HOME » NEWS » State » BENGALURU URBAN GOVT FINDS PLACES FOR CREMATORIUM IN BENGALURU CITY OUTSKIRTS DBLTV SNVS

ಬೆಂಗಳೂರಿನ ಹೊರವಲಯದ ವಿವಿಧೆಡೆ ಸ್ಮಶಾನಕ್ಕೆ ಜಾಗ ಹುಡುಕಿದ ಸರ್ಕಾರ

ಉದ್ಯಾನನಗರಿಯಲ್ಲಿ ಕೋವಿಡ್ ಮರಣ ಮೃದಂಗ ಬಾರಿಸ್ತಿದೆ. ಸಾವಿನ ಪ್ರಮಾಣ ಅಪಾಯಕರ ರೀತಿಯಲ್ಲಿ ಹೆಚ್ಚಾಗ್ತಿದೆ. ಚಿತಾಗಾರದಲ್ಲಿ ಶವ ಸುಡಲೂ ಆಗುತ್ತಿಲ್ಲ. ಹೀಗಾಗಿ ಬೆಂಗಳೂರಿನ ಚಿತಾಗಾರದ ಮುಂದೆ ಶವಗಳು ಕ್ಯೂ ನಿಲ್ಲುವಂತಾಗಿದೆ.

news18-kannada
Updated:April 22, 2021, 10:19 AM IST
ಬೆಂಗಳೂರಿನ ಹೊರವಲಯದ ವಿವಿಧೆಡೆ ಸ್ಮಶಾನಕ್ಕೆ ಜಾಗ ಹುಡುಕಿದ ಸರ್ಕಾರ
ಬೆಂಗಳೂರಿನ ಹೊರವಲಯದಲ್ಲಿ ಸ್ಮಶಾನ ನಿರ್ಮಾಣಕ್ಕೆ ಜಾಗ ಹುಡುಕುತ್ತಿರುವ ಆರ್ ಅಶೋಕ್, ತೇಜಸ್ವಿ ಸೂರ್ಯ, ಎಸ್ ಆರ್ ವಿಶ್ವನಾಥ್
  • Share this:
ಬೆಂಗಳೂರು: ಮನುಷ್ಯ ಸತ್ತಮೇಲೆಯೇ ಆತ್ಮಕ್ಕೆ ಸದ್ಗತಿ ಸಿಗುತ್ತೆ ಅನ್ನೋ ಮಾತಿದೆ. ಆದ್ರೆ ಇದೀಗ ಸತ್ತಮೇಲೂ ಹೀನಾಯ ದುರ್ಗತಿ ಎದುರಾಗ್ತಿದೆ. ಚಿತಾಗಾರದಲ್ಲಿ‌ ಶವ ಸುಡಲು ಜಾಗ ಸಿಗದೇ ಪರದಾಡುವಂತಾಗಿದೆ. ಬೆಂಗಳೂರಿನ ಚಿತಾಗಾರಗಳ ಮುಂದೆ ಶವಗಳ ಕ್ಯೂ ನಿಲ್ಲುತ್ತಿವೆ. ಕೋವಿಡ್ ಸೋಂಕಿತರ ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದು ಪ್ರಮುಖ ಕಾರಣವಾದರೆ, ಗ್ರಾಮೀಣ‌ ಭಾಗದಿಂದಲೂ ಶವಗಳನ್ನು ವಿದ್ಯುತ್ ಚಿತಾಗಾರಗಳಿಗೆ ತರುತ್ತಿರುವುದು ಮತ್ತೊಂದು ಕಾರಣ. ಕೆಟ್ಟ ಮೇಲೆ ಬುದ್ಧಿ ಬಂದಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರ‌ ಈಗ ಎಚ್ಚೆತ್ತುಕೊಂಡಿದೆ. ಶವ ಸಂಸ್ಕಾರ ಮಾಡಲು ಪರ್ಯಾಯ ಬಯಲು ಸ್ಮಶಾನ ಹುಡುಕಿದೆ. ನಗರದ ಹೊರವಲಯದ ಗೋಮಾಳಗಳನ್ನು‌ ಸ್ಮಶಾನವಾಗಿಸಲು ನಿರ್ಧರಿಸಿದೆ. ಗ್ರಾಮಸ್ಥರ ವಿರೋಧದ ನಡುವೆ ಕೋವಿಡ್ ಸ್ಮಶಾನಕ್ಕೆ ಜಾಗ ಸಿಕ್ಕಿದೆ. 

ಸರ್ಕಾರ ಹುಡುಕಿರುವ 8 ಗೋಮಾಳಗಳಲ್ಲಿ ತಾವರೆಕೆರೆ ಬಳಿಯ ಕುರುಬರಹಳ್ಳಿ, ದಾಸನಪುರ ಹೋಬಳಿಯ ಗಿಡ್ಡೇನಹಳ್ಳಿಗೆ ನಿನ್ನೆ ಕಂದಾಯ ಸಚಿವ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಭೇಟಿ ನೀಡಿದರು. ಕುರುಬರಹಳ್ಳಿಯಲ್ಲಿ 4ಎಕರೆ ಗೋಮಾಳವನ್ನು ಬಯಲು ಸ್ಮಶಾನ ಮಾಡಲು ತೀರ್ಮಾನಿಸಿದರು. ಇಲ್ಲಿ ಶವ ಸುಡಲು ಬೇಕಾದ ಸೌದೆ ಹಾಗೂ ಮತ್ತಿತರ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Vatal Nagaraj - ಸರ್ಕಾರ ಸತ್ತು ಹೋಗಿದೆ; ಜನರು ಸಾಯುತ್ತಿದ್ದಾರೆ: ವಾಟಾಳ್ ನಾಗರಾಜ್ ಆಕ್ರೋಶ

ಸಿಟಿ ವೈರಸ್ ಹಳ್ಳಿಗೆ ತರಬೇಡಿ: ಆರ್. ಅಶೋಕ್ ವಿರುದ್ಧ ಗ್ರಾಮಸ್ಥರು ಗರಂ:

ಕಿತ್ತನಹಳ್ಳಿ ಹಾಗೂ ಗಿಡ್ಡೇನಹಳ್ಳಿ ಮಧ್ಯೆ ಇರುವ ಗೋಮಾಳಕ್ಕೆ ಸಚಿವರು ಹೋಗುತ್ತಿದ್ದಂತೆ, ಅಲ್ಲಿನ ಗ್ರಾಮಸ್ಥರು ಆತಂಕದಿಂದಲೇ ಜಮಾಯಿಸಿದರು. ಬೆಂಗಳೂರಿನಿಂದ ಇಲ್ಲಿಗೆ ಶವ ತಂದು ಸುಡುವುದು ಬೇಡ. ನಮ್ಮೂರಿನಲ್ಲಿ ಸ್ಮಶಾನ ಮಾಡಬೇಡಿ ಎಂದು ವಿರೋಧ ವ್ಯಕ್ತಪಡಿಸಿದರು. ಮಾತ್ರವಲ್ಲ ಮೃತ ಸೋಂಕಿತನ ಕುಟುಂಬದವರು ಶವ ಸಂಸ್ಕಾರಕ್ಕೆ ಬರ್ತಾರೆ. ಅವರ ಜೊತೆ ವೈರಸ್ ಬರುತ್ತೆ. ಸುರಕ್ಷಿತವಾಗಿರುವ ಗ್ರಾಮವನ್ನು ಹಾಳು ಮಾಡಬೇಡಿ ಎಂದು ತಾಕೀತು ಮಾಡಿದರು. ಕೊನೆಗೆ ಗ್ರಾಮಸ್ಥರ ಬಳಿ ಮಾತನಾಡಿದ ಅಶೋಕ್, ಇದು ಮಾನವೀಯತೆ ವಿಷಯ. ಕೇವಲ ಎರಡು ತಿಂಗಳು ಮಾತ್ರ ಅವಕಾಶ ಮಾಡಿಕೊಡಿ. ಮುಂದೆ ಸ್ಮಶಾನ ಇರುವುದಿಲ್ಲ ಅಂತ ಗ್ರಾಮಸ್ಥರ ಮನವೊಲಿಕೆ ಮಾಡಿದರು. ಅಶೋಕ್ ಮಾತಿಗೆ ಒಪ್ಪಿದ ಗ್ರಾಮಸ್ಥರು, ಸುರಕ್ಷಿತವಾಗಿ ಎಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದರು. ಒಟ್ಟಿನಲ್ಲಿ ಶವಾಗಾರದ ಮುಂದಿನ ಕ್ಯೂ ತಡೆಯಲು ಸರ್ಕಾರ ಕೊನೆಗೂ ಎಚ್ಚೆತ್ತಿದೆ.

ಇದನ್ನೂ ಓದಿ: ಮುಷ್ಕರ ಕೈ ಬಿಟ್ಟ ಸಾರಿಗೆ ನೌಕರರು; ಇಂದಿನಿಂದ ಮತ್ತೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ ಸಂಚಾರ ಆರಂಭ

ಖಾಸಗಿ ಆಸ್ಪತ್ರೆಗಳ ಬೆಡ್ ಪರಿಶೀಲನೆ:ಇನ್ನೊಂದೆಡೆ ಖಾಸಗಿ ಆಸ್ಪತ್ರೆ ಕಳ್ಳಾಟ ತಡೆಯಲು ಸಚಿವರು ಮುಂದಾಗಿದ್ದಾರೆ. ಆರೋಗ್ಯ ಸಚಿವ ಸುಧಾಕರ್, ಬನ್ನೇರುಘಟ್ಟ ರಸ್ತೆಯ‌ ಫೋರ್ಟಿಸ್ ಆಸ್ಪತ್ರೆಗೆ ಹೋಗಿ, 50% ಬೆಡ್ ನೀಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದ್ರು. ಅನಾಹುತ ನಡೆದ ಮೇಲೆ ಚುರುಕಾಗಿರುವ ಸಚಿವರು, ಮೊದಲೇ ಎಚ್ಚೆತ್ತಿದ್ದರೆ ಆಗುವ ಅನಾಹುತದಲ್ಲಿ‌ ಕೊಂಚನಾದರೂ ತಗ್ಗಿಸಬಹುದಿತ್ತು. ಇಂದು ಬೆಳಗ್ಗೆಯಷ್ಟೇ ಸಂಸದ ತೇಜಸ್ವಿ ಸೂರ್ಯ, ಖಾಸಗಿ ಆಸ್ಪತ್ರೆಗಳ ವಿರುದ್ಧ ಇದೇ ಆರೋಪ ಮಾಡಿದರು. ನನ್ನ ಕ್ಷೇತ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅನೇಕ ಖಾಸಗಿ‌ ಆಸ್ಪತ್ರೆಗಳಿವೆ. ಬೆಡ್‌ಗಳಿದ್ದರೂ ಕೋವಿಡ್ ಸೋಂಕಿತರಿಗೆ ನೀಡುತ್ತಿಲ್ಲ. ಸರ್ಕಾರಕ್ಕೆ ತೋರಿಸುವ ಲೆಕ್ಕವೇ ಬೇರೆ, ಲಭ್ಯವಿರುವ ಬೆಡ್‌ಗಳ ಲೆಕ್ಕವೇ ಬೇರೆ. ಜನಪ್ರತಿನಿಧಿಗಳು ಪ್ರತಿ ಖಾಸಗಿ ಆಸ್ಪತ್ರೆಗೆ ತೆರಳಿ ಪರಿಶೀಲಿಸಬೇಕು. ಹೀಗಾದರೆ ಮಾತ್ರ ಬೆಡ್ ದೊರೆಯುತ್ತದೆ ಎಂದು ಸಲಹೆ ನೀಡಿದ್ದರು.

ವರದಿ: ದಶರಥ್ ಸಾವೂರು
Published by: Vijayasarthy SN
First published: April 22, 2021, 10:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories