• Home
  • »
  • News
  • »
  • state
  • »
  • Love Disappointment- ಯುವತಿ ಕೊಲೆ, ಯುವಕ ನೇಣು; ಪ್ರೇಮ ವಿಚಾರಕ್ಕೆ ನಡೆಯಿತಾ ಘೋರ ದುರಂತ..!

Love Disappointment- ಯುವತಿ ಕೊಲೆ, ಯುವಕ ನೇಣು; ಪ್ರೇಮ ವಿಚಾರಕ್ಕೆ ನಡೆಯಿತಾ ಘೋರ ದುರಂತ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Crime News- ಬೆಂಗಳೂರು ಹೊರವಲಯದ ಜಿಗಣಿಯ ಬಡಾವಣೆಯೊಂದರಲ್ಲಿ ಯುವತಿ ಕೊಲೆಯಾಗಿದ್ದಾಳೆ. ಅದೇ ಸ್ಥಳದಲ್ಲಿ ಅಪರಿಚಿತ ಯುವಕನೊಬ್ಬ ನೇಣುಬಿಗಿದ ಸ್ಥಿತಿಯಲ್ಲಿ ಹೆಣವಾಗಿದ್ದಾನೆ. ಇದು ಪ್ರೇಮ ಪ್ರಕರಣ ಇರಬಹುದು ಎಂಬ ಶಂಕೆ ಇದೆ.

  • Share this:

ಆನೇಕಲ್: ಅವರು ಆರು ತಿಂಗಳ ಹಿಂದೆ ನೂತನವಾಗಿ ಮನೆ ನಿರ್ಮಿಸಿ ಆ ಮನೆಗೆ ವಾಸಕ್ಕೆ ಬಂದಿದ್ದರು. ಗಂಡ, ಹೆಂಡತಿ, ಮಗಳು ಮತ್ತು ಹೆಂಡತಿ ತಮ್ಮನ ಕುಟುಂಬ ಆ ಮನೆಯಲ್ಲಿ ವಾಸವಾಗಿತ್ತು. ಇಂದು ಎಂದಿನಂತೆ ಎಲ್ಲರೂ ತಮ್ಮ ತಮ್ಮ ಕೆಲಸದ ನಿಮ್ಮಿತ್ತ ಹೋರ ಹೋಗಿದ್ದರು. ಈ ವೇಳೆ ದುರಂತವೊಂದು ನಡೆದು ಹೋಗಿದೆ. ಮನೆಯ ಮಗಳು ಕೊಲೆಯಾಗಿ ಹೋಗಿದ್ದು, ಅಪರಿಚಿತ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯ ಹಾಲ್ ನಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಾಣವಾಗಿದೆ.


ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ನಿಸರ್ಗ ಬಡಾವಣೆಯ (Nisarga Layout, Jigani of Anekal Taluk) ಮನೆಯೊಂದರಲ್ಲಿ ಯುವಕ ಯುವತಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಚಾಕುವಿನಿಂದ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪಕ್ಕದಲ್ಲಿಯೇ ಅಪರಿಚಿತ ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾಗಡಿ ಮೂಲದ ದೊಡ್ಡಯ್ಯ ಮತ್ತು ಗಂಗಮ್ಮ ದಂಪತಿಯ ಪುತ್ರಿ ಸಿಂಚನಾ ಕೊಲೆಯಾದ ಯುವತಿಯಾಗಿದ್ದು, ಮೃತ ಯುವಕನ ಗುರುತು ಪತ್ತೆಯಾಗಿಲ್ಲ.


ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮೃತ ಸಿಂಚನಾ ತಂದೆ ಊಟಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಯುವಕ ಯುವತಿಯನ್ನು ಚಾಕುವಿನಿಂದ ಇರಿದು ಕೊಂದು ಬಳಿಕ ತಾನು ನೇಣಿಗೆ ಶರಣಾಗಿರುವ ಸಾಧ್ಯತೆ ಇದೆ.


ಬಿ ಫಾರ್ಮಾಗೆ ಸೇರಿದ್ದ ಸಿಂಚನಾ: 


ಅಂದಹಾಗೆ ಇತ್ತೀಚೆಗೆ ತಾನೇ ದ್ವೀತಿಯ ಪಿಯುಸಿ ಮುಗಿಸಿದ್ದ ಮೃತ ಸಿಂಚನಾಳನ್ನು ಪ್ರಥಮ ವರ್ಷದ ಬಿಫಾರ್ಮಾಗೆ (B-Pharma) ಟಿ ಜಾನ್ ಕಾಲೇಜಿಗೆ (T John) ಅಡ್ಮಿಷನ್ ಮಾಡಲಾಗಿತ್ತು. ಇಂದು ಕಾಲೇಜಿಗೆ ಹೋಗದೆ ಸಿಂಚನಾ ಮನೆಯಲ್ಲಿದ್ದಳು. ತಾಯಿ ಬಟ್ಟೆ ಹೊಗೆಯುವ ಸಲುವಾಗಿ ಟೆರೇಸ್ ಮೇಲಿದ್ದಳು. ಈ ನಡುವೆ ಈ ಘೋರ ಘಟನೆ ನಡೆದಿದೆ.


ಇದನ್ನೂ ಓದಿ: Model GP- ಕಸದ ಸಮಸ್ಯೆಗೆ ಸಮರ್ಪಕ ಪರಿಹಾರ; ಇಡೀ ರಾಜ್ಯಕ್ಕೆ ಮಾದರಿ ಈ ಗ್ರಾ.ಪಂ.


ಸದ್ಯಕ್ಕೆ ಯುವಕನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಎಫ್​ಎಸ್ಎಲ್, ಬೆರಳಚ್ಚು ತಜ್ಞರು ಸ್ಥಳದಲ್ಲಿನ ಸಾಕ್ಷಿ ಕಲೆ ಹಾಕುತ್ತಿದ್ದಾರೆ. ಸದ್ಯ ಈಗ ಘಟನೆ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಜೊತೆಗೆ ಯುವತಿ ಕುಟುಂಬದವರು ತಡವಾಗಿ ಮಾಹಿತಿ ನೀಡಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಬೆಂಗಳೂರು ಗ್ರಾಮಾಂತರ ಎಸ್ಪಿ ಕೆ ವಂಶಿಕೃಷ್ಣ ತಿಳಿಸಿದ್ದಾರೆ.


ಮೃತಳ ದೊಡ್ಡಪ್ಪ ಹೇಳಿದ್ದಿದು: 


ಇನ್ನು, ಮೂರು ಗಂಟೆ ಸುಮಾರಿಗೆ ನನ್ನ ತಮ್ಮ ಫೋನ್ ಮಾಡಿ ಹೀಗೆ ನಮ್ಮ ಮನೆಯ ಹಾಲ್ ನಲ್ಲಿ ಸಿಂಚನಾಳನ್ನು ಕೊಂದು ಯಾರೋ ಒಬ್ಬ ಯುವಕ ನೇಣು ಹಾಕಿಕೊಂಡಿದ್ದಾನೆ ಎಂದು ತಿಳಿಸಿದರು. ಬಂದು ನೋಡಲಾಗಿ ಯುವತಿಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ‌ ಕೊಲೆ ಮಾಡಲಾಗಿತ್ತು. ಪಕ್ಕದಲ್ಲಿಯೇ ಅಪರಿಚಿತ ಯುವಕನ ಕುತ್ತಿಗೆ ಬಟ್ಟೆಯಿಂದ ಬಿಗಿದ ಸ್ಥಿತಿಯಲ್ಲಿ ಮೃತ ದೇಹ ಇತ್ತು. ಘಟನೆ ಹೇಗಾಯಿತು ನಮಗೆ ಗೊತ್ತಿಲ್ಲ. ಸಿಂಚನಾಳನ್ನು ಇತ್ತೀಚೆಗೆ ಕಾಲೇಜಿಗೆ ಸೇರಿಸಲಾಗಿತ್ತು. ತಮ್ಮನಿಗೆ ಒಬ್ಬಳೇ ಮಗಳು ಎಂದು ಮೃತ ಸಿಂಚನಾಳ ದೊಡ್ಡಪ್ಪ ರಾಮಯ್ಯ ತಿಳಿಸಿದ್ದಾರೆ.


ಇದನ್ನೂ ಓದಿ: ಇಲ್ಲದ ದೇವರನ್ನ ಯಾಕೆ ಪೂಜಿಸಬೇಕು? ಮನುಧರ್ಮ ನಾಶ ಆಗಬೇಕು: ನಿಜಗುಣಾನಂದ ಸ್ವಾಮಿ


ಸದ್ಯ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಯುವಕನ ಪ್ರೇಮ ನಿರಾಕರಣೆ ಮಾಡಿದಕ್ಕೆ ಕೋಪಗೊಂಡ ಯುವಕ ಯುವತಿಯನ್ನು ಕೊಂದು ನೇಣಿಗೆ ಶರಣಾಗಿರುವ ಶಂಕೆ ಇದೆ. ಇಲ್ಲವೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯೇ ಯುವಕನನ್ನು ಕರೆಸಿಕೊಂಡು ಮನೆಯಲ್ಲಿ ಏಕಾಂತದಲ್ಲಿರುವುದನ್ನು ಕಂಡು ಯುವತಿ ಕುಟುಂಬದವರೇ ಮರ್ಯಾದಾ ಹತ್ಯೆ ಶಂಕೆ ಸಹ ಇದೆ.


ಎಲ್ಲಾ ಆಯಾಮಗಳಲ್ಲೂ ಜಿಗಣಿ ಪೊಲೀಸರು ತನಿಖೆ ನಡೆಸುತ್ತಿದ್ದು, ಮೃತ ಯುವಕನ ಗುರುತು ಪತ್ತೆಯಾದ ಬಳಿಕ ಪ್ರಕರಣದ ತನಿಖೆಗೆ ಚುರುಕು‌ಗೊಳ್ಳಲಿದೆ.


ವರದಿ:  ಆದೂರು ಚಂದ್ರು

Published by:Vijayasarthy SN
First published: