• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ನಿಶ್ಚಿತಾರ್ಥಕ್ಕೆ ಹೊರಟ್ಟಿದ್ದ ವರನಿಗೆ ಶಾಕ್; ಸಮಯ ಮೀರುತ್ತಿದ್ದರೂ ವಾಹನ ತಡೆ ಹಿಡಿದ ಪೊಲೀಸರು!

ನಿಶ್ಚಿತಾರ್ಥಕ್ಕೆ ಹೊರಟ್ಟಿದ್ದ ವರನಿಗೆ ಶಾಕ್; ಸಮಯ ಮೀರುತ್ತಿದ್ದರೂ ವಾಹನ ತಡೆ ಹಿಡಿದ ಪೊಲೀಸರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಧುವಿನ ಕಡೆಯವರು ಇಂದು ನಿಶ್ಚಿತಾರ್ಥ, ಲಗ್ನ ಶಾಸ್ತ್ರ ಇಟ್ಟುಕೊಂಡಿದ್ದಾರೆ. ಈಗಾಗಲೇ ಪುರೋಹಿತರು ಸಹ ಮನೆಗೆ ಬಂದಿದ್ದಾರೆ. ಎಲ್ಲಾ ಸಿದ್ದತೆ ಆಗಿದೆ, ಪೊಲೀಸರು ಲಗ್ನ ಪತ್ರಿಕೆ ನೋಡಿದರೂ ಬಿಡುತ್ತಿಲ್ಲ.

  • Share this:

ಬೆಂಗಳೂರು: ರಾಜ್ಯದಲ್ಲಿ ಲಾಕ್​​ಡೌನ್​​ನ ಮತ್ತೆ 14 ದಿನಗಳ ಕಾಲ ವಿಸ್ತರಿಸಲಾಗಿದೆ. ಅನಗತ್ಯವಾಗಿ ಓಡಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖುದ್ದು ಸಿಎಂ ಬಿ.ಎಸ್​.ಯಡಿಯೂರಪ್ಪ ಎಚ್ಚರಿಸಿದ್ದರು. ವೀಕೆಂಡ್​​ ಎಂದು ನಿನ್ನೆ, ಇಂದು ವಿನಾಕಾರಣ ರಸ್ತೆಗಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ನಗರದ ಬಹುತೇಕ ರಸ್ತೆಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿ ತುರ್ತು ಕಾರಣಗಳಿರುವವರಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಸಣ್ಣಪುಟ್ಟ ಕಾರಣ ಹೇಳಿಕೊಂಡು ರಸ್ತೆಗಿಳಿದವರ ವಾನಗಳನ್ನು ಮುಲಾಜಿಲ್ಲದೇ ವಶಕ್ಕೆ ಪಡೆಯಲಾಗುತ್ತಿದೆ. ಪೊಲೀಸರ ಕಟ್ಟುನಿಟ್ಟಿನ ಚೆಕ್ಕಿಂಗ್​ನಿಂದ ನಿಶ್ಚಿತಾರ್ಥಕ್ಕೆ ಹೊರಟ್ಟಿದ್ದ ವರ ಹಾಗೂ ಆತನ ಕುಟುಂಬ ಪರದಾಡುವಂತಾಗಿದೆ.


ಎಸ್ ಜೆಪಿ ರಸ್ತೆ ನಿವಾಸಿಯಾಗಿರುವ ವರನಿಗೆ ಮೇ 28ರಂದು ಮದುವೆ ನಿಶ್ಚಿಯಿಸಿಕೊಂಡಿದ್ದರು. ಇಂದು ಸರಳವಾಗಿ ವಧುವಿನ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮವಿತ್ತು. ಇದಕ್ಕಾಗಿ ವರ ಹಾಗೂ ಆತನ ಕುಟುಂಬ ಕಾರಿನಲ್ಲಿ ವಧುವಿನ ಮನೆಯಿರುವ ಬಿಡದಿ ಬಳಿಯ ಶಾನಮಂಗಲಕ್ಕೆ ಹೊರಟಿದ್ದರು. ಒಂದೇ ಕಾರಿನಲ್ಲಿ ಹೊರಟ್ಟಿ ನಾಲ್ವರನ್ನು ಕಲಾಸಿಪಾಳ್ಯ ಪೊಲೀಸರು ತಡೆದಿದ್ದಾರೆ. ವಾಹನ ತಪಾಸಣೆ ನಡೆಸಿ ಹೋಗಲು ಬಿಡುವುದಿಲ್ಲ ಎಂದಿದ್ದಾರಂತೆ.


ಮಧ್ಯಾಹ್ನ 3 ಗಂಟೆಯೊಳಗೆ ವಧುವಿನ ಮನೆಗೆ ಹೋಗಬೇಕು ಎಂದು ವರನ ಮನೆಯವರು ಮನವಿ ಮಾಡಿಕೊಂಡಿದ್ದಾರೆ. ವಧುವಿಗೆ ಹೂವಿನ ಹಾರ, ನಿಶ್ಚಿತಾರ್ಥ ಶಾಸ್ತ್ರಕ್ಕೆ ಬೇಕಾದ ಸಾಮಗ್ರಿಗಳೆಲ್ಲಾ ಕಾರಿನಲ್ಲಿ ಇವೆ. ವಧುವಿನ ಕಡೆಯವರು ಇಂದು ನಿಶ್ಚಿತಾರ್ಥ, ಲಗ್ನ ಶಾಸ್ತ್ರ ಇಟ್ಟುಕೊಂಡಿದ್ದಾರೆ. ಈಗಾಗಲೇ ಪುರೋಹಿತರು ಸಹ ಮನೆಗೆ ಬಂದಿದ್ದಾರೆ. ಎಲ್ಲಾ ಸಿದ್ದತೆ ಅಗಿದೆ ಅದರೆ ಪೊಲೀಸರು ಲಗ್ನ ಪತ್ರಿಕೆ ನೋಡಿದರೂ ಬಿಡುತ್ತಿಲ್ಲ. ಯಾವಾಗ ನಾವು ಅಲ್ಲಿಗೆ ಹೋಗೊದು, ಟೈಮ್ ಅಗ್ತಿದೆ  ಎಂದು ವರನ ಅಣ್ಣ ಅಳಲು ತೋಡಿಕೊಂಡಿದ್ದಾರೆ. ಆದರೆ ಪೊಲೀಸರು ಮಾತ್ರ ಮದುವೆ ಕಾರ್ಡ್ ನಲ್ಲಿ ಕಾರಿನ ನಂಬರ್ ಹಾಕಿಸ ಬೇಕಿತ್ತು ಎಂದು ಹೋಗಲು ಬಿಟ್ಟಿಲ್ಲ.


ಇನ್ನು ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೂ ಪೊಲೀಸರು ಕಟ್ಟುನಿಟ್ಟಿನ ತಪಾಸಣೆಯಲ್ಲಿ ತೊಡಗಿದ್ದು, ನೂರಾರು ವಾಹನಗಳನ್ನು ಸೀಜ್​​ ಮಾಡಿದ್ದಾರೆ. ಹಲಸೂರು ಗೇಟ್ ಪೋಲೀಸರು ಬೆನ್ಜ್ ಕಾರೊಂದನ್ನು ಸೀಜ್ ಮಾಡಿರು. ಮಲ್ಲೇಶ್ವರಂ ನಿಂದ ಜಯನಗರಕ್ಕೆ ಹೋಗ್ತಿದ್ದ ವ್ಯಕ್ತಿಯೊಬ್ಬ ಕಾರನ್ನು ಡ್ರೈವ್ ಮಾಡುತ್ತಿದ್ದರು. ಪೊಲೀಸರ ತಪಾಸಣೆ ವೇಳೆ ನಮ್ಮ ಕಡೆಯವರು ಮಲ್ಲೇಶ್ವರಂ ಅಸ್ಪತ್ರೆಯಲ್ಲಿ ಇದ್ದಾರೆ, ಅದಕ್ಕೆ ಹೋಗಿದ್ದೆ ಎಂದರು. ಬಳಿಕ ಕರೆ ಮಾಡಿ ಕೊಡಿ ಮಾತಾಡೋಣ ಎಂದು ಪೊಲೀಸರು ಹೇಳಿದ್ದಕ್ಕೆ ಮಹಿಳಾ ಆಯೋಗದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ರೆಕಮಂಡೇಷನ್ ಮಾಡುವಂತೆ ಕೇಳಿಕೊಂಡಿದ್ದಾರೆ. ಇದನ್ನು ಅರಿತ ಪೋಲೀಸರು ಬೆನ್ಜ್ ಕಾರನ್ನು ವಶಕ್ಕೆ ಪಡೆದಿದ್ದಾರೆ.


ಇದಾಗಿ ಕೆಲವೇ ಸಮಯದಲ್ಲಿ ಮತ್ತೊಂದು ಬೆನ್ಜ್ ಕಾರು ಪೋಲೀಸರ ವಶಕ್ಕೆ ಬಂದಿದೆ. ವಿಚಾರಣೆ ನಡೆಸಿದಾಗ ಸ್ನೇಹಿತನ ಜೊತೆ ಊಟ ಮಾಡಲು ಹೊರಗಡೆ ಬಂದಿದ್ದಾಗಿ ಬೆನ್ಜ್ ಚಾಲಕ ಯುವಕ ತಿಳಿಸಿದ್ದಾರೆ. ಬೆನ್ಜ್ ಕಾರಿನಲ್ಲಿ ಇಬ್ಬರು ಯುವಕರು ರೌಂಡ್ ಹೊಡೆಯುತ್ತಿದ್ದು ಪೋಲೀಸರ ಪ್ರಶ್ನೆ ವೇಳೆ ಊಟಕ್ಕೆ ಹೋಗ್ತಿದ್ದೀವಿ ಎಂದಿದ್ದಾರೆ. ಇಷ್ಟೊತ್ತು ಏನ್ ಮಾಡ್ತಿದ್ರಿ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಕ್ಕೆ ಯುವಕರು ಸೈಲೆಂಟ್ ಆಗಿದ್ದಾರೆ. ಬಳಿಕ ಪೋಲೀಸರು ಬೆನ್ಜ್ ಕಾರು ಸೀಜ್ ಮಾಡಿದ್ದಾರೆ.

Published by:Kavya V
First published: