Bengaluru Power Cut: ತುರ್ತು ನಿರ್ವಹಣೆ ಕಾರ್ಯ ಹಿನ್ನೆಲೆ ಈ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆ ..

Bengaluru Power Cut: ಕೆಲ ವಿದ್ಯುತ್ ಕೇಂದ್ರಗಳಲ್ಲಿ ನಿರ್ವಹಣೆ ಕಾರ್ಯ ಇರುವುದರಿಂದ ಇಂದು ಬೆಳಗ್ಗೆ 10 ರಿಂದ 4ರವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂದು ಬೆಸ್ಕಾಂ ಎಚ್ಚರಿಕೆ ನೀಡಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಕಳೆದ ಹಲವಾರು ದಿನಗಳಿಂದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್(Power Cut) ಮಾಡಲಾಗುತ್ತಿದ್ದು, ಇಂದು ಸಹ ಕೆಲವು ಪ್ರದೇಶಗಳಲ್ಲಿ ಸಮಸ್ಯೆಯಾಗಲಿದ್ದು ಸಾರ್ವಜನಿಕರು ಸಹಕರಿಸಬೇಕಾಗಿ ಬೆಸ್ಕಾಂ(BESCOM) ಮನವಿ ಮಾಡಿದೆ.  ಕೆಲ ವಿದ್ಯುತ್ ಕೇಂದ್ರಗಳಲ್ಲಿ ನಿರ್ವಹಣೆ ಕಾರ್ಯ ಇರುವುದರಿಂದ ಇಂದು ಬೆಳಗ್ಗೆ 10 ರಿಂದ 4ರವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂದು ಬೆಸ್ಕಾಂ ಎಚ್ಚರಿಕೆ ನೀಡಿದೆ. 

ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲಿದೆ ಎಂಬ ಪಟ್ಟಿ ಇಲ್ಲಿದೆ.

ಹೊಸೂರು ಮುಖ್ಯ ರಸ್ತೆ, ಮಂಗಮ್ಮನಪಾಳ್ಯ, ಎಚ್ಎಸ್ಆರ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ತಗುಚಗುಪ್ಪೆ, ಕಂಬೀಪುರ, ಕುಂಬಳಗೂಡು, ಬಿಎಸ್‌ಕೆ 3 ನೇ ಹಂತ, ಇಟ್ಟಮಡು ಈಜಿಪುರ, ಆಸ್ಟಿನ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಅಲ್ಲದೇ, ದೀಪಾಂಜಲಿ ನಗರ, ನಾಯಂಡನಹಳ್ಳಿ ಈಶ್ವರ ಬಡಾವಣೆ, ಇಂದಿರಾನಗರ, ಇಎಸ್‌ಐ ಆಸ್ಪತ್ರೆ ರಸ್ತೆ ಚೇತನ್ ವೃತ್ತ, ಅಂದ್ರಹಳ್ಳಿ, ತಿಗಳರಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಸಾಧ್ಯತೆ ಇದೆ ಎಂದು ಬೆಸ್ಕಾಂ ಹೇಳಿದೆ.

ಅಕ್ಟೋಬರ್ 4 ರಂದು ಎಲ್ಲೆಲ್ಲಿ ಪವರ್ ಕಟ್ ?

ಇದನ್ನೂ ಓದಿ: ಚಿನ್ನ ಕೊಳ್ಳುವವರಿಗೆ ಕಹಿ ಸುದ್ದಿ; ಇಂದು ಏರಿಕೆ ಕಂಡ ಬಂಗಾರದ ಬೆಲೆ

ನಗರದಲ್ಲಿ ಅ.4ರಂದು 66/11ಕೆ.ವಿ. ಕಾಚಮಾರನ ಹಳ್ಳಿ ವಿದ್ಯುತ್‌ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ಬೆಳಿಗ್ಗೆ 10ರಿಂದ 4ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ.  ರಾಮಗೊಂಡನಹಳ್ಳಿ, ಗುಂಜೂರು ಹೊಸಹಳ್ಳಿ, ವಿನಾಯಕ ಥಿಯೇಟರ್, ವಿನಾಯಕ ಲೇಔಟ್​ ಹಾಗೂ ವರ್ತೂರು ಮುಖ್ಯರಸ್ತೆ, ಬಾಳಗೇರಿ ರಸ್ತೆ, ಗಾಂಧಿ ವೃತ್ತ  ಹಾಗೂ  ಕಾಚಮಾರನಹಳ್ಳಿ, ವರ್ತೂರು, ಗುಂಜೂರು, ಪಣತ್ತೂರು, ಬಾಳಗೆರೆ ವೈಟ್‍ಫೀಲ್ಡ್ ಮುಖ್ಯ ರಸ್ತೆ, , ಈದ್ಗಾ ರಸ್ತೆ, ಸಬ್ ರಿಜಿಸ್ಟ್ರಾರ್ ರಸ್ತೆ, ಪ್ರಕಾಶ ಲೇಔಟ್, ಮಧುರ ನಗರ, ವಾಲೇಪುರನಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಅಕ್ಟೋಬರ್ 5ರಂದು ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ 66/11ಕೆ.ವಿ ಬ್ರಿಗೇಡ್ ಗೇಟ್‍ವೇ ಜಿಐಎಸ್ ವಿದ್ಯುತ್‌ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ವೈದೇಹಿ ಆಸ್ಪತ್ರೆ, ಸತ್ಯ ಸಾಯಿಬಾಬಾ ಆಸ್ಪತ್ರೆ, ಸ್ಯಾಪ್ ಲ್ಯಾಬ್,  ಎಸ್ಎಡಿಎ ಟೆಕ್‍ಪಾರ್ಕ್, ಕ್ವಾಲ್‍ಕಾಮ್, ಜಿಇಬಿಇ ಕಂಪನಿ, ಶೈಲೇಂದ್ರ ಟವರ್, ಟೆಸ್ಕೊ, ಬಿಎಂಟಿಸಿ, ಎಸ್‌ಜೆಆರ್, ಬಿಐಪಿ  ಕೃಷ್ಣ ಚಿತ್ರಮಂದಿರ, ಬಸವನಪುರ ರಸ್ತೆ ಸೇರಿದಂತೆ ಗೋಕುಲ ಬಡಾವಣೆ,ಗಾಯತ್ರಿ ಲೇಔಟ್, ಎಸ್.ಆರ್. ಲೇಔಟ್, ಲಕ್ಷ್ಮೀ ಪುರ ಲೇಔಟ್, ವಿಜಯಾ ಬ್ಯಾಂಕ್ ಕಾಲೊನಿ, ಐಗೇಟ್ ಸರ್ಕಲ್, ನೇತ್ರಾ ಟೆಕ್‍ಪಾರ್ಕ್, ಡೆವಲಪರ್ಸ್, ಯ್ಯೂಟಿಎಲ್‌, ಎಸ್ಎಂಸಿ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಲಿದೆ.

ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ.  ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ.  ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶದ ಮೂಲಕ ವಿಕೃತಿ; ಕೀಚಕನ ಬಣ್ಣ ಬಯಲು ಮಾಡಿದ ಕಾಂಗ್ರೆಸ್​ ನಾಯಕಿ

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.
Published by:Sandhya M
First published: