BS Yediyurappa: ರಾಜ್ಯ ಪ್ರವಾಸಕ್ಕೂ ಮುನ್ನ ತವರಿನತ್ತ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ನಾನು ಒಬ್ಬನೇ ರಾಜ್ಯ ಪ್ರವಾಸ ಮಾಡುವುದಿಲ್ಲ. ನನ್ನ ಜೊತೆಗೆ ಪಕ್ಷದ ಅಧ್ಯಕ್ಷರು, ಶಾಸಕರು ಕೂಡ ಜೊತೆಯಿರಲಿದ್ದಾರೆ. ಈ ಹಿನ್ನಲೆ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ಯಾವಾಗಿನಿಂದ ಪ್ರವಾಸ ನಡೆಸಬೇಕು

ಬಿಎಸ್ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ

 • Share this:
  ಬೆಂಗಳೂರು (ಆ. 27): ವಿದೇಶ ಪ್ರವಾಸ ಮುಗಿಸಿ ಬಂದಿರುವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (ex CM BS Yediyurappa) ರಾಜ್ಯ ಪ್ರವಾಸಕ್ಕೂ (State tour) ಮುನ್ನ ತವರು ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಇಂದು ಅವರು ಶಿವಮೊಗ್ಗಕ್ಕೆ (Shimoga) ತೆರಳಲಿದ್ದು, ಬಳಿಕ ಶಿಕಾರಿಪುರಕ್ಕೆ ಭೇಟಿ ನೀಡಲಿದ್ದಾರೆ. ನಾಲ್ಕು ದಿನದ ಪ್ರವಾಸದ ಬಳಿಕ ಅವರು ರಾಜ್ಯ ಪ್ರವಾಸದ ಕುರಿತು ಪಕ್ಷದ ಅಧ್ಯಕ್ಷರ ಬಳಿ ಚರ್ಚೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ಬಳಿಕ ಇದೇ ಮೊದಲ ಬಾರಿ ಅವರು ಶಿವಮೊಗ್ಗ ಮತ್ತು ಶಿಕಾರಿಪುರಕ್ಕೆ ಭೇಟಿ ನೀಡಲಿದ್ದು, ವಿವಿಧ ಕಾರ್ಯದಲ್ಲಿ ಭಾಗಿಯಾಗಲಿದ್ದು, ಕಾರ್ಯಕರ್ತರ ಭೇಟಿಯಾಗಲಿದ್ದಾರೆ.

  ಶಿವಮೊಗ್ಗಕ್ಕೆ ಮತ್ತು ಶಿಕಾರಿಪುರಕ್ಕೆ ನಾಲ್ಕು ದಿನ ಭೇಟಿ ನೀಡಿದ ಬಳಿಕ ಪಕ್ಷದ ನಾಯಕರೊಂದಿಗೆ ರಾಜ್ಯ ಪ್ರವಾಸದ ಕುರಿತು ಚರ್ಚೆ ನಡೆಸಲಾಗುವುದು. ಗಣೇಶ ಹಬ್ಬದ ಬಳಿಕ ಪ್ರವಾಸ ನಡೆಸಲಾಗುವುದು. ನಾನು ಒಬ್ಬನೇ ರಾಜ್ಯ ಪ್ರವಾಸ ಮಾಡುವುದಿಲ್ಲ. ನನ್ನ ಜೊತೆಗೆ ಪಕ್ಷದ ಅಧ್ಯಕ್ಷರು, ಶಾಸಕರು ಕೂಡ ಜೊತೆಯಿರಲಿದ್ದಾರೆ. ಈ ಹಿನ್ನಲೆ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ಯಾವಾಗಿನಿಂದ ಪ್ರವಾಸ ನಡೆಸಬೇಕು ಎಂದು ದಿನಾಂಕ ನಿರ್ಧಾರ ಮಾಡಲಾಗುವುದು ಎಂದರು.

  ಇದನ್ನು ಓದಿ: ಮೈಸೂರು ಅತ್ಯಾಚಾರ ಪ್ರಕರಣ: ಆಕ್ರೋಶ ವ್ಯಕ್ತಪಡಿಸಿದ ನಟಿಯರಾದ ರಮ್ಯಾ-ಶ್ರುತಿ

  ಇಂದು ಮಧ್ಯಾಹ್ನ ಬೆಂಗಳೂರಿನಿಂದ ಹೊರಟು ರಾತ್ರಿ ಶಿವಮೊಗ್ಗ ತಲುಪಲಿರುವ  ಅವರು ನಾಲ್ಕು ದಿನಗಳ ಕಾಲ ಶಿವಮೊಗ್ಗದ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು, ನಂತರ ಭಾನುವಾರದಂದು ಬೆಳಗ್ಗೆ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳಿ ಅಲ್ಲಿನ ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಅವರು, ಅಂದು ಶಿಕಾರಿಪುರದ ನಿವಾಸದಲ್ಲೆ ವಾಸ್ತವ್ಯ ಹೂಡಲಿದ್ದಾರೆ.

  ಇನ್ನು ಇದೇ ವೇಳೆ ಮೈಸೂರು ಅತ್ಯಾಚಾರ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು ಸರ್ಕಾರ ಆರೋಪಿಗಳನ್ನು ಹಿಡಿಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ನಿಶ್ಚಿತವಾಗಿ ಆರೋಪಿಗಳು ಸಿಕ್ಕುತ್ತಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇನ್ನೆರಡು ದಿನಗಳಲ್ಲಿ ಪೊಲೀಸರು ಆರೋಪಿಗಳನ್ನು ಹಿಡಿಯುತ್ತಾರೆ. ರಾಜ್ಯದಲ್ಲಿ ಮುಂದೆ ಈ ರೀತಿ ಆಗದಂತೆ ಬಿಗಿಯಾದ ಕರಮ ತೆಗೆದುಕೊಳ್ಳುತ್ತೇವೆ ಎಂದರು

  ಪ್ರವಾಸಕ್ಕಾಗಿ ಸಿದ್ಧವಾಗಿದೆ ಹೊಸ ಕಾರು

  ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ರಾಜ್ಯ ಪ್ರವಾಸ ಕೈಗೊಳ್ಳುವ ಹಿನ್ನಲೆ ಹೊಸ ಕಾರು ಖರೀದಿ ಮಾಡಿದ್ದಾರೆ. 89 ಲಕ್ಷ ಮೌಲ್ಯದ ಐಷಾರಾಮಿ ಕಾರಿನಲ್ಲಿ ಅವರು ರಾಜ್ಯ ಪ್ರವಾಸ ನಡೆಸಲಿದ್ದಾರೆ. ಬಿಳಿ ಬಣ್ಣದ ಟಯೋಟಾ ವೆಲ್​ಫೈರ್ (Toyoto vellifire)​ ಕಾರುನ್ನು ಖರೀದಿಸಿದ್ದು, ಅದೇ ಕಾರಿನಲ್ಲಿ ಅವರು ಶಿವಮೊಗ್ಗ ಪ್ರವಾಸವನ್ನು ನಡೆಸಲಿದ್ದಾರೆ. ಈ ಐಷಾರಾಮಿ ಕಾರಿನಲ್ಲಿ ನಿಂತು ಭಾಷಣ ಮಾಡುವ ವ್ಯವಸ್ಥೆ ಕೂಡ ಈ ಕಾರಿನಲ್ಲಿ ಮಾಡಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: