Fraud Case: 892 ಕೋಟಿ ರೂ. ಹಗರಣದಲ್ಲಿ ಶ್ರೀ ಗುರುರಾಘವೇಂದ್ರ ಸೊಸೈಟಿ ಅಧ್ಯಕ್ಷ ಅರೆಸ್ಟ್, ಮುಂದೇನು?

ಗ್ರಾಹಕರು ಹಾಗೂ ಠೇವಣಿದಾರರಿಗೆ ಮೋಸ ಮಾಡಿದ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರ ಬಂಧನವೇನೋ ಆಗಿದೆ. ಹಾಗಿದ್ರೆ ಮುಂದೇನಾಗುತ್ತೆ? ಕಳೆದುಕೊಂಡ ಹಣ ವಾಪಸ್ ಗ್ರಾಹಕರು, ಠೇವಣಿದಾರರಿಗೆ ಸಿಗುತ್ತಾ? ಈ ಹಗರಣದ ಕುರಿತಂತೆ ರಾಜ್ಯ ಸರ್ಕಾರ ಹೇಳಿದ್ದೇನು? ಇಲ್ಲಿದೆ ಓದಿ ಸಂಪೂರ್ಣ ಮಾಹಿತಿ...

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ನಕಲಿ ದಾಖಲೆ (Fake Documents) ಸೃಷ್ಟಿಸಿ, ಗ್ರಾಹಕರಿಗೆ, ಠೇವಣಿದಾರರಿಗೆ (Depositers) ಮೋಸ ಮಾಡಿದ್ದ ಕೋ-ಆಪರೇಟಿವ್ ಸೊಸೈಟಿಗೆ (Co-Operative Society)  ಮತ್ತೊಂದು ಆಘಾತ ಎದುರಾಗಿದೆ. ಸಹಕಾರ ಸಂಘದ ಅಧ್ಯಕ್ಷರನ್ನೇ ಇಡಿ (ED) ಅಧಿಕಾರಿಗಳು ಬಂಧಿಸಿದ್ದಾರೆ. ಹೌದು, ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿ (Sri Guru Raghavendra Co-Operative Society) ಅಧ್ಯಕ್ಷನಾಗಿದ್ದ ಕೆ.ರಾಮಕೃಷ್ಣ ಅವರನ್ನು ನಿನ್ನೆ ಜಾರಿ ನಿರ್ದೇಶನನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಹಾಗಾದರೆ ಸೊಸೈಟಿ ಅಧ್ಯಕ್ಷ ರಾಮಕೃಷ್ಣ ಅವರ ಮೇಲೆ ಇರುವ ಆರೋಪಗಳು ಏನು? ಅವರ ಬಂಧನಕ್ಕೆ ಕಾರಣವಾದ ಅಂಶಗಳು ಏನು? ರಾಮಕೃಷ್ಣ ಅವರ ಬಂಧನದ ನಂತರದ ಬೆಳವಣಿಗೆಗಳೇನು? ಈ ಕುರಿತಂತೆ ರಾಜ್ಯ ಸರ್ಕಾರ ಹಾಗೂ ಸಹಕಾರ ಸಚಿವರು ಹೇಳಿದ್ದೇನು? ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ ಓದಿ…

ಇಡಿ ಅಧಿಕಾರಿಗಳಿಂದ ರಾಮಕೃಷ್ಣ ಬಂಧನ

ಒಂದಲ್ಲ, ಎರಡಲ್ಲ, ಇದು ಬರೋಬ್ಬರಿ 1,554 ಕೋಟಿ ರೂಪಾಯಿಗೆ ಸಂಬಂಧಿಸಿದಂತೆ ನಡೆದ ಬೃಹತ್ ಹಗರಣ. ಈ ಕೇಸ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕ್ಷ ಕೆ.ರಾಮಕೃಷ್ಣ ಅವರನ್ನು ಬಂಧಿಸಲಾಗಿದ್ದು, ಬೆಂಗಳೂರು ನಗರ ಜಿಲ್ಲೆಯ ಪ್ರಧಾನ ಸೆಷನ್ಸ್ ನ್ಯಾಯಾಧೀಶರ ಕೋರ್ಟ್ ಮುಂದೆ ನಿನ್ನೆ ಹಾಜರುಪಡಿಸಲಾಯಿತು.

ಫೆಬ್ರವರಿ 18ರವರೆಗೂ ಇಡಿ ವಶಕ್ಕೆ

72 ವರ್ಷದ ಕೆ.ರಾಮಕೃಷ್ಣ ಅವರನ್ನು ಸೋಮವಾರ ಸಂಜೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರು ನಗರದಲ್ಲೇ ಬಂಧಿಸಿದ್ದರು. ನಿನ್ನೆ ಪ್ರಧಾನ ನ್ಯಾಯಾಧೀಶ ಅನಿಲ್‌ ಬಿ. ಕಟ್ಟಿ ಅವರ ಮುಂದೆ ಹಾಜರುಪಡಿಸಲಾಗಿತ್ತು.  ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ರಾಮಕೃಷ್ಣ ಅವರನ್ನು ಫೆಬ್ರವರಿ 18ರವರೆಗೂ ಇಡಿ ಆದೇಶಕ್ಕೆ ನೀಡಿ ಆದೇಶ ನೀಡಿತು.

ಇದನ್ನೂ ಓದಿ: ABG Shipyard case: ಭಾರತದ ಅತಿ ದೊಡ್ಡ ಬ್ಯಾಂಕ್ ವಂಚನೆ ಇದಂತೆ; ಈ ಪ್ರಕರಣದ ಬಗ್ಗೆ ನಿಮಗೆಷ್ಟು ಗೊತ್ತು?

ಸೊಸೈಟಿ ಮೇಲಿರುವ ಆರೋಪಗಳೇನು?

ರಾಮಕೃಷ್ಣ ಅವರು ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಕಾಲದಲ್ಲಿ ಬರೋಬ್ಬರಿ 2,876ರಷ್ಟು ಸಾಲಗಳನ್ನು ನೀಡಿದ್ದರು. ಈ ಸಾಲದ ಮೊತ್ತವೇ ₹1,544.43 ಕೋಟಿ ರೂಪಾಯಿಗಳಷ್ಟಿತ್ತು. ಇದರಲ್ಲಿ ₹ 892.85 ಕೋಟಿ ಬೋಗಸ್‌ ದಾಖಲೆಗಳಿಗೆ ಸಾಲ ಕೊಡಲಾಗಿದೆ ಎಂದು ಇವರ ವಿರುದ್ಧ ಬಸವನಗುಡಿ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಈ ಕುರಿತಂತೆ ಸಿಐಡಿ ತನಿಖೆ ನಡೆಯುತ್ತಿದೆ.

ಅವರ ಮೇಲಿನ ಆರೋಪದಂತೆ 892 ಕೋಟಿ ರೂಪಾಯಿ ಏನಾಯ್ತು ಎಂಬ ಬಗ್ಗೆ ಇಡಿ ಅಧಿಕಾರಿಗಳು ವಿಚಾರಣೆಗೆ ಕರೆಸಿದ್ದರು. ಆದರೆ ಸಮರ್ಪಕ ಉತ್ತರ ಹಾಗೂ ಸೂಕ್ತ ದಾಖಲೆ ಒದಗಿಸುವಲ್ಲಿ ರಾಮಕೃಷ್ಣ ವಿಫಲರಾದರು. ಹೀಗಾಗಿ ಅವರನ್ನು ಬಂಧಿಸಲಾಯ್ತು.

“ಗ್ರಾಹಕರ ಹಿತರಕ್ಷಣೆಗೆ ಸರ್ಕಾರ ಬದ್ಧ” ಎಂದ ಸಚಿವರು

ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿ ಹರಗಣದ ತನಿಖೆ ಸಮರ್ಪಕವಾಗಿ ನಡೆಯುತ್ತಿದೆ ಅಂತ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. “ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ಆಡಳಿತ ಮಂಡಳಿ ರದ್ದುಗೊಳಿಸಿ ಆರ್‌ಬಿಐ ಸಲಹೆ ಹಾಗೂ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ” ಎಂದರು.

ಇದನ್ನೂ ಓದಿ: Financial Tips: ಭವಿಷ್ಯದ ಚಿಂತೆ ಕಾಡ್ತಿದೆಯೇ? ಹಾಗಾದ್ರೆ ನಿಮ್ಮ ಸಂಗಾತಿ ಜೊತೆ ಸೇರಿ ಹೀಗೆ ಪ್ಲಾನ್ ಮಾಡಿ

ಅಲ್ಲದೆ, “ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 64ರ ಅನ್ವಯ ವಿಚಾರಣೆಗೆ ಆದೇಶಿಸಲಾಗಿದೆ. 2014-15 ರಿಂದ 2018 - 19ರವರೆಗಿನ ಲೆಕ್ಕ ಪತ್ರಗಳನ್ನು ಮರುಲೆಕ್ಕ ಪರಿಶೋಧನೆಗೆ ಆದೇಶಿಸಲಾಗಿದೆ. ಜಾರಿ ನಿರ್ದೇಶನಾಲಯ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ” ಎಂದಿದ್ದಾರೆ.

ಕೇಂದ್ರ ಸರ್ಕಾರದಿಂದಲೂ ಗ್ರಾಹಕರಿಗೆ ಭರವಸೆ

ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಕೂಡ ಮಧ್ಯಪ್ರವೇಶಿಸಿದೆ.  ಠೇವಣಿದಾರರಿಗೆ 5 ಲಕ್ಷ ರೂಪಾಯಿವರೆಗಿನ ಠೇವಣಿ ವಿಮೆ ಮೊತ್ತವನ್ನು ಮರುಪಾವತಿ ಮಾಡುವುದಾಗಿ ತಿಳಿಸಿದೆ. ಬ್ಯಾಂಕ್‌ನಲ್ಲಿ ಒಟ್ಟು 43,619 ಠೇವಣಿದಾರರಿದ್ದು, ಇದರಲ್ಲಿ 33,390ರಷ್ಟು ಮಂದಿ ಐದು ಲಕ್ಷ ರೂಪಾಯಿವರಗೆ ಠೇವಣಿ ಮಾಡಿದ್ದಾರೆ.

ಬ್ಯಾಂಕ್‌ನ ಒಟ್ಟು ಠೇವಣಿ 2403.21 ಕೋಟಿ ರೂಪಾಯಿಯಷ್ಟಿದ್ದು,  ನೀಡಿರುವ ಸಾಲದ ಮೊತ್ತವು 1438 ಕೋಟಿ ರುಪಾಯಿಗಳಾಗಿದೆ. ಇದರಿಂದ ಬ್ಯಾಂಕ್ ಗ್ರಾಹಕರಿಗೆ ಸಾಕಷ್ಟು ನಷ್ಟವಾಗಿತ್ತು.
Published by:Annappa Achari
First published: