್ತೆಯಾಗಿದ್ದಾನೆ. ಇದು ಪೊಲೀಸ್​ ಇಲಾಖೆಗೆ (Police Department) ತಲೆನೋವಾಗಿದ್ದು, ಶ್ರೀಕಿಯ ಜಾಮೀನು ರದ್ದು ಮಾಡುವಂತೆ ಕೋರ್ಟ್​​ ಮೊರೆ ಹೋಗಲು ಪೊಲೀಸರು ನಿರ್ಧರಿಸಿದ್ದಾರೆ. ಶ್ರೀಕಿಯನ್ನು ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲು ಅನುಮತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಶ್ರೀಕಿ, ನಿಯಮಗಳನ್ನು ಉಲ್ಲಂಘಿಸಿ ಕಾಣೆಯಾಗಿದ್ದಾನೆ.

3 ವಾರಗಳಿಂದ ರಿಜಿಸ್ಟರ್‌ನಲ್ಲಿ ಸಹಿ ಹಾಕಿಲ್ಲ

ಜೀವನ್​​ ಭೀಮಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಜಾಮೀನಿನ ಷರತ್ತುಗಳ ಪ್ರಕಾರ, ಶ್ರೀಕಿ ಪ್ರತಿ ಶನಿವಾರ ತನಿಖಾಧಿಕಾರಿ (IO) ಮುಂದೆ ಹಾಜರಾಗಿ ರಿಜಿಸ್ಟರ್‌ನಲ್ಲಿ ಸಹಿ ಮಾಡಬೇಕಿತ್ತು ಎಂಬ ಮಾಹಿತಿ ಮೂಲಕಗಳಿಂದ ತಿಳಿದು ಬಂದಿದೆ. ಆದರೆ ಮೂರು ವಾರಗಳ ಹಿಂದೆ ಜೈಲಿನಿಂದ ಬಿಡುಗಡೆಯಾದಾಗಿನಿಂದ ಶ್ರೀಕಿ, ಪೊಲೀಸರ ಮುಂದೆ ಬಂದಿಲ್ಲ. ವಿಚಾರಣೆಯಲ್ಲೂ ಸಹಾಯ ಮಾಡುತ್ತಿಲ್ಲ ಎನ್ನುತ್ತಿವೆ ಬಲ್ಲ ಮೂಲಗಳು.

ಮತ್ತೆ ಚೆಳ್ಳೆಹಣ್ಣು ತಿನ್ನಿಸಿದ ಶ್ರೀಕಿ

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನಾವು ತನಿಖೆಯ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ. ಆದರೆ ಮೂರು ವಾರಗಳಿಂದ ಶ್ರೀಕಿ ಎಲ್ಲಿದ್ದಾರೆ ಎಂಬುದನ್ನು ತಿಳಿದಿಲ್ಲ. ಆತ ಯಾವುದೇ ವೈದ್ಯಕೀಯ ಪ್ರಕ್ರಿಯೆ ಅಥವಾ ಇತರ ತುರ್ತು ಪರಿಸ್ಥಿತಿಯಲ್ಲಿದ್ದರೆ, ಅದನ್ನು ಐಒ ಗಮನಕ್ಕೆ ತರಬೇಕು. ಆದರೆ ಆತ ಎಲ್ಲಿದ್ದಾನೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಶ್ರೀಕಿಯ ಜಾಮೀನು ಆದೇಶವನ್ನು ಹಿಂಪಡೆಯುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗುವಂತೆ ನಾವು ತನಿಖಾ ತಂಡಕ್ಕೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಯಾರಿವನು ಹ್ಯಾಕರ್ ಶ್ರೀಕಿ? Bitcoin ದಂಧೆ ಮಾಸ್ಟರ್​​ಮೈಂಡ್​​ Hacker Sriki ಇತಿಹಾಸ ಹೇಳಿದ್ರೆ ದಂಗಾಗಿ ಹೋಗ್ತೀರ!

ತನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ ನಂತರ ನಗರ ಪೊಲೀಸರು ಹ್ಯಾಕರ್‌ ಗೆ ಭದ್ರತೆಯನ್ನು ನೀಡಿದ್ದರು. ಆತ ಈಗ ಎಲ್ಲಿದ್ದಾರೆ ಎಂಬ ಬಗ್ಗೆ ಭದ್ರತಾ ಸಿಬ್ಬಂದಿಗೂ ಗೊತ್ತಿಲ್ಲ. ಮಾದಕ ದ್ರವ್ಯ ಸೇವಿಸಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಶ್ರೀಕಿ ವಿರುದ್ಧ ಪ್ರಕರಣ ದಾಖಲಾಗಿದೆ.

4ನೇ ತರಗತಿಯಲ್ಲೇ ಹ್ಯಾಕಿಂಗ್​​ನಲ್ಲಿ ಆಸಕ್ತಿ

ಕನ್ನಡದ ಹುಡುಗ ಶ್ರೀಕಿ ಬಾಲ್ಯದಲ್ಲೇ ಬುದ್ಧಿವಂತ, ಆದರೆ ಈತನ ಬುದ್ಧಿವಂತಿಕೆ ಖರ್ಚಾಗಿದ್ದೆಲ್ಲಾ ಕಾನೂನು ಬಾಹಿರ ಕೆಲಸಗಳಿಗೇನೆ. 4ನೇ ತರಗತಿಯಲ್ಲಿ ಇರುವಾಗಲೇ ಶ್ರೀಕಿ ಹ್ಯಾಕರ್​ಗಳ ಗುಂಪಿನ ಸದಸ್ಯನಾಗಿದ್ದ. ಬಾಲ್ಯದಲ್ಲೇ ಈತನ ಅಂತರ್ಜಾಲ ಕಳ್ಳಾಟ ಶುರುವಾಗಿದೆ. ದೇಶ ವಿದೇಶಗಳನ್ನ ಸುತ್ತಿದ್ದ ಶ್ರೀಕಿ 2015ರಲ್ಲಿ ಭಾರತಕ್ಕೆ ಮರಳಿರುತ್ತಾರೆ. ಭಾರತಕ್ಕೆ ಬರುವ ಮುಂಚೆ ನೆದರ್‌ ಲ್ಯಾಂಡ್ಸ್ ನಲ್ಲಿ ನೆಲೆಸಿದ್ದ. ಇನ್ನೂ ನೆದರ್‌ಲ್ಯಾಂಡ್ಸ್‌ನಲ್ಲಿ ಶ್ರೀಕಿ ಜೊತೆಯಲ್ಲಿ ಇದ್ದ  ಡ್ರೈವರ್ ವಾಲಿದ್ದ್  ಶ್ರೀಕಿ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದ. ಮನೆಯಲ್ಲಿದ್ದ 2 ಲ್ಯಾಪ್ ಟಾಪ್, 2 ಫೋನ್ ಗಳು ಹಾಗೂ ಪಾಸ್‌ಪೋರ್ಟ್ ಗಳನ್ನು ಕಳ್ಳತನ ಮಾಡಿದ್ದ ಡ್ರೈವರ್ ವಾಲಿದ್ದ್.

ಬಾಲ್ಯ-ಓದು-ಹಿಮಾಲಯ ವಾಸ    

ಶ್ರೀಕೃಷ್ಣ 10ನೇ ತರಗತಿಯಲ್ಲಿ ಇರುವಾಗಲೇ ಸಾವಿರಾರು ಬಿಟ್​​ಕಾಯಿನ್​ಗಳನ್ನು ಹ್ಯಾಕ್ ಮಾಡಿದ್ದ. ಶ್ರೀಕೃಷ್ಣ ಶಾಲೆ ಯಲ್ಲಿ ವ್ಯಾಸಂಗ ಮಾಡುವಾಗಲೇ ಶೇನ್ ಎಂಬ ವಿದ್ಯಾರ್ಥಿ ಪರಿಚಯವಾಗಿದ್ದು ಇಬ್ಬರು ಜೊತೆಯಲ್ಲಿ ಕೋಡ್ ವರ್ಡ್ ಗಳನ್ನು ಕಲಿತಿದ್ದಾರೆ. ಬೆಂಗಳೂರಿನ ಜೈನ್ ಕಾಲೇಜ್ ನಲ್ಲಿ PCMC ವ್ಯಾಸಂಗ ಮಾಡಿರುತ್ತಾನೆ. ಶ್ರೀಕೃಷ್ಣ  2nd PUC ವ್ಯಾಸಂಗ ಮಾಡುತ್ತಿರುವಾಗಲೇ ಕ್ರಿಪ್ಟೋ ಕರೆನ್ಸಿ ಬಗ್ಗೆ ಕಲಿತಿದ್ದಾನೆ. ಶ್ರೀಕೃಷ್ಣ 17ನೇ ವರ್ಷಕ್ಕೆ ನನ್ನ ಫ್ರೆಂಡ್ ರಿತ್ವಿಕ್ ಜೊತೆ ಹಿಮಾಲಯಕ್ಕೆ ಸಹ ತೆರಳಿದ್ದಾನೆ. ಹಿಮಾಲಯದಲ್ಲಿರುವ ಬದ್ರಿನಾಥ್ ನಲ್ಲಿ ಸುಮಾರು ತಿಂಗಳುಗಳು ನೆಲೆಸಿದ್ದಾರೆ. ರಿತ್ವಿಕ್ ತಾಯಿಂದ ಸಿದ್ದಾಪುರ ಹಾಗೂ ತಿಲಕ್​​ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಸಹ ದಾಖಲಾಗಿದೆ.
Published by:Kavya V
First published: