ಅವರೇನು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ.. ಸಚಿವ ಈಶ್ವರಪ್ಪ ಪರ HD Kumaraswamy ಬ್ಯಾಟಿಂಗ್!

ಸಚಿವ ಈಶ್ವರಪ್ಪ ಪರ ಎಚ್​ಡಿಕೆ ಮೃದು ಧೋರಣೆ ತಳೆದಂತೆ ಕಾಣುತ್ತಿತ್ತು. ಕೆಂಪು ಕೋಟೆ ಮೇಲೆ ಮುಂದಿನ ವರ್ಷಗಳಲ್ಲಿ ಭಗವಾಧ್ವಜ ಹಾರಿಸಬಹುದು ಎಂದು ಹೇಳಿದ್ದಾರೆ. ಅವರೇನು ರಾಷ್ಟ್ರಧ್ವಜಕ್ಕೆ ಅಗೌರವ ತೋರಿಲ್ಲವಲ್ಲಾ ಎಂದು ಪ್ರಶ್ನಿಸಿದರು.

ಎಚ್​​.ಡಿ.ಕುಮಾರಸ್ವಾಮಿ

ಎಚ್​​.ಡಿ.ಕುಮಾರಸ್ವಾಮಿ

  • Share this:
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಹಿಜಾಬ್​​ ವಿವಾದ (Hijab Controversy) ಹಾಗೂ ಸಚಿವ ಕೆ.ಎಸ್​.ಈಶ್ವರಪ್ಪ (Minister KS Eshwarappa) ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ವಿಪಕ್ಷ ಕಾಂಗ್ರೆಸ್​ (Congress) ನಡೆಸುತ್ತಿರುವ ಧರಣಿ ಬಗ್ಗೆ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಮಾತನಾಡಿದರು. ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರ ಮಾತುಗಳು ಸಚಿವ ಈಶ್ವರಪ್ಪ ಪರ ಮೃದು ಧೋರಣೆ ತಳೆದಂತೆ ಕಾಣುತ್ತಿತ್ತು. ಕೆಂಪು ಕೋಟೆ ಮೇಲೆ ಮುಂದಿನ ವರ್ಷಗಳಲ್ಲಿ ಭಗವಾಧ್ವಜ ಹಾರಿಸಬಹುದು ಎಂದು ಹೇಳಿದ್ದಾರೆ. ಅವರೇನು ರಾಷ್ಟ್ರಧ್ವಜಕ್ಕೆ ಅಗೌರವ ತೋರಿಲ್ಲವಲ್ಲಾ ಎಂದು ಪ್ರಶ್ನಿಸಿದರು. ಹಾಗಂತ ನಾನು ಈಶ್ವರಪ್ಪನ ಪರ ಅಲ್ಲ. ಈಶ್ವರಪ್ಪ ವಿರುದ್ಧ ಕಾಂಗ್ರೆಸ್ಸಿಗರಿರು ಹೋರಾಟ ಮಾಡಲು ಅನೇಕ ಅವಕಾಶ ಇವೆ. ಸದನದಲ್ಲಿ ಬಾವಿಯೊಳಗೆ ಇಳಿದು ಪ್ರತಿಭಟನೆ ಮಾಡ್ತಾ ಇದ್ದಾರೆ. ಅವರ ಮೇಲೆ ದೇಶದ್ರೋಹ ಕೇಸ್ ಹಾಕಲು ಒತ್ತಾಯ ಮಾಡ್ತಾ ಇದ್ದಾರೆ. ಆದರೆ ನಿಮಗೆ ಪಿಐಎಲ್ ಹೋಗಲು ಅವಕಾಶ ಇದೆ.  ಸದನದ ಕಲಾಪ ವ್ಯರ್ಥ ಮಾಡದೇ ಪಿಐಎಲ್ ಹಾಕಿ. ಈ ಬಗ್ಗೆ ಸರ್ಕಾರಕ್ಕೆ ಸೂಚನೆ ಕೊಡಿ ಅಂತ  ಕೋರ್ಟ್ ಗೆ ಹೋಗಲು ಅವಕಾಶ ಇದೆ ಎಂದು ಎಚ್​ಡಿಕೆ ಸಲಹೆ ನೀಡಿದರು.

ಇದನ್ನೂ ಓದಿ: Congress ಅಹೋರಾತ್ರಿ ಧರಣಿ.. ರಾಜ್ಯ ನಾಯಕರಿಗೆ ಹೈಕಮಾಂಡ್​​ನಿಂದ ಬಂದ ‘ಆ ಸಂದೇಶ’ವೇನು?

ಹಿಂದೂಗಳು ಮಾತ್ರ ಬದುಕಬೇಕು ಎಂಬ ಭಾವನೆ ಇದೆ..

ಕಳೆದ ಎರಡು ದಿನಗಳಿಂದ ಸದನದ ಕಲಾಪ ನೋಡ್ತಾ ಇದ್ದೀನಿ, ಸ್ಥಗಿತಗೊಳಿಸ್ತಾ ಇದ್ದಾರೆ. ಅಧಿಕೃತ ವಿರೋಧ ಪಕ್ಷವನ್ನು ನೋಡ್ತಾ ಇದ್ದೀನಿ. ಈಶ್ವರಪ್ಪ ವಿಚಾರಕ್ಕಿಂತ ಮಹತ್ವದ ವಿಚಾರಗಳು ನಮ್ಮ ಮುಂದೆ ಇವೆ. ಕಾರವಾರದ ಸಂಸತ್ ಸದಸ್ಯರು ಈ ದೇಶದ ಸಂವಿಧಾನ ಬದಲಾವಣೆ ಮಾಡ್ತೀವಿ ಅಂದ್ರು. ಈ ದೇಶವನ್ನು ಹಿಂದೂ ರಾಷ್ಟ್ರವಾಗಿ ಘೋಷಣೆ ಮಾಡಬೇಕು ಅನ್ನೋದೇ ಬಿಜೆಪಿ ಅಜೆಂಡಾ, ಸಂಘ ಸಂಸ್ಥೆಗಳ ಅಜೆಂಡಾ. ಹಿಂದೂಗಳು ಮಾತ್ರ ಬದುಕಬೇಕು ಎಂಬ ಭಾವನೆ ಇದೆ. ಚುನಾವಣೆಗಳಲ್ಲಿಯೂ ಭಾವನಾತ್ಮಕ ವಿಚಾರ ಇಟ್ಟುಕೊಂಡೇ ಹೋಗ್ತಾ ಇದ್ದಾರೆ ಎಂದು ಟೀಕಿಸಿದರು.

ಶಾಲಾ ಶಿಕ್ಷಕರು ತಹಬದಿಗೆ ತರಬೇಕಿತ್ತು..

ಹಿಜಾಬ್ ಕುರಿತು ಎಲ್ಲವನ್ನೂ ಸರಿ ಮಾಡೋದು ಬಿಟ್ಟು, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಕೂಳಿತಿದ್ದೀರಿ. ವಿದ್ಯಾರ್ಥಿಗಳ ಜೀವನ ಏನಾಗುತ್ತಿದೆ? ಉಡುಪಿಯ ಈ ಘಟನೆ ಏನು ನಡೀತು? ಕರಾವಳಿ ಸೇರಿ ಹಲವಾರು ಪ್ರದೇಶದಲ್ಲಿ ಈ ಘಟನೆ ನಡೆಯಿತು. ಹಿಂದೆಯಲ್ಲಾ ಹಿಜಾಬ್ ಹಾಕಿಕೊಂಡು ಬಂದು ಶಾಲೆಯಲ್ಲಿ ತೆಗೆದು ಮತ್ತೆ ಮನೆಗೆ ಹೋಗುವಾಗ ಹಾಕಿಕೊಳ್ಳುತ್ತಿದ್ದರು. ಒಂದಿಷ್ಟು ಕಡೆ ಕೇಸರಿ ವರ್ಸಸ್ ಹಿಜಾಬ್ ಪ್ರಾರಂಭವಾಯಿತು. ಅದನ್ನು ಕೂಡಲೇ ಶಾಲಾ ಶಿಕ್ಷಕರು ತಹಬದಿಗೆ ತಂದಿದ್ದರೆ ಇಷ್ಟು ಕೆಟ್ಟ ಪರಿಣಾಮ ಬೀರುತ್ತಾ ಇರಲಿಲ್ಲ. ಎರಡು ಪಂಗಡಗಳಲ್ಲಿ ಧರ್ಮ ಸಂಘರ್ಷ ಆಗಲು ಕಾರಣ ಆಯ್ತು. ನಾನು ಯಾರ ಪರವೂ ಇಲ್ಲ ವಿರೋಧವೂ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: Hijab High Court Hearing: ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ: ಹೈಕೋರ್ಟ್​ನಲ್ಲಿ ಎಜಿ ವಾದ

ರಾಜಕೀಯ ಕೊರೊನಾ ಹರಡಿಸುತ್ತಿದ್ದೀರಾ?

ಇಂದು ಶಾಲಾ ಕಾಲೇಜುಗಳ ಪರಿಸ್ಥಿತಿ ನೋಡಿದ್ದೀರಾ.. ಈ ಪರಿಸ್ಥಿತಿ ಯನ್ನು ಎಲ್ಲಾ ಶಾಲಾ ಕಾಲೇಜುಗಳಿಗೆ ಹರಡಿಸುತ್ತಿದ್ದಾರೆ. ಕೊರೊನಾ ಒಂದು ರೀತಿ ಆದ್ರೆ ರಾಜಕೀಯ ಕೊರೊನಾ ಹರಡಿಸುತ್ತಿದ್ದೀರಾ? ಶಾಸಕರಿಗೆ ಅದೇನು ಟ್ರೈನಿಂಗ್ ಕೊಡುತ್ತಾರೊ ಗೊತ್ತಿಲ್ಲ. ನಾನು ಐದಾರು ತಿಂಗಳು ವಿರೋಧ ಪಕ್ಷದಲ್ಲಿ ಇದ್ದೆ ಎಂದೂ ಬಾವಿಗೆ ಇಳಿದು ಧರಣಿ ಮಾಡಿರಲಿಲ್ಲ. ನಾನು ತಿಳುವಳಿಗೆ ಮೂಡಿಸುವಷ್ಟು ದೊಡ್ಡವನಿಲ್ಲ. ದೇವೇಗೌಡರ ಬಗ್ಗೆಯೇ ಏಕವಚನ ದಲ್ಲಿ ಮಾತನಾಡಿದ್ದಾರೆ ಅನ್ನೋದನ್ನು ಕೇಳಿಪಟ್ಟಿದ್ದೇನೆ ಎಂದು ವಿಷಾಧ ವ್ಯಕ್ತಪಡಿಸಿದರು.
Published by:Kavya V
First published: