ಮತ್ತೆ ಅನ್ನಭಾಗ್ಯ ಯೋಜನೆಯ ಅಕ್ಕಿ ಕಡಿತಕ್ಕೆ ಮುಂದಾದ ಸರ್ಕಾರ; ಸರ್ಕಾರದ ವಿರುದ್ಧ ಎಚ್​ಕೆ ಪಾಟೀಲ್​ ಕಿಡಿ

ಸರ್ಕಾರ ಬಡವರ ವಿರೋಧಿ ನಿರ್ಣಯವನ್ನು ಕೈಬಿಡಬೇಕು. ಒಂದು ವೇಳೆ ಅಕ್ಕಿ ಕಡಿತ ಮಾಡಿದರೆ, ಗಂಭೀರ ಪರಿಸ್ಥಿತಿ ಅನುಸರಿಸಬೇಕು ಎಂದು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.

ಎಚ್​.ಕೆ ಪಾಟೀಲ್​​

ಎಚ್​.ಕೆ ಪಾಟೀಲ್​​

 • Share this:
  ಬೆಂಗಳೂರು (ಏ. 22): ಕೊರೋನಾ ಸಂಕಷ್ಟ ಕಾಲದಿಂದ ಇಡೀ ದೇಶವೇ ತತ್ತರಿಸಿದೆ. ಕೋವಿಡ್​ ಆರೋಗ್ಯ ವ್ಯವಸ್ಥೆ ಮಾತ್ರವಲ್ಲದೇ, ಆರ್ಥಿಕತೆ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಕಳೆದ ಬಾರಿ ಲಾಕ್​ಡೌನ್​ನಿಂದಾಗಿ ಬಡ, ಮಧ್ಯಮ ವರ್ಗದವರೂ ಮಾತ್ರವಲ್ಲದೇ ಎಲ್ಲಾ ಸ್ತರದ ಉದ್ಯಮಗಳು ಸಂಕಷ್ಟಕ್ಕೆ ಒಳಗಾಗಿದ್ದವು. ಈ ಆರ್ಥಿಕತೆಯ ಪೆಟ್ಟಿನಿಂದ ಸುಧಾರಿಸಿಕೊಳ್ಳುವ ಮುನ್ನವೇ ಕೊರೋನಾ ಎರಡನೇ ಅಲೆ ಜನರನ್ನು ಮತ್ತಷ್ಟು ಹೈರಾಣಾಗಿಸುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಪ್ರಸ್ತುತ ಬಡವರಿಗೆ ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಅಕ್ಕಿ ನೀಡುತ್ತಿದ್ದು, ಅದರಲ್ಲಿಯೂ ಮೂರು ಕೆಜಿ ಅಕ್ಕಿಯನ್ನು ಕಡಿತ ಮಾಡಲು ಮುಂದಾಗಿದೆ. ಕೋವಿಡ್​ ಸಂದರ್ಭದಲ್ಲಿ ಈ ರೀತಿ ಅಕ್ಕಿ ಕಡಿತ ಮಾಡುವ ಕ್ರಮ ಸರಿಯೇ ಎಂದು ಕಾಂಗ್ರೆಸ್​ ನಾಯಕ, ಮಾಜಿ ಸಚಿವ ಎಚ್​.ಕೆ ಪಾಟೀಲ್​ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಈ ಕುರಿತು ಪತ್ರಿಕಾ ಪ್ರಕಣೆ ಹೊರಡಿಸಿರುವ ಮಾಜಿ ಸಚಿವರು, ಕೋವಿಡ್​ನಿಂದಾಗಿ ಬಡವರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ಮತ್ತೆ ಮೂರು ಕೆಜಿ ಅಕ್ಕಿ ಕಡಿತಗೊಳಿಸಲು ಮುಂದಾಗಿದೆ. ಜನರು ಉದ್ಯೋಗ ಸಿಗದೇ ಕಂಗೆಟ್ಟಿರುವ ಈ ಸಮಯದಲ್ಲಿ ಈ ಅನ್ನಭಾಗ್ಯ ಯೋಜನೆ ಅವರಿಗೆ ಆಸರೆಯಾಗುತ್ತಿತ್ತು. ಈಗ ಇದರಲ್ಲಿ ಅಕ್ಕಿ ಕಡಿತ ಮಾಡಿದ್ದು, ಅವರು ಇನ್ನಷ್ಟು ಸಮಸ್ಯೆಗೆ ಗುರಿಯಾಗಲಿದ್ದಾರೆ. ಸರ್ಕಾರ ಬಡವರ ವಿರೋಧಿ ನಿರ್ಣಯವನ್ನು ಕೈಬಿಡಬೇಕು. ಒಂದು ವೇಳೆ ಅಕ್ಕಿ ಕಡಿತ ಮಾಡಿದರೆ, ಗಂಭೀರ ಪರಿಸ್ಥಿತಿ ಅನುಸರಿಸಬೇಕು ಎಂದು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.  ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನ ಭಾಗ್ಯ ಯೋಜನೆ ಅಡಿ ಬಿಪಿಎಲ್​ ಕುಟುಂಬದ ಸದಸ್ಯರಿಗೆ ತಲಾ ಏಳು ಕೆಜಿ ಅಕ್ಕಿ ನೀಡುತ್ತಿತ್ತು. ಬಿಜೆಪಿ ಸರ್ಕಾರದ ಬಂದ ಬಳಿಕ ಈ ಅಕ್ಕಿಯನ್ನಯ ಕಡಿತಗೊಳಿಸಿ ಐದು ಕೆಜಿಗೆ ಇಳಿಕೆ ಮಾಡಿದ್ದರು. ಸರ್ಕಾರದ ಈ ಕ್ರಮ ವಿಪಕ್ಷ ನಾಯಕರುಗಳು ಸಾಕಷ್ಟು ಟೀಕೆ ಮಾಡಿದ್ದರು. ಈ ಕುರಿತು ಸ್ಪಷ್ಟನೆ ನೀಡಿದ ಬಿಜೆಪಿ ಸರ್ಕಾ ಏಳು ಕೆಜಿ ಅಕ್ಕಿ ಬದಲಿಗೆ ಐದು ಕೆಜಿ ಅಕ್ಕಿ ನೀಡಿ, ಎರಡು ಕೆಜಿ ರಾಗಿ ಅಥವಾ ಜೋಳ ನೀಡಲಾಗುವುದು ಎಂದು ಸಮಾಜಾಯಿಷಿ ನೀಡಿತ್ತು.

  ಇದನ್ನು ಓದಿ: ಕೋವಿಡ್​ ಅಬ್ಬರ; ತನ್ನ ಕೈಲಾಸಕ್ಕೆ ಭಾರತೀಯ ಭಕ್ತರಿಗೆ ನಿರ್ಬಂಧ ವಿಧಿಸಿದ ಸ್ವಾಮಿ ನಿತ್ಯಾನಂದ

  ಈಗ ಈ ಅಕ್ಕಿಯಲ್ಲಿ ಮತ್ತೆ ಮೂರು ಕೆಜಿ ಅಕ್ಕಿ ಇಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. ಈ ಮೂಲಕ ತಲಾ ಎರಡು ಕೆಜಿ ಅಕ್ಕಿ ವಿತರಿಸಲು ಮುಂದಾಗಿದೆ. ಇದರ ಜೊತೆಗೆ ಮೂರು ಕೆಜಿ ರಾಗಿ ಮತ್ತು ಎರಡು ಕೆಜಿ ಗೋಧಿ ನೀಡಲಾಗುತ್ತಿದೆ. ಆದರೆ, ಬಿಪಿಎಲ್​ ಕಾರ್ಡುದಾರರು ತಮಗೆ ರಾಗಿ, ಗೋಧಿ ಬದಲು ಅಕ್ಕಿಯನ್ನೇ ನೀಡಲಿ ಎಂದು ಒತ್ತಾಯಿಸಿದ್ದಾರೆ.

  ಕೋವಿಡ್​ ಸಂಕಷ್ಟದ ಜೊತೆ ಬೆಲೆ ಏರಿಕೆ ಜೊತೆ ಜನರು ತತ್ತರಿಸಿದ್ದಾರೆ. ಈ ನಡುವೆ ಸರ್ಕಾರ ಬಡ ಜನರ ಸಂಕಷ್ಟಕ್ಕೆ ಮಿಡಿಯಬೇಕು. ಈ ಹಿನ್ನಲೆ ಯಾವುದೇ ಕಾರಣಕ್ಕೂ ಅಕ್ಕಿ ಕಡಿತಗೊಳಿಸದೇ, ಈ ಹಿಂದೆ ನೀಡಿದ ಭರವಸೆಯಂತೆ ಐದು ಕೆಜಿ ಅಕ್ಕಿ ಯನ್ನು ನೀಡಬೇಕು. ಈ ಮೂಲಕ ಜನರ ಕಷ್ಟಕ್ಕೆ ಮಿಡಿಯಬೇಕು ಎಂದು ತಿಳಿಸಿದ್ದಾರೆ.
  Published by:Seema R
  First published: