Bengaluru: ಕರೆಂಟ್ ಬಿಲ್ ಜೊತೆ ಗಾರ್ಬೆಜ್ ಬಿಲ್ ಕಟ್ಟಲು ರೆಡಿಯಾಗಿ, ವಿದ್ಯುತ್ ಕಡಿಮೆ ಬಳಸಿ ಇಲ್ಲ ಕಸದ ಬಿಲ್ ಏರುತ್ತೆ

ಬಿಬಿಎಂಪಿ ಇದೀಗ ಕಸ ಸಂಗ್ರಹಣೆಗೆ ಬಿಲ್​ ನೀಡಲು ಮುಂದಾಗಿದೆ. ಬೆಂಗಳೂರಿಗರಿಗೆ ಕರೆಂಟ್​ ಬಿಲ್​ ಜೊತೆ ಕಸದ ಬಿಲ್​ ಕೊಡುವ ವಿಚಾರದ ಬಗ್ಗೆ ಹೀಗಾಗಲೇ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಿಲಿಕಾನ್​ ಸಿಟಿ ಬೆಂಗಳೂರೀಗ (Bengaluru)  ದುಬಾರಿ ದುನಿಯಾ ಆಗಿದೆ. ಗಗನಕ್ಕೇರ್ತಿರೋ ಬೆಲೆಗಳ ನಡುವೆ ಜನರು ಬದುಕೋದೇ ಕಷ್ಟವಾಗಿ ಹೋಗಿದೆ. ಎಷ್ಟೇ ಸಂಬಳ ತಗೊಂಡ್ರು ಬೆಂಗಳೂರಂತ ಸಿಟಿಯಲ್ಲಿ ಜೀವನ ಮಾಡೋಕೆ ಒಬ್ಬರ ಸಂಬಳ ಸಾಕಾಗೋದಿಲ್ಲ. ತಿಂಗಳಾಯ್ತು ಅಂದ್ರೆ ಮನೆ ಬಾಡಿಗೆ (House rent), ವಾಟರ್​ ಬಿಲ್​,  ಕರೆಂಟ್ ಬಿಲ್(Electrical bill) ​​, ಗ್ಯಾಸ್​, ಕೇಬಲ್​ ಬಿಲ್​ ಅಂತ ಹಲವು ಬಿಲ್​ ಕಟ್ಟೋ ವೇಳೆಗೆ ಇಡೀ ಸಂಬಳ ಖಾಲಿ ಆಗಿರುತ್ತೆ. ಇನ್ನು ನಿತ್ಯದ ಖರ್ಚಿನ ಜೊತೆಗೆ ಇದೀಗ ಕಸದ ಬಿಲ್​ (Garbage Bill) ಕಟ್ಬೇಕು ಅಂದ್ರೆ ನಿಜಕ್ಕೂ ಕಷ್ಟವಾಗುತ್ತೆ ಅಂತಾರೆ ಜನ ಸಾಮಾನ್ಯರು. ಜನರ ಮೇಲೆ ಕಸದ ಬಿಲ್​ನ ಹೊರೆ ಹೇರಲು ಬಿಬಿಎಂಪಿ (BBMP) ಸಿದ್ಧವಾಗಿದೆ. ವರ್ಷಕ್ಕೊಮ್ಮೆ ಗಾರ್ಬೆಜ್​ ಸೆಸ್​ ಹಾಗೂ ತಿಂಗಳಿಗೊಮ್ಮೆ ಗಾರ್ಬೆಜ್​ ಬಿಲ್​ ಪಾವತಿ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ.

ಏನಿದು ಗಾರ್ಬೆಜ್​ ಬಿಲ್​?

ಬೆಂಗಳೂರು ಮಂದಿಗೆ ಕರೆಂಟ್ ಬಿಲ್‌ ಜತೆ ಗಾರ್ಬೆಜ್ ಯೂಸರ್ ಫೀ ಹೊಡೆತ ಬೀಳೋದು ಪಕ್ಕ ಆಗ್ತಿದೆ. ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುತ್ತಿರುವ ಬಿಬಿಎಂಪಿ, ಕಸ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡ್ತಿದೆ. ಇದೀಗ ಕಸ ನಿರ್ವಹಣೆಗೆ ಆದಾಯ ಕ್ರೂಢೀಕರಣಕ್ಕೆ ಪ್ಲ್ಯಾನ್ ಮಾಡಿರೋ ಬಿಬಿಎಂಪಿ ಇದೀಗ ಕಸ ಸಂಗ್ರಹಣೆಗೆ ಬಿಲ್​ ನೀಡಲು ಮುಂದಾಗಿದೆ. ಬೆಂಗಳೂರಿಗರಿಗೆ ಕರೆಂಟ್​ ಬಿಲ್​ ಜೊತೆ ಕಸದ ಬಿಲ್​ ಕೊಡುವ ಬಗ್ಗೆ ಚಿಂತನೆ ನಡೆಸಿದೆ.

ಬೆಂಗಳೂರಿಗರಿಗೆ ಡಬಲ್ ಟ್ಯಾಕ್ಸ್ ಹೊರೆ

ಬಿಬಿಎಂಪಿ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಸಿಕ್ಕರೆ, ಬೆಂಗಳೂರಿನ ಜನರಿಗೆ ಡಬಲ್ ಟ್ಯಾಕ್ಸ್ ಹೊರೆ ಬೀಳಲಿದೆ. ಈಗಾಗಲೇ ಕರೆಂಟ್​ ಬಿಲ್​ ಕೂಡ ಹೆಚ್ಚಾಗಿಯೇ ಬರುತ್ತೆ ಅಂತ ಹಲವು ದೂರುಗಳು ಕೇಳಿ ಬರುತ್ತಲೇ ಇದೆ. ಇದೀಗ ಕರೆಂಟ್​ ಬಿಲ್​ ಆಧರಿಸಿ ಗಾರ್ಬೆಜ್​ ಬಿಲ್​ ಹಾಕಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್​ ಕೊಟ್ರೆ ಬೆಂಗಳೂರಿನಲ್ಲಿರುವ ನಿವಾಸಿಗಳು ಕರೆಂಟ್ ಬಿಲ್ ಜೊತೆಗೆ ಗಾರ್ಬೆಜ್ ಟ್ಯಾಕ್ಸ್ ಕೂಡ ಕಟ್ಟಬೇಕು.

ಇದನ್ನೂ ಓದಿ: ಬೆಂಗಳೂರಿಗರೇ ಅಲರ್ಟ್.. ಹೊಸ ವರ್ಷ ಜ.1ರಂದೇ ಗಬ್ಬೆದ್ದು ನಾರಲಿದೆಯಂತೆ Bengaluru..!!

ವಿದ್ಯುತ್​ ಬಿಲ್​ ಆಧರಿಸಿ ಕಸದ ಬಿಲ್​

ಕರೆಂಟ್​ ಬಿಲ್​ ಆಧರಿಸಿ ಗಾರ್ಬೆಜ್​ ಬಿಲ್​ ಹಾಕಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್​ ಕೊಟ್ರೆ ಬೆಂಗಳೂರಿನಲ್ಲಿರುವ ನಿವಾಸಿಗಳು ಕರೆಂಟ್ ಬಿಲ್ ಜೊತೆಗೆ ಗಾರ್ಬೆಜ್ ಟ್ಯಾಕ್ಸ್ ಕೂಡ ಕಟ್ಟಬೇಕು. ಯಾವ ರೀತಿ ನಿಗದಿ ಮಾಡ್ತಾರೆ ಕಸದ ಸೆಸ್​

ವಿದ್ಯುತ್ ಬಿಲ್       -        ಕಸ ಸೆಸ್

200 ರೂ. ವರೆಗೆ      -     30 ರೂ.

200-500 ರೂ          -      60 ರೂ.

500 - 1000 ರೂ      -      100 ರೂ.

1001 - 2000 ರೂ    -      200 ರೂ.

2001 - 3000 ರೂ    -      350 ರೂ.

3000 ರೂ.ಗಿಂತ ಹೆಚ್ಚು -     500 ರೂ.

ಈ ರೀತಿ ಮಾಸಿಕ ಸೆಸ್ ಸಂಗ್ರಹದ‌ ಮೂಲಕ 48.76 ಕೋಟಿ ರೂ. ಸಂಗ್ರಹಿಸಲು ಬಿಬಿಎಂಪಿ ಪ್ಲ್ಯಾನ್​ ಮಾಡಿದೆ. ಇನ್ನು  ವಾಣಿಜ್ಯ ತ್ಯಾಜ್ಯ ಉತ್ಪಾದಕರು (ಬೃಹತ್ ತ್ಯಾಜ್ಯ ಉತ್ಪಾದಕರನ್ನು ಹೊರತುಪಡಿಸಿ) ಪ್ರಸ್ತಾಪಿಸಿರುವ ಸೆಸ್ ವಿವರ ಹೀಗಿದೆ.

ವಿದ್ಯುತ್ ಬಿಲ್           -      ಕಸ ಸೆಸ್

200 ರೂ. ವರೆಗೆ        -     75ರೂ.

200-500 ರೂ         -      150 ರೂ.

500 - 1000 ರೂ     -      300 ರೂ.

1001 - 2000 ರೂ    -      600 ರೂ.

2001 - 3000 ರೂ    -      800 ರೂ.

3000 ರೂ.ಗಿಂತ ಹೆಚ್ಚು -     1200 ರೂ.

ಈ ರೀತಿ ಮಾಸಿಕ ಸೆಸ್ ಸಂಗ್ರಹದ‌ ಮೂಲಕ ವಾಣಿಜ್ಯ ಉತ್ಪಾದಕರಿಂದ 23.93 ಕೋಟಿ ರೂ. ಸಂಗ್ರಹ ಮಾಡಲು ಬಿಬಿಎಂಪಿ ಮುಂದಾಗಿದೆ

ಪ್ರಾಪರ್ಟಿ ಟ್ಯಾಕ್ಸ್​ ಜೊತೆ ಗಾರ್ಬೆಜ್​ ಸೆಸ್​

ಬೆಂಗಳೂರು ಜನ ಸದ್ಯಕ್ಕೆ ವರ್ಷಕ್ಕೊಮ್ಮೆ ಪ್ರಾಪರ್ಟಿ ಟ್ಯಾಕ್ಸ್ ಕಟ್ಟುವ ವೇಳೆಯೇ ಗಾರ್ಬೆಜ್ ಸೆಸ್ ಕಟ್ಟುತ್ತಿದ್ದಾರೆ. ಆದ್ರೂ ಬಿಬಿಎಂಪಿಗೆ ಸೆಸ್ ಹಣ ಕಸ ನಿರ್ವಹಣೆಗೆ ಸಾಕಾಗುತ್ತಿಲ್ಲವೆಂದು ಬಿಬಿಎಂಪಿ ಇನ್ನು ಮುಂದೆ ಪ್ರತಿ ತಿಂಗಳು ಮನೆ ಮನೆಗಳಿಂದ ಗಾರ್ಬೆಜ್ ಟ್ಯಾಕ್ಸ್ ವಸೂಲಿ ಮಾಡಲು ಮುಂದಾಗಿದೆ. ಪ್ರತಿ ತಿಂಗಳು 40 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಇದರಿಂದ ಕಸದ ಗುತ್ತಿಗೆದಾರರಿಗೆ ಬಿಲ್, ಪೌರಕಾರ್ಮಿಕರಿಗೆ ಸಂಬಳ ನೀಡಲು ಅನುಕೂಲವಾಗಲಿದೆ.

ಗಾರ್ಬೆಜ್ ಸೆಸ್ ಬಗ್ಗೆ ಬಿಬಿಎಂಪಿ ಆಯುಕ್ತರ ಸ್ಪಷ್ಟನೆ

ಇನ್ನು ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿದ್ದು ಕಸ ಶುಲ್ಕ ವಿಚಾರವಾಗಿ ಹಳೇ ನಿಯಮಗಳೇ ಇರುತ್ತೆ. ಯಾವುದೇ ರೀತಿಯ ಬದಲಾವಣೆ ಸದ್ಯಕ್ಕೆ ಮಾಡಿಲ್ಲ. ಗಾರ್ಬೆಜ್ ಸೆಸ್ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಕಸದೂರು ಬಿಂಗೀಪುರಕ್ಕೆ ಕೈಕೊಟ್ಟ ಬಿಬಿಎಂಪಿ; ಭರವಸೆಯಾಗಿಯೇ ಉಳಿದ ಕಸಪೀಡಿತ ಹಳ್ಳಿಗಳು

ಕಸದ ಶುಲ್ಕಕ್ಕೆ ಸಂಭಂದಪಟ್ಟಂತೆ ಈಗಿರುವ ನಿಯಮವಳಿಗಳೆ ಮುಂದುವರೆಯಲಿವೆ. ಅದ್ರಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಜನರ ಅಭಿಪ್ರಾಯ ಸಂಗ್ರಹಸಿ ಅಭಿವೃದ್ಧಿ ಮಾಡಲು ಹೊರಟಿದ್ದೇವೆ ಎಂದ್ರು. ಇನ್ನು ತಿಂಗಳ ಖರ್ಚಿನ ಜೊತೆಗೆ ಇದೀಗ ಕಸದ ಬಿಲ್​ ಕಟ್ಬೇಕು ಅಂದ್ರೆ ನಿಜಕ್ಕೂ ಕಷ್ಟವಾಗುತ್ತೆ ಅಂತಾರೆ ಜನ ಸಾಮಾನ್ಯರು.
Published by:Pavana HS
First published: