Cubbon Park: ಕಬ್ಬನ್ ಪಾರ್ಕ್​​​ನಲ್ಲಿ ಇನ್ಮುಂದೆ ನಿಮ್ಮ ನಾಯಿ ಮಲ-ಮೂತ್ರ ವಿಸರ್ಜನೆ ಮಾಡಿದರೆ ನೀವೇ ಕ್ಲೀನ್ ಮಾಡಬೇಕು

Guidelines: ಉದ್ಯಾನಕ್ಕೆ ನಾಯಿಗಳನ್ನು ಕರೆತರುವವರು 6 ಅಡಿಗಳಿಗಿಂತ ಕಡಿಮೆ ಉದ್ದದ ಸರಪಳಿಯಿಂದ ಕಟ್ಟಿ  ಹಾಕಿರಬೇಕು. ಸರಪಳಿಯುನ್ನು ಕೈಯಲ್ಲಿಡಿದುಕೊಂಡು ನಾಯಿಯನ್ನು ಉದ್ಯಾನದಲ್ಲಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಳ್ಳಂಬೆಳಗ್ಗೆ ತಮ್ಮ ಮನೆಯಲ್ಲಿನ (Home) ಮುದ್ದು ಶ್ವಾನಗಳ (Dog) ಜೊತೆ ಕಬ್ಬನ್ ಪಾರ್ಕಿಗೆ (Cubbon Park) ವಾಕಿಂಗ್ (Walking) ಹೋಗಬೇಕು ಎಂದುಕೊಂಡಿದ್ದವರಿಗೆ ಕಳೆದವಾರ ಕರ್ನಾಟಕ ಹೈಕೋರ್ಟ್ (Karnataka High Court) ಶಾಕ್ ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ತೋಟಗಾರಿಕೆ ಇಲಾಖೆ (State Horticulture department) ಕಬ್ಬನ್ ಪಾರ್ಕಿಗೆ, ಸಾಕು ನಾಯಿಗಳನ್ನು ವಾಕಿಂಗ್ ಕರೆತಂದು ಮಲ-ಮೂತ್ರ ವಿಸರ್ಜನೆ ಮಾಡಿಸುವ ಮಾಲೀಕರಿಗಾಗಿ (Owners) ಉಗ್ರ ಸ್ವರೂಪದ ನಿಬಂಧನೆಗಳನ್ನು ವಿಧಿಸಿದೆ. ಹೀಗಾಗಿ ಇನ್ನು ಮುಂದೆ ಬೆಳ್ಳಂಬೆಳಗ್ಗೆ ಅಥವಾ ಸಾಯಂಕಾಲದ ವೇಳೆಯಲ್ಲಿ ತಮ್ಮ ಸಾಕುನಾಯಿಗಳ ಜೊತೆ ಕಬ್ಬನ್ ಪಾರ್ಕಿಗೆ ವಾಕಿಂಗ್ ಬರುವ ಮಾಲೀಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ.

     ಸಾಕುನಾಯಿಗಳು ಕಬ್ಬನ್ ಪಾರ್ಕ್ ಪ್ರವೇಶಿಸಲು ಈ ನಿಯಮ ಕಡ್ಡಾಯ

    1) ಉದ್ಯಾನಕ್ಕೆ ನಾಯಿಗಳನ್ನು ಕರೆತರುವವರು 6 ಅಡಿಗಳಿಗಿಂತ ಕಡಿಮೆ ಉದ್ದದ ಸರಪಳಿಯಿಂದ ಕಟ್ಟಿ  ಹಾಕಿರಬೇಕು. ಸರಪಳಿಯುನ್ನು ಕೈಯಲ್ಲಿಡಿದುಕೊಂಡು ನಾಯಿಯನ್ನು ಉದ್ಯಾನದಲ್ಲಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.

    ಇದನ್ನೂ ಓದಿ: ಸಾಕು ನಾಯಿ ಜೊತೆ ಕಬ್ಬನ್ ಪಾರ್ಕಿಗೆ ವಾಕ್ ಹೋಗ್ತೀರಾ? ಹಾಗಾದ್ರೆ ಈ ಸುದ್ದಿ ಓದಿ

    2) ತಮ್ಮ ನಾಯಿಗೆ ರೆಬೀಸ್‌ ರೋಗ ನಿರೋಧಕ ಚುಚ್ಚುಮದ್ದು ಹಾಕಿಸಿಕೊಂಡಿರುವ ಸಂಬಂಧ ದಾಖಲೆಗಳೊಂದಿಗೆ ಉದ್ಯಾನ ಪ್ರವೇಶಿಸಬೇಕು.

    3) ಉದ್ಯಾನದಲ್ಲಿ ನಾಯಿಗಳ ಮಲ-ಮೂತ್ರ ವಿಸರ್ಜನೆ ಮಾಡುವುದನ್ನು ನಿಯಂತ್ರಿಸಬೇಕು. ಒಂದು ವೇಳೆ ವಿಸರ್ಜನೆ ಮಾಡಿದಲ್ಲಿ ಮಾಲಿಕರೇ ಸ್ವಚ್ಛಗೊಳಿಸಬೇಕು.

    4) ಸಾಕು ನಾಯಿಗಳಿಗೆ ಯಾವುದೇ ಕಾರಣಕ್ಕೂ ಉದ್ಯಾನದಲ್ಲಿ ಆಹಾರ ನೀಡಬಾರದು.

    5) ಉಗ್ರ ಸ್ವಭಾವ ಮತ್ತು ದೊಡ್ಡ ಗಾತ್ರದ ನಾಯಿಗಳನ್ನು ಉದ್ಯಾನಕ್ಕೆ ಕರೆ ತರಬಾರದು.

    6) ತೋಟಗಾರಿಕೆ ಇಲಾಖೆಯ ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಮಾಲಿಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.

    7) ಉದ್ಯಾನದಲ್ಲಿ ಮಕ್ಕಳ ಆಟವಾಡುವ ಪ್ರದೇಶ ಮತ್ತು ಸಾರ್ವಜನಿಕರು ವಾಯುವಿಹಾರ ನಡೆಸುವ ವೇಳೆ ಉದ್ಯಾನಕ್ಕೆ ನಾಯಿಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

    8) ಮಾಲೀಕರು ಕರೆತರುವ ನಾಯಿಗಳಿಂದ ಇತರರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು.

    ಈ ಮೇಲಿನ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿದರೆ ಮಾತ್ರ ಕಬ್ಬನ್ ಪಾರ್ಕ್ ಗೆ ತಮ್ಮ ಸಾಕು ನಾಯಿ ಜೊತೆ ಬಂದು ವಾಕಿಂಗ್ ಮಾಡಲು ತೋಟಗಾರಿಕೆ ಇಲಾಖೆ ಅವಕಾಶ ಕಲ್ಪಿಸಿದೆ.

    ನಾಯಿಗಳ ಹಾವಳಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕೋರ್ಟ್

    ಇನ್ನು ಕಬ್ಬನ್​ಪಾರ್ಕ್ ಉದ್ಯಾನವನದಲ್ಲಿ ಬೀದಿನಾಯಿಗಳ ಹಾವಳಿಯಿಂದ ಆಗುತ್ತಿರುವ ತೊಂದರೆಗಳ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​ ನಾಯಿಮಾಲೀಕರ ವರ್ತನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಸಾಕುನಾಯಿಗಳನ್ನು ಉದ್ಯಾನದೊಳಗೆ ಕರೆತರುವ ಕೆಲ ಮಾಲೀಕರು ಮಲ-ಮೂತ್ರ ವಿಸರ್ಜನೆ ಮಾಡಿಸುತ್ತಿದ್ದಾರೆ. ಸಾಕುನಾಯಿಗಳನ್ನು ನೋಡಿ ಬೀದಿನಾಯಿಗಳೂ ಕಬ್ಬನ್​ಪಾರ್ಕ್​ಗೆ ನುಗ್ಗುತ್ತಿವೆ. ಪಾರ್ಕ್​ನಲ್ಲಿ ನಾಯಿಗಳ ಪ್ರವೇಶಕ್ಕೆ ಕಡಿವಾಣ ಹಾಕಲು ಬಿಬಿಎಂಪಿ (BBMP) ಅಗತ್ಯಕ್ರಮ ತೆಗೆದುಕೊಳ್ಳಬೇಕು. ಜರುಗಿಸಿದ ಕ್ರಮದ ಬಗ್ಗೆ ಹೈಕೋರ್ಟ್​ಗೆ ಮಾಹಿತಿ ನೀಡಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ರಮ ಜರುಗಿಸಿ ವರದಿಯನ್ನು ನ್ಯಾಯಾಯಲಕ್ಕೆ ಸಲ್ಲಿಸಬೇಕು ಎಂದು ಸಿಜೆ ರಿತುರಾಜ್ ಅವಸ್ತಿ ಸೂಚಿಸಿದ್ರು.

    ಇದನ್ನೂ ಓದಿ: ಜನರ ಭೇಟಿಯಿಲ್ಲದ ಕಬ್ಬನ್ ಪಾರ್ಕ್ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಕಬ್ಬನ್ ಪಾರ್ಕ್ ಸದ್ಯದ ಚಿತ್ರಣ...

    ಇನ್ನು ಕಬ್ಬನ್ ಪಾರ್ಕ್ ಒಳಗೆ ನಾಯಿಗಳನ್ನು ಬಿಡುತ್ತಿರುವುದರಿಂದ ಜನರು ಪಾರ್ಕಿನಲ್ಲಿ ಓಡಾಡಲು ಕಷ್ಟವಾಗುತ್ತಿದೆ. ಬೀದಿ ನಾಯಿಗಳು ಪ್ರವೇಶ ಮಾಡುತ್ತಿವೆ. ಬೀದಿ ನಾಯಿಗಳಿಗೆ ಕೆಲವರು ಊಟ ತಂದು ಹಾಕುತ್ತಾರೆ. ಊಟ ಇಲ್ಲದ ವೇಳೆ ನಾಯಿಗಳು ಆಕ್ರೋಶಗೊಂಡು ದಾಳಿ ಮಾಡುತ್ತವೆ. ಇದು ಅಪಾಯಕಾರಿ, ಇನ್ನು ಸಾಕು ನಾಯಿಗಳನ್ನು ಮಾಲೀಕರು ತಂದು ಪಾರ್ಕ್ ಒಳ ಭಾಗದಲ್ಲಿ ಮಲ- ಮೂತ್ರ ವಿಸರ್ಜನೆ ಮಾಡಿಸುತ್ತಾರೆ. ಇದರಿಂದ ಜನರಿಗೆ ಪಾರ್ಕಿನಲ್ಲಿ ಓಡಾಡಲು ಕಷ್ಟವಾಗುತ್ತದೆ. ಪಾರ್ಕ್ ಒಳಗೆ ನಾಯಿಗಳು ಬಾರದಂತೆ ಬಿಬಿಎಂಪಿ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ನ್ಯಾಯಾಲಯವೇ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು.. ಎಚ್ಚರಿಕೆ ಬೆನ್ನಲ್ಲೇ ತೋಟಗಾರಿಕೆ ಇಲಾಖೆ ನಾಯಿಗಳ ಪ್ರವೇಶಕ್ಕಾಗಿ ಮಾರ್ಗಸೂಚಿಯನ್ನು ತಂದಿದೆ.
    Published by:ranjumbkgowda1 ranjumbkgowda1
    First published: