HOME » NEWS » State » BENGALURU URBAN FORMER BJP CORPORATOR REKHA KADIRESH MURDER CASE AMP POLICE SUSPECT RELATIVES KILLED OVER MONEY ISSUES KVD

ರೇಖಾ ಕದಿರೇಶ್ ಕೊಲೆ: ರಾಜಕೀಯದಲ್ಲಿದ್ದರೂ ಹಣ ಕೊಡದ ಹೊಟ್ಟೆಕಿಚ್ಚಿಗೆ ಸಂಬಂಧಿಕರಿಂದಲೇ ಹತ್ಯೆ?

ಪೀಟರ್ ಮನೆ ಕಟ್ಟುತ್ತಿದ್ದ ಅದಕ್ಕೆ ರೇಖಾ ಹಣದ ಸಹಾಯ ಮಾಡಲಿಲ್ಲ ಅನ್ನೋ ಕೋಪವಿತ್ತು. ಇದೇ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗುತ್ತಿದೆ. ಪೊಲೀಸರು 4 ಆಯಾಮಗಳಲ್ಲಿ ತನಿಖೆ ಕೈಗೆತ್ತಿಗೊಂಡಿದ್ದಾರೆ.

Kavya V | news18-kannada
Updated:June 24, 2021, 5:10 PM IST
ರೇಖಾ ಕದಿರೇಶ್ ಕೊಲೆ: ರಾಜಕೀಯದಲ್ಲಿದ್ದರೂ ಹಣ ಕೊಡದ ಹೊಟ್ಟೆಕಿಚ್ಚಿಗೆ ಸಂಬಂಧಿಕರಿಂದಲೇ ಹತ್ಯೆ?
ಗಂಡನ ಜೊತೆ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್
  • Share this:
ಬೆಂಗಳೂರು: ಇಂದು ಬೆಳಗ್ಗೆ ಚಲವಾದಿಪಾಳ್ಯದ ಮಾಜಿ ಕಾರ್ಪೊರೇಟರ್​​ ರೇಖಾ ಕದಿರೇಶ್​ರ ಕತ್ತು ಸೀಳಿ ಕೊಲೆ ಮಾಡಲಾಗಿದೆ. ರೇಖಾರ ಸಂಬಂಧಿ ಪೀಟರ್ ಹಾಗೂ ಸಹಚರರು ಬರ್ಬರವಾಗಿ ಹತ್ಯೆಗೈದಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಾಜಿ ಕಾರ್ಪೊರೇಟರ್​​ ಕೊಲೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರಿಗೆ ಹಲವು ಮಹತ್ವ ಮಾಹಿತಿಗಳು ಸಿಕ್ಕಿವೆ. ರೇಖಾರನ್ನು ಕೊಲೆ ಮಾಡಲು ಎಣ್ಣೆ ಪಾರ್ಟಿಯಲ್ಲಿ ಪೀಟರ್ ಆಂಡ್ ಟೀಂ ಸ್ಕೆಚ್​ ಹಾಕಿರುವುದು ಬಯಲಾಗಿದೆ. ರೇಖಾ ಕದಿರೇಶ್ ಕೊಲೆ ಪ್ರಕರಣ ಸಂಬಂಧ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಗೆ ಮುಂದಾಗಿದ್ದಾರೆ.

ಆಯಾಮ-1

ರೌಡಿಶೀಟರ್ ಪೀಟರ್ ಮತ್ತು ಸೂರ್ಯ ಕೊಲೆ‌ ಮಾಡಲು ಕಾರಣವೇನು..? ಹಣಕಾಸಿನ ವ್ಯವಹಾರ ಮನಸ್ತಾಪವಿತ್ತಾ? ಪೀಟರ್ ಕೆಲಸ ಮಾಡಿಸಿದ್ದ ವಿಚಾರದಲ್ಲಿ ಬಿಲ್ ಆಗಿರಲಿಲ್ಲ. ಬಿಲ್ ಕೊಡಿಸುವಂತೆ ದುಂಬಾಲು ಬಿದ್ದಿದ್ದ ಪೀಟರ್. ರೇಖಾ ಪತಿ ದಿವಂಗತ ಕದಿರೇಶ್ ಗರಡಿಯಲ್ಲೇ ಬೆಳೆದಿದ್ದ ಪೀಟರ್ ಕೊಲೆ ಮಾಡಲು ಕಾರಣವೇನು? ವೈಯಕ್ತಿಕ ವಿಚಾರದಲ್ಲೂ ಜಗಳವಾಗಿತ್ತಾ?

ಆಯಾಮ 2:

ಕೌಟುಂಬಿಕ ಕಲಹವೇ ಕೊಲೆಗೆ ಕಾರಣವೇ? ಕೊಲೆಯ ಮತ್ತೊಬ್ಬ ಆರೋಪಿ ಸ್ಟೀಫನ್ ಎನ್ನಲಾಗಿದೆ. ಸ್ಟೀಫನ್ ಕದಿರೇಶ್ ತಂಗಿಯ ಮಗ ಎನ್ನಲಾಗಿದೆ. ಮಾಜಿ‌ ಕಾರ್ಪೊರೇಟರ್ ಆಗಿದ್ದರು ಹಣಕಾಸಿನ ಸಹಾಯಕ್ಕೆ ಹಿಂದೇಟು. ಮಾವ ಕದಿರೇಶ್ ನಿಂದ ಕಾರ್ಪೋರೇಟರ್ ಆಗಿದ್ರು ರೇಖಾ ಅವರು ಸಂಬಂಧಿಗಳಿಗೆ ಸಹಾಯ ಮಾಡುತ್ತಿರಲಿಲ್ಲ ಅನ್ನೋ ಆರೋಪ. ಇದೇ ಆರೋಪವೇ ಕೊಲೆಗೆ ಕಾರಣವೇ?

ಆಯಾಮ : 3

ಕೊಲೆಗೆ ರಾಜಕೀಯ ಕಾರಣ ಆಗಿರಬಹುದಾ? ಬಿಬಿಎಂಪಿ ಚುನಾವಣೆಗೆ ಸಜ್ಜಾಗಿದ್ದ ರೇಖಾ ಅವರ ರಾಜಕೀಯವಾಗಿ ಮುಂದುವರೆದ್ರೆ ಕಷ್ಟ ಅನ್ನೋ ಕಾರಣಕ್ಕೆ ಮುಹೂರ್ತವಿಟ್ರಾ..? ಚುನಾವಣೆ ಮೇಲೆ ಕಣ್ಣು ಹಾಕಿದ್ರಾ ಕದಿರೇಶ್ ಅಕ್ಕಾ ಮಾಲಾ? ಮಾಲಾ ವಿರುದ್ಧವೂ ರೌಡಿ ಶೀಟರ್ ತೆರೆಯಲಾಗಿದೆ. ಮಕ್ಕಳಿಗೆ ಅನುಕೂಲವಾಗಲು ಸ್ಕೆಚ್ ಹಾಕಿದ್ರ. ಮುಂದಿನ ಬಿಬಿಎಂಪಿ ಎಲೆಕ್ಷನ್ ಗೆ ಸಜ್ಜಾಗಲು ಕೊಲೆ ಮಾಡಿದ್ರಾ?ಆಯಾಮ - 4

ಕೊಲೆ ಆರೋಪಿ ಸೂರ್ಯ ಕಾಟನ್ ಪೇಟೆ ಠಾಣೆಯ ರೌಡಿಶೀಟರ್. ಇತ್ತೀಚೆಗೆ ಸೂರ್ಯನ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ. ಏರಿಯಾದಲ್ಲಿ ಹವಾ ಮೆಂಟೇನ್ ಗಾಗಿ ಹತ್ಯೆಗೆ ಕೈ ಜೋಡಿಸಿದನಾ? ಪೀಟರ್, ಸೂರ್ಯ, ಸ್ಟೀಫನ್ ಒಂದಾಗಿ ಪ್ಲಾನ್ ಮಾಡಲು ಕಾರಣವೇನು..?

ಈ ನಾಲ್ಕು ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ತನಿಖೆಗೆ ಸಹಕಾರಿಯಾಗುವ ಹಳೇಯ ಕ್ರೈಂ ಸಿಬ್ಬಂದಿ ಕೂಡ ಬಳಸಿಕೊಳ್ಳಲಾಗುತ್ತಿದೆ. ಕಾಟನ್ ಪೇಟೆ ಠಾಣೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗುತ್ತಿದೆ. ಸಿಎಂ ಆದೇಶದಂತೆ 24 ಗಂಟೆಯಲ್ಲೇ ಆರೋಪಿಗಳನ್ನು ಹಿಡಿಯಲು ಪ್ಲಾನ್ ಮಾಡಲಾಗಿದೆ.

ಇನ್ನು ಪ್ರಮುಖ ಆರೋಪಿ ಪೀಟರ್​​ ರೇಖಾರ ಪತಿ ಕದಿರೇಶ್ ಜೊತೆ ೨೦೧೪ ರ ವರೆಗೂ ಉತ್ತಮ ಸಂಬಂಧ ಇಟ್ಟುಕೊಂಡಿದ್ದ. ಈ ಹಿಂದೆ ಪಾಲಿಕೆಯ ಎಲೆಕ್ಷನ್ ವೇಳೆ ಪೀಟರ್ ಕದಿರೇಶನ ಜೊತೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಇದಾದ ಬಳಿಕ ೨೦೧೮ ರಲ್ಲಿ ಕದಿರೇಶ ಫ್ಲವರ್ ಗಾರ್ಡನ್ ಶಿವನ ಹುಡುಗರಿಂದಲೇ ಹತ್ಯೆಯಾಗ್ತಾನೆ. ನವೀನ್ ಹಾಗೂ ವಿನಯ್ ಜೊತೆಗೂಡಿ ಕದಿರೇಶ್ ನನ್ನ ಕೊಚ್ಚಿ ಕೊಲೆಗೈದಿದ್ದರು.

ಇದನ್ನೂ ಓದಿ: Bangalore Murder: ಬೆಂಗಳೂರಿನ ನಡುರಸ್ತೆಯಲ್ಲೇ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕತ್ತು ಸೀಳಿ ಬರ್ಬರ ಹತ್ಯೆ

ಇದಾದ ಬಳಿಕ ರೇಖಾ ಕದಿರೇಶ್ ಫುಲ್ ಟೈಮ್ ರಾಜಕೀಯಕ್ಕೆ ಇಳಿದಿದ್ದರು. ಈ ವೇಳೆ ಸ್ನೇಹಿತರು, ಸಂಬಂಧಿಕರಿಗೆ ಸಹಾಯ ಹಸ್ತ ಚಾಚಿದ್ದರು. ಆದ್ರೆ, ಪೀಟರ್ ಗೆ ಯಾವುದೇ ರೀತಿಯ ಹಣದ ಸಹಾಯ ಮಾಡಿರಲಿಲ್ಲ. ಕುಡಿದ ಮತ್ತಿನಲ್ಲಿ ಸಾಕಷ್ಟು ಬಾರಿ ರೇಖಾ ಜೊತೆ ಪೀಟರ್ ಗಲಾಟೆಗೂ ಬಿದ್ದಿದ್ದ. ಈ ವೇಳೆ ರೇಖಾ ಸ್ವತಃ ಪೊಲೀಸರನ್ನ ಕರೆಸಿ ಬೆಂಡೆತ್ತಿಸ್ತಿದ್ರಂತೆ. ಪೀಟರ್ ಮನೆಕಟ್ತಿದ್ದು ಅದಕ್ಕೂ ರೇಖಾ ಹಣದ ಸಹಾಯ ಮಾಡಲಿಲ್ಲ ಅನ್ನೋ ಕೋಪವಿತ್ತು. ಪದೇ ಪದೇ ಪೊಲೀಸ್ ಠಾಣೆಗೆ ಕರೆಸಿ ರೇಖಾ ಹೊಡೆಸ್ತಾಳೆ ಎಂಬ ಕೋಪದಲ್ಲಿದ್ದ ಪೀಟರ್. ಇದೇ ಕಾರಣಕ್ಕೆ ಪೀಟರ್ ಬಾಮೈದ ಸೂರ್ಯ ಹಾಗೂ ಪಕ್ಕದ ಮನೆಯ ಸ್ಟಿಫನ್ ಗೆ ಗುಂಡು-ತುಂಡಿಗೆ ಹಣ ನೀಡಿ ಹತ್ಯೆ ಸ್ಕೆಚ್​​​ ಹಾಕಿದ್ದ ಎನ್ನಲಾಗ್ತಿದೆ.

ಇನ್ನು ರೇಖಾ ಕದಿರೇಶ್​ರ ಮರಣೋತ್ತರ ಪರೀಕ್ಷೆ ನಾಳೆ ನಡೆಯಲಿದೆ. ಕೋವಿಡ್ ವರದಿ ಬಂದ ನಂತರವೇ ಮರಣೋತ್ತರ ಪರೀಕ್ಷೆ ನಡೆಯಲಿದೆ. ಕೋವಿಡ್ ವರದಿ ಸಂಜೆ ವೇಳೆಗೆ ಬರುವ ಸಾಧ್ಯತೆ ಇದೆ, ಹೀಗಾಗಿ ವರದಿ ಬಂದ ನಂತರ ನಡೆಯಲಿರುವ ಮರಣೋತ್ತರ ಪರೀಕ್ಷೆ ನಡೆಸಿ ಶವ ಹಸ್ತಾಂತರಿಸಲಾಗುವುದು.

ರೇಖಾರ ಮೃತದೇಹ ಇರುವ ಕಿಮ್ಸ್​​ಗೆ ಭೇಟಿ ನೀಡಿ ಮಾತನಾಡಿದ ಶಾಸಕ ಜಮೀರ್​ , ವಿಚಾರ ಕೇಳಿ ನನಗೂ ಶಾಕ್ ಆಗಿದೆ. ರೇಖಾ ನನ್ನ ತಂಗಿಯ ರೀತಿ ಇದ್ದರು. ನನ್ನ ಕ್ಷೇತ್ರದಲ್ಲಿ ಯಾವುದೇ ಕೆಲಸ ಆದ್ರೂ ಅವ್ರನ್ನ ಕರೆಯುತಿದ್ದೆ. ೨೦೧೮ ರಲ್ಲಿ ಗಂಡನನ್ನು ಕಳೆದುಕೊಂಡಿದ್ರು. ಅಂದು ಅವರ ಕೊಲೆ ಇಂದು ಇವರ ಕೊಲೆಯಾಗಿದೆ. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ರೇಖಾರ ಮಕ್ಕಳು ಈಗ ಅನಾಥರಾಗಿದ್ದಾರೆ, ಅವರಿಗೆ ನಾನು ಆಸರೆಯಾಗುವೆ ಎಂದರು.

ಇನ್ನು ರೇಖಾ ಕದಿರೇಶ್ ಸಾವಿನ ಹಿಂದೆ ರಾಜಕೀಯ ಇದೆ ಎಂಬ ಎನ್ ಆರ್ ರಮೇಶ್ ಆರೋಪಕ್ಕೆ ಜಮೀರ್​ ಕಿಡಿಕಾರಿದರು. ರಮೇಶ್ ಗೆ ಕನಸಲ್ಲೂ ನಾನು ಕಾಡ್ತಾ ಇದ್ದೀನಿ ಅಂತ ಅನ್ಸುತ್ತೆ. ವಿನಾಕಾರಣ ಆರೋಪ ಮಾಡ್ತಿರೋ ದು ಸರಿಯಲ್ಲ . ರೇಖಾ ಬಿಜೆಪಿಯಲ್ಲಿ ಇದ್ದವರು, ನಾನು ಚುನಾವಣೆ ವೇಳೆ ಮಾತ್ರ ರಾಜಕೀಯ ಮಾಡೋದು. ಉಳಿದಂತೆ ಕ್ಷೇತ್ರದ ಅಭಿವೃದ್ದಿ ಕಡೆಗಮನ ಹರಿಸುತ್ತೇನೆ. ಜೂ.೨೨ ರಂದು ರಂದು ರೇಖಾ ಅವ್ರ ಜತೆ ಮಾತನಾಡಿದ್ದೆ, ವ್ಯಾಕ್ಸಿನ್ ಹಾಕುವ ವಿಚಾರದಲ್ಲಿ ಚರ್ಚೆ ಮಾಡಿದ್ದೆವು ಎಂದು ತಿಳಿಸಿದರು.

ಪ್ರಕರಣದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಸಚಿವ ಆರ್ ಅಶೋಕ್, ಬಿಜೆಪಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆಯಿಂದ ಪಾರ್ಟಿಗೂ, ನಮಗೂ ನೋವು ತಂದಿದೆ. ಅವರ ಗಂಡನನ್ನು ಕೊಲೆ ಮಾಡಿದವರೇ ಜೈಲಿಂದ ರಿಲೀಸ್ ಆದ ಮೇಲೆ ಹೆಂಡತಿ ಕೊಲೆ ಮಾಡಿರುವುದು ಅನುಮಾನವಿದೆ. ಕಮಿಷನರ್ ಜೊತೆಗೆ ಸಿಎಂ ಮಾತನಾಡಿ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಟ್ಟಿದ್ದಾರೆ. ಘಟನೆ ಹಿಂದೆ ಯಾರ ಯಾರ ಕೈವಾಡ ಇದೆ ಅವರ ವಿರುದ್ದ ಕ್ರಮ ಆಗಬೇಕು ಎಂದರು.
Published by: Kavya V
First published: June 24, 2021, 5:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories