ಗೌರಿ-ಗಣೇಶ (Gowri-Ganesha) ಹಬ್ಬಕ್ಕೆ ವ್ಯಾಪಾರದ ಭರಾಟೆ ಆರಂಭವಾಗಿದ್ದು, ಗ್ರಾಹಕರಿಕೆ ಬೆಲೆ ಏರಿಕೆ(Price Hike) ಬಿಸಿ ತಾಗಿದೆ. ಹೂವು-ಹಣ್ಣು ಬೆಲೆ ಗಗನಕ್ಕೇರಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಹಬ್ಬಗಳಿಗೆ ಸರ್ಕಾರ ಬ್ರೇಕ್ ಹಾಕಿತ್ತು, ಇದೀಗ ಗೌರಿ ಗಣೇಶ ಹಬ್ಬ ಆಚರಣೆ ಮಾಡಲು ಸರ್ಕಾರ ಅನುಮತಿ ನೀಡಿದ್ದು, ಜನರು ಭರ್ಜರಿಯಾಗಿ ತಯಾರಿ ಆರಂಭಿಸಿದ್ದಾರೆ. ಕೆ.ಆರ್. ಮಾರುಕಟ್ಟೆಯಲ್ಲಿಇನ್ನೂ ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದ್ದು, ನಗರದ ಬಹುತೇಕ ರಸ್ತೆ, ಜನಸಂದಣಿ ಸ್ಥಳಗಳಲ್ಲಿ ಹೂವು, ಹಣ್ಣಿನ ಅಂಗಡಿಗಳು ತಲೆಯೆತ್ತಿದೆ.
ಕೆ.ಆರ್.ಮಾರ್ಕೆಟ್ ನಲ್ಲಿ ಹೂ, ಹಣ್ಣು ಬೆಲೆ ಕಳೆದ ವಾರಕ್ಕಿಂತ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಶಿಮ್ಲಾ ಸೇಬು ಒಂದು ಕೆಜಿಗೆ ಕಳೆದ ವಾರ 60 ರೂ ಇತ್ತು ಆದರೆ ಇಂದು 120ಕ್ಕೆ ಏರಿದೆ. ಇನ್ನು ಸೀತಾಫಲ ಒಂದು ಕೆಜಿಗೆ ಕಳೆದ ವಾರ 40 ರೂ ಇಂದಿನ ಬೆಲೆ 80ರೂ ಆಗಿದೆ. ಮುಸೂಂಬಿ ಹಣ್ಣು ಒಂದು ಕೆಜಿ ಕಳೆದ ವಾರ 30 ರೂ ಇಂದಿನ ಬೆಲೆ 60 ರೂಪಾಯಿ ಆಗಿದೆ. ದಾಳಿಂಬೆ ಒಂದು ಕೆಜಿ ಕಳೆದ ವಾರ 80ರೂ ಇತ್ತು, ಇಂದಿನ ಬೆಲೆ 150 ರೂ ಆಗಿದೆ.
ಹಣ್ಣುಗಳಂತೆ ಹೂವಿನ ಬೆಲೆಯೂ ಏರಿಕೆಯಾಗಿದೆ. ಚೆಂಡು ಹೂವು ಒಂದು ಕೆಜಿ ಕಳೆದ ವಾರ 30 ರಿಂದ 50 ರೂಪಾಯಿಯಷ್ಟಿತ್ತು. ಆದರೆ ಇಂದಿನ ಬೆಲೆ 80 ರಿಂದ 120 ರೂ ಆಗಿದೆ. ಮಲ್ಲಿಗೆ ಒಂದು ಕೆಜಿಗೆ ಕಳೆದ ವಾರ 600 ರೂ ಬೆಲೆ ಇಂದಿನ ಬೆಲೆ 800 ರೂ ಆಗಿದೆ. ಮಳ್ಳೆ ಹೂವು ಒಂದು ಕೆಜಿಗೆ ಕಳೆದ ವಾರ 400 ರುಪಾಯಿ ಈಗ 600 ರೂ ಆಗಿದೆ. ಗುಲಾಬಿ ಒಂದು ಕೆಜಿಗೆ ಕಳೆದ ವಾರ 200 ರುಪಾಯಿ ಇಂದಿನ ಬೆಲೆ 240 ರುಪಾಯಿ. ಮಿಲ್ಕಿ ವೈಟ್: ಕಳೆದ ವಾರ 200 ರುಪಾಯಿ ಇತ್ತು ಇಂದು 300 ರೂ ಆಗಿದೆ.
ಇದನ್ನೂ ಓದಿ: ಗಣಪತಿ ಹಬ್ಬಕ್ಕೆ ಬಿಬಿಎಂಪಿ ರೂಲ್ಸ್ ಬಿಡುಗಡೆ, ಎಷ್ಟು ಎತ್ತರದ ಗಣಪ, ಎಲ್ಲಿ ವಿಸರ್ಜನೆ...ಫುಲ್ ಡೀಟೆಲ್ಸ್
ಕೊರೋನಾ ಇದ್ದರು ಸಹ ಜನ ಮಾತ್ರ ಗೌರಿ-ಗಣೇಶ ಹಬ್ಬಕ್ಕೆ ಸಿದ್ಧತೆ ನಡೆಸಿದ್ದಾರೆ. ಬೆಂಗಳೂರಿನ ಮಾರುಕಟ್ಟೆಗಳು ಸಾರ್ವಜನಿಕರಿಂದ ತುಂಬಿ ತುಳುಕುತ್ತಿದೆ. ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ಮುಂಜಾನೆ 4 ಗಂಟೆಯಿಂದಲೇ ವ್ಯಾಪಾರ ಆರಂಭವಾಗಿದೆ.
ಬೆಂಗಳೂರಿನ ಬನಶಂಕರಿ, ಬಸವನಗುಡಿ ಮಾರುಕಟ್ಟೆಯಲ್ಲಿಯೂ ಜನ ಸೇರಿದ್ದು, ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಇನ್ನು ಸರ್ಕಾರ ಅದೆಷ್ಟೇ ಕೊರೊನಾ ನಿಯಮಗಳನ್ನು ಪಾಲಿಸಲು ಹೇಳಿದ್ದರೂ ಸಹ ಜನ ಸಾಮಾಜಿಕ ಅಂತರವನ್ನು ಮರೆಯುತ್ತಿದ್ದಾರೆ. ಹಬ್ಬದ ಹೂವಿನ ಜೊತೆ ಕೊರೊನಾವನ್ನು ತೆಗೆದುಕೊಂಡು ಹೋಗಲು ನಿರ್ಧರಿಸಿದಂತೆ ವರ್ತಿಸುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಬೆನ್ನಲ್ಲೇ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತಮಿಳುನಾಡಿನಲ್ಲೂ ವಿನಾಯಿತಿ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ