ಬೆಂಗಳೂರು: ಬಿಟ್ಕಾಯಿನ್ ಹಗರಣ (Bitcoin Scam) ಸಂಬಂಧ ರಾಜಕಾರಣಿಗಳ ಆರೋಪ-ಪ್ರತ್ಯಾರೋಪ ಮುಂದುವರೆದಿದೆ. ಬಂಧನಕ್ಕೊಳಗಾಗಿದ್ದ ಹ್ಯಾಕರ್ ಶ್ರೀಕಿ (Hacker Sriki) ಬಿಡುಗಡೆ ಸಂಬಂಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಬಿಟ್ ಕಾಯಿನ್ ಆರೋಪಿಗೆ ಜಾಮೀನು (Bail) ಮಂಜೂರು ಮಾಡಿದ್ದಾರೆ. ಜಾಮೀನು ಕೊಡಲು ವಾದ ಮಂಡಿಸಿದ್ಯಾರು, ಜಾಮೀನಿಗೆ ಯಾರು ಶ್ಯೂರಿಟಿ ಕೊಟ್ಟರು. ಕೆಲವು ಹೆಸರುಗಳು ಕೇಳಿ ಬರುತ್ತಿವೆ. ಚಾರ್ಜ್ ಶೀಟ್ ಹಾಕುವ ಬಗ್ಗೆ ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ದೊಡ್ಡ ಮಟ್ಟದ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಆರೋಪಿಗೆ ಜಾಮೀನು ಕೊಡಿಸಿದವರು ಯಾರು? ಅಷ್ಟು ಸುಲಭವಾಗಿ ಜಾಮೀನು ಹೇಗೆ ಸಿಕ್ಕಿದೆ. ಸರ್ಕಾರಿ ಅಭಿಯೋಜಕರು ಹೇಗೆ ವಾದ ಮಾಡಿದ್ದಾರೆ ಎಂದು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟರು.
ಹಗರಣದಲ್ಲಿ ಎರಡೂ ಪಕ್ಷಗಳು ಭಾಗಿಯಾಗಿವೆ?
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗಂಭೀರ ಕ್ರಮ ತೆಗೆದುಕೊಳ್ಳಬೇಕಿತ್ತು. ಜನ್ ಧನ್ ಖಾತೆಗಳಿಂದ ಸಾವಿರಾರು ಕೋಟಿ ಕಳವು ಮಾಡಿದ ಶಂಕೆ ಇದೆ. ಪ್ರತಿಯೊಂದು ಜನ್ ಧನ್ ಖಾತೆಯಲ್ಲಿ ಒಂದು, ಎರಡು ರೂಪಾಯಿ ಕದ್ದಿದ್ದಾನೆ ಎಂಬ ಮಾಹಿತಿ ಇದೆ. ಎರಡೂ ಪಕ್ಷಗಳೂ ಇದರಲ್ಲಿ ಶಾಮೀಲು ಆಗಿದ್ದಾರೆ. ಪ್ರತಿ ಜನಧನ್ ಖಾತೆಯಲ್ಲಿ ಎರಡು ರೂಪಾಯಿ ಕಳ್ಳತನವಾಗಿದೆ, ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರು.
ಪ್ರಧಾನಿಗೆ ಈ ಬಗ್ಗೆ ಯಾರೋ ಮಾಹಿತಿ ನೀಡಿದ್ದಾರೆ
ಅಂತರಾಷ್ಟ್ರೀಯ ಮಟ್ಟದ ಪ್ರಕರಣ ಇದಾಗಿದೆ. ರಾಜಕಾರಣಿಗಳ ಮೇಲಿನ ವಿಶ್ವಾಸ ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮೇಲೆ ವಿಶ್ವಾಸ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಪ್ರಧಾನಿಗೆ ಈ ಬಗ್ಗೆ ಯಾರೋ ಮಾಹಿತಿ ನೀಡಿದ್ದಾರೆ. ಸಿಎಂ ದೆಹಲಿಗೆ ಇದೇ ವಿಚಾರಕ್ಕೆ ಹೋಗಿದ್ದಾರೆ ಎಂದು ಹೇಳಲ್ಲ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲು ಹೋಗಿರಬಹುದು ಎಂದು ಹೇಳಿಕೆ ನೀಡಿದ್ದಾರೆ.
ಅವನು ಯಾವ ಲಾಯರ್ ರಿಂದ ಜಾಮೀನು ತಗೊಂಡ್ನೋ ಗೊತ್ತಿಲ್ಲ
ಎಚ್ಡಿಕೆ ಆರೋಪಗಳ ಸಂಬಂಧ ನ್ಯೂಸ್ 18ಕನ್ನಡಕ್ಕೆ ಹೇಳಿಕೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅವನು ಯಾವ ಲಾಯರ್ ರಿಂದ ಜಾಮೀನು ತಗೊಂಡ್ನೋ ಗೊತ್ತಿಲ್ಲ. ಆದರೆ ಅವನಿಗೆ ಜಾಮೀನು ಕೊಡಿಸಿದ್ದು ಸರ್ಕಾರದ ಅಭಿಯೋಜಕರು ಅನ್ನೋದು ಸರಿ ಅಲ್ಲ ಎಂದು ಕುಮಾರಸ್ವಾಮಿ ಹೇಳಿಕೆಗೆ ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು. ಕಾಂಗ್ರೆಸ್ಸಿಗರ ಆರೋಪಕ್ಕೂ ಗೃಹ ಸಚಿವರು ಕಿಡಿಕಾರಿದರು. ಬುಟ್ಟಿಯಲ್ಲಿ ಹಾವು ಇಟ್ಟುಕೊಂಡು ಬಿಡ್ಲಾ ಅನ್ನೋದು ಸರಿ ಅಲ್ಲ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ನವರು ಬೊಮ್ಮಾಯಿ ಅವರು ಯಾವ ರೀತಿ ಇನ್ವಾಲ್ ಆಗಿದ್ದಾರೆಂದು ತೋರಿಸಲಿ. ಮುಖ್ಯವಾಗಿ ಇದರಲ್ಲಿ ಭಾಗಿಯಾಗಿದ್ದವರು ಕಾಂಗ್ರೆಸ್ ನವರು ಎಂದು ಪ್ರತ್ಯಾರೋಪ ಮಾಡಿದರು.
ಇದನ್ನೂ ಓದಿ: ಯಾರಿವನು ಹ್ಯಾಕರ್ ಶ್ರೀಕಿ? Bitcoin ದಂಧೆ ಮಾಸ್ಟರ್ಮೈಂಡ್ Hacker Sriki ಇತಿಹಾಸ ಹೇಳಿದ್ರೆ ದಂಗಾಗಿ ಹೋಗ್ತೀರ!
ಕಾಂಗ್ರೆಸ್ನವರು ಏಕೆ ಶ್ರೀಕಿನ ಹೋಟೆಲ್ನಲ್ಲಿಟ್ಟಿದ್ದರು?
ಶ್ರೀಕೆ ಜೊತೆ ಇದ್ದವರು ಯಾರು? ಎಫ್ಐಆರ್ ನಲ್ಲಿ ಮಾಜಿ ಸಚಿವರ ಪುತ್ರನ ಹೆಸರು ಇದೆ. ಪಾರದರ್ಶಕವಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ಶ್ರೀಕಿ ಮೇಲೆ ಏಳೆಂಟು ಕೇಸ್ ಹಾಕಿಸಿ, ಎಲ್ಲ ರೀತಿಯಲ್ಲೂ ತನಿಖೆ ಮಾಡಿಸ್ತಿದ್ದೇವೆ. ಅವನನ್ನು ಕಾಂಗ್ರೆಸ್ ನವರು ಯಾಕೆ ಹೋಟೆಲ್ ಇಟ್ಟುಕೊಂಡಿದ್ರು. ಯಾರು ಬೇಕಾದರೂ ಪತ್ರ ಬರೀಲಿ, ಹೆಸರು ಬರೀಲಿ, ಅಮೆರಿಕಾದದಿಂದ ಪ್ರಧಾನಿಗೆ ಪತ್ರ ಬರೆದು ಅಂದ್ರು. ಅವರು ಎಲ್ಲಿ ಪತ್ರ ಬರೆದಿದ್ದಾರೆ. ಸಚಿನ್ ಎಲ್ಲಿ ಪಿಎಂ ಕಚೇರಿಗೆ ಪತ್ರ ಬರೆದಿದ್ದಾರೆ. ಪತ್ರ ಬರೆದಿದ್ರೆ ಪ್ರಧಾನಿ ಕಾರ್ಯಾಲಯ ಹೇಳಬೇಕಿತ್ತು ಅಲ್ವಾ ಎಂದು ಆರೋಪಗಳು ಅಲ್ಲಗಳೆದರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ